2025ನೇ ಸಾಲಿನ 'The Mozhi Prize'ಗೆ ಕೃತಿಗಳ ಆಹ್ವಾನ

Date: 06-06-2025

Location: ಬೆಂಗಳೂರು


ಹೊಸ ಪೀಳಿಗೆಯ ಓದುಗರು, ಬರಹಗಾರರು, ವಿಮರ್ಶಕರು ಮತ್ತು ಅನುವಾದಕರನ್ನು ಬೆಳೆಸಲು ಮತ್ತು ಭಾರತೀಯ ಸಾಹಿತ್ಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಸಲುವಾಗಿ, 'ದಿ ಮೊಝಿ' ಸಂಸ್ಥೆಯು 'ದಿ ಮೊಝಿ ಪ್ರಶಸ್ತಿ 2025'ನೀಡಲು ನಿರ್ಧರಿಸಿದೆ. ಕಥೆಗಳನ್ನು ಕಳುಹಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 15,2025.

ಹೊಸ ಆವೃತ್ತಿ: ದಿ ಮೊಝಿ ಪ್ರಶಸ್ತಿ 2025 ಭಾಷಾಂತರಕಾರರನ್ನು ಪ್ರೋತ್ಸಾಹಿಸುವ ಸಲುವಾಗಿ, ಭಾರತೀಯ ಭಾಷೆಯ ಸಣ್ಣ ಕಥೆಗಳನ್ನು ಇಂಗ್ಲಿಷಿಗೆ ಭಾಷಾಂತರಿಸದ ಕೃತಿಗಳನ್ನು 'ದಿ ಮೊಝಿ ಪ್ರಶಸ್ತಿ'ಗೆ ಆಹ್ವಾನಿಸಿದೆ.

2025ನೇ ಸಾಲಿನ 'ದಿ ಮೊಝಿ ಪ್ರಶಸ್ತಿ'ಯ ನಿಯಮಗಳು:
-ಭಾರತೀಯ ಭಾಷೆಯ ಕಾದಂಬರಿಯನ್ನು ಇಂಗ್ಲಿಷಿಗೆ ಭಾಷಾಂತರಿಸಿ ಸಲ್ಲಿಸಿ. ಮೂಲ ಕಥೆ 2000ರ ನಂತರ ಪ್ರಕಟವಾಗಿರಬೇಕು.
-ಭಾರತೀಯ ನಿವಾಸಿಗಳಿಗೆ ಮಾತ್ರ ಈ ಸ್ಪರ್ಧೆ ಏರ್ಪಡಿಸಲಾಗಿದೆ.
-ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಒಂದು ಪುಸ್ತಕ ಭಾಷಾಂತರಿಸಿದವರಾಗಿರಬೇಕು.
-ಕಥೆಯ ಸಾಹಿತ್ಯ ಮೌಲ್ಯ ಮತ್ತು ಭಾಷಾಂತರದ ನಿಖರತೆ ಆಧಾರವಾಗಿ ಸ್ಪರ್ಧೆ ನಡೆಯಲಿದೆ.
-ಭಾರತೀಯ ಭಾಷೆಯ ಇಂಗ್ಲಿಷ್ ಅನುವಾದಿತ ಕೃತಿಗೆ ಮಾತ್ರ ಅವಕಾಶ.

ಬಹುಮಾನಗಳು:
ಪ್ರಥಮ ಬಹುಮಾನ: ₹50,000
ದ್ವಿತೀಯ ಬಹುಮಾನ: ₹25,000
ತೃತೀಯ ಬಹುಮಾನ: ₹15,000

MORE NEWS

ಎಸ್. ಜಿತೇಂದ್ರ ಕುಮಾರ್ ಗೆ ಕಂಬತ್ತಳ್ಳಿ ಜೀವಣ್ಣ ಪದ್ಮಾವತಮ್ಮ ದತ್ತಿ ಪ್ರಶಸ್ತಿ

24-06-2025 ಬೆಂಗಳೂರು

ಬೆಂಗಳೂರು: ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಕೆ.ಜೆ. ಪಾರ್ಶ್ವನಾಥ್ ತಮ್ಮ ತಂದೆತಾಯಿ ಹೆಸರಿನಲ್ಲಿ ಸ್ಥಾಪಿಸಿರುವ ಕಂಬತ್ತಳ...

ಸಂಸ್ಕೃತಿ ಸಂವರ್ಧನೆಯಲ್ಲಿ ಹಂಸಜ್ಯೋತಿ ಪಾತ್ರ ಹಿರಿದು; ಶ್ರೀನಿವಾಸ ಜಿ ಕಪ್ಪಣ್ಣ

23-06-2025 ಬೆಂಗಳೂರು

ಬೆಂಗಳೂರು: ಹಂಸ ಜ್ಯೋತಿ ಟ್ರಸ್ಟ್ ಆಯೋಜನೆಯಲ್ಲಿ ಹಂಸ ಜ್ಯೋತಿಯ ಸುವರ್ಣ ಸಂಭ್ರಮಾಚರಣೆ ; ಹಂಸ ಸಾಂಸ್ಕೃತಿಕ ಸಂಭ್ರಮ ಅಂತರ...

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿ ಬಿ.ಎಲ್. ಶಂಕರ್ ಪುನರಾಯ್ಕೆ

23-06-2025 ಬೆಂಗಳೂರು

ಬೆಂಗಳೂರು: ಕಾಂಗ್ರೆಸ್ ಮುಖಂಡ ಬಿ.ಎಲ್. ಶಂಕರ್ ಅವರು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್...