""ಕೇವಲ ಮನುಷ್ಯನಾಗಿ ಮಹಾತ್ಮನಾದರು. ಮಹಾತ್ಮ ಅದ ಕೂಡಲೆ ಅವರು ಕೇವಲ ಮನುಷ್ಯ ಎಂಬುದನ್ನು ಮರೆಯಕೂಡದು. ಕೊನೆಯ ತನಕ ಅವರಿಗೆ ಸಿಟ್ಟು ಬರುತ್ತಿತ್ತು. ಬೇಸರ ಆಗುತ್ತಿತ್ತು," ಎನ್ನುತ್ತಾರೆ ಉದಯಕುಮಾರ್ ಹಬ್ಬು. ಅವರು ಯು.ಆರ್. ಅನಂತಮೂರ್ತಿ ಅವರ ‘ಮಾತು ಸೋತ ಭಾರತ’ ಕೃತಿ ಕುರಿತು ಬರೆದ ಅನಿಸಿಕೆ.
ಅನಂತಮೂರ್ತಿಯವರ ಈ ವಿಶಿಷ್ಟ ಪುಸ್ತಕವು ಅನಂತಮೂರ್ತಿಯವರ ಕತೆ, ಕಾದಂಬರಿಗಳು ಮತ್ತು ಕವಿತೆ ಕೃತಿಗಳಿಗಿಂತ ವಿಮರ್ಶಾ ಬರಹಗಳು, ಚಿಂತನೆಯ ಬರಹಗಳೆ ಹೆಚ್ಚು ವಿಶಿಷ್ಟ ಮತ್ತು ಘನ ಎಂದೆನಿಸಿದೆ. ಈ ಪುಸ್ತಕವು ಅನಂತಮೂರ್ತಿಯವರ ದೇಶದ ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಹಿತ್ಯಿಕ ಚಿಂತನೆಗಳು ವಾಸ್ತವಿಕ ನೆಲೆಯ ಒಳನೋಟಗಳನ್ನು ಒಳಗೊಂಡು, ಕಾವ್ಯ ಮೀಮಾಂಸೆ, ರಾಷ್ಟ್ರೀಯ ಸಮಸ್ಯೆಗಳು ಹೊಸ ದರ್ಶನವನ್ನು ನೀಡುತ್ತದೆ. ಬಹುತೇಕ ಇಂದು ಗಂಭೀರವಾಗಿ ಬರೆಯುತ್ತಿರುವ ಎಲ್ಲ ಕನ್ನಡ ಬರಹಗಾರರು ತಮ್ಮ ಬರಹಗಳನ್ನು ಇನ್ನೊಮ್ಮೆ ಅನಂತಮೂರ್ತಿ ಅವರ ವಿಮರ್ಶೆಯ ಮಾನದಂಡಗಳಲ್ಲಿಟ್ಟು ನೋಡಿಕೊಳ್ಳಬೇಕಾದ ಅನಿವಾರ್ಯತೆ ಬರಬಹುದು.
ಈ ಪುಸ್ತಕದಲ್ಲಿ ನಾಲ್ಕು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ತಾತ್ವಿಕವಾದ ಗ್ರಹಿಕೆಗಳನ್ನು ಮಂಡಿಸುವ ಲೇಖನಗಳಿದ್ದರೆ, ಎರಡನೆಯ ಭಾಗದಲ್ಲಿ ವ್ಯಕ್ತಿ ವಿಶೇಷ ಲೇಖನಗಳಿವೆ. ಮೂರನೆಯ ಭಾಗದಲ್ಲಿ ಅನಂತಮೂರ್ತಿ ಅವರ ಸಮಕಾಲೀನ ಅಥವಾ ಕಿರಿಯ ಕೃತಿಗಳಿಗೆ ಮುನ್ನುಡಿಯ ರೂಪದಲ್ಲಿಯೋ, ಭಾಷಣದ ರೂಪದಲ್ಲಿಯೋ ಪ್ರಕಟವಾದ ಲೇಖನಗಳಿವೆ. ನಾಲ್ಕನೆಯ ಭಾಗದಲ್ಲಿ ಎರಡು ಪ್ರಯೋಗಗಳಿಗೆ ವ್ಯಕ್ತಪಡಿಸಿದ ಅಭಿಪ್ರಾಯಗಳಿವೆ.
ಕೆ.ಪಿ ಸುರೇಶರ ಅ "ದಡಬಿಟ್ಟ ದೋಣಿ" ಕವನ ಸಂಕಲನದ ಕುರಿತು ಬರೆಯುವಾಗ ಈ ಕೆಳಗಿನ ಮಾತುಗಳನ್ನು ಬರೆಯುತ್ತಾರೆ:"
1. ಓದುವುದೆಂದರೆ ಕೃತಿಗೆ ಎದುರಾಗುವುದು, ಕೃತಿಯನ್ನು ಎದುರುಗೊಳ್ಳುವುದು; ಕೃತಿಗೆ ನಮ್ಮನ್ನು ಒಪ್ಪಿಸಿಕೊಳ್ಳುವುದು; ಮನಸ್ಸಿನ ಧಾರಾಳದಲ್ಲಿ ನಿರೀಕ್ಷಿಸುವುದು; ಧಾರಾಳ ನಿರೀಕ್ಷೆಯಲ್ಲಿ ಒದಗಿ ಬಂದದ್ದನ್ನು ಪರೀಕ್ಷಿಸುವುದು. ಇದು ಕೃತಿಯ ಪರೀಕ್ಷೆ ಮಾತ್ರವಲ್ಲ. ಕೃತಿ ನಮ್ಮನ್ನು ಮಾಡುವ ಪರೀಕ್ಷೆ. ಈ ಪರೀಕ್ಷೆಯ ಫಲ ನಿಷ್ಠುರವಾದ ವಿಮರ್ಶೆ.
2. ನಮ್ಮಂತೆ ಮನುಷ್ಯನಾದ ಕವಿಯದೂ ಅಲೆಯುವ ಮನಸ್ದು ಓದಿನಿಂದ ಸಂಸ್ಕಾರಗೊಂಡವನದೂ ಅಲೆಯುವ ಮನಸ್ಸು. ತನ್ನನ್ನು ತಾನೇ ಓದಿಕೊಳ್ಳಬಲ್ಲ ಕವಿ ಏಕಾಗ್ರವಾಗಿ ಬರೆದುಕೊಂಡಿರುವ ಮಾತು ಓದುಗನ ಅಲೆಯುವ ಮನಸ್ಸನ್ನು ಕೊಕ್ಕೆಯಾಗಿ ಹಿಡಿದು ನಿಲ್ಲಿಸುವ ಶಕ್ತಿ ಪಡೆದಿರಬೇಕು. ಆವೇಶ, ಉತ್ಕಟತೆ, ನಿರಾಳತೆ , ವಕ್ರತೆ, ವ್ಯಂಗ್ಯ- ಯಾವುದಾದರೂ ಇಂಥ ಹಿಡಿದು ನಿಲ್ಲಿಸುವ ಮಾತಿನ ಹಿಂದೆ ಇರುತ್ತದೆ. ಓದಿನ ಸಲೀಸಾದ ಮುನ್ನಡೆಯನ್ನು. ತಡೆಯುವಂತೆ, ಕೂಡಲೆ ಅರ್ಥವಾಗುವ ಹಾಗೆ, ಆಡಿದ ಮಾತಿಗೆ ನಾವು ಮತ್ತೆ ಬರುವ ಹಾಗೆ ಇರುವ ಓರೆ ಮಾತಿನ ನೇರ ಮಾತಿನ ಉಪಾಯಗಳು ಕಾವ್ಯದಲ್ಲಿ ಹಲವು
3. ಕವಿಯಲ್ಲಿ ಮೂಡಿದ್ದು ಓದುಗನಲ್ಲೂ ಮೂಡುವ ಈ. ಸಹೃದಯತೆ ಲಿಖಿತವಾದ ಕಾವ್ಯದಲ್ಲಿ ಮೈಪಡೆದಾಗ ನಾವು ಕಳೆದುಕೊಳ್ಳುತ್ತಿರುವ ಮೌಖಿಕ ಸಂಪ್ರದಾಯ ಕಂಠವನ್ನೂ ಕಿವಿಯನ್ನೂ ಮರಳಿ ಪಡೆದಂತಾಗುತ್ತದೆ. ಹೀಗೆ ಪಡೆದಿದುದ್ದರ ಸ್ವರೂಪವೂ ಬೇರೆಯಾಗಿರುತ್ತದೆ. ಕವಿಯ ಏಕಾಂತದಿಂದ ಓದುಗನಿಗೆ ಒಳಗಿಂದ ಕೇಳಿಸುವಂತೆ ತಲುಪುವ ಮಾತು ಉತ್ಸಾಹವನ್ನು ಮಾತ್ರಬಲ್ಲದೆ ಚಿಂತನಾತ್ಮಕವಾದ ಕವಿಯ ಮಾತಿಗೆ ಮರಳಬೇಕೆನ್ನಿಸುವ ಧ್ಯಾನಶೀಲತೆಯನ್ನು ತರುತ್ತದೆ ".
"ವಿಮರ್ಶೆಯೆಂದರೆ 'ಸಂವಾದ' ವಾಗಿ ಒಂದನ್ನೊಂದು ತುಂಬುವ ತಿದ್ದುವ ಕ್ರಿಯೆಯಾಗಿರುತ್ತದೆ," ಸುಬ್ರಾಯ ಚೊಕ್ಕಾಡಿ ಅವರ ಕವನ ಸಂಕಲನ "ಇನ್ನೊಂದು ಬೆಳಗು" ಕುರಿತ ಲೇಖನ. ಬಿ.ಎಂ.ಶ್ರೀ ಅವರ "ಇಂಗ್ಲಿಷ್ ಗೀತೆಗಳು" ಕುರಿತು
"ಇವತ್ತಿನ 'ಸಾಂಸ್ಕೃತಿಕ ಮುಖಾಮುಖಿ' ಯಲ್ಲಿ ಕೆಲವು ಪ್ರಶ್ನೆಯ ನಾವು ಎತ್ತಬೇಕು. ಒಂದು: ಪಾಶ್ಚಾತ್ಯಕ್ಕೆ ಮುಖಾಮುಖಿ ಆಗೋದರ ಮುಖಾಂತರ ನಮ್ಮತನವನ್ನ ಹುಡುಕಿಕೊಳ್ಳೋ ವಿಧಾನ. ಇನ್ನೊಂದು ಬಿಟ್ಟು ನಮ್ಮ ಜಾನೊದದಿಂದ, ನಮ್ಮ ವಚನಕಾರರಿಂದ, ನಮ್ಮದೆ ಅದ. ಸಂಪ್ರದಾಯಗಳಿಂದ, ಸಂಪ್ರದಾಯಸ್ಥರಾಗದೇ ಕ್ರಾಂತಿಕಾರಿಕವಾದ ಪ್ರೇರಣೆ ಪಡೆಯೋದು. ಯಾಕೆಂದ್ರೆ ನಮ್ಮ ನಿಜವಾದ ಕನ್ನಡದ ಟ್ರೆಡಿಶನ್ನೇ ಕ್ರಾಂತಿಕರವಾದದ್ದು "ಇಂದೂ ಇರುವ ಗಾಂಧಿ "There is no place for intellectual life in Gandhi. ಆದುದರಿಂದ intellectual life ಅಂದರೆ to experiment with your own mind. ಅಷ್ಟು ಅನಿಸುವ ಹಾಗೆ ಮಾಡಿದ್ದರಿಂದಲೇ ಅವರು ಬುದ್ದಿ ಜೀವುಗಳಿಗೆ ಛಾಲೇಂಜ್ ಆದರು. ಇಲ್ಜದೇ ಇದ್ದರೆ ಬುದ್ಧಿಜೀವಿಗಳಿಗೆ ಛಾಲೇಂಜೇ ಇಲ್ಲ", "ತನ್ನ ಮೇಲೇ ಮಾಡಿಕೊಂಡ ಎಕ್ಸ್ ಪೆರಿಮೆಂಟ್ಸ್ ಮೇಲೆ ಗಾಂಧಿ ಸತ್ಯದ ವ್ಯಾಖ್ಯಾನ ಮಾಡುವುದು. ಕೊನೆಗೆ ತಾನು ಬ್ರಹ್ಮಚಾರಿಯಾಗಿ ಉಳಿದ್ದೇನೋ ಇಲ್ಲವೋ ಎಂದು ತಿಳಿಯುವದಕ್ಕೋಸ್ಕರ ಒಂದು ಹೆಣ್ಣು ಮಗಳ ಜೊತೆ ಬೆತ್ತಲೆ ಮಲಗುವ ತನಕ ಹೋಗಿದ್ದರು.ಗಾಂಧಿ "ನೀನು ಮಾಡುತ್ತಿರುವುದು ತಪ್ಪು" ಎಂದು ಕೃಪಲಾನಿಯಂತವರು ಹೇಳಿದಾಗ ಅವರಿಗೆ ತಪ್ಪು ಎಂದು ಗೊತ್ತಾಯಿತು.,"_
"ಕೇವಲ ಮನುಷ್ಯನಾಗಿ ಮಹಾತ್ಮನಾದರು. ಮಹಾತ್ಮ ಅದ ಕೂಡಲೆ ಅವರು ಕೇವಲ ಮನುಷ್ಯ ಎಂಬುದನ್ನು ಮರೆಯಕೂಡದು. ಕೊನೆಯ ತನಕ ಅವರಿಗೆ ಸಿಟ್ಟು ಬರುತ್ತಿತ್ತು. ಬೇಸರ ಆಗುತ್ತಿತ್ತು.
"ಗಾಂಧಿಗೆ ಒಂದು ತಾಂತ್ರಿಕನ ಗುಣ ಇತ್ತು. ಇಲ್ಲದಿದ್ದರೆ ಒಂದು ಹಿಡಿ ಉಪ್ಪನ್ನು ಅವರು ಎತ್ತಿ ಹಿಡಿದ ತಕ್ಷಣ ಇಡೀ ಬ್ರಿಟಿಷ್ ಸಾಮ್ರಾಜ್ಯವೆ ಕುಸಿಯುವಂತಾಯಿತು. ಆಶೀಶ್ ನಂದಿ ಹೇಳಿದಂತೆ ನೆನಪು- ಇಂಡಿಯಾ ಸ್ವಾತಂತ್ರ್ಯ ಪಡೆದದ್ದು ಅಗಸ್ಟ್ ಹದಿನೈದರಂದು ಮಾತ್ರವಲ್ಲ; ಗಾಂಧಿ ಒಂದು ಹಿಡಿ ಉಪ್ಪನ್ನು ಸಮುದ್ರದ ದಂಡೆಯ ಮೇಲೆ ನಿಂತು ಎತ್ತಿದಾಗ, ಲಕ್ಷಾಂತರ ಜನರನ್ನು ಜೈಲಿಗೆ ಹಾಕಲಾಯಿತು. ಅವರು ಯಾರೂ ಪ್ರತೀಕಾರದ ಹಿಂಸೆಗಿಳಿಯಲಿಲ್ಲ"
ಲೋಹಿಯಾ ಹೇಳಿದರು:" Rama is a personality of ethical kind. ಹಾಗೇನೆ "Gandhi is an ethical personality."
"ಅವರು ನೊದಲನೆಯ ದರ್ಜೆಯ ರೈಲ್ವೆ ನಲ್ಲಿ ಕುಳಿತಾಗ ಅವರನ್ನು ತಳ್ಳಿ ಹೊರಗೆ ಹಾಕಿದಾಗ ಅವರಿಗೆ ಬರೇ ಸಿಟ್ಟು ಬರುತ್ತಿದ್ದರೆ ಅವರು ಸಾವರ್ಕರ್ ಆಗುತ್ತಿದ್ದರು. ಆ ಸಿಟ್ಟಿನ ಜೊತೆಗೆ ಅವರಿಗೆ ನಮ್ಮ ದೇಶದಲ್ಲಿ ನಾವೂ ಕೂಡ ಬೇರೆಯವರಿಗೆ ಈ ತರ ಮಾಡುತ್ತೇವೆ ಅಂತ ಅನ್ನಿಸಿದ್ದರಿಂದ ಅವರು ಗಾಂಧಿಯಾದರು. "ತನ್ನನ್ನು ಕರಿಯ ಅಂತ ಹೊರಗೆ ಹಾಕಿದಾಗ ನಾವು ಹೊಲೆಯ ಅಂತ ಹೊರಗಿಡ್ತೇವಲ್ಲ ಎಂದು ನೆನಪಾಗದಿದ್ದರೆ ಅವರು ಗಾಂಧಿ ಆಗುತ್ತಿರಲಿಲ್ಲ."
"ಗಾಂಧಿ ನಾನು ಹೇಳಿದಂತೆ ಬ್ರಿಟಿಷರನ್ನು ಓಡಿಸುತ್ತೇನೆ ಅಂತ ಹೇಳಲಿಲ್ಲ ಹಿಂದೂ ಮುಸ್ಲಿಂ ಯುನಿಟಿ ಮಾಡುತ್ತೇನೆ, ಅಸ್ಪ್ರಶ್ಯತಾ ನಿವಾರಣೆ ಮಾಡುತ್ತೇನೆ, ಖಾದಿ ಪ್ರಚಾರ ಮಾಡುತ್ತೇನೆ ಅಂತ ಹೇಳಿದರು"_
" ಕನ್ನಡಿಗರು ತಮ್ಮ ಜಾತಿಗಳ ಮುಖಾಂತರವಗುರುತಿಸಿಕೊಳ್ಳುವುದೇ ಹೆಚ್ಚು. ನಾವು ಕನ್ನಡಿಗರೆಂದು ಪ್ರಾಥಮಿಕವಾಗಿ ಗುರುತಿಸಿಕೊಳ್ಳಬೇಕಾದರೆ ಏನು ಮಾಡಬೇಕೋ ಅದನ್ನು ನಾವು ಮೊದಲು ಯೋಚಿಸಬೇಕು" "ರಾಜಧಾನಿಯಲ್ಲಿ ಕರ್ನಾಟಕದ ಸಬಲೀಕರಣ" ಲೇಖನದಿಂದ ಐರೋಪ್ಯ ಮಾದರಿಯ ರಾಷ್ಟ್ರದ ಕಲ್ಪನೆ ನಮ್ಮ ದೇಶಕ್ಕೆ ಸರಿಯಲ್ಲ ಎಂದು ಒಂದು ಲೇಖನದಲ್ಲಿ ಹೇಳುತ್ತಾರೆ ಬರಹಗಾರನ ವ್ಯಕ್ತಿ ಸ್ವಾತಂತ್ರ್ಯ ಹರಣಗೊಳ್ಳುತ್ತಿದೆ. ಅದನ್ನು ಮೀರಿ ಲೇಖಕರು ಬರೆಯಬೇಕು. ಜಾತಿ ಮತ ಕೋಮುಭಾವನೆಗಳಿಂದ ಪಾರಾಗಿ ಬರಹಗಾರರು ಎಚ್ಚರದಿಂದ ಬರೆಯಬೇಕು ಎನ್ನುತ್ತಾರೆ ಅನಂತಮೂರ್ತಿ.
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.