ದೀಕ್ಷಿತ್ ನಾಯರ್ ಅವರ ‘ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?’ ಕೃತಿಯ ಲೋಕಾರ್ಪಣೆ ಸಮಾರಂಭ

Date: 26-01-2025

Location: ಬೆಂಗಳೂರು


ಬೆಂಗಳೂರು: ಲೇಖಕ ದೀಕ್ಷಿತ್ ನಾಯರ್ ಅವರ ಅಂಕಣ ಬರಹಗಳ ಸಂಗ್ರಹ ‘ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?’ ಕೃತಿಯ ಲೋಕಾರ್ಪಣಾ ಸಮಾರಂಭವು 2025 ಜ.26 ಭಾನುವಾರದಂದು ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ನಡೆಯಿತು.

ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಖ್ಯಾತ ಲೇಖಕ, ಪತ್ರಕರ್ತ ಜೋಗಿ, “ಒಬ್ಬ ಲೇಖಕನ ಅಂಕಣ 10 ಲಕ್ಷ ಜನರಿಗೆ ತಲುಪುತ್ತದೆ ಅನ್ನೋದಾದರೆ ಅದಕ್ಕಿಂತ ದೊಡ್ಡ ಖುಷಿ ಇನ್ನೇನಿರಲು ಸಾಧ್ಯ. ಆ ಖುಷಿಗೆ, ನನ್ನ ಬರವಣಿಗೆಗೆ ಹಾದಿಯಾಗಿದ್ದೆ ರವಿ ಬೆಳಗೆರೆ ಅವರ ‘ಹಾಯ್ ಬೆಂಗಳೂರು’ ಪತ್ರಿಕೆ,” ಎಂದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಾಯ್ ಬೆಂಗಳೂರು ವಾರ ಪತ್ರಿಕೆಯ ಸಂಪಾದಕಿ, ಭಾವನಾ ಬೆಳಗೆರೆ ಮಾತನಾಡಿ, “ಯುವ ಜನಾಂಗ ರವಿ ಬೆಳಗೆರೆ, ಎಚ್ಚೆಸ್ವಿ ಅವರಂತಹ ಸಾಹಿತಿಗಳ ಕೃತಿಗಳನ್ನು ಓದಬೇಕು. ಎಂದಿಗೂ ಅವರ ಸಾಹಿತ್ಯವನ್ನು ಮರೆಯಬಾರದು. ಅವರದ್ದು ಎಲ್ಲಾ ಕಾಲಕ್ಕೂ ಸಲ್ಲುವಂತಹ ಸಾಹಿತ್ಯ,” ಎಂದರು.

ಕೃತಿಯನ್ನು ಅಜ್ಜಂಪುರ ಎಸ್. ಶ್ರುತಿ ಅವರು ಪರಿಚಯಿಸಿದರು.

ಕೃತಿಯ ಲೇಖಕ ದೀಕ್ಷಿತ್ ನಾಯರ್, ಪೃಥ್ವಿ ಸೂರಿ, ಕನ್ನಡ ಪರಿಚಾರಕ ಕೆ. ರಾಜಕುಮಾರ್, ಖ್ಯಾತ ಗಾಯಕ ರಾಮಚಂದ್ರ ಹಡಪದ್, ಕವಿಯಿತ್ರಿ ಶೃತಿ ಬಿ.ಆರ್, ಸೈಯದ್ ಇಸಾಖ್, ಅಯೂಬ್ ಅಹಮ್ಮದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

MORE NEWS

ಸಾಹಿತ್ಯ ಕೃತಿಗಳು ಸಮಾಜದ ಹಲವು ಮುಖಗಳನ್ನು ತೋರಿಸುವ ಶಕ್ತಿ ಪಡೆದಿವೆ; ದೀಪಾ ಭಾಸ್ತಿ

13-12-2025 ಬೆಂಗಳೂರು

ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...

2026ನೇ ಸಾಲಿನ ಟೊಟೊ ಪುರಸ್ಕಾರದ ಮೊದಲನೇ ಪಟ್ಟಿ ಬಿಡುಗಡೆ

12-12-2025 ಬೆಂಗಳೂರು

2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...

ಮಕ್ಕಳಲ್ಲಿ ಕಲ್ಪನಾ ಲೋಕ ಬೆಳೆಸಿ: ಬಸು ಬೇವಿನಗಿಡದ

10-12-2025 ಧಾರವಾಡ

ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...