Date: 24-07-2022
Location: ಕೂಡಲಸಂಗಮ
“ಕನ್ನಡ ಸಾಹಿತ್ಯವನ್ನು ಅವಲೋಕಿಸುವ ಹೊಸ ವಿಧಾನಗಳು ಇಂದು ರೂಪುಗೊಳ್ಳುತ್ತಿದ್ದು, ಹಲವು ನೆಲೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ದಿಸೆಯಲ್ಲಿ ಖಾಡೆ ಅವರ ಈ ಕೃತಿ ಮೌಲಿಕವಾಗಿ ಗುರುತಿಸಿಕೊಂಡಿದೆ” ಎಂದು ಡಾ.ಬಿ.ವಿ.ವಸಂತಕುಮಾರ ಅವರು ಹೇಳಿದರು.
ಕನ್ನಡದ ಹೆಸರಾಂತ ಸಾಹಿತಿ ಡಾ. ಪ್ರಕಾಶ್ ಖಾಡೆ ಅವರ ‘ಕಾವ್ಯ ನಾದದ ಧ್ಯಾನ’ ವಿಮರ್ಶಾ ಸಂಕಲನವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಬಿ.ವಿ.ವಸಂತಕುಮಾರ್ ಅವರು ಕೂಡಲಸಂಗಮದಲ್ಲಿ ಜರುಗಿದ ಕಾವ್ಯ ಕಥಾ ವಿಮರ್ಶಾ ಕಮ್ಮಟದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.
“ಸಮಕಾಲೀನ ಸಾಹಿತ್ಯ ಚರಿತ್ರೆ ಕಟ್ಟಿಕೊಡುವಲ್ಲಿ ಯುವ ಬರಹಗಾರರು ಅಧ್ಯಯನ ಶಿಸ್ತನ್ನು ರೂಢಿಸಿಕೊಂಡು ಹೊಸ ಹೊಸ ಫಲಿತಗಳಿಗೆ ಸಾಕ್ಷಿಯಾಗಬೇಕು” ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಕಮತಗಿ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು, ಕೂಡಲ ಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತ ಬಸಪ್ಪ ಪೂಜಾರಿ, ಸಾಹಿತಿಗಳಾದ ಡಾ. ಬೈರಮಂಗಲ ರಾಮೇಗೌಡ, ಡಾ.ರಾಜಶೇಖರ ಮಠಪತಿ(ರಾಗಂ), ಕಿರಣ ಬಾಳಗೋಳ, ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಬಿ.ಶಿವುಕುಮಾರ ಪಾಲ್ಗೊಂಡಿದ್ದರು.
ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ರಮೇಶ್ ಕಮತಗಿ ಸ್ವಾಗತಿಸಿದರು. ಕೃತಿಕಾರ ಡಾ.ಪ್ರಕಾಶ್ ಖಾಡೆ ಅವರನ್ನು ಸನ್ಮಾನಿಸಲಾಯಿತು.
ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...
2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...
ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...
©2025 Book Brahma Private Limited.