ಈ ಮಹಾಕಾವ್ಯವನ್ನು ನಾನು ಒಬ್ಬ ಬೌದ್ಧ ಧರ್ಮೀಯ ಹೇಳಿರುವಂತೆ ಬರೆದಿದ್ದೇನೆ


“ಇಲ್ಲಿ ನಿರೂಪಿಸಲಾಗಿರುವ ಪುರಾತನ ಪದ್ಧತಿಗಳು ಅಪೂರ್ಣ ಆದರೂ ಕಾವ್ಯಶಾಸ್ತ್ರದ ಅನುಸಾರ ರೂಪುಗೊಂಡಿರುವುದರಿಂದ ತಾತ್ವಿಕವಾಗಿ ಮಹತ್ವ ಪೂರ್ಣವಾದ ವಿಷಯಗಳೂ ಅಂತೆಯೇ ಬುದ್ಧನ ತತ್ವಗಳೂ ಕೂಡ ಬೇಗ ಬೇಗ ಓದಿಸಿಕೊಂಡು ಹೋಗುತ್ತವೆ,” ಎನ್ನುತ್ತಾರೆ ಎಡ್ರಿನ್ ಆರ್ನಾಲ್ಡ್. ಅವರು ತಮ್ಮ “ಏಷ್ಯಾದ ಬೆಳಕು” ಕೃತಿಗೆ ಬರೆದ ಮುನ್ನುಡಿ.

ಮಹಾನಾಯಕ, ಸುಧಾರಕ, ಬೌದ್ಧ ಧರ್ಮ ಪ್ರವರ್ತಕ ಭರತವರ್ಷದ ಯುವರಾಜ ಸಿದ್ದಾರ್ಥನ ಜೀವನ, ನಡತೆ ಹಾಗೂ ಅವನ ಧರ್ಮದ ತತ್ವವನ್ನು ಈ ಕಾವ್ಯದಲ್ಲಿ ನಾನು ಒಬ್ಬ ಕಾಲ್ಪನಿಕ ಬೌದ್ಧಧರ್ಮ ಉಪಾಸಕನ ಸಂವೇದನೆಯ ಮೂಲಕ ಹೇಳಲು ಪ್ರಯತ್ನಿಸಿದ್ದೇನೆ. ಇಪ್ಪತ್ತು ನಾಲ್ಕು ಶತಮಾನಗಳ ಕಾಲ ಈ ಮಹಾ ಧರ್ಮ ಅಸ್ಥಿತ್ವದಲ್ಲಿದ್ದರೂ ಇದು ಐರೋಪ್ಯರಿಗೆ ಒಂದು ತಲೆಮಾರಿನ ಹಿಂದಿನವರೆಗೂ ಏನೇನೂ ತಿಳಿದಿರಲಿಲ್ಲ. ಹಾಗು ಇಂದಿಗೂ ಕೂಡ ಅದರ ಅನುಯಾಯಿಗಳ ಸಂಖ್ಯೆಯಲ್ಲಿ ಮತ್ತು ಅದರ ಭೌಗೋಳಿಕ ವಿಸ್ತಾರದಲ್ಲಿ ಉಳಿದ ಯಾವುದೇ ಧರ್ಮಕ್ಕಿಂತ ಅದು ಮುಂಚೂಣಿಯಲ್ಲಿದೆ. ನಮ್ಮ ಮನುಕುಲದ ನಾನೂರು ಎಪ್ಪತ್ತು ಲಕ್ಷ ಜನ ಗೌತಮನ ತತ್ವಗಳಲ್ಲಿ ಬದುಕಿ ಮಡಿಯುತ್ತಿದ್ದಾರೆ; ಅಲ್ಲದೆ, ಈ ಪುರಾತನ ಗುರುವಿನ ಆಧ್ಯಾತ್ಮಿಕ ಜಗತ್ತು ಈಗ ನೇಪಾಳದಿಂದಿಡಿದು. ಸಿಲೋನ್, ಜಪಾನ್, ಟಿಬೆಟ್, ಮಧ್ಯ ಏಷ್ಯಾ. ಸೈಬೀರಿಯ, ಸ್ವೀಡನ್ನಿನ ವಿಸ್ತ್ರತ ಪ್ರಾಂತ್ಯದವರೆಗೂ ಹಬ್ಬಿದೆ. ಈ ಭವ್ಯ ಪಂಥದ ಸಾಮ್ರಾಜ್ಯಕ್ಕೆ, ವಾಸ್ತವದಲ್ಲಿ ತಾನು ಹುಟ್ಟಿದ ನಾಡಿಂದ ಅದು ದೂರವಾಗಿದ್ದರೂ, ಭಾರತವನ್ನೂ ನ್ಯಾಯಸಮ್ಮತವಾಗಿ ಸೇರಿಸಬಹುದಾಗಿದೆ.

ಗೌತಮನ ಉದಾತ್ತ ಬೋಧನೆ ಆಧುನಿಕ ಬ್ರಾಹ್ಮಣ ಸಂಸ್ಕೃತಿಯ ಮೇಲೆ ಅಳಿಸಲಾಗದ ಪ್ರಭಾವ ಬೀರಿದೆ ಹಾಗೆಯೇ ಹಿಂದು ಧರ್ಮೀಯರ ಪ್ರಬಲ ನಂಬಿಕೆಗಳು ಮತ್ತು ಆಚರಣೆಗಳು ಬಹಳ ಸ್ಪಷ್ಟವಾಗಿ ಬುದ್ಧನ ತತ್ವಗಳಿಂದ ಪ್ರಭಾವಿತವಾಗಿವೆ. ಬುದ್ಧನ ಘನತೆ ಇಂದು ಲಭ್ಯವಿರುವ ಮೂಲಗಳಲ್ಲಿ ಸಮರ್ಪಕವಾಗಿ ಚಿತ್ರಿತವಾಗದಿದ್ದರೂ ಉತ್ಕೃಷ್ಟ, ಪರಮ ಪೂಜ್ಯ, ಉದಾತ್ತ ಹಾಗೂ ದಯಾಪೂರ್ಣವೂ ಆಗಿದೆ. ಚಿಂತನೆಗಳ ಇತಿಹಾಸದಲ್ಲಿ ಒಂದನ್ನು ಹೊರಪಡಿಸಿ, ಆದುದರಿಂದಲೇ ಮನುಕುಲದ ಮೂರನೆ ಒಂದು ಭಾಗ ತನ್ನ ಧರ್ಮ ಮತ್ತು ನೈತಿಕ ನೆಲೆಗಳನ್ನು ಈ ಯುವರಾಜನಿಂದ ಪಡೆದುಕೊಂಡಿದೆ. ಸಂತನ ಧೀಃಶಕ್ತಿ ಮತ್ತು ಹುತಾತ್ಮತನ ಶ್ರದ್ದೆ ಭಕ್ತಿಯನ್ನು ಬೆಸೆದ ಭರತ ವರ್ಷದ ಈ ಗುರುವಿನ ಸೌಮ್ಯತೆ ಮತ್ತು ಸ್ವಚ್ಛಂದತೆಯನ್ನು ಹದಗೆಡೆಸುವ ಒಂದು ಅಂಶವನ್ನು ಸೇರಿಸಿಲ್ಲ ಎಂದು ಬೌದ್ಧ ವಿಚಾರ ಕುರಿತ ಗ್ರಂಥಗಳು ಒಪ್ಪಿಕೊಳ್ಳುತ್ತವೆಯಾದರೂ, ತಪ್ಪು ಕಲ್ಪನೆ, ಸಂಶೋಧನೆ ಮತ್ತು ತಿರುಚುವಿಕೆಯಿಂದ ಸಾಮಾನ್ಯ ವಿಚಾರಗಳಲ್ಲಿ ವಿರೋಧಾಭಾಸಗಳು ಸೃಷ್ಟಿಯಾಗಿವೆ. ಬೌದ್ಧ ವಿಚಾರಗಳೆಂದರೆ ತಪ್ಪು ಲೆಕ್ಕಾಚಾರ ಹಾಕುವ ಸ್ವಭಾವದ ಎಂ. ಬಾರ್ಥಲೆಮಿ ಸೈಂಟ್ ಹಿಲೈರ್ ಎಂಬಾತನೂ ಕೂಡ ಯುವರಾಜ ಸಿದ್ದಾರ್ಥನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿರುವುದನ್ನು ಪ್ರೊಫೆಸರ್ ಮ್ಯಾಕ್ಸ್ ಮುಲ್ಲರ್ ತೋರಿಸಿದ್ದಾರೆ. "ಮಾನವತೆಯನ್ನು ಗೆದ್ದ ಮಹತ್ಸಾಧನೆ ಗೌತಮ ಬುದ್ಧನಿಗೆ ಸಲ್ಲುತ್ತದೆ; ಹಾಗೆಯೇ, ಅವನು ಆಚರಣೆಗಳನ್ನು ಅಲ್ಲಗಳೆದ, ನಿರ್ವಾಣದ ಅಂಚಿನಲ್ಲಿದ್ದದ್ದೂ, ಯಾರು ಬೇಕಾದರೂ ಆ ಸ್ಥಿತಿಯನ್ನು ಸಾಧಿಸಬಹುದು ಎಂದ. ಆದರೂ ಅವನ ಮಾತುಗಳನ್ನು ಕಡೆಗಣಿಸಿ, ಅವನನ್ನು ನಿಸ್ವಾರ್ಥ ಮತ್ತು ಧನ್ಯ ಭಾವದಿಂದ ಪೂಜಿಸುತ್ತಾರೆ. ಪವಿತ್ರವಾದ ಅವನ ವಿಹಾರಗಳ ಮೇಲೆ ವನದಷ್ಟು ಹೂಗಳನ್ನು ಸುರಿಯುವುದೇ ಅಲ್ಲದೆ “ಬುದ್ಧ ನನ್ನನ್ನು ಸಲಹುತ್ತಾನೆ" ಎಂದು ಅಸಂಖ್ಯಾತ ಜೀವಗಳು ಅವನಿಗೆ ಪ್ರಾರ್ಥನೆ ಸಲ್ಲಿಸುತ್ತವೆ. ಪುರೋಹಿತಷಾಹಿ ತನ್ನ ತೆಕ್ಕೆಗೆ ಬಂದ ಪ್ರಬುದ್ದ ತತ್ವಗಳನ್ನು ಸತ್ವಹೀನಗೊಳಿಸುವಂತೆ ಅತಿಯಾದ ವಿಜೃಂಭಣೆ ಬುದ್ದ ತತ್ವಗಳನ್ನು ಅಪವಿತ್ರಗೊಳಿಸಿವೆ. ಗೌತಮನ ತತ್ವಗಳ ನಿಜವಾದ ಶಕ್ತಿ ಮತ್ತು ಮಹೋನ್ನತೆಯನ್ನು ಅವುಗಳು ಬೀರಿರುವ ಪ್ರಭಾವಗಳಿಂದ ಅಳೆಯ ಬೇಕೆ ವಿನಃ, ಅದನ್ನು ವ್ಯಾಖ್ಯಾನಿಸುವವರಿಂದಲ್ಲ; ಆತನ ಬೌದ್ಧ ಸಂಘಗಳ ಅನುಸರಿಸಿ ತಲೆಯೆತ್ತಿ ನಿಂತಿರುವ ಭವ್ಯ ಆದರೆ ಸೋಮಾರಿ ಹಾಗೂ ಮುಗ್ಧ ಚರ್ಚುಗಳ ವ್ಯಾಖ್ಯಾನದಿಂದಲೂ ಅಲ್ಲ.

ಈ ಮಹಾಕಾವ್ಯವನ್ನು ನಾನು ಒಬ್ಬ ಬೌದ್ಧ ಧರ್ಮೀಯ ಹೇಳಿರುವಂತೆ ಬರೆದಿದ್ದೇನೆ ಕಾರಣ, ಏಷಿಯಾದ ಚಿಂತನೆಗಳನ್ನು ಸವಿಯಬೇಕಾದರೆ ಅವುಗಳನ್ನು ಪೌರಾತ್ಯರ ದೃಷ್ಟಿಯಲ್ಲಿಯೇ ನೋಡಬೇಕಿರುತ್ತದೆ; ಹಾಗೆ ಅದನ್ನು ಬಿಂಬಿಸದಿದ್ದರೆ ಇಲ್ಲಿ ಕಂಡು ಬರುವ ಪವಾಡಗಳಾಗಲಿ ಅಥವ ಅದರ ತತ್ವಗಳನ್ನಾಗಲಿ ಸಹಜವೆಂಬಂತೆ ಪ್ರತಿನಿಧಿಸುವುದು ಸಾಧ್ಯವಾಗುತ್ತಿರಲಿಲ್ಲ. ಉದಾಹರಣೆಗೆ, ಆತ್ಮಪುನರ್ಜನ್ಮದ ವಿಷಯ ಆಧುನಿಕ ಜಗತ್ತಿಗೆ ಆಶ್ಚರ್ಯವಾಗಬಹುದು. ಆದರೆ ಬುದ್ಧನ ಕಾಲದ ಹಿಂದುಗಳು ಅದನ್ನು ಸಂಪೂರ್ಣವಾಗಿ ಒಪ್ಪಿದ್ದರು; ಅಂದರೆ, ನೆಬುಖಡ್‌ನಜರ್ ಆ ಕಾಲದಲ್ಲಿ ಝರುಸಲೇಂ ಅನ್ನು ಆಕ್ರಮಿಸಿಕೊಳ್ಳುತ್ತಿದ್ದ. ನಿನೆವೆಹ್ ಪಟ್ಟಣವು ಮೆಡಿಸ್‌ರ ಕೈವಶವಾಗುತ್ತಿತ್ತು. ಫೋಯಿನಿಷಿಯನ್ನರು ಮಾರ್ಸೆಲ್ಸ್ ಪಟ್ಟಣವನ್ನು ಸ್ಥಾಪಿಸುತ್ತಿದ್ದರು.

ಇಲ್ಲಿ ನಿರೂಪಿಸಲಾಗಿರುವ ಪುರಾತನ ಪದ್ಧತಿಗಳು ಅಪೂರ್ಣ ಆದರೂ ಕಾವ್ಯಶಾಸ್ತ್ರದ ಅನುಸಾರ ರೂಪುಗೊಂಡಿರುವುದರಿಂದ ತಾತ್ವಿಕವಾಗಿ ಮಹತ್ವ ಪೂರ್ಣವಾದ ವಿಷಯಗಳೂ ಅಂತೆಯೇ ಬುದ್ಧನ ತತ್ವಗಳೂ ಕೂಡ ಬೇಗ ಬೇಗ ಓದಿಸಿಕೊಂಡು ಹೋಗುತ್ತವೆ. 'ಬುದ್ಧನ ಉನ್ನತವಾದ ಕಲ್ಪನೆ ಹಾಗೆಯೇ ಅವನ ತತ್ವಗಳ ಸಾಮಾನ್ಯ ಉದ್ದೇಶ ಓದುಗನಿಗೆ ತಲುಪಿದ್ದೇ ಆದರೆ ನನ್ನ ಗುರಿ ಕೈಗೂಡಿದಂತೆ. ಈ ಕಾವ್ಯದ ವಸ್ತುವಿನ ಬಗ್ಗೆ ವಿದ್ವಾಂಸರಲ್ಲಿ ಅಸಾಧಾರಣ ವಿವಾದಗಳು ಎದ್ದಿವೆ. ಸ್ಪೆನ್ಸ್ ಹಾರ್ಡಿ ಅವರ ಪುಸ್ತಕದಿಂದ ನಾನು ತೆಗೆದುಕೊಂಡಿರುವ ಉಲ್ಲೇಖಗಳು ದೋಷಪೂರಿತವಾದುವು, ಹಾಗೆಯೇ ಬಹಳಷ್ಟು ಸಂದರ್ಭದಲ್ಲಿ ನಾನು ಬೇರೆಡೆಯಿಂದ ತೆಗೆದುಕೊಂಡಿರುವ ವಿಷಯಗಳನ್ನು ತಿರುಚಿದ್ದೇನೆ ಎಂದು ಹೇಳಲಾಗಿದೆ. 'ನಿರ್ವಾಣ', 'ಧರ್ಮ', 'ಕರ್ಮ' ಮತ್ತು ಬೌದ್ಧ ಧರ್ಮದ ಹಲವಾರು ಮುಖ್ಯ ವಿಷಯಗಳು ಅಪಾರವಾದ ಅಧ್ಯಯನದಿಂದ ಬಂದಿವೆ. ಹಾಗೆಯೇ ನಿಸ್ಸಾರ ಕಲ್ಪನೆ, ಶೂನ್ಯತೆ, ಜೀವದ ಅತ್ಯಮೂಲ್ಯತೆ ನಿಜವಾದ ಸಮಸ್ಯೆಗಳು ಎಂಬುದನ್ನು ಜಗತ್ತಿನ ಮೂರನೇ ಒಂದು ಭಾಗದಷ್ಟು ಜನ ನಂಬುತ್ತಿರಲಿಲ್ಲ ಎಂಬ ದೃಢವಾದ ನಂಬಿಕೆಯಿಂದ ಬಂದಿದೆ.

ಅಂತಿಮವಾಗಿ ಆತುರವಾಗಿ ನಡೆಸಿರುವ ನನ್ನ ಬರಹದಲ್ಲಿರಬಹುದಾದ ತಪ್ಪು- ಒಪ್ಪುಗಳನ್ನು 'ದ ಲೈಟ್ ಆಫ್ ಏಷಿಯಾ'ದ ಪ್ರಬುದ್ಧ ಪ್ರವರ್ತಕ ಹಾಗು ಅವನ ನೆನಪಿಗಾಗಿ ಉದಾತ್ತವಾಗಿ ಶ್ರಮಿಸುತ್ತಿರುವ ಮಹಾ ವಿದ್ವಾಂಸರುಗಳು ಕ್ಷಮಿಸ ಬೇಕೆಂದು ಗೌರವಪೂರ್ವಕವಾಗಿ ಪ್ರಾರ್ಥಿಸುತ್ತೇನೆ. ವಿದ್ವಾಂಸರಿಗಿರುವ ಸಮಯವಾಗಲಿ ಅಥವಾ ಸಾಮರ್ಥ್ಯವಾಗಲಿ ನನಗಿಲ್ಲ. ಆದರೂ ವಿರಾಮವೇ ಇಲ್ಲದ ದಿನಗಳಲ್ಲಿ ಸಿಕ್ಕ ಅಲ್ಪ ಸಮಯದಲ್ಲಿ ಈ ಕಾವ್ಯವನ್ನು ರಚಿಸಿದ್ದೇನೆ. ಕಾರಣ ಪಾಶ್ಚಿಮಾತ್ಯ ಮತ್ತು ಪೌರಾತ್ಯರ ನಡುವೆ ಉತ್ತಮವಾದ ತಿಳುವಳಿಕೆ ಇರಬೇಕೆಂಬುದು ನನ್ನ ಬಯಕೆ.

ಮುಂದೊಂದು ದಿನ, 'ದ ಲೈಟ್ ಆಫ್ ಏಷಿಯಾ' ಮತ್ತು 'ಇಂಡಿಯನ್ ಸಾಂಗ್ ಆಫ್ ಸಾಂಗ್ಸ್' ಕೃತಿಗಳು ಭಾರತ ಮತ್ತು ಅದರ ಜನರನ್ನು ಅಪಾರವಾಗಿ ಗೌರವಿಸಿದ ಒಬ್ಬನ ನೆನಪನ್ನು ಉಳಿಸುತ್ತವೆ ಎಂದು ನಾನು ನಂಬಿದ್ದೇನೆ.

MORE FEATURES

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...

ಕಲ್ಪನಾ ವಿಳಾಸ: ಅವಳ ಸಾವಿಗೆ ಅವಳೇ ಕಾರಣವಾದಳೆ?

13-12-2025 ಬೆಂಗಳೂರು

" ಸದಾ ಅಚ್ಚುಕಟ್ಟುತನ ಶಿಸ್ತು ಸೌಂದರ್ಯ ಪ್ರಜ್ಞೆಗೆ ಹೆಸರುವಾಸಿಯಾಗಿದ್ದ ಕಲ್ಪನಾ ವಿಲಾಸಿ ಜೀವನದಿಂದ ವಿಮುಖವಾಗಿ ಒ...

ನಮ್ಮ ಮಣ್ಣಿನ ಕಥೆಗಾರನಿಗೆ ಇನ್ನಷ್ಟು ಕಥೆಗಳು ಒಲಿದು ಬರಲಿ

13-12-2025 ಬೆಂಗಳೂರು

"'ಗೆರೆಗೆ ಸಿಗದ ನದಿ' ಯಲ್ಲಿನ ತಾರಾನಾಥನ ಚಿತ್ರ ಮತ್ತು ಬದುಕಿನ ಚಿತ್ರಣ, ಕೇರೆ ಹಾವಿನಲ್ಲಿ ಊರನ್ನು ಸುಡ...