Date: 31-05-2023
Location: ಬೆಂಗಳೂರು
ಮೈಸೂರು ವಿಶ್ವವಿದ್ಯಾಲಯದಿಂದ ''ಸರ್ವೋದಯ ಪರಿಕಲ್ಪನೆಯ ಪ್ರಸ್ತುತತೆ ಮತ್ತು ದುರ್ಬಲ ವರ್ಗಗಳ ಸಬಲೀಕರಣದಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ -ತುಮಕೂರು ಜಿಲ್ಲೆಯ ಒಂದು ಅಧ್ಯಯನ" ಕುರಿತು ಪ್ರೌಢ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದಿರುವ ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆ ಉಲ್ಲಾಳ ವಿಭಾಗದ ಎಸಿಪಿ ಸಿ.ಬಸವರಾಜುರವರಿಗೆ ಕರ್ನಾಟಕ ಸರ್ವೋದಯ ಮಂಡಲದ ವತಿಯಿಂದ ಗೌರವಾಭಿನಂದನೆ ಸಲ್ಲಿಸಲಾಯಿತು.
ಕರ್ನಾಟಕ ಸರ್ವೋದಯ ಮಂಡಲ ಮತ್ತು ಬಾಲಾಜಿ ವಿದ್ಯಾನಿಕೇತನ, ಬೆಂಗಳೂರಿನ ಬಾಲಾಜಿ ಪದವಿ ಕಾಲೇಜು ಹನುಮಂತನಗರ ಅವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ, ಸಿ ಬಸವರಾಜು, “ಮಹಾತ್ಮ ಗಾಂಧೀಜಿಯವರ ಸಾರ್ವಕಾಲಿಕ ಚಿಂತನೆ- ಸರ್ವೋದಯ ಸಮಾಜ ನಿರ್ಮಾಣವಾಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಸರ್ವರಿಗೂ ಸಮಬಾಳು ಸಮಪಾಲು ಎನ್ನುವ ತತ್ವ ಆಶಯ ಸಿಗುವಂತಾಗಲು ವ್ಯವಸ್ಥೆಯಲ್ಲಿ ಅನುವು ಮಾಡಿಕೊಡಬೇಕು. ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ವಿದ್ಯಾಭ್ಯಾಸದ ಸೌಕರ್ಯ ನೀಡಿ ಅವರು ಮುಖ್ಯ ವಾಹಿನಿಗೆ ಬಂದಾಗಲೇ ಗಾಂಧೀಜಿ ರವರು ಕಂಡ ಕನಸು ನನಸಾಗುವುದು ಈ ನಿಟ್ಟಿನಲ್ಲಿ ಸರ್ವೋದಯ ಮಂಡಲ ಕಾರ್ಯ ಚಟುವಟಿಕೆಗಳು ಶ್ಲಾಘನೀಯ,” ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಸರ್ವೋದಯ ಮಂಡಲದ ಅಧ್ಯಕ್ಷ ಎಚ್. ಎಸ್. ಸುರೇಶ್ ಮಾತನಾಡಿ, “ಗಾಂಧಿ ತತ್ವ ಚಿಂತನೆಗಳು ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಸರ್ಕಾರದ ವರಿಷ್ಠ ಅಧಿಕಾರಿಗಳು ಇದನ್ನು ಅಳವಡಿಸಿಕೊಳ್ಳುವುದು ಅತ್ಯವಶ್ಯ,” ಎಂದು ತಿಳಿಸಿದರು.
ಪ್ರಾಧ್ಯಾಪಕ ಆರ್. ವಾದಿರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬೆಂಗಳೂರಿನ ಕರ್ನಾಟಕ ಸರ್ವೋದಯ ಮಂಡಲ ಗೌರವ ಕಾರ್ಯದರ್ಶಿ, ಯ.ಚಿ. ದೊಡ್ಡಯ್ಯ , ಬೆಂ.ನ.ಜಿ. ಕರ್ನಾಟಕ ಸರ್ವೋದಯ ಮಂಡಲ ಅಧ್ಯಕ್ಷ, ಗುರುರಾಜ ಪೋಶೆಟ್ಟಿಹಳ್ಳಿ ಪ್ರಾಂಶುಪಾಲ ಉಮೇಶ್ ದಕ್ಷಿಣ ಮೂರ್ತಿ, ಬಾಲಾಜಿ ಪದವಿ ಕಾಲೇಜು ಹಾಗೂ ಗಾಂಧಿ ಸ್ಮೃತಿ ಭವನದ ಕರ್ನಾಟಕ ಪ್ರತಿನಿಧಿ ಸುರೇಶ್ ಕಲಘಟಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...
2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...
ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...
©2025 Book Brahma Private Limited.