ಚೆನ್ನಿಗನ ಪಾತ್ರವು ಭೈರಪ್ಪನವರ ‌ತಂದೆಯನ್ನು ಹೋಲುತ್ತದೆ‌


“ಈ ಕಾದಂಬರಿ ನಿಮ್ಮನ್ನು ನಾಗಾಲೋಟ‌ ಓಡಿಸಿಕೊಂಡು ಹೋಗದಿರಬಹುದು. ಆದರೆ ಜೀವನವನ್ನು ನಿರ್ವಿಕಾರ ದೃಷ್ಟಿಯಿಂದ ನೋಡಬಲ್ಲವರ, ಸಾಕಷ್ಟು ಕಷ್ಟಸುಖಗಳನ್ನು ಕಂಡವರ , ತಕ್ಕಮಟ್ಟಿಗಾದರೂ ಹಳ್ಳಿಗಳನ್ನು ತಿಳಿದಿರುವವರ ಅಂತರಂಗವನ್ನು ತಟ್ಟುತ್ತೆಂಬುದು ನನಗೆ ಗೊತ್ತಿದೆ‌,” ಎನ್ನುತ್ತಾರೆ ಉದಯಕುಮಾರ ಹಬ್ಬು. ಅವರು ಎಸ್‌. ಎಲ್‌. ಭೈರಪ್ಪ ಅವರ “ಗೃಹಭಂಗ” ಕಾದಂಬರಿ ಕುರಿತು ಬರೆದ ವಿಮರ್ಶೆ.

ಕನ್ನಡದ ಖ್ಯಾತ ಕಾದಂಬರಿಕಾರರಾದ ಡಾ ಎಸ್ ಎಲ್ ಭೈರಪ್ಪನವರು ಕೇವಲ ಅವರ ಖ್ಯಾತಿ ಕರ್ನಾಟಕ್ಕೆ ಮಾತ್ರ ಸೀಮಿತ ಬಾಗಿದೆ ಅಖಿಲ ಭಾರತ ಮಟ್ಟದಲ್ಲೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕೂಡ ಖ್ಯಾತನಾಮರೆ. ಅವರು ಬರೆದ ಅತ್ಯಂತ ಶ್ರೇಷ್ಠ ಕಾದಂಬರಿ "ಗೃಹಭಂಗ"1970 ರಲ್ಲಿ ಬರೆದರು. ಈ ಕಾದಂಬರಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯ ಕೃತಿಯಿದ್ದಂತೆ ಕಾದಂಬರಿ ಸಾಹಿತ್ಯ ಚರಿತ್ರೆಯಲ್ಲಿ ಶ್ರೇಷ್ಠ ಸ್ಥಾನವನ್ನು ಪಡೆದಿದೆ‌.

ಈ ಕಾದಂಬರಿ ಮೈಸೂರು ಸಂಸ್ಥಾನದ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕಂಬದಕೆರೆ ಹೋಬಳಿಯ ರಾಮಸಂದ್ರ ಗ್ರಾಮದ ಶ್ಯಾನಭೋಗ್ ರಾಮಣ್ಣನವರು ಮೃತಪಟ್ಟ ಮೇಲೆ ಮನೆಯಲ್ಲಿ ಉಳಿದವರು ಅವರ ಹೆಂಡತಿ ಗಂಗಮ್ಮ, ಇಬ್ಬರು ಮಕ್ಕಳು ಚೆನ್ನಿಗರಾಯ ಮತ್ತು ಅಪ್ಪಣ್ಣ ಈ ಮೂರು ಪ್ರಮುಖ ಪಾತ್ರಗಳ ಪರಿಚಯದೊಂದಿಗೆ ಕಥಾನಕ ಪ್ರಾರಂಭಗೊಳ್ಳುತ್ತದೆ. ಈ ಕಥಾನಕವು ಸ್ವಾತಂತ್ರ್ಯ ಪೂರ್ವ ೧೯೩೧ ರಿಂದ ಪ್ರಾರಂಭಗೊಂಡು ೧೯೪೬ ರ ಸ್ವಾತಂತ್ರ್ಯ ಸಂಗ್ರಾಮದವರೆಗೆ ಮುಂದುವರಿಯುತ್ತದೆ. ಮೊದಲನೆಯ ಮಹಾಯುದ್ಧವೂ ಈ ಕಥಾನಕದ ಉಪಭಾಗವಾಗಿ ನಿರೂಪಿಸಲ್ಪಟ್ಟಿದೆ. ಇದೊಂದು ಕ್ಲಾಸಿಕ್ ಕಾದಂಬರಿ. ನಾನು ನೂರಾರು ಕಾದಂಬರಿಗಳನ್ನು ಓದಿದ್ದೇನೆ. ಈ ಕಾದಂಬರಿಯಲ್ಲಿನ ತೀವ್ರ ವಿಷಾದ ಮತ್ತು ಹತಾಶ ಭಾವನೆ ನನ್ನನ್ನು ತುಂಬ ಕಾಡಿತು‌ ಇದು ಭೈರಪ್ಪನವರು ಹೇಳಿದಂತೆ ಪ್ರಾದೇಶಿಕ ಕಾದಂಬರಿ ಎಂದು ಕಾದಂಬರಿಯಲ್ಲಿ ಉಪಯೋಗಿಸಿದ ‌ಪ್ರಾದೇಶಿಕ ಭಾಷೆಯ ಪ್ರಯೋಗದಿಂದ ಹೇಳಲಾಗದು. "ಸಾವಿರದ ಒಂಬೈನೂರ ಇಪ್ಪತ್ತರ ನಂತರ ಪ್ರಾರಂಭವಾಗುವ ಇದರ ವಸ್ತು, ನಲವತ್ನಾಲ್ಕು ನಲವತ್ತೈದರ ಸುಮಾರಿಗೆ ಮುಗಿಯುತ್ತದೆ. ತಿಪಟೂರು ಚನ್ನರಾಯಪಟ್ಟಣ ತಾಲ್ಲೂಕುಗಳನ್ನು ಒಳಗೊಳ್ಳುವ ಭಾಗದ ಪ್ರಾದೇಶಿಕ ಹಿನ್ನೆಲೆ‌ ಭಾಷೆಯೂ ಅದರದೇ.‌ಆದರೆ, 'ಇದೊಂದು ಪ್ರಾದೇಶಿಕ ಕಾದಂಬರಿ" ಎಂಬ ಆತುರದ ಕ್ಲಾಸ್ ರೂಮ್ ಬುದ್ಧಿಯ ವರ್ಗೀಕರಣ ಮಾಡಬಾರದು‌

ಈ ಕಾದಂಬರಿ ನಿಮ್ಮನ್ನು ನಾಗಾಲೋಟ‌ ಓಡಿಸಿಕೊಂಡು ಹೋಗದಿರಬಹುದು. ಆದರೆ ಜೀವನವನ್ನು ನಿರ್ವಿಕಾರ ದೃಷ್ಟಿಯಿಂದ ನೋಡಬಲ್ಲವರ, ಸಾಕಷ್ಟು ಕಷ್ಟಸುಖಗಳನ್ನು ಕಂಡವರ , ತಕ್ಕಮಟ್ಟಿಗಾದರೂ ಹಳ್ಳಿಗಳನ್ನು ತಿಳಿದಿರುವವರ ಅಂತರಂಗವನ್ನು ತಟ್ಟುತ್ತೆಂಬುದು ನನಗೆ ಗೊತ್ತಿದೆ‌."

ನನಗಂತೂ ಈ ಕಾದಂಬರಿ ಇಲ್ಲಿ ಚಿತ್ರಿಸಿರುವ ವೈವಿಧ್ಯಮಯ ಮನುಷ್ಯರ ಹೆಂಗಸರ ಗಂಡಸರ ಗಯ್ಯಾಳಿ ಕ್ರೂರಿ ಅತ್ತೆ ಗಂಗಮ್ಮ, ಇಡೀ ಸಂಸಾರವನ್ನು ಸೋಮಾರಿ ಸ್ವಾರ್ಥಿ ಗಂಡನನ್ನು ಕಟ್ಟಿಕೊಂಡು ಸಂಭಾಳಿಸುವ ಹೆಣ್ಣಿನ ಕತೃತ್ವ ಶಕ್ತಿಯನ್ನು ನಂಜಮ್ಮನಲ್ಲಿ ಕಂಡು ಮೂಕವಿಸ್ನಮಿತರಾಗುತ್ತೇವೆ.

ಮತ್ತು ಈ ಕಾದಂಬರಿ ಸಮಗ್ರವಾಗಿ ಒಂದು ಬ್ರಾಹ್ಮಣ ಸಮುದಾಯವನ್ನು ಚಿತ್ರಿಸುತ್ತದೆ. ಬ್ರಾಹ್ಮಣಳಾಗಿ ಗಂಗಮ್ಮ ಬಳಸುವ ಅತಿ ಕೆಟ್ಟ ಬಯ್ಗುಳಗಳು ಆ‌ ಬಯ್ಗುಳಗಳನ್ನೇ ಹೆತ್ತ ಅಮ್ಮನಿಗೂ ಪ್ರಯೋಗಿಸುವ ಅವಳ ಮಕ್ಕಳು, ಗಂಗಮ್ಮನ ಕ್ರೌರ್ಯ. ತನ್ನ ಬೆಳೆದ ಗಂಡು ಮಕ್ಕಳನ್ನು ತನ್ನ‌ಕಪಿ ಮುಷ್ಟಿಯಲ್ಲಿ ಇಟ್ಟುಕೊಳ್ಳುವ ಗಂಗಮ್ಮನ ಕೀಳು ವರ್ತನೆ. ಸ್ವತಃ ತನ್ನ ಮಕ್ಕಳನ್ನೇ ಪ್ರೀತಿಸದ ಹೊಟೆಲ್ಲಿಗೆ ಒಬ್ಬನೆ ಮಸಾಲೆ ದೋಸೆ ತಿಂದು ಊಟ ಮಾಡಿ ಹೆಂಡತಿ ಮಕ್ಕಳು ಉಪವಾಸ ಬಿದ್ದರೂ ಕ್ಯಾರೆ ಎನ್ನದ ಚೆನ್ನಿಗರಾಯ, ಚೆನ್ನಿಗರಾಯನಿಗೆ ಶ್ಯಾನಭೋಗ ಹುದ್ದೆ ಸಿಕ್ಕಾಗ ಅವನ ಕೈಲಿ ಆಗದೆ ಆ ಕೆಲಸವನ್ನು ನಂಜಮ್ಮ ಮಾಡುತ್ತಾಳೆ‌ ಬ್ರಾಹ್ಮಣರ ಹಣಕ್ಕಾಗಿ ಯಾವ ಆಚರಣೆಗಳನ್ನು ಮಾಡಿಸುವ ಹಪಹಪಿತನ ಹಣಕ್ಕಾಗಿ ಯಾವ ಮಟ್ಟಕ್ಕೂ ಇಳಿಯುವ ಜನರು ನಂಜಮ್ಮ ಈ ಸೋಮಾರಿ ಸ್ವಾರ್ಥಿ ಉಡಾಫೆ ಗಂಡನನ್ನು ಕಟ್ಟಿಕೊಂಡು ಬದುಕನ್ನು ಕಟ್ಟಿಕೊಳ್ಳುವ ಅವಳ ಶಕ್ತಿಗೆ ನಾವು ತಲೆಬಾಗುತ್ತೇವೆ. ಅವಳು ಸಾತ್ವಿಕಳು.‌ಅವಳ ಹೆಸರು ನಂಜಮ್ಮ. ಅತ್ತೆ ಮಹಾ ದುರುಳ ಪಾತ್ರ.‌ಆದರೆ ಅವಳ ಹೆಸರು ಗಂಗಮ್ಮ‌.
ನಂಜಮ್ಮನ ಮಗ ರಾಮನನ್ನು ಶೇಖೇದಾರನಾಗುವಷ್ಟು ಶಿಕ್ಷಣ ಕೊಡಿಸಬೇಕೆಂಬುದು ನಂಜಮ್ಮನ ಪ್ರಯತ್ನ.‌ಮಗಳನ್ನು ಒಳ್ಳೆಯ ವರನಿಗೆ ಮದುವೆ ನಿಶ್ಚಯಿಸುತ್ತಾಳೆ. ಆದರೆ ಪ್ಲೇಗ್ ಬಂದು ಅವಳ ಇಬ್ಬರು ಮಕ್ಕಳೂ ಸಾಯುತ್ತಾರೆ‌

ಕಂಠೀ ಜೋಯಿಷ ಎಂಬ ಪುರೋಹಿತರು ನಂಜಮ್ಮನ ತಂದೆ.ಯ ಪಾತ್ರ ಬರುತ್ತದೆ. ಅವರ ಮತ್ತು ಸ್ಥಳೀಯ ಶ್ಯಾಮಭಟ್ಟರ ನಡುವೆ ಸಂಘರ್ಷ, ಶ್ತಾಮಭಟ್ಟ ಕಿತಾಪತಿ ಮನುಷ್ಯ. ರಾತ್ರಿ ಶಾಸ್ತ್ರಿಗಳ ಮನೆಯ ಹಂಚುಗಳ ಮೇಲೆ ತನ್ನ ಕೆಲಸದವರಿಂದ ಕಲ್ಲು ಎಸೆಯುವಂತೆ ಮಾಡುತ್ತಾನೆ‌ ಶಾಸ್ತ್ರಿಗಳು ಶ್ಯಾಮಭಟ್ಟನ ಮನೆಯ ಹಂಚಿಗೆ ಹಗಲೆ ಹೋಗಿ ಕಲ್ಲೆಸೆದು ಬರುತ್ತಾರೆ. ಮತ್ತು ಶ್ಯಾಮಭಟ್ಟ ಶಾಸ್ತ್ರಿಗಖ ವಿರುದ್ಧ ಕೋರ್ಟಿನಲ್ಲಿ ಕೇಸು ದಾಖಲು ಮಾಡುತ್ತಾನೆ. ಪುರಾವೆ ಸಾಕ್ಷಿಗಳಿಲ್ಲದೆ ಕೇಸು ವಜಾ ಆಗುತ್ತದೆ‌ ಶಾಸ್ತ್ರುಗಳು ತನ್ನ ಪರ ತೀರ್ಪು ಬಂದಾಗ ಶ್ಯಾಮಭಟ್ಟರಿಗೆ ಬೂಟಿನಿಂದ ಮುಖಕ್ಕೆ ಹೊಡೆಯುತ್ತಾರೆ. ಭಟ್ಟರು ಮೂರ್ಛೆ ತಪ್ಪಿ ಬಿದ್ದಾಗ ಅವರು ಸತ್ತರೆಂದೇ ತಿಳಿದು ಶಾಸ್ತ್ರಿಗಳು ಕಾಶಿಗೆ ಪಲಾಯನಗೊಳ್ಳುತ್ತಾರೆ‌ ಈ ಕಾದಂಬರಿಯಲ್ಲಿ ನರಸಿ ಎಂಬ ವೇಶ್ಯೆಯ ಪಾತ್ರ ಬರುತ್ತದೆ. ಅವಳು ಸ್ವಭಾವತಃ ಒಳ್ಳೆಯವಳು..ನಂಜಮ್ಮನ ಮೇಲೆ ಅಪಾರ ಗೌರವವಿದ್ದವಳು ಕಾದಂಬರಿಯ ಕೊನೆಗೆ ನಂಜಮ್ಮ ಪ್ಲೇಗ್ ಬಂದು ಸಾಯುತ್ತಾಳೆ. ಕೊನೆಯ ಮಗ ವಿಶ್ವ ಅನಾಥನಾಗುಗ್ತಾನೆ. ಅವನನ್ನು ಮಹಾದೇವಯ್ಯ ಎಂಬ ಜಂಗನರು ತನ್ನೊಡನೆ ಎಲ್ಲೋ ಕರೆದುಕೊಂಡು ಹೋಗುವುದರೊಂದಿಗೆ ಕಾದಂಬರಿ ಕೊನೆಗೊಳ್ಳುತ್ತದೆ.

ಕಲ್ಲೇಶ ಎಂಬ ನಂಜಮ್ಮನ ತಮ್ಮನ ಪಾತ್ರ ಅವನ ಹಳಿತಪ್ಪಿದ ವಿಷಮ ದಾಂಪತ್ತಯ, ಅಳಿಯ ವಿಶ್ವನನ್ನು ಶಿಸ್ತಿನ‌ ಹೆಸರಿನಲ್ಲಿ ಒಣಕಟ್ಟಿಗೆಯಿಂದ ರಕ್ತ ಬರುವಂತೆ ಹೊಡೆಯುವುದು, ಅವನ ಸ್ತ್ತೀ ಸಹವಾಸ ಇವೆಲ್ಲ ಚಿತ್ರಣಗೊಂಡಿದೆ. ಈ ಕಾದಂಬರಿಯಲ್ಲಿ ಅನಂತಮೂರ್ತಿ ಅವರ ಸಂಸ್ಕಾರ ಕಾದಂಬರಿಯ ಮೂಲ ಸ್ರೋತವನ್ನು ಕಾಣಬಹುದು. ಎರಡೂ ಕಾದಂಬರಿಗಳಲ್ಲಿ ಬ್ರಾಹ್ಮಣ ಸಮುದಾಯದ ನೆಗೆಟಿವ್ ಆದರೆ ವಾಸ್ತವ ಚಿತ್ರಣಗಳಿವೆ. ನರಸಿ ಎಂಬ ಉತ್ತಮ ಗುಣನಡತೆಯ ವೇಶ್ಯೆಯ ಚಿತ್ರಣವಿದೆ. ಬ್ರಾಹ್ಮಣ ಆಚರಣೆಗಳ ವಿವರಣೆಗಳಿವೆ‌

ಅಪ್ಪಣ್ಣ ಎಂಬವನು ಸಿಟ್ಟಿನಕ್ಲಿ ಹೆಂಡತಿಯ ತಾಳಿಯನ್ನು ಕಿತ್ತು ಬಿಸಾಕಿದಾಗ ಅವಳು ಅಳುತ್ತ ನಂಜಮ್ಮನ ಮನೆಗೆ ಹೋಗುತ್ತಾಳೆ. ಊರಿನ ಬ್ರಾಹ್ಮಣರು ತಾಳಿ ಇಲ್ಲದೆ ಸಾತು ನಂಜಮ್ಮನ ಮನೆಗೆ ಹೋಗಿದ್ದಾಳೆ. ಅವರಿಬ್ಬರನ್ನುಜಾತಿಯಿಂದ ಹೊರಹಾಕಬೇಕೆಂದು ಶೃಂಗೇರಿ ಮಠಕ್ಕೆ ಬರೆದಾಗ ಅವರಿಬ್ಬರೂ ಬಹಿಷ್ಕೃತರಾಗುತ್ತಾರೆ‌

ಒಟ್ಟಾರೆಯಾಗಿ ಈ ಕಾದಂಬರಿ ಓದಿದ ಹಲವು ಕಾಲದವರೆ ನಮ್ಮನ್ನು ಕಾಡುತ್ತದೆ‌. ಅಂದಿನ ಸಾಮಾಜಿಕ ವ್ಯವಸ್ಥೆಯ ವಾಸ್ತವ ಚಿತ್ರಣವು ಕಾದಂಬರಿಯಲ್ಲಿದೆ..ನಂಜಮ್ಮ ಎಸ್ ಎಲ್ ಭೈರಪ್ಪನವರ ತಾಯಿಯ ಚಿತ್ರಣವೆಂದೂ ಚೆನ್ನಿಗರಾಯ ಒಬ್ಬ ಬೇಜವಾಬ್ದಾರಿ ಪೆದ್ದ ಗಂಡ. ಅವನಿಗೆ ತನ್ನ ಹಸಿವನ್ನು ತೀರಿಸಿಕೊಳ್ಖುವುದನ್ನು ಬಿಟ್ಟರೆ ಮಹಾ ಸೋಮಾರಿ. ಅವನಿಗೆ ಅಪ್ಪ ರಾಮಣ್ಣನ ಶಾನುಭೋಗನ ಹುದ್ದೆಯನ್ನು ಅವನ ಮಾವ ಕೊಡಿಸುತ್ತಾರೆ. ಆದರೆ ಚೆನ್ನಿಗರಾಯನಿಗೆ ಶಾನುಭೋಗನ ಜವಾಬ್ದಾರಿಗಳೇನು ಎಂದು ಗೊತ್ತಿರದೆ ಅವನ ಕೆಲಸಗಳನ್ನು ಅವನ ಹೆಂಡತಿ ನಂಜಮ್ಮ ಮಾಡಿ ಸಂಸಾರ ಸಾಗಿಸುತ್ತಾಳೆ. ಎಸ್ ಎಲ್ ಭೈರಪ್ಪ ಒಂದೆಡೆ ಹೇಳುತ್ತಾರೆ:" ನನ್ನಮ್ಮ ದೇವತಾ ಸ್ವರೂಪಿ ಹೆಣ್ಣು. ಆದರೆ ಅಪ್ಪ ಮಹಾ ಬೇಜವಾಬ್ದಾರಿ. ಚೆನ್ನಿಗನ ಪಾತ್ರವು ಭೈರಪ್ಪನವರ ‌ತಂದೆಯನ್ನು ಹೋಲುತ್ತದೆ‌ ಯಾವುದೆ ಲೇಖಕ ತನ್ನ ಶ್ರೇಷ್ಢ ಕೃತಿಗಳಲ್ಲಿ ತನ್ನ ಬಾಲ್ಯದ ಅನುಭವಗಳನ್ನೇ ಬರೆದಿರುತ್ತಾನೆ. ವೈವಿಧ್ಯಮಯ ಮಾನವ ಪಾತ್ರಗಳು ಚಿರಕಾಲ ಓದುಗರ ಮನಸ್ಸುಗಳಲ್ಲಿ ಇರುವಂಥವು.

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...