"ಕಾದಂಬರಿ ಪ್ರಾರಂಭಗೊಳ್ಳುವುದು ಶಿವಪ್ಪ ನಾಯಕ ತನ್ನ ಇಳಿ ವಯಸ್ಸಿನಲ್ಲಿ ತನ್ನ. ಜೀವನ ಚರಿತ್ರೆಯನ್ನು ಬರೆಸಬೇಕೆಂದು ಗುರು ಬಸವಲಿಂಗ ದೇವರನ್ನು ಕರೆಯಿಸಿ ವೀರಭದ್ರ ನಾಯಕ ಹಾಗೂ ತನ್ನ ಆಡಳಿತದ ಸಮಯದಲ್ಲಿ ತಾನು ಮಾಡಿದ ಸಾಧನೆಗಳು ಮತ್ತು ತಪ್ಪುಗಳನ್ನು ಮಾಡಿದ್ದರೆ ಅದನ್ನೂ ದಾಖಲಿಸಬೇಕೆಂದು ಶಿವಪ್ಪ ನಾಯಕ ವಿನಂತಿಸಿಕೊಳ್ಳುತ್ತಾನೆ," ಎನ್ನುತ್ತಾರೆ ಉದಯಕುಮಾರ ಹಬ್ಬು. ಅವರು ಅಂಬ್ರಯ್ಯ ಮಠ ಅವರ ʻಬಿದನೂರ ಪ್ರಭು ಶಿಸ್ತಿನ ಶೂರ ಕೆಳದಿ ಶಿವಪ್ಪ ನಾಯಕʼ ಕೃತಿ ಕುರಿತು ಬರೆದ ಅನಿಸಿಕೆ.
ಈ ಐತಿಹಾಸಿಕ ಕಾದಂಬರಿಯು ಕೆಳದಿ ಸಾಮ್ರಾಜ್ಯದ ಬಹು ದೊಡ್ಡ ಸಾಮ್ರಾಟ, ರಾಜಯೋಗಿ ಕೆಳದಿ ಶಿವಪ್ಪ ನಾಯಕನ ಕುರಿತಾಗಿ ಬರೆದ್ದಾಗಿದೆ. ಕೃತಿಕಾರ ಮಾನ್ಯ ಅಂಬ್ರಯ್ಯಮಠ ಈ ಕೃತಿಕಾರನ ಕುರಿತಾಗಿ ವಿಶೇಷ ಏನೆಂದರೆ ಇವರು ತಮ್ಮ ಜೀವನವಿಡೀ ಕೆಳದಿ ಸಾಮ್ರಾಜ್ಯದ ಅಧ್ಯಯನಕ್ಕೆ ಮೀಸಲಾಗಿಟ್ಟ ಬಹು ದೊಡ್ಡ ಇತಿಜಾದಜ್ಞ. ಅಷ್ಟಲ್ಲದೆ ತಮ್ಮ ಮೂಲ ಊರಾದ ಬಿಕಾಪುರವನ್ನು ಬಿಟ್ಟು ಕೆಳದಿ ಸಾಮ್ರಾಜ್ಯದ ಇತಿಹಾಸದ ಅಧ್ಯಯನಕ್ಕೆಂದೇ ಶಿವಮೊಗ್ಗಾ ಜಿಲ್ಲೆ ಹೊಸನಗರದಲ್ಲಿ ವಾಸ್ತವ್ಯ ಹೂಡಿದ್ದಾರೆ. ಅವರು ಕೆಳದಿ ಸಾಮ್ರಾಟರು ಬರೆಸಿದ್ದ ಎಲ್ಲ ಶಾಸನಗಳ ಅಧ್ಯಯನ ಮಾಡಿದ್ದಾರೆ. ಕೆಳದಿ ಸಾಮ್ರಾಜ್ಯದ ಇಕ್ಕೇರಿ, ಬಿದನೂರು, ಕವಲೆ ದುರ್ಗದ ಇಂಚಿಂಚೂ ಸೂಕ್ಷ್ಮವಾಗಿ, ಕೂಲಂಕಷವಾಗಿ ಅಧ್ಯಯನ ನಡೆಸಿದವರು ಈಗಾಗಲೆ ಅವರು ನಾಲ್ಕೈದು ಕಾದಂಬರಿಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ.
ಈ ಕಾದಂಬರಿ "ಬಿದನೂರು ಪ್ರಭು ಶಿಸ್ತಿನ ಶೂರ ಕೆಳದಿ ಶಿವಪ್ಪ ನಾಯಕ" ಕುರಿತು ಕಾದಂಬರಿಯನ್ನು ಬರೆಯುವಾಗ ೪೨ ಪರಾಮರ್ಶನ ಗ್ರಂಥಗಳ ಅಧ್ಯಯನ ಮಾಡಿದ್ದಾರೆ. ಈ ಕಾದಂಬರಿಯಲ್ಲಿ ನಾವು ಕೆಳದಿ ಸಾಮ್ರಾಟರ ವಂಶಾವಳಿಯನ್ನು, ಶಿವಪ್ಪ ನಾಯಕನ ಸಚ್ಚಾರಿತ್ರ್ಯವನ್ನೂ ಅಂದಿನ ಆಡಳಿತ ವ್ಯವಸ್ಥೆಯನ್ನೂ, ಸಾಮಾಜಿಕ ಜೀವನವನ್ನೂ ಸಮೀಚನವಾಗಿ ಚಿತ್ರವತ್ತಾಗಿ ಕಟ್ಟಿಕೊಟ್ಟುದದಲ್ಲದೆ ಅಂದಿನ ಕೆಳದಿ ಶತ್ರುಗಳಾದ ಆದಿಲ್ ಶಾಹಿ, ಬೇರೆ ಬೇರೆ ಸುಲ್ತಾನರ ಇತಿಹಾಸವನ್ನೂ ಕಟ್ಟಿಕೊಟ್ಟಿದ್ದಾರೆ ಅಷ್ಟಲ್ಲದೆ ಮುಘಲರಿಗೆ ಸಿಂಹಸ್ವಪ್ನವಾದ, ಮರಾಠರಿಗೆ ಮಿತ್ರನಾದ ಅಬ್ಸೀನಿಯನ್ ಗುಲಾಮ ಯಾರ್ಯಾರಿಗೋ ಮಾರಲ್ಪಟ್ಟು ಅಂತಿಮವಾಗಿ ಯೋಗ್ಯ ವ್ಯಕ್ತಿಯಡಿಯಲ್ಲಿ ಗುಲಾಮನಾಗಿ ಸೇವೆಗೆ ಸೇರಿಕೊಂಡು ಮತ್ತೆ ಬಲಿಷ್ಠ ಸೈನ್ಯ ಕಟ್ಟಿ ತನ್ನದೆ ಅಡಳಿತದ ವರ್ಚಸ್ಸನ್ನು ಮೂಡಿಸಿದ ವ್ಯಕ್ತಿ ಅಂಬರ್ ಕುರಿತಾಗಿಯೂ ವಿವರವಾದ ಐತಿಹಾಸಿಕ ಮಾಹಿತಿಯನ್ನು ಸೇರಿಸಿದ್ದಾರೆ. ಯಾಕೆಂದರೆ ಈ ಅಂಬರ್ ನ ಗೆರಿಲ್ಲಾ ಯುದ್ಧದಿಂದ ಕೆಳದಿಯ ವೆಂಕಟಪ್ಪ ನಾಯಕ ಪಾಠ ಕಲಿತಿದ್ದ. ಅವನೆ ವೆಂಕಟಪ್ಪ ನಾಯಕನಿಗೆ ಪರೋಕ್ಷ ಗುರು ಕೆಳದಿಯು ಶಿವಪ್ಪ ನಾಯಕನ ಸಹೋದರನ ಮಗ ವೀರಭದ್ರ ನಾಯಕ ಆಳುತ್ತಿದ್ದ ಕಾಲಕ್ಕೆ ಶಿವಪ್ಪ ನಾಯಕ ವೀರಭದ್ರ ನಾಯಕನ ಆಡಳಿತದಲ್ಲಿ ಸಂಪೂರ್ಣ ಜವಾಬ್ದಾರಿ ಹೊತ್ತು ಕೆಳದಿಯ ಸಾಮ್ರಾಜ್ಯವನ್ನು ವಿಸ್ತರಣೆ ಮಾಡಲು, ಅಭಿವೃದ್ಧಿ ಮಾಡಲು ಹೆಗಲಿಗೆ ಹೆಗಲು ಕೊಟ್ಟ. ನಿಜಕ್ಕೂ ವೀರಭದ್ರ ನಾಯಕ ಹೆಸರಿಗೆ ಮಾತ್ರ ಅರಸನಾಗಿದ್ದ. ಶಿವಪ್ಪ ನಾಯಕ ಅವನ ಸಹೋದರ ವೆಂಕಟಪ್ಪ ನಾಯಕ ಇವರಿಬ್ಬರೂ ರಾಮ-ಲಕ್ಷ್ಮಣರಂತೆ ಅನ್ಯೋನ್ಯವಾಗಿದ್ದು ವೀರಭದ್ರ ನಾಯಕನಿಗೆ ಸಕಲ ಬೆಂಬಲವನ್ನು ಕೊಡುತ್ತಾರೆ. ಕೆಳದಿಯ ಕಡು ವೈರಿ ಆದಿಲ್ ಶಾಹಿ ಅರಸು ಇಕ್ಕೇರಿಯ ಮೇಲೆ ದಾಳಿ ಮಾಡಿ ಸರ್ವನಾಶ ಮಾಡುತ್ತಾರೆ. ಅದಿಲ್ ಶಾಹಿ ಇಕ್ಕೇರಿಯ ಮೇಲೆ ದಾಳಿ ಮಾಡಲು ಕೆಳದಿಯ ನೆರೆಕೆರೆಯ ಸಾಮಾಂತರು ಕೆಳದಿ ಅರಸರ ಬಗ್ಗೆ ಚಾಡಿ ಮಾತು ಹೇಳಿದ್ದೆ ಕಾರಣವಸಗುತ್ತದೆ. ಆಗ ಶಿವಪ್ಪ ನಾಯಕನು ಆದಿಲ್ ಶಾಹಿ ಅವರೊಟ್ಟಿಗೆ ಸಂಧಾನ ಮಾಡಿ ಸಾಮಂತರ ಕುಚೋದ್ಯವನ್ನು ಆದಿಲ್ ಶಾಹಿಯ ಮನವರಿಕೆಯಾಗುವಂತೆ ಕೆಳದಿಯ ದೂತನನ್ನು ಕಳಿಸಲಾಗಿ ಆದಿಲ್ ಶಾಹಿಗೆ ಮನವರಿಕೆಯಾಗಿ ಯುದ್ಧವನ್ನು ನಿಲ್ಲಿಸುತ್ತಾನೆ.
ಮತ್ತೆ ಶಿವಪ್ಪ ನಾಯಕ ಇಕ್ಕೇರಿಯಿಂದ ಬಿದನೂರಿಗೆ ರಾಜಧಾನಿಯನ್ನು ಬದಲಾಯಿಸುತ್ತಾನೆ ಬಿದನೂರನ್ನು ನೂತನವಾಗಿ ನಿರ್ಮಿಸಲಾಗುತ್ತದೆ. ಈ ಮಧ್ಯಂತರದಲ್ಲಿ ವೀರಭದ್ರ ನಾಯಕ ತೀರ್ಥಯಾತ್ರೆಗೆ ಹೋಗುತ್ತಾನೆ.ಆಗ ಶಿವಪ್ಪ ನಾಯಕರ ಬಗ್ಗೆ ಇಲ್ಲಸಲ್ಲದ ಆರೋಪ ಬರುತ್ತದೆ. ಈ ವಾರ್ತೆಯನ್ನು ಕೇಳಿ ವೀರಭದ್ರ ನಾಯಕ ಯಾತ್ರೆಯಿಂದ ಮರಳಿ ಬಂದು ಚಿಕ್ಕಪ್ಪ ಶಿವಪ್ಪ ನಾಯಕನಿಗೆ ರಾಜ್ಯದ ನಾಯಕತ್ವ ವಹಿಸಲು ಕೇಳಿಕೊಳ್ಳುತ್ತಾನೆ. ಮನಸ್ಸಿಲ್ಲದ ಮನಸ್ಸಿನಿಂದ ಶಿವಪ್ಪ ನಾಯಕ ಪಟ್ಟಕ್ಕೇರುತ್ತಾನೆ. ಸ್ವಲ್ಪೆ ಸಮಯದಯ ವೀರಭದ್ರ ನಾಯಕ ಅನಾರೋಗ್ಯ ಪೀಡಿತನಾಗಿ ಮೃತಪಡುತ್ತಾನೆ.ಅವನ ಹೆಂಡತಿ ಕೊಲ್ಲೂರಮ್ಮಾಜಿ ಸತಿ ಹೋಗುತ್ತಾಳೆ. ಮುಂದೆ ಶಿವಪ್ಪ ನಾಯಕನ ಆಡಳಿತದಲ್ಲಿ ಕೆಳದಿ ಸಾಮ್ರಾಜ್ಯದ ಅಭಿವೃದ್ಧಿ ನಾಗಾಲೋಟದಲ್ಲಿ ಆಗಿದ್ದುದರ ನಿರೂಪಣೆ ಇದೆ.
ಕಾದಂಬರಿ ಪ್ರಾರಂಭಗೊಳ್ಳುವುದು ಶಿವಪ್ಪ ನಾಯಕ ತನ್ನ ಇಳಿ ವಯಸ್ಸಿನಲ್ಲಿ ತನ್ನ. ಜೀವನ ಚರಿತ್ರೆಯನ್ನು ಬರೆಸಬೇಕೆಂದು ಗುರು ಬಸವಲಿಂಗ ದೇವರನ್ನು ಕರೆಯಿಸಿ ವೀರಭದ್ರ ನಾಯಕ ಹಾಗೂ ತನ್ನ ಆಡಳಿತದ ಸಮಯದಲ್ಲಿ ತಾನು ಮಾಡಿದ ಸಾಧನೆಗಳು ಮತ್ತು ತಪ್ಪುಗಳನ್ನು ಮಾಡಿದ್ದರೆ ಅದನ್ನೂ ದಾಖಲಿಸಬೇಕೆಂದು ಶಿವಪ್ಪ ನಾಯಕ ವಿನಂತಿಸಿಕೊಳ್ಳುತ್ತಾನೆ. ಹೀಗೆ ಶಿವಪ್ಪ ನಾಯಕನ ತನ್ನ ಜೀವಿತದ ಸಂಕಥನಗಳನ್ನು ಹೇಳುತ್ತ ಹೋಗುವಾಗ ಬಸವಲಿಂಗ ಗುರುಗಳು ಅವುಗಳನ್ನು ತಾಳೆಗರಿಗಳಲ್ಲಿ ಬರೆಯುತ್ತಾ ಹೋಗುವುದು. ಈ ತಂತ್ರದ ಮೂಲಕ ಅಂಬ್ರಯ್ಯಮಠ ಅವರು ಕಾದಂಬರಿಯ ಕಥಾನಕವನ್ನು ಮುಂದು ರಿಸಿಜೊಂಡು ಹೋಗುತ್ತಾರೆ. ಈ ತಂತ್ರವನ್ನು ವ್ಯಾಸರು ಮಹಾಭಾರತದ ಕಥಾನಕಗಳ‌್ನು ನಿರೂಪಿಸುವಾಗಲೂ ಬಳಸಿದ್ದಾರೆ.
ಕಥಾನಕ ಮುಂದುವರಿದಂತೆ ಅನೇಕ ಐತಿಹಾಸಿಕ ವಿಷಯಗಳು ಆನುಷಂಗಿಕವಾಗಿ ಬಂದಿವೆ. ಗೋವಾದಲ್ಲಿ ಗೌಡ ಸಾರಸ್ವತ ಬ್ರಾಹ್ಮಣರು ಫೋರ್ತುಗೀಸ್ ರಿಂದ ಹಿಂಸೆಗೀಡಾಗಿ ಬಲಾತ್ಕಾರದ ಮತಾಂತರದ ದಾರುಣ ಕಥಸನಕದ ನಿರೂಪಣೆಯೂ ಇದೆ.
ಕೆಳದಿ ರಾಜರುಗಳ ಅರಸುತನ ಹೂವಿನ ಹಾಸಿಗೆಯಲ್ಲ; ಮುಳ್ಳಿನ ಹಾದಿ. ಒಂದೆಡೆ, ಹೊಟ್ಟೆಕಿಚ್ಚಿಮ ಸಾಮಂತರು,ಇನ್ನೊಂದೆಡೆ ಅದಿಲ್ ಸಾಹಿ ಸುಲ್ಯಾನರು,ಮಹದೊಂದೆಡೆ ಫೋರ್ತುಗೀಸರು ಇಷ್ಟಲ್ಲದೆ ಅರಸೊತ್ತಿಗೆಗಾಗಿ ಷಡ್ಯಂತ್ರ ಮಾಡುವ ನೆಂಟರು ಇವೆಲ್ಲವನ್ನೂ ನಿಭಾಯಿಸುತ್ತ ಪ್ರಜೆಗಳ ಯೋಗಕ್ಷೇಮವನ್ನು ನೋಡಿಕೊಳ್ಳುವುದು. ಇವನ್ನೆಲ್ಲ ಶಿವಪ್ಪ ನಾಯಕ ದಕ್ಷತೆಯಿಂದ ನಿಭಾಯಿಸಿ ಬಿದನೂರನ್ನು ಅತ್ಯುನ್ನುತ ಸ್ಥಿತಿಗೆ ಕೊಂಡೊಯ್ಯುತ್ತಾನೆ.
ಶಿವಪ್ಪ ನಾಯಕ ಮತ್ತು ಅವನ ಸಹೋದರ ವೆಂಕಟಪ್ಪ ನಾಯಕನ ನಡುವೆ ಇದ್ದ ಗಾಢವಾದ ಪ್ರೀತಿ ವಾತ್ಸಲ್ಯವನ್ನು ಅತ್ಯಂತ ಪರಿಣಾನಕಾರಿಯಾಗಿ ನಿರೂಪಿಸಲಾಗಿದೆ ತ ರಾ ಸು ಅವರ ಐತಿಹಾಸಿಕ ಕಾದಂಬರಿ ಚಿತ್ರದುರ್ಗದ ಮದಕರಿ ನಾಯಕ ಹಾಗೂ ಅವನ ಸಹೋದರನ ನಡುವೆ ನಿರೂಪಿಸಲ್ಪಟ್ಟ ಕಥಾನಕ ನೆನಪಿಗೆ ಬರುತ್ತದೆ. ಆನುಷಂಗಿವಾಗಿ ಘಜನಿ ಮಹಮ್ಮದ್ ನ ದರೋಡೆಯ ನಿರೂಪಣೆಯೂ ಇದೆ. ಶಿವಪ್ಪ ಮಾರುವೇಷದಲ್ಲಿ ಹೋಗಿ ಜನರ ಕಷ್ಟ ಸುಖಗಳನ್ನು ವಿಚಾರಿಸಿ ಅವುಗಳಿಗೆ ಸೂಕ್ತ ಪರಿಹಾರವನ್ನು ಕೊಡುತ್ತಾನೆ. ರೈತರೆ ದೇಶದ ಬೆನ್ನೆಲುಬು. ಎಂದು ಅವರಿಂದ ಕಂದಾಯವನ್ನು ಪಡೆದುಕೊಳ್ಳುವಾಗ ಅವರಿಗೆ ಹೊರೆಯಾಗದಂತೆ ಶಿಸ್ತನ್ನು ಜಾರಿಗೆ ತರುತ್ತಾನೆ. ಜನರ ಒಳಿತಿಗಾಗಿ ಕುಟುಂಬದ ಸುಖವನ್ನೂ ತ್ಯಾಗ ಮಾಡುವ ಅನೇಕ ಪ್ರಸಂಗಗಳು ಬರುತ್ತವೆ.
ಶಿವಪ್ಪ ನಾಯಕ ಒಬ್ಬ ಸಾಮಾನ್ಯ ರಾಜನಲ್ಲ; ಅವನೊಬ್ಬ ಯೋಗಿ ಎಂಬ ವಿಷಯವನ್ನು ಈ ಕಾದಂಬರಿಯಲ್ಲಿ ಹಲವಾರು ಸಂಕಥನಗಳ ಮೂಲಕ ಸಾಬೀತು ಪಡಿಸಲಾಗಿದೆ. ನಮ್ಮ ದೇಶದ ಅಂದಿನ ರಾಜಕೀಯ ಪರಿಸ್ಥಿತಿಯನ್ನು ತುಂಬ ಚೆನ್ನಾಗಿ ಶಿವಪ್ಪ ನಾಯಕ ಹೇಳುತ್ತಾನೆ:' ವಿಜಯನಗರ ಪತನವಾದ ನಂತರ ಅನೇಕ ಪಾಳೆಯಗಾರರು ತಲೆ ಎತ್ತಿದರು ಪಾಳೆಯಗಾರರು ಒಬ್ಬರ ಏಳಿಗೆಯನ್ನು ಇನ್ನೊಬ್ಬರು ಸಹಿಸದೆ ಒಬ್ಬರ ನಿನ್ನೊಬ್ಬರು ನಾಶ ಪಡಿಸುವ ಉಪಾಯವನ್ನು ಹೂಡುತ್ತಿದ್ದರು ತಮ್ಮ ಕೈಲಾಗದಿದ್ದರೆ ಹೊರಗಿನ ಶತ್ರುಗಳಾದ ಬಹಮನಿ ಸುಲ್ತಾನರ ನೆರವನ್ನು ಪಡೆಯುವುದಕ್ಕೂ ಹಿಂದೆ ಮುಂದೆ ನೋಡುತ್ತಿರಲಿಲ್ಲ.ಇದರ ಲಾಭವನ್ನು ಪಡೆದ ಸುಲ್ತಾನರು ಪ್ರಬಕವಾಗುತ್ತ ನಡೆದರು." ಪುಟ ಸಂಖ್ಯೆ ೩೩೨
ಈ ಪರಿಸ್ಥಿತಿ ಶಿವಪ್ಪ ಪಟ್ಟಕ್ಕೇರುವಾಗ ಇತ್ತು ಇವನ್ನೆಲ್ಲಾ ಶಿವಪ್ಪ ಜಾಣತನದಿಂದ ನಿಭಾಯಿಸಿ ದಿಗ್ವಿಜಯ ನಡೆಸಿ ಕೆಳದಿ ಸಾಮ್ರಾಜ್ಯವನ್ನು ವಿಸ್ತರಿಸಿದ. ಅವನ ರಾಜ್ತ ಮಂಗಳೂರು, ತ್ರಿಶುರ್ ವರೆಗೂ ವಿಸ್ತಾರಗೊಂಡಿತು. ಇವನ ಕಾಲದಲ್ಲಿ ವ್ಯಾಪಾರ ಅಭಿವೃದ್ಧಿಗೊಂಡಿತು.ರೈತರು ನೆಮ್ಮದಿಯಿಂದ ಇದ್ದರು. ಅನೇಕ ದೇವಸ್ಥಾನಗಳಿಗೆ ದತ್ತಿನಿಧಿಯನ್ನು ಕೊಟ್ಟನು. ಶೃಂಗೇರಿ ಮಠವನ್ನು ಆರ್ಥಿಕವಾಗಿ ಸಬಲಗೊಳಿಸಿದನು. ಅವನ ಕೊನೆಯ ಯುದ್ದ ನಡೆದದ್ದು ಶ್ರೀರಂಗಪಟ್ಟಣದಲ್ಲಿ.ಆ ಮೇಲೆ ಅವನ ದೇಹಸ್ಥಿತಿ ಕೆಟ್ಟಿತು. ಮುಂದೆ ಸಹೋದರ ವೆಂಕಟಪ್ಪ ನಾಯಕನಿಗೆ ಆಡಳಿತದ ಚುಕ್ಕಾಣಿ ಕೊಟ್ಟು ಶಿವಪ್ಪ ಯೋಗ ಸಮಾಧಿಯನ್ನು ಹೊಂದುತ್ತಾನೆ. ಅವನು ಇಚ್ಛಾಮರಣಿ. ಆಡಳಿತವನ್ನು ತನ್ನ ಮಕ್ಕಳಿಗೆ ಕೊಡದೆ ಸಹೋದರ ವೆಂಕಟ ಪ್ಪ ನಾಯಕನಿಗೆ ಕೊಡುವಲ್ಲಿ ಅವನ ಮುತ್ಸದ್ದಿತನ ವ್ಯಕ್ತಗೊಳ್ಳುನಾಯಕ.
ಸರ್ವಧರ್ಮ ಸಮನ್ವಯಕಾರ ಶಿವಪ್ಪ. ಅವನಿಂದ ದಾನ ದತ್ತಿ ಪಡೆಯದ ದೇವಾಲಯಗಳೇ ಇರಲಿಲ್ಲ.ಅಂದಿನ ರಾಜಕೀಯ ದೃಷ್ಟಿಯಿಂದ ಪರಮ ವೈರಿಗಳಾಗಿದ್ದ ಮುಸ್ಲಿಮ್ಮರಿಗೂ ಅನೇಕ ಮಸೀದಿಗಳನ್ನು ಕಟ್ಟಿಸಿಕೊಟ್ಟು ಅವುಗಳಿಗೆ ಉದಾರ ದಾನ ದತ್ತಿಗಳನ್ನು ನೀಡಿದ ಮಹಾಶಯ ಶಿವಪ್ಪ ನಾಯಕ. ಈ ಕಾದಂಬರಿ ಕೇವಲ ಐತಿಹಾಸಿಕ ಕಥಾನಕವಾಗಿ ಮಾತ್ರ ವಲ್ಲದೆ ಆಧ್ಯಾತ್ಮಿಕ ಸ್ಪರ್ಷವೂ ಈ ಕಥಸನಕಕ್ಕೆ ಇದೆ ತುಂಬ ಸೊಗಸಾಗಿ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದಾರೆ. ಮತ್ತು ಕಥಾನಕ್ಕೆ ಐತಿಹಾಸಿಕ ದಾಖಲೆಗಳ ಶಾಸನಗಳ ಪುರಾವೆಗಳಿವೆ. ತುಂಬ ಸರಳ ಭಾಷೆಯಲ್ಲಿ ಎಲ್ಲಿಯೂ ಬೋರಾಗದ ರೀತಿಯಲ್ಲಿ ನಿರೂಪಿತಗೊಂಡಿದೆ. ಓದಿದರೆ ಸಾಕಷ್ಟು ಜ್ಞಾನ ನಮಗೆ ದಕ್ಕುತ್ತದೆ
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.