Date: 15-06-2025
Location: ಅಥಣಿ
ಅಥಣಿ:- ಈತ ದಲಿತ ಈತನನ್ನು ದೂರ ಇಡಬೇಕು ಎಂದು ಯಾವತ್ತು ನನ್ನ ವಿದ್ಯಾಗುರುಗಳು, ನನ್ನ ಸಂಪರ್ಕಕ್ಕೆ ಬಂದವರು ನಡೆದುಕೊಳ್ಳಲಿಲ್ಲ. ನನ್ನ ಸ್ನೇಹಿತರು, ಗುರುಗಳು, ಆಪ್ತರು ನನ್ನನ್ನು ಪ್ರೀತಿಯಿಂದಲೇ ಕಂಡರು. ಎಲ್ಲಾ ಸಮಾಜದವರ ಪ್ರೀತಿ ನನ್ನಗೆ ಸಿಕ್ಕಿತು, ನಾನು ಲೌಕಿಕ ವ್ಯಕ್ತಿಯಾಗಿ ಬೆಳೆಯಲು ಇದೆಲ್ಲಾ ಸಿಕ್ಕಿದೇ ಕಾರಣವಾಯ್ತು ಎಂದು ಜೆ. ಪಿ. ದೊಡಮನಿ ಅವರು ಹೇಳಿದರು.
ಅಥಣಿಯಲ್ಲಿ ಡಾ ಜೆ. ಪಿ. ದೊಡಮನಿ ಅಭಿನಂದನಾ ಸಮಿತಿ ಆಶ್ರಯದಲ್ಲಿ ಮತ್ತು ಸಾಹಿತ್ಯ ಸಾಂಸ್ಕೃತಿಕ ಸಂಘ,ಅಥಣಿ,ಕನ್ನಡ ಸಾಹಿತ್ಯ ಪರಿಷತ್ತು ಘಟಕ, ಅಥಣಿ, ಅಖಿಲ ಭಾರತ ವೀರಶೈವ ಮಹಿಳಾ ಘಟಕ, ಮುಕ್ತಾಯಿ ಮಹಿಳಾ ಬಳಗ ಮೋಟಗಿಮಠ, ಮತ್ತು ಅಥಣಿ ಅಥಣೇಶ ಯುವ ವೇದಿಕೆ ಮತ್ತು ಸುಶೀಲ್ ಪ್ರಕಾಶನ, ತೇರದಾಳ ಇವರ ಸಹಕಾರದಲ್ಲಿ ನಡೆದ ಡಾ ಜೆ. ಪಿ. ದೊಡಮನಿ ಅವರಿಗೆ ಅಭಿನಂದನೆ,'ಅನುವಾದ ಜ್ಯೋತಿ' ಅಭಿನಂದನಾ ಗ್ರಂಥ ಬಿಡುಗಡೆ, 'ಒಲವ ಉಡುಗೊರೆ' ಭಾವಗೀತೆಗಳ ಧ್ವನಿಸುರುಳಿ ಬಿಡುಗಡೆ, 'ಸಂಕೀರ್ಣ ಗ್ರಂಥಗಳು' ಬಿಡುಗಡೆ, ಡಾ. ಜೆ.ಪಿ. ದೊಡಮನಿಯವರ ಒಟ್ಟು ಸಾಹಿತ್ಯಾವಲೋಕನ ಸಮಾರಂಭದಲ್ಲಿ ಈ ಮಾತುಗಳನ್ನು ಅವರು ಆಡಿದರು.
ಇದು ಎಂ. ಎಂ. ಕಲಬುರ್ಗಿ ಅವರ ಕೇಂದ್ರಿತವಾದ ಕಾರ್ಯಕ್ರಮ. ಇಲ್ಲಿರುವ ಬಹುತೇಕರು ಅವರ ಶಿಷ್ಯರು. ಸತ್ಯವಂತರಿಗೆ ಮರಣವೇ ಮಹಾನವಿಮಿ ಇದಕ್ಕೆ ಯಾರು ಅಂಜುವುದಿಲ್ಲ ಅಳುವುದಿಲ್ಲ ಎಂದು ಬಸವಣ್ಣ ಅವರ ವಚನ ಪದೇ ಪದೇ ಹೇಳುತ್ತಿದ್ದರು. ಆ ದಾರಿಯಲ್ಲಿ ನಾವು ನಡೆಯುವಂತವರು. ನಾನು ದಲಿತ ಸಂಕಷ್ಟದಿಂದ ಬಂದವನು ಎಂದು ಎಲ್ಲರೂ ಹೇಳಿದರು. ಅದು ಹೌದು ಆದರೆ, ನಾನು ಅಷ್ಟು ಅದನ್ನು ಅನುಭವಿಸಲಿಲ್ಲ. ತಮ್ಮ ಪಿಎಚ್‌ಡಿ ಪ್ರಬಂಧದ ಬಗ್ಗೆ ಮಾತನಾಡಿದ ಅವರು, ಶರಣರ ಕುರಿತ ಕನ್ನಡ ಕಾದಂಬರಿ ಎಂಬ ಸಂಶೂಧನೆ ಮಾಡಿದ ನಂತರ ಮಾನವೀಯ ದೃಷ್ಟಿಯಿಂದ ಸಮಾಜವನ್ನು ನೋಡಲು ಸಾಧ್ಯವಾಯಿತು ಎಂದು ತಾವು ನಡೆದು ಬಂದ ಹಾದಿಯ ಹೆಜ್ಜೆಗಳನ್ನು ಡಾ ಜೆ. ಪಿ. ದೊಡಮನಿ ಅವರು ನೆನೆದರು.
ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಮಹಾಸ್ವಾಮಿಗಳವರು ಮಾತನಾಡಿ, ಎಂ ಎಂ ಕಲಬುರ್ಗಿ ಅವರು ಎಲ್ಲವನ್ನು ತಮ್ಮ ಶಿಷ್ಯರಿಗೆ ಕೊಟ್ಟು ಕೊಟ್ಟು ಬರಿದುಮಾಡಿಕೊಂಡು ಹೋದವರು. ಅವರಂತ ಕ್ರಿಯಾಶೀಲ ಗುರು ನಾನು ಕಂಡಿಲ್ಲ, ಒಬ್ಬ ಕ್ರಿಯಾಶೀಲ ಗುರು, ಸಾವಿರ ಕ್ರಿಯಾಶೀಲ ಶಿಷ್ಯರನ್ನು ತಯಾರಿಸಬಲ್ಲ. ಮರಾಠಿಗೆ ಸೀಮಿತವಾಗಿದ್ದವರನ್ನು ಕನ್ನಡಕ್ಕೆ ಪರಿಚಯಿಸಿ, ಜ್ಯೋತಿ ಬಾ ಪುಲೆ, ಸಾವಿತ್ರಿ ಬಾ ಪುಲೆ ಅವರ ಹೋರಾಟದ ಪ್ರಕ್ರಿಯೆಯನ್ನು ಪರಿಚಯಿಸಿದವರು ಜೆ.ಪಿ. ಅವರು ಎಂದರು.
ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...
2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...
ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...
©2025 Book Brahma Private Limited.