ಜನರ ಯೋಚನಾ ಶಕ್ತಿ ಬದಲಿಸುವ ಕೇಂದ್ರ ನಾಟಕ : ಮೊಹಮ್ಮದ್ ಅಜರುದ್ದೀನ್


" ರಂಗಭೂಮಿಯಲ್ಲಿ ಬರುವ ಒಂದೊಂದು ಪಾತ್ರಗಳೂ ಜನರ ಜೀವನಕ್ಕೆ ಅನುಗುಣವಾಗಿರುತ್ತವೆ. ಜನರ ಯೋಚನಾ ಶಕ್ತಿಯನ್ನು ಬದಲಿಸುವ ಮೂಲ ಕೇಂದ್ರವೆಂದರೆ ನಾಟಕಗಳು ಮಾತ್ರ. ಆ ಕಾರಣಕ್ಕಾಗಿ ಇದು ಕಲೆಯ ಒಂದು ಸಮರ್ಥ ಮಾಧ್ಯಮವಾಗಿದೆ. ಇದು ಕಲೆಗಳಲ್ಲಿ ಹಳೆಯ ಕಲೆಯಾಗಿದ್ದರು, ಈಗಿನ ಆಧುನಿಕ ಯುಗದಲ್ಲಿ ಒಂದು ಸಮರ್ಥವಾದ ಕಲೆಯ ಮಾಧ್ಯಮವಾಗಿದೆ" ಎನ್ನುತ್ತಾರೆ ಲೇಖಕ ಮೊಹಮ್ಮದ್ ಅಜರುದ್ದೀನ್ . ಅವರುವಿಶ್ವ ರಂಗಭೂಮಿ ದಿನ’ ವಿಶೇಷವಾಗಿ ಬರೆದ ಲೇಖನ ನಿಮ್ಮ ಓದಿಗಾಗಿ...

ನಮ್ಮ ಭಾರತ ದೇಶದಲ್ಲಿ ಜನರ ಮನೋರಂಜನೆಗಾಗಿ ವಿವಿಧ ಬಗೆಯ ಕಲಾಪ್ರಕಾರಗಳಿವೆ. ಒಂದಕ್ಕಿಂತ ಒಂದು ವಿಶೇಷವಾಗಿರುವ ಈ ಕಲೆಗಳು ಜನರಿಗೆ ಮನರಂಜನೆ ನೀಡುವ ಜೊತೆಯಲ್ಲಿ ಸೃಜನಶೀಲತೆ ಕಲಿಸುವುದರಲ್ಲಿ ತನ್ನದೇ ಆದ ಪಾತ್ರವನ್ನು ವಹಿಸುತ್ತದೆ. ಇಂತಹ ಕಲೆಗಳಲ್ಲಿ ರಂಗಭೂಮಿ ಮತ್ತು ನಾಟಕಗಳು ಸೇರುತ್ತವೆ. ಒಂದು ನಾಟಕ ಅಥವಾ ರಂಗಭೂಮಿ ಕಲೆ ಜನರಿಗೆ ಮನರಂಜನೆ ನೀಡುವುದರ ಜೊತೆಗೆ ಸಾಮಾಜಿಕ ಸಂದೇಶಗಳನ್ನು ಕೂಡ ನೀಡುತ್ತದೆ.

ರಂಗಭೂಮಿಯಲ್ಲಿ ಬರುವ ಒಂದೊಂದು ಪಾತ್ರಗಳೂ ಜನರ ಜೀವನಕ್ಕೆ ಅನುಗುಣವಾಗಿರುತ್ತವೆ. ಜನರ ಯೋಚನಾ ಶಕ್ತಿಯನ್ನು ಬದಲಿಸುವ ಮೂಲ ಕೇಂದ್ರವೆಂದರೆ ನಾಟಕಗಳು ಮಾತ್ರ. ಆ ಕಾರಣಕ್ಕಾಗಿ ಇದು ಕಲೆಯ ಒಂದು ಸಮರ್ಥ ಮಾಧ್ಯಮವಾಗಿದೆ. ನಮ್ಮ ವಿಶ್ವದಲ್ಲಿ ನಾಟಕ ಮತ್ತು ರಂಗಭೂಮಿಗೆ ಸಾವಿರಾರು ವರ್ಷದ ಇತಿಹಾಸವಿದೆ. ಇದು ಕಲೆಗಳಲ್ಲಿ ಹಳೆಯ ಕಲೆಯಾಗಿದ್ದರು ಈಗಿನ ಆಧುನಿಕ ಯುಗದಲ್ಲಿ ಒಂದು ಸಮರ್ಥವಾದ ಕಲೆಯ ಮಾಧ್ಯಮವಾಗಿದೆ.

ವಿಶ್ವ ರಂಗಭೂಮಿ ದಿನದ ಮಹತ್ವ: ಈಗಲೂ ಈ ರಂಗಭೂಮಿಯನ್ನು ಪ್ರೀತಿಸುತ್ತ ಅದನ್ನೇ ಉಸಿರಾಗಿಸಿಕೊಂಡು ಅನೇಕರು ಬದುಕುತ್ತಿದ್ದಾರೆ. ಈ ರಂಗಭೂಮಿ ಕಲೆಯಲ್ಲೇ ಅನೇಕರು ಸಾಧನೆ ಮಾಡಿ ವಿಶ್ವದಲ್ಲೇ ಸೈ ಎನಿಸಿಕೊಂಡಿದ್ದಾರೆ. ರಂಗಭೂಮಿ ಚಟುವಟಿಕೆ ನೆನೆಯಲು ಒಂದು ಸ್ಮರಣೀಯ ದಿನ ಬೇಕು ಎನ್ನುವ ಕಾರಣಕ್ಕೆ 1960ರಿಂದ ವಿಶ್ವ ರಂಗಭೂಮಿ ದಿನವನ್ನು ಮಾರ್ಚ್ 27ರಂದು ಆಚರಿಸಿಕೊಂಡು ಬರಲಾಗುತ್ತಿದೆ. ಪ್ಯಾರಿಸ್ ನಲ್ಲಿ ಮುಖ್ಯ ಕಚೇರಿ ಹೊಂದಿರುವ ಅಂತಷ್ಟ್ರೀರಾಯ ರಂಗ ಸಂಸ್ಥೆಯು ಪ್ರತಿವರ್ಷ ವಿಶ್ವದ ಯಾವುದಾದರೊಂದು ಭಾಷೆಯ ಹೆಸರಾಂತ ನಾಟಕವನ್ನು ನಿರ್ದೇಶನ ಅಥವಾ ನಟನೆಯ ಮೂಲಕ ಒಂದು ಸಂದೇಶ ಕೊಡುವಂತೆ ವಿಶ್ವದೆಲ್ಲೆಡೆ ಪಸರಿಸುತ್ತಿದೆ.

ಒಂದು ಪ್ರದೇಶದ ಜನಸಮುದಾಯದ ಬದುಕಿನ ಸಾಂಸ್ಕೃತಿಕ, ರಾಜಕೀಯ, ಇತಿಹಾಸದೊಂದಿಗೆ ಸಾಹಿತ್ಯ ಕೃತಿಯಾಗಿ, ರಂಗವೇದಿಕೆಯಲ್ಲಿ ನಾಟಕದ ರೂಪಕವಾಗಿ ಜನಮನಕ್ಕೆ ಹತ್ತಿರವಾದ ಕಲಾಕ್ಷೇತ್ರವನ್ನು ರಂಗಭೂಮಿ ಎನ್ನಲಾಗುತ್ತದೆ. ಜಗತ್ತಿನಾದ್ಯಂತ ಆಯಾ ಜನಾಂಗ, ದೇಶ, ಪ್ರದೇಶಗಳಲ್ಲಿ ರಂಗಭೂಮಿ ರೂಪು ಗೊಂಡಿದೆ.ಇದನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

ವಿಶ್ವದ ನಾನಾ ಭಾಷೆಗಳಲ್ಲಿ ರಂಗಕರ್ಮಿಗಳು ಇಂದು ಈ ಸಮಾಜಕ್ಕೆ ಒಳಿತು ಬಯಸುವ ನಾಟಕಗಳನ್ನು ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ವಿವಿಧ ಸಂಸ್ಥೆಗಳು ವಿಶೇಷ ರಂಗಪ್ರಯೋಗಗಳ ಮೂಲಕ ಈ ವಿಶೇಷ ದಿನವನ್ನು ಆಚರಿಸುತ್ತಾರೆ.

ರಂಗಭೂಮಿಯಲ್ಲಿ ಅನೇಕರು ತಮ್ಮ ವೃತ್ತಿಯನ್ನು ಬಿಟ್ಟು ಕಲಿಯೆ ಜೀವನ ಎಂದು ಬದುಕುತ್ತಿದ್ದಾರೆ. ತಮ್ಮ ದಿನನಿತ್ಯದ ವೃತ್ತಿಪರ ಜೀವನದಿಂದ ಬೇಸರಗೊಂಡು ಕಲೆಯನ್ನು ಆಯ್ಕೆ ಮಾಡಿಕೊಂಡು ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ 50-70 ವರ್ಷಗಳಿಂದೀಚೆಯಿಂದಲೂ ನಮಗೆ ರಂಗಭೂಮಿಯ ಅವಶ್ಯಕತೆ ಇದೆ. ನಾವು ಕಲೆಗಳ ಬಗ್ಗೆ ಯೋಚಿಸಿದಾಗ ನಮ್ಮ ಮನದಲ್ಲಿ ಥಟ್ಟೆಂದು ಬರುವುದು ರಂಗಭೂಮಿ ಮಾತ್ರ. ಬಾಯಿಂದ ಬಾಯಿಗೆ ಆಡುವ ಮಾತು, ಕಣ್ಣಿಂದ ಕಣ್ಣಿಗೆ ನೋಡುವ ನೋಟ, ಕೈಯಿಂದ ಕೈಗೆ, ದೇಹದಿಂದ ದೇಹಕ್ಕೆ ಮಾಡುವ ಸಂಜ್ಞೆ, ಮಧ್ಯವರ್ತಿಯ ಅವಶ್ಯಕತೆಯೇ ಇಲ್ಲದೆ. ಎಲ್ಲಾ ರೂಪಗಳ ರಂಗಭೂಮಿ ಪೈಕಿ, ಪುರಾತನ ರಂಗಭೂಮಿಗೆ ಬಹು ಬೇಡಿಕೆ ಇದೆ. ಮಾನವರು ದೇವರುಗಳು, ಸಸ್ಯಜೀವಿಗಳು, ಪ್ರಾಣಿಸಂಕುಲ, ಮಳೆಹನಿಗಳು, ಕಣ್ಣೀರು ಮತ್ತು ಪುನರುತ್ಪಾದನೆಯ ನಡುವಿನ ಸಮಾನತೆಯ ಜಾಗದ ಭೂಮಿಯಲ್ಲಿ ರಂಗಭೂಮಿ ಸೃಷ್ಟಿಯಾಗಿದೆ.

ನಮ್ಮ ರಂಗಭೂಮಿಯಲ್ಲಿ, ಜಾನಪದದಲ್ಲಿ, ಯಕ್ಷಗಾನ, ನಾಟ್ಯದಂತಹ ಅಪೂರ್ವ ಕಲೆಗಳಲ್ಲಿ ನಮ್ಮ ಸಂಸ್ಕೃತಿಯ ಆಳ ನಿರಂತರ ಪ್ರವಹಿನಿಯಾಗಿ ಸಹಸ್ರಾರು ವರ್ಷಗಳಿಂದ ಹರಿದು ಸಾಗುತ್ತಿದೆ. ಮುಂದೂ ಹಲವು ವಿಭಿನ್ನ ನೆಲೆಗಳಲ್ಲಿ, ವಿಧ ವಿಧರೂಪುಗಳಲ್ಲಿ ಇದು ಮುಂದುವರೆಯುತ್ತಲೇ ಇರುತ್ತದೆ.

ಈ ಕಲೆಯನ್ನು ಉಳಿಸಿ, ಬೆಳೆಸಿ, ಪೋಷಿಸಿ ಮುಂದೆ ಕೊಂಡೊಯ್ದ ಹಿಂದಿನ ತಲೆಮಾರುಗಳು, ಈಗಿನ ಕಲಾವಿದರು ಮತ್ತು ಮುಂದೆಯೂ ಇದನ್ನು ಮುಂದುವರೆಸುವ ಆದರ್ಶ ಹೊಂದಿರುವ ರಂಗಕರ್ಮಿಗಳಿಗೆ ನಮಿಸುತ್ತಾ ಈ ‘ವಿಶ್ವರಂಗಭೂಮಿ ದಿನದಂದು' ರಂಗಭೂಮಿಗಾಗಿ ಶ್ರಮಿಸುತ್ತಿರುವ ಎಲ್ಲರಿಗೂ ಶುಭ ಹಾರೈಕೆಗಳನ್ನು ಹೇಳೋಣ.

- ಮೊಹಮ್ಮದ್ ಅಜರುದ್ದೀನ್

ಮೊಹಮ್ಮದ್ ಅಜರುದ್ದೀನ್ ಅವರ ಲೇಖಕ ಪರಿಚಯಕ್ಕಾಗಿ

 

MORE FEATURES

ಉಪನಿಷತ್ತುಗಳನ್ನು ವಿಮರ್ಶಾತ್ಮಕ ನೆಲೆಯಲ್ಲಿ ಕಾಣುವ ಪ್ರಯತ್ನವೇ ಈ ಕೃತಿ

23-04-2024 ಬೆಂಗಳೂರು

‘ಉಪನಿಷತ್ತುಗಳನ್ನು ಪರಿಚಯಿಸುವ ಪುಸ್ತಕವೇ ಆದರೂ ವಿಮರ್ಶಾತ್ಮಕ ನೆಲೆಯಲ್ಲಿ ಅವನ್ನು ಕಾಣುವ ಪ್ರಯತ್ನವಾಗಿದೆ. ನಿಗ...

ನೀ ಹಿಂಗ ನೋಡಬ್ಯಾಡ ನನ್ನ: ರವಿ ಬೆಳಗೆರೆ 

23-04-2024 ಬೆಂಗಳೂರು

"ಪ್ರೀತಿ ಬದುಕಿನ ಅಸ್ಮಿತೆಯಾ? ಪ್ರೀತಿ ಕೇವಲ ನೆಪವಾ? ಗರ್ವ? ಅಥವಾ ಸಿಗಲೇಬೇಕು ಎನ್ನುವ ಅಂಶವಾ? ಪ್ರೀತಿ ಸಮುದ್ರವಾ...

ಓದುಗ ಬಳಗ ಹೆಚ್ಚಿಸಲು ಬೇಕು ನೆಟ್‌ವರ್ಕ್‌ ಮಾರ್ಕೆಟಿಂಗ್‌ ತಂತ್ರ

23-04-2024 ಬೆಂಗಳೂರು

'ವಿಶ್ವ ಪುಸ್ತಕ ದಿನದ ಸಂದರ್ಭದಲ್ಲಿ ನಾವು ಒಂದು ನಿರ್ಧಾರವನ್ನು ಮಾಡಬೇಕಿದೆ. ಇದಕ್ಕೆ ಈಗಿನ ನೆಟ್‌ವರ್ಕ್&zwn...