ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ರಾಜ್ಯ ಮಟ್ಟದ ಯುವ ಸಾಹಿತ್ಯ ಸಮಾವೇಶ

Date: 11-06-2024

Location: ಬೆಂಗಳೂರು


ಧಾರವಾಡ: ಇದೇ ಜೂನ್ 27, 2024 ಹಾಗೂ 28 ರಂದು ಕರ್ನಾಟಕ ವಿದ್ಯಾವರ್ಧಕ ಸಂಘವು ಎರಡು ದಿನಗಳ ಕಾಲ ಯುವ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದೆ. ಹೊಸ ತಲೆಮಾರು ಕನ್ನಡ ಸಾಹಿತ್ಯಕ್ಕೆ ನೀಡುತ್ತಿರುವ ಕೊಡುಗೆ ಮತ್ತು ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸುವುದು ಮತ್ತು ಯುವ ಬರಹಗಾರರಿಗೆ ಉತ್ತೇಜನ ನೀಡುವುದು ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಈಗಾಗಲೇ ಗಟ್ಟಿಯಾದ ಹೆಜ್ಜೆಗಳನ್ನು ಊರಿರುವ, ಹೊಸ ಸಾಧ್ಯತೆಗಳನ್ನು ತೆರೆದು ತೋರುತ್ತಿರುವ ಸುಮಾರು 50 ಯುವ ಪ್ರತಿಭೆಗಳನ್ನು ಆಹ್ವಾನಿಸಿ ವಿವಿಧ ಗೋಷ್ಠಿಗಳಲ್ಲಿ ಅವರ ಅನುಭವಗಳ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸಲಾಗುವುದು. ಕಳೆದ ಕಾಲು ಶತಮಾನದಲ್ಲಿ ಕನ್ನಡದಲ್ಲಿ ಹೊಸ ತಲೆಮಾರಿನ ಬರವಣಿಗೆಯ ಸಾಧ್ಯತೆ ಮತ್ತು ಸವಾಲುಗಳನ್ನು ಕುರಿತು ಉಪನ್ಯಾಸಗಳನ್ನು ಸಂಘಟಿಸಲು ಯೋಚಿಸಿದೆ. ಹಿರಿಯ ಲೇಖಕರನ್ನು ವಿವಿಧ ಗೋಷ್ಠಿಗಳನ್ನು ಸಂಯೋಜಿಸಲು ಹಾಗೂ ಮಾರ್ಗದರ್ಶನ ನೀಡಲು ಆಹ್ವಾನಿಸಲಾಗುವುದು.

ಈ ಸಮ್ಮೇಳನದಲ್ಲಿ ರಾಜ್ಯದಾದ್ಯಂತ 18 ರಿಂದ 35 ವಯಸ್ಸಿನೊಳಗಿನ ಬರವಣಿಗೆಯಲ್ಲಿ ಆಸಕ್ತರಾದ 100 ಹೊಸ ತಲೆಮಾರಿನ ಬರಹಗಾರರನ್ನು ಶಿಬಿರಾರ್ಥಿಗಳಾಗಿ ಆಯ್ಕೆ ಮಾಡಲಾಗುವುದು. ಸ್ಥಳೀಯವಾಗಿ ಪದವಿ ಮತ್ತು ಸ್ನಾತಕೋತ್ತರ ಆಸಕ್ತ ೧೦೦ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೂ ಕೂಡ ಶಿಬಿರಾರ್ಥಿಗಳಾಗಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗುವುದು.

ಈ ಸಮ್ಮೇಳನದಲ್ಲಿ ಶಿಬಿರಾರ್ಥಿಗಳಾಗಿ ಭಾಗವಹಿಸುವವರಿಗೆ ವಸತಿ, ಊಟೋಪಚಾರಗಳ ವ್ಯವಸ್ಥೆ ಕಲ್ಪಿಸಲಾಗುವುದು. ಸ್ಥಳೀಯ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯವಿರುವುದಿಲ್ಲ. ಶಿಬಿರಾರ್ಥಿಗಳಾಗಿ ಭಾಗವಹಿಸಲು ಇಚ್ಛಿಸುವವರು ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಇಲ್ಲವೇ ಆನ್‌ಲೈನ್ ಲಿಂಕ್ ಮೂಲಕ ಅಥವಾ QR Code Scan ಮಾಡಿ ಮಾಹಿತಿ ನೀಡುವುದರ ಮೂಲಕ ತಮ್ಮ ಪ್ರವೇಶವನ್ನು 20 ಜೂನ್ 2024ರ ಒಳಗಾಗಿ ನೋಂದಾಯಿಸಿಕೊಳ್ಳಬಹುದು. ತಮ್ಮದೊಂದು ಪುಟ್ಟ ಬರಹವನ್ನು ಕಳುಹಿಸಲು ಕೋರಲಾಗಿದೆ.

MORE NEWS

ಚಿತ್ರರಂಗದ ಬಗ್ಗೆ ಎದೆ ಉಬ್ಬಿಸಿಕೊಂಡು ಮಾತನಾಡುವ ಕಾಲ ಇತ್ತು: ಸಾ. ರಾ. ಗೋವಿಂದ್‌

18-06-2024 ಬೆಂಗಳೂರು

ಬೆಂಗಳೂರು: ಅದೊಂದು ಕಾಲ ಇತ್ತು ಚಿತ್ರರಂಗದ ಬಗ್ಗೆ ಎದೆ ಉಬ್ಬಿಸಿಕೊಂಡು ಮಾತನಾಡುತ್ತಿದ್ದೆವು. ಅಷ್ಟು ಧೈರ್ಯ ಇತ್ತು ನಮಗ...

ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ 2023ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ

18-06-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ವಿವಿಧ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಜೂನ್ 23- 2024 ರಂದು ಭಾನುವಾರ...

ಚನ್ನಪ್ಪ ಅಂಗಡಿ ಮತ್ತು ರವಿ ಹಂಪಿ ಅವರಿಗೆ 2024ರ ಗವಿಸಿದ್ಧ ಎನ್.ಬಳ್ಳಾರಿ ಕಾವ್ಯ ಪ್ರಶಸ್ತಿ

18-06-2024 ಬೆಂಗಳೂರು

ಬಳ್ಳಾರಿ: 2024 ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ಧಾರವಾಡದ ಚನ್ನಪ್ಪ ಅಂಗಡಿ ಅವರ ...