Date: 11-06-2024
Location: ಬೆಂಗಳೂರು
2020ನೇ ಸಾಲಿಗೆ ‘ಕಥಾ ಸಂಕಲನ’, 2021ನೇ ಸಾಲಿಗೆ ‘ಅನುವಾದ ಸಾಹಿತ್ಯ’(ಯಾವುದೇ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡಿರಬೇಕು), 2022ನೇ ಸಾಲಿಗೆ ‘ಕಾದಂಬರಿ’ ಹಾಗೂ 2023ನೇ ಸಾಲಿಗೆ ಕಥಾ ಸಂಕಲನಗಳನ್ನು ಆಹ್ವಾನಿಸಲಾಗಿದೆ.
ಆಯಾ ಪ್ರಕಾರಗಳಲ್ಲಿ ಮೂರು ಪ್ರತಿಗಳನ್ನು ಕಳುಹಿಸಬೇಕು. ಕೃತಿಗಳನ್ನು ಕಳುಹಿಸಲು ಜೂನ್ 26 ಕೊನೆಯ ದಿನ. ಪ್ರಶಸ್ತಿಯು 25,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ತಿಳಿಸಿದ್ದಾರೆ.
ಲೇಖಕಿಯರ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಕಳಿಸಬೇಕು. ಈಗಾಗಲೇ ಸಾವಿತ್ರಮ್ಮ ಮತ್ತು ಅನುಪಮಾ ಪ್ರಶಸ್ತಿಗಳನ್ನು ಪಡೆದವರು ಇದರಲ್ಲಿ ಭಾಗವಹಿಸುವಂತಿಲ್ಲ.
ಕೃತಿಗಳನ್ನು ಕಳುಹಿಸುವ ವಿಳಾಸ: ಕರ್ನಾಟಕ ಲೇಖಕಿಯರ ಸಂಘ, #206, 2ನೇ ಮಹಡಿ, ವಿಜಯ ಮ್ಯಾನ್ ಶನ್, 2ನೇ ಮುಖ್ಯ ರಸ್ತೆ, ಚಾಮರಾಜಪೇಟೆ, ಬೆಂಗಳೂರು- 560018. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 9480051222 ಅಥವಾ 8073765665 ಅನ್ನು ಸಂಪರ್ಕಿಸಬಹುದು.
ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...
2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...
ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...
©2025 Book Brahma Private Limited.