ಲಂಡನ್: ದಕ್ಷಿಣ ಭಾರತ ಭಾಷಾ ಸಾಹಿತ್ಯ ಲೋಕದ ಪಾಲಿಗೆ ಇಂದು ಅತ್ಯಂತ ಮಹತ್ವದ ದಿನ. ಕನ್ನಡದ ಲೇಖಕಿಯೊಬ್ಬರು ಈ ಪ್ರತಿಷ್ಠಿತ ಪ್ರಶಸ್ತಿ ಗೆದ್ದರೆ 2500 ಸಾವಿರ ವರ್ಷದ ಇತಿಹಾಸವುಳ್ಳ ಕನ್ನಡ ಸಾಹಿತ್ಯದ ಕಂಪು ವಿಶ್ವದಾದ್ಯಂತ ಪಸರಿಸಲಿದೆ. ಹಾಸನ ಮೂಲದ ಕನ್ನಡ ಕಥೆಗಳು ಜಗತ್ತಿನಾದ್ಯಂತ ಓದುಗರ ಹೃದಯವನ್ನು ತಟ್ಟಲಿವೆ.
ಲಂಡನ್ ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಟೇಟ್ ಮಾಡರ್ನ್ ಆರ್ಟ್ ಗ್ಯಾಲರಿ ಸಭಾಂಗಣದಲ್ಲಿ ಬ್ರಿಟಿಷ್ ಕಾಲಮಾನ ಮಂಗಳವಾರ, ಮೇ 20 ರ ರಾತ್ರಿ 10.30 ಕ್ಕೆ (ಬುಧವಾರ ಮುಂಜಾನೆ 2.30, ಭಾರತೀಯ ಕಾಲಮಾನ) ಆರಂಭವಾಗಲಿರುವ ಅಂತರ್ ರಾಷ್ಟ್ರೀಯ ಬೂಕರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡದ ಲೇಖಕಿ, ಕನ್ನಡ ಸಾಹಿತ್ಯದ `ಹೃದಯ ದೀಪ' ಬಾನು ಮುಷ್ತಾಕ್ ಆಕರ್ಷಣೆಯ ಕೇಂದ್ರ ಬಿಂದು.
ಅಂತರ್ ರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಅಂತಿಮ ಕಿರುಪಟ್ಟಿಯಲ್ಲಿರುವ ಆರು ಲೇಖಕರ ಪೈಕಿ ದೀಪಾ ಭಸ್ತಿ ಕನ್ನಡದಿಂದ ಇಂಗ್ಲಿಷ್ ಭಾಷಾಂತರ ಮಾಡಿರುವ ಬಾನು ಮುಷ್ತಾಕ್ ಅವರ `ಹಾರ್ಟ್ ಲ್ಯಾಂಪ್' ಕಥಾ ಸಂಕಲನಕ್ಕೆ ಪ್ರಶಸ್ತಿ ಪ್ರಾಪ್ತವಾದರೆ ಇತಿಹಾಸ ಸೃಷ್ಟಿಯಾಗಲಿದೆ.
ನೊಬೆಲ್ ನಂತರ, ಜಗತ್ತಿನ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಎಂದೇ ಪ್ರಾಧಾನ್ಯತೆ ಪಡೆದಿರುವ ಬೂಕರ್ `ಹಾರ್ಟ್ ಲ್ಯಾಂಪ್' ಕೃತಿಗೆ ಬಂದರೆ, ಹಾಸನ ಮೂಲದ ಕನ್ನಡದ ಅಪ್ಪಟ ಪ್ರತಿಭೆ, ಅದ್ಭುತ ಲೇಖಕಿ, ಹುಟ್ಟು ಹೋರಾಗಾರ್ತಿ ಬಾನು ಮುಷ್ತಾಕ್ ದಕ್ಷಿಣ ಭಾರತದ ಭಾಷೆಗಳಿಗೆ ಅಂತರ್ ರಾಷ್ಟ್ರೀಯ ಬೂಕರ್ ಪ್ರಶಸ್ತಿ ತಂದು ಕೊಟ್ಟ ಪ್ರಪ್ರಥಮ ಲೇಖಕಿ ಎಂಬ ಅಸಾಧಾರಣ ಸಾಧನೆ ಮಾಡಲಿದ್ದಾರೆ.
ಈ ಬಾರಿಯ ವಿಶೇಷವೆಂದರೆ, ಬೂಕರ್ ಪ್ರಶಸ್ತಿಯ ಕಿರು ಪಟ್ಟಿಯಲ್ಲಿರುವ ಆರು ಕೃತಿಗಳ ಪೈಕಿ `ಹಾರ್ಟ್ ಲ್ಯಾಂಪ್' ಕಥಾ ಸಂಕಲನವಾದರೆ, ಉಳಿದ ಐದು ಕೃತಿಗಳು ಕಾದಂಬರಿಗಳು. ಆರೂ ಕೃತಿಗಳು ಜಗತ್ತಿನ ಬೇರೆ, ಬೇರೆ ಭಾಷೆಗಳಿಂದ ಇಂಗ್ಲಿಷ್ ಗೆ ಭಾಷಾಂತರಗೊಂಡಿವೆ. ಭಾರತೀಯ ಮುಸ್ಲಿಂ ಜಗತ್ತಿನ ಕುರಿತು ತೀವ್ರವಾದ ಒಳನೋಟಗಳನ್ನು ಹೊಂದಿರುವ ಬಾನು ಮುಷ್ತಾಕ್ ಅವರ ಕಥೆಗಳ ಪೈಕಿ ಆಯ್ದ ಹತ್ತು ಕಥೆಗಳನ್ನು ದೀಪಾ ಭಸ್ತಿ ಅವರು ಅತ್ಯಂತ ಪರಿಣಾಮಕಾರಿಯಾಗಿ ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದಾರೆ.
ಅಂತಿಮ ಕಿರು ಪಟ್ಟಿಯಲ್ಲಿರುವ ಇನ್ನಿತರ ಐದು ಕೃತಿಗಳೆಂದರೆ, ಮಾರ್ಕ್ ಹಚಿನ್ಸನ್ ಫ್ರೆಂಚ್ ಭಾಷೆಯಿಂದ ಇಂಗ್ಲಿಷ್ ಗೆ ಭಾಷಾಂತರ ಮಾಡಿದ `ಅ ಲಿಯೊಪಾರ್ಡ್ ಸ್ಕಿನ್ ಹ್ಯಾಟ್'; ಸೋಫಿ ಹ್ಯೂಸ್ ಇಟಾಲಿಯನ್ ಭಾಷೆಯಿಂದ ಇಂಗ್ಲಿಷ್ ಗೆ ಭಾಷಾಂತರ ಮಾಡಿದ ವಿನ್ಸೆಂಜೊ ಲಾಟ್ರೊನಿಕೊ ಅವರ `ಪರ್ಫೆಕ್ಷನ್'; ಅಸಾ ಯೊನೆಡಾ ಜಪಾನಿ ಭಾಷೆಯಿಂದ ಇಂಗ್ಲಿಷ್ ಗೆ ಭಾಷಾಂತರ ಮಾಡಿದ ಹಿರೊಮಿ ಕವಕಾಮಿ ಅವರ `ಅಂಡರ್ ದಿ ಐ ಆಫ್ ಬಿಗ್ ಬರ್ಡ್'; ಹೆಲೆನ್ ಸ್ಟೆವೆನ್ಸನ್ ಅವರು ಫ್ರೆಂಚ್ ನಿಂದ ಇಂಗ್ಲಿಷ್ ಗೆ ಭಾಷಾಂತರ ಮಾಡಿದ ವಿನ್ಸೆಂಟ್ ಡೆಲೆಕ್ರೊಯಿಸ್ ಅವರ `ಸ್ಮಾಲ್ ಬೋಟ್' ಮತ್ತು ಬಾರ್ಬರಾ ಜೆ.ಹೆವ್ಲೆಂಡ್ ಅವರು ಡ್ಯಾನಿಷ್ ನಿಂದ ಇಂಗ್ಲಿಷ್ ಗೆ ಭಾಷಾಂತರ ಮಾಡಿದ ಸೊಲ್ವೆಜ್ ಬಾಲ್ಲೆ ಅವರ `ಆನ್ ದಿ ಕ್ಯಾಲುಕ್ಯುಲೇಷನ್ ಆಫ್ ವಾಲ್ಯೂಂ'.
2024ರಲ್ಲಿ ಮೈಕಲ್ ಹಾಫ್ಮನ್ ಅವರು ಫ್ರೆಂಚ್ ನಿಂದ ಇಂಗ್ಲಿಷ್ ಗೆ ಭಾಷಾಂತರ ಮಾಡಿದ್ದ ಜೆನ್ನಿ ಎರ್ಪನ್ಬೆಕ್ ಅವರ `ಕೈರೊ' ಕಾದಂಬರಿಗೆ ಅಂತರ್ ರಾಷ್ಟ್ರೀಯ ಬೂಕರ್ ಪ್ರಶಸ್ತಿ ಪ್ರಾಪ್ತವಾಗಿತ್ತು. ಈ ಬಾರಿ ಇದು ಬಾನು ಮುಷ್ತಾಕ್ – ದೀಪಾ ಭಸ್ತಿ ಜೋಡಿಗೆ ಸಲ್ಲಲಿ, ಕನ್ನಡದ ಕಂಪು ಎಲ್ಲೆಡೆ ಹರಡಲಿ ಎನ್ನುವುದು `ಬುಕ್ ಬ್ರಹ್ಮ' ಆಶಯ.
1.jpg)
2025ರ ಅಂತರ್ ರಾಷ್ಟ್ರೀಯ ಬೂಕರ್ ಪ್ರಶಸ್ತಿ ದೊಡ್ಡ ಪಟ್ಟಿಯಲ್ಲಿದ್ದ ಕೃತಿಗಳು.
1.jpg)
2024ರಲ್ಲಿ ಅಂತರ್ ರಾಷ್ಟ್ರೀಯ ಬೂಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆದ ಟೇಟ್ ಮಾಡರ್ನ್ ಆರ್ಟ್ ಗ್ಯಾಲರಿಯ ಸಭಾಂಗಣ.

2024ರ ಅಂತರ್ ರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಜೋಡಿ ಮೈಕಲ್ ಹಾಫ್ಮನ್ ಮತ್ತು ಜೆನ್ನಿ ಎರ್ಪನ್ಬೆಕ್.
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.