ಮಾನವನ ವರ್ತನೆಯನ್ನು ಅರಿಯಲು ಅವನ ವ್ಯಕ್ತಿತ್ವವನ್ನು ತಿಳಿಯಬೇಕಿರುತ್ತದೆ


“ಮನುಷ್ಯನ ಮಾನಸಿಕ ಪ್ರವೃತ್ತಿಗಳನ್ನು ಪ್ರಸ್ತುತ ಸಂದರ್ಭದಲ್ಲಿಟ್ಟು ವಿವೇಚಿಸುವ ಜೊತೆಗೆ ಸಾರ್ವಕಾಲಿಕತೆಯ ಲಕ್ಷಣಗಳನ್ನು ಚಾರಿತ್ರಿಕವಾಗಿ ಗುರುತಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ,” ಎನ್ನುತ್ತಾರೆ ಪುರುಷೋತ್ತಮ ದಾಸ್ ಹೆಗ್ಗಡೆ. ಅವರು ತಮ್ಮ “ಯಯಾತಿ” ಕೃತಿಗೆ ಬರೆದ ಲೇಖಕರ ಮಾತು.

ಇದು ಸಾಹಿತ್ಯದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಅಮೆರಿಕದ ಪ್ರಖ್ಯಾತ ಕಾದಂಬರಿಗಾರ್ತಿ ಶ್ರೀಮತಿ ಟೋನಿ ಮೊದ್ರಿಸನ್ ರವರ ಮಾತು. ಕನ್ನಡ ಹಾಗೂ ಅಂಗ್ಲ ಭಾಷೆಯಲ್ಲಿ ಬಂದಿರುವ ಯಯಾತಿಯನ್ನು ಕುರಿತಾದ ಕಥೆ, ಕಾದಂಬರಿ, ನಾಟಕ, ಮುಂತಾದ ಪ್ರಕಾರಗಳು ವೈಯಕ್ತಿಕ ನೆಲೆಯಲ್ಲಿ ನನಗೆ ತೃಷ್ಣ ತರಲಿಲ್ಲ. ಪೌರಾಣಿಕ ಯಯಾತಿ ಕಥೆಯ ಅಂತರಾರ್ಥವನ್ನು ವೈಜ್ಞಾನಿಕವಾಗಿ ವಿವರಿಸುವ ಅವಶ್ಯಕತೆಯ ಕಂಡುಬಂದಿತು. ಬಹಳ ವರ್ಷಗಳಿಂದ ನನ್ನದೇ ಆದ ಆಲೋಚನಾ ಧಾಟಿಯಲ್ಲಿ, ಮನೋವೈಜ್ಞಾನಿಕ ಆಧಾರದಲ್ಲಿ ಯಯಾತಿ ಕಾದಂಬರಿಯನ್ನು ಬರೆಯಬೇಕೆಂಬ ತುಡಿತವಿತ್ತು. ಈಗ ಅದು ಸಾಕಾರಗೊಳ್ಳುತ್ತಿರುವುದು ನನಗೆ ಅತೀವ ಸಂತೋಷ ತಂದಿದೆ.

ಮಹಾಭಾರತದ ಆದಿಪರ್ವದ ಸಂಭವಪರ್ವದಲ್ಲಿ ಯಯಾತೋಪಾಖ್ಯಾನವು ಉದ್ಯೋಗಪರ್ವದ ಭಗವಧ್ಯಾನಪರ್ವದಲ್ಲಿ ಗಾಲವ ಚರಿತ್ರೆಯು ಚಿತ್ರಣಗೊಂಡಿರುತ್ತದೆ. ಹಾಗೂ ಬಹಳ ಹಿಂದೆ, ಸುರಾಸುರರ ನಡುವೆ ಸಂಘರ್ಷಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಅಸುರರ ಗುರುವಾದ ಶುಕ್ರಾಚಾರ್ಯರು ಯುದ್ಧದಲ್ಲಿ ಸತ್ತವರನ್ನು ಬದುಕಿಸುವ ಮೃತ ಸಂಜೀವನಿ ವಿದ್ಯೆಯನ್ನು ತಿಳಿದಿದ್ದು ಅದರಿಂದ ಯುದ್ಧದಲ್ಲಿ ಮಡಿದವರನ್ನು ಬದುಕಿಸಿ ಹೋರಾಟವನ್ನು ಜೀವಂತವಾಗಿ ಇಡುತ್ತಿರುತ್ತಾರೆ. ದೇವತೆಗಳ ಗುರುವಾದ ಬೃಹಸ್ಪತಿಗೆ ಸಂಜೀವನಿ ವಿದ್ಯೆಯು ತಿಳಿದಿರುವುದಿಲ್ಲವಾದ್ದರಿಂದ ದೇವತೆಗಳ ಪಕ್ಷದಲ್ಲಿ ಅಪಾರ ಸಾವು- ನೋವುಗಳಾಗುತ್ತಿರುತ್ತವೆ.

ಬೃಹಸ್ಪತಿಯ ಮಗನಾದ ಕಚನು ಗುರು ಶುಕ್ರಾಚಾರ್ಯರಿಂದ ಸಂಜೀವನಿ ವಿದ್ಯೆಯನ್ನು ಕಲಿತು ಬರುವಂತೆ ದೇವತೆಗಳು ಒಮ್ಮತದ ನಿರ್ಧಾರಕ್ಕೆ ಬರುತ್ತಾರೆ. ಸನ್ನಡತೆಯಿಂದ ಶುಕ್ರಾಚಾರ್ಯರನ್ನು, ಅವರ ಪ್ರೀತಿಯ ಪುತ್ರಿಯಾದ ದೇವಯಾನಿಯನ್ನು ಪ್ರಸನ್ನಗೊಳಿಸಿದರೆ ಸಂಜೀವನಿ ವಿದ್ಯೆ ಕಲಿಯಲು ಸಾಧ್ಯವಾಗುತ್ತದೆ ಎಂದು ದೇವತೆಗಳು ಅವನಿಗೆ ತಿಳಿಸುತ್ತಾರೆ.

ಕಚನಿಗೆ ವಿದ್ಯೆ ಕಲಿಸಲು ಗುರು ಶುಕ್ರಾಚಾರ್ಯರು ಒಪ್ಪುತ್ತಾರೆ. ಗುರುಗಳ ಹಾಗೂ ದೇವಯಾನಿಯ ಸೇವೆಯನ್ನು ನಿಷ್ಠೆಯಿಂದ ಮಾಡುತ್ತಾ ಅವನು ವಿದ್ಯೆ ಕಲಿಯುತ್ತಿರುತ್ತಾನೆ. ಆದರೆ, ರಾಜ ವೃಷಪರ್ವನ ಸೈನಿಕರಿಗೆ ಮಾತ್ರ ಕಚನ ಮೇಲೆ ವಿಶ್ವಾಸವು ಮೂಡುವುದಿಲ್ಲ. ಸಂಜೀವನಿ ವಿದ್ಯೆಯನ್ನು ಕದಿಯಲು ಅವನು ಬಂದಿರುತ್ತಾನೆ ಎಂದು ಬಲವಾಗಿ ನಂಬಿ ಅವನನ್ನು ಸಾಯಿಸಲು ಮೂರು ಬಾರಿ ಪ್ರಯತ್ನ ಮಾಡುತ್ತಾರೆ. ದೇವಯಾನಿಯ ಕೋರಿಕೆಯ ಮೇರೆಗೆ ಶುಕ್ರಾಚಾರ್ಯರು ಮೂರು ಬಾರಿಯೂ ಕಚನಿಗೆ ಜೀವದಾನ ಮಾಡುತ್ತಾರೆ.

ಕಚನ ವಿದ್ಯಾಭ್ಯಾಸವು ಮುಕ್ತಾಯಗೊಂಡ ನಂತರ ದೇವಯಾನಿಯು ತನ್ನ ಪ್ರೇಮ ನಿವೇದನೆಯನ್ನು ಅವನೊಡನೆ ಮಾಡುತ್ತಾಳೆ. ಗುರುಪುತ್ರಿಯು ಸೋದರಿಯ ಸಮಾನವಾದ್ದರಿಂದ ವಿವಾಹವು ಸಾಧ್ಯವಿಲ್ಲವೆಂದು ಕಚನು ನಿರಾಕರಿಸುತ್ತಾನೆ. ಕೋಪಗೊಂಡ ದೇವಯಾನಿಯು ಸಂಜೀವನಿ ವಿದ್ಯೆಯು ಫಲಿಸದಿರಲಿ ಎಂದು ಕಚನಿಗೆ ಶಾಪ ನೀಡುತ್ತಾಳೆ. ಯಾವ ಋಷಿಪುತ್ರರುಗಳು ದೇವಯಾನಿಯನ್ನು ವರಿಸದಿರಲಿ ಎಂಬ ಪ್ರತಿಶಾಪವನ್ನು ಕಚನು ದೇವಯಾನಿಗೆ ನೀಡುತ್ತಾನೆ.

ಒಂದು ದಿನ ರಾಜ ವೃಷಪರ್ವನ ಮಗಳಾದ ಶರ್ಮಿಷ್ಠೆ, ದೇವಯಾನಿ ಮತ್ತಿತರೆ ಸಂಗಡಿಗರು ವನವಿಹಾರಕ್ಕೆ ತೆರಳುತ್ತಾರೆ. ಸರೋವರದಲ್ಲಿ ಮಿಂದ ನಂತರ ಗೊಂದಲದಿಂದಾಗಿ ಶರ್ಮಿಷ್ಠೆಯು ದೇವಯಾನಿಯ ಉಡುಗೆಯನ್ನು ತೊಟ್ಟುಕೊಳ್ಳುತ್ತಾಳೆ. ಇದರಿಂದ ಕೆರಳಿದ ದೇವಯಾನಿಯು ಶರ್ಮಿಷ್ಠೆಯನ್ನು ನಿಂದಿಸುತ್ತಾಳೆ. ಶರ್ಮಿಷ್ಠೆಯೂ ಸಹ ದೇವಯಾನಿಯನ್ನು ನಿಂದಿಸಿ ಪಾಳುಬಾವಿಯೊಂದರೊಳಗೆ ಅವಳನ್ನು ನೂಕಿ ಬಿಡುತ್ತಾಳೆ.

ತನಗಾದ ಅವಮಾನದಿಂದ ಕುದ್ದುಹೋದ ದೇವಯಾನಿಯು ತಂದೆಯನ್ನು ಪ್ರಚೋದಿಸುತ್ತಾಳೆ. ಕೋಪಗೊಂಡ ಶುಕ್ರಾಚಾರ್ಯರು ರಾಜ ವೃಷಪರ್ವನನ್ನು ಬೆದರಿಸಿ ದೇವಯಾನಿಯ ಬೇಡಿಕೆಯಂತೆ ಶರ್ಮಿಷ್ಠೆಯನ್ನು ಅವಳ ಪರಿಚಾರಿಕೆಯನ್ನಾಗಿ ಮಾಡಿಸುವಲ್ಲಿ ಸಫಲರಾಗುತ್ತಾರೆ.

ನಹುಷ ಮಹಾರಾಜನ ಪುತ್ರ ಯಯಾತಿಯೊಡನೆ ದೇವಯಾನಿಯ ವಿವಾಹವಾಗುತ್ತದೆ. ಶರ್ಮಿಷ್ಠೆಯನ್ನು ಗೌರವದಿಂದ ಕಾಣುವಂತೆ ಶುಕ್ರಾಚಾರ್ಯರು ಯಯಾತಿಗೆ ತಿಳಿಸುತ್ತಾ ಅವಳೊಡನೆ ಸಂಯೋಗ ಹೊಂದದಂತೆ ನಿರ್ಬಂಧ ವಿಧಿಸುತ್ತಾರೆ.

ಆರಮನೆಗೆ ಹತ್ತಿರದಲ್ಲೇ ಇರುವ ಅಶೋಕವನದಲ್ಲಿ ಶರ್ಮಿಷ್ಠೆಯನ್ನು ಇರಿಸಲಾಗುತ್ತದೆ. ಕಾಲಾಂತರದಲ್ಲಿ ದೇವಯಾನಿಯು ಗರ್ಭ ಧರಿಸಿ ಯದು ಮತ್ತು ತುರವಸು ಎಂಬ ಇಬ್ಬರು ಪುತ್ರರನ್ನು ಪಡೆಯುತ್ತಾಳೆ, ಶರ್ಮಿಷ್ಠೆಗೂ ಸಹ ಕಾಮವಾ೦ಛನೆಯುಂಟಾಗಿ ಯಯಾತಿಯ ಮನವೊಲಿಸಿ ಅವನನ್ನು ಸೇರುತ್ತಾಳೆ. ಗರ್ಭವತಿಯಾದ ಶರ್ಮಿಷ್ಠೆಯನ್ನು ಕಂಡು ಪ್ರಶ್ನಿಸಿದ ದೇವಯಾನಿಗೆ ಋಷಿಯೊಬ್ಬನಿಂದ ತಾನು ಗರ್ಭ ಧರಿಸಿರುವೆನೆಂದು ಸುಳ್ಳು ಹೇಳುತ್ತಾಳೆ. ದ್ರುಹ್ಯು, ಅನು ಮತ್ತು ಪುರು ಎಂಬ ಮೂವರು ಪುತ್ರರು ಶರ್ಮಿಷ್ಠೆಗೆ ಜನಿಸುತ್ತಾರೆ. ಮುಂದೊಂದು ದಿನ ಶರ್ಮಿಷ್ಠೆ ಹಾಗೂ ಯಯಾತಿಯ ಸಂಬಂಧವನ್ನು ತಿಳಿದ ದೇವಯಾನಿಯು ತನ್ನ ತಂದೆಗೆ ದೂರನ್ನು ನೀಡಿ ಶರ್ಮಿಷ್ಠೆಗೆ ಮೂರು ಮಕ್ಕಳು, ನನಗೆ ಮಾತ್ರ ಇಬ್ಬರೇ ಎಂದು ಅವಲತ್ತುಕೊಳ್ಳುತ್ತಾಳೆ.

ದೇವಯಾನಿಯ ವಿವಾಹದ ಸಮಯದಲ್ಲಿ ತಾನು ವಿಧಿಸಿದ್ದ ನಿರ್ಬಂಧವನ್ನು ಮೀರಿದ ಯಯಾತಿಗೆ ಮುಪ್ಪು ಆವರಿಸಲೆಂದು ಶುಕ್ರಾಚಾರ್ಯರು ಶಾಪ ನೀಡುತ್ತಾರೆ. ದೇಹದ ಬಯಕೆಗಳು ಇನ್ನೂ ತೀರಿರದ ಯಯಾತಿಗೆ ಆಘಾತವಾಗಿ ಪರಿಪರಿಯಾಗಿ ಬೇಡುತ್ತಾ ಪರಿಹಾರಕ್ಕಾಗಿ ಶುಕ್ರಾಚಾರ್ಯರಲ್ಲಿ ಮೊರೆಯಿಡುತ್ತಾನೆ. ಯಯಾತಿಯ ರೋಧನೆಯಿಂದ ಕನಿಕರಗೊಂಡ ಶುಕ್ರಾಚಾರ್ಯರು ಅವನ ಮಕ್ಕಳಲ್ಲಿ ಯಾರಾದರೂ ಮುಪ್ಪನ್ನು ಪಡೆದಲ್ಲಿ ಯೌವ್ವನವನ್ನು ಪುನಃ ಪಡೆಯಬಹುದು ಎಂಬ ಪರಿಹಾರವನ್ನು ಸೂಚಿಸುತ್ತಾರೆ. ಯಯಾತಿಯ ಮುಪ್ಪನ್ನು ಸ್ವೀಕರಿಸಿ ತಮ್ಮ ಯೌವ್ವನವನ್ನು ನೀಡಲು ಯದು. ತುರವಸು, ದ್ರುಹ್ಮು ಮತ್ತು ಅನುವು ಮುಂದೆ ಬರುವುದಿಲ್ಲ. ಆದರೆ, ಪುರುವು ತನ್ನ ಯೌವ್ವನವನ್ನು ತಂದೆಗೆ ನೀಡಿ ಮುಪ್ಪನ್ನು ಪಡೆದುಕೊಳ್ಳುತ್ತಾನೆ. ತೃಪ್ತಿಯಾಗುವಷ್ಟು ಲೌಕಿಕ ಸುಖಭೋಗಗಳನ್ನು ಯಯಾತಿಯು ಅನುಭವಿಸಿದ ನಂತರ ಪುರುವಿನಿಂದ ಮುಪ್ಪನ್ನು ಹಿಂಪಡೆದು ಯೌವ್ವನವನ್ನು ಅವನಿಗೆ ಹಿಂದಿರುಗಿಸುವುದಲ್ಲದೆ ರಾಜನನ್ನಾಗಿ ಪಟ್ಟಾಭಿಷೇಕ ಮಾಡಿ ತಾನು ವಾನಪ್ರಸ್ಥಕ್ಕೆ ತೆರಳುತ್ತಾನೆ.

ವಿಶ್ವಾಮಿತ್ರನ ಶಿಷ್ಯನಾದ ಗಾಲವನು ವಿದ್ಯಾಭ್ಯಾಸದ ನಂತರ ಗುರುದಕ್ಷಿಣೆಯಾಗಿ ಏನನ್ನು ನೀಡಬೇಕು ಎಂದು ಗುರುಗಳನ್ನು ಕೇಳುತ್ತಾನೆ. ಇಷ್ಟು ದಿನದ ನಿನ್ನ ಸೇವೆಯೇ ಸಾಕು, ಗುರುದಕ್ಷಿಣೆಯ ಅಗತ್ಯವಿಲ್ಲ ಎಂದು ಹೇಳಿದರೂ ಗಾಲವನು ವಿಶ್ವಾಮಿತ್ರರನ್ನು ಒತ್ತಾಯಿಸುತ್ತಾನೆ. ಇದರಿಂದ ಕೋಪಗೊಂಡ ವಿಶ್ವಾಮಿತ್ರರು ದೃಢಕಾಯವಾಗಿಯೂ ಶುದ್ಧ ಶ್ವೇತ ಬಣ್ಣಕ್ಕಿರುವ, ಒಂದು ಕಿವಿ ಮಾತ್ರ ಕಪ್ಪಗಿರುವ ಎಂಟುನೂರು ಅಶ್ವಗಳನ್ನು ನೀಡುವಂತೆ ಸೂಚಿಸುತ್ತಾರೆ.

ವಿಶ್ವಾಮಿತ್ರರ ಬೇಡಿಕೆಯಿಂದ ಗಾಲವನು ದಿಗಿಲುಗೊಳಗಾಗುತ್ತಾನೆ. ಅವನ ಸ್ನೇಹಿತನಾದ ಗರುಡನು ಶ್ರೀಮಂತನೂ ಸತ್ಯನಿಷ್ಠನೂ ಆದ ಯಯಾತಿಯ ಬಳಿಗೆ ಅವನನ್ನು ಕರೆದುಕೊಂಡು ಬರುತ್ತಾನೆ. ಸಾಲವನ ಕೋರಿಕೆಯನ್ನು ಕೇಳಿದ ಯಯಾತಿಯು ತನ್ನ ಬಳಿ ಹಣ ಇಲ್ಲವೆಂದು ಹೇಳಿ ತನ್ನ ಮಗಳು ಮಾಧವಿಯನ್ನು ಅವನಿಗೆ ನೀಡಿ ಯಾರಾದರೂ ರಾಜರಿಗೆ ಅವಳನ್ನು ನೀಡಿ ಎಂಟುನೂರು ಕುದುರೆಗಳನ್ನು ಪಡೆಯುವಂತೆ ತಿಳಿಸುತ್ತಾನೆ.

ಪ್ರತಿಯೊಬ್ಬ ರಾಜನನ್ನು ವರಿಸುವ ಮುನ್ನ ಮತ್ತೆ ಕನೈಯಾಗುವ ವರವು ಮಾಧವಿಗೆ ಇರುತ್ತದೆ. ಮಾಧವಿಯನ್ನು ಆಯೋಧ್ಯೆಯ ರಾಜ ಹರ್ಯಾತ್ವ, ಕಾಶಿಯ ರಾಜ ದೈವೋದಾಸ ಹಾಗೂ ಭೋಜನಗರದ ರಾಜ ಉಶೀನರನಿಗೆ ನೀಡಿ ಅವರುಗಳಿಂದ ತಲಾ ಇನ್ನೂರು ಕುದುರೆಗಳನ್ನು ಪಡೆಯುತ್ತಾನೆ. ಮಾಧವಿಗೆ ಹರ್ಯಾಶ್ವನಿಂದ ವಸುಮನ, ದೈವೋದಾಸನಿಂದ ಪ್ರತರ್ದನ ಮತ್ತು ಉಶಿನರನಿಂದ ಶಿಬಿ ಎಂಬ ಪುತ್ರರು ಜನಿಸುತ್ತಾರೆ.

ಇನ್ನುಳಿದ ಇನ್ನೂರು ಕುದುರೆಗಳು ದೊರಕುವುದಿಲ್ಲ ಎಂಬ ಮಾಹಿತಿಯು ಸಿಕ್ಕಿದಾಗ ಮಾಧವಿಯನ್ನೂ ಆರುನೂರು ಕುದುರೆಗಳನ್ನೂ ಗಾಲವನು ವಿಶ್ವಾಮಿತ್ರನಿಗೆ ಒಪ್ಪಿಸಿ ಗುರುಋಣದಿಂದ ಮುಕ್ತನಾಗುತ್ತಾನೆ. ಮಾಧವಿಗೆ ವಿಶ್ವಾಮಿತ್ರರಿಂದ ಅಷ್ಟಕ ಎಂಬ ಪುತ್ರನು ಜನಿಸುತ್ತಾನೆ.

ನಾಲ್ಕು ಮಕ್ಕಳನ್ನು ಹೆತ್ತ ನಂತರ, ಮಾಧವಿಯನ್ನು ಗಾಲವನು ಯಯಾತಿಗೆ ಹಿಂದಿರುಗಿಸುತ್ತಾನೆ. ಮಾಧವಿಗೆ ಸ್ವಯಂವರವನ್ನು ಏರ್ಪಡಿಸಿದ ಯಯಾತಿಯು ಅವಳ ವಿವಾಹಕ್ಕೆ ಸಿದ್ಧತೆ ಆರಂಭಿಸುತ್ತಾನೆ. ವಿವಾಹವನ್ನು ಧಿಕ್ಕರಿಸಿದ ಮಾಧವಿಯು ವನವಾಸಿಯಾಗುತ್ತಾಳೆ. ಮಹಾಭಾರತದಲ್ಲಿ ಕಚ-ದೇವಯಾನಿ-ಶರ್ಮಿಷ್ಠೆ-ಯಯಾತಿಯರ ಕಥೆ ಹಾಗೂ ಗಾಲವ-ಮಾಧವಿ- ಯಯಾತಿಯರ ಕಥೆಗಳು ಎರಡು ಪ್ರತ್ಯೇಕ ಅಖ್ಯಾನಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಬರುತ್ತದೆ. ಇದುವರೆವಿಗೂ ಬಂದಿರುವ ಕಾದಂಬರಿ-ನಾಟಕಗಳಲ್ಲಿ ಎರಡೂ ಕಥೆಗಳನ್ನು ಪ್ರತ್ಯೇಕವಾಗಿಯೇ ನೋಡಲಾಗಿದೆ. ಆದರೆ, ನನ್ನ ದೃಷ್ಟಿಯಲ್ಲಿ ಎರಡೂ ಕಥೆಗಳು ಒಂದಕ್ಕೊಂದು ಪೂರಕವಾಗಿದ್ದು ಗಾಲವ-ಮಾಧವಿಯರ ಪ್ರಸಂಗವು ಯಯಾತಿಯ ಜೀವನದ ಅವಿಭಾಜ್ಯ ಅಂಗವಾಗಿದೆ.

ಯಯಾತಿಗೆ ಯತಿ ಎಂಬ ಅಣ್ಣನು ಇರುವ ಉಲ್ಲೇಖವು ಮಹಾಭಾರತದಲ್ಲಿ ಇಲ್ಲ. ಆದರೆ, ಪುರಾಣಗಳಲ್ಲಿ ಅವನ ಉಲ್ಲೇಖವಿದ್ದು ರಾಜ್ಯವನ್ನು ತ್ಯಜಿಸಿ ಸನ್ಯಾಸಿಯಾಗುತ್ತಾನೆ. ಮಹಾಭಾರತ ಹಾಗೂ ಪುರಾಣದ ಎಳೆಯನ್ನು ಆಧಾರವಾಗಿಟ್ಟಕೊಂಡು ಈ ಕಾದಂಬರಿಯನ್ನು ರಚಿಸಲಾಗಿದ್ದು ಇದೊಂದು ಸಂಪೂರ್ಣ ಸ್ವತಂತ್ರ ಕೃತಿಯಾಗಿದೆ.

ವರ, ಶಾಪ, ಮುಂತಾದ ಆಲೌಕಿಕತೆಗಳನ್ನು ನಾನು ಒಪ್ಪದ ಕಾರಣ ಯಯಾತಿಗೆ ಮುಪ್ಪು ಬರಲಿ ಎಂದು ಗುರು ಶುಕ್ರಾಚಾರ್ಯರ ಶಾಪವನ್ನು ವೈಜ್ಞಾನಿಕ-ವೈಚಾರಿಕ ನೆಲೆಗಟ್ಟಿನಲ್ಲಿ ನೋಡಲಾಗಿದೆ ಗುರು ಶುಕ್ರಾಚಾರ್ಯರಿಗೆ 'ಚಿರ ಯೌವ್ವನ' ರಸ ವಿದ್ಯೆಯು ತಿಳಿದಿದ್ದು ಅದನ್ನು ಯಯಾತಿ ಹಾಗೂ ಅವನ ಮಕ್ಕಳು ಸೇವಿಸಲು ಅಧಿಕಾರ ನೀಡಿರುತ್ತಾರೆ. 'ಚಿರ ಯೌವ್ವನ' ರಸ ಕುಡಿಯವುದನ್ನು ನಿಲ್ಲಿಸಿದರೆ ಅಡ್ಡ ಪರಿಣಾಮಗಳು ಉಂಟಾಗಿ ಅಕಾಲಿಕ ಮುಪ್ಪಿಗೆ ವ್ಯಕ್ತಿಯು ತುತ್ತಾಗುತ್ತಾನೆ.

ಕಚನೊಡನೆಯ ಪ್ರೇಮ ವೈಫಲ್ಯದಿಂದ ದೇವಯಾನಿಯನ್ನು ಮದುವೆಯಾಗಲು ಗಿರಿವ್ರಜದಿಂದ ಯಾರೂ ಮುಂದೆ ಬಾರದಿದ್ದರಿಂದ ಕ್ಷತ್ರಿಯ ಕುಮಾರನೊಂದಿಗೆ ಅವಳ ವಿವಾಹವನ್ನು ನೆರವೇರಿಸಲು ಗುರು ಶುಕ್ರಾಚಾರ್ಯರು ಯೋಚಿಸಿರುತ್ತಾರೆ. యతీయ ಹಾಗೂ ವಿವಾಹವನ್ನು ಶರ್ಮಿಷ್ಠೆಯೊಡನೆ ವಿವಾಹವನ್ನು ದೇವಯಾನಿಯೊಡನೆ ನಡೆಸಲು ಮಾತುಕತೆ ನಡೆಯುತ್ತಿರುತ್ತದೆ. ಆದರೆ, ರಾಜ ಪದವಿ ಹಾಗೂ ಸಂಸಾರ ಬಂಧನವನ್ನು ಯತಿಯು ನಿರಾಕರಿಸಿ ಸನ್ಯಾಸಿಯಾಗುತ್ತಾನೆ. ಹಾಗಾಗಿ, ಯಯಾತಿಯ ವಿವಾಹವನ್ನು ಶರ್ಮಿಷ್ಠೆಯೊಡನೆ ನೆರವೇರಿಸಲು ಮುಂದಾಗುತ್ತಾರೆ. ಗುರು ಶುಕ್ರಾಚಾರ್ಯರ 'ಚಿರ ಯೌವ್ವನ' ರಸದ ಆಸೆಯು ಯಯಾತಿಗೆ ಇದ್ದುದ್ದರಿಂದ ದೇವಯಾನಿಯನ್ನು ಎರಡನೇ ಪತ್ನಿಯಾಗಿ ಸ್ವೀಕರಿಸಲು ಯಯಾತಿಯ ತಂದೆ- ತಾಯಿಯರು ಒಪ್ಪುತ್ತಾರೆ. ಮೊದಲಿನ ಪ್ರಸ್ತಾಪದಂತೆ ತಾನು ಯಯಾತಿಯನ್ನು ವಿವಾಹವಾಗಬೇಕಿತ್ತಾದ್ದರಿಂದ ಅವನ ಪ್ರಥಮ ಪತ್ನಿಯು ತಾನಾಗಬೇಕೆಂದು ದೇವಯಾನಿಯು ಯೋಜನೆ ರೂಪಿಸಿ ಅದರಲ್ಲಿ ಯಶಸ್ಸನ್ನು ಕಾಣುತ್ತಾಳೆ. ರಾಜಕುಮಾರಿ ಶರ್ಮಿಷ್ಠೆಯು ಯಯಾತಿಯ ಎರಡನೇ ಪತ್ನಿಯಾಗುತ್ತಾಳೆ. ತನಗೆ ಎರಡು ಗಂಡು ಮಕ್ಕಳಾಗುವವರೆಗೆ ಯಯಾತಿಯು ಶರ್ಮಿಷ್ಠೆಯೊಡನೆ ಸಂಯೋಗ ಹೊಂದಬಾರದೆಂಬ ಷರತ್ತನ್ನು ಮಹಾಭಾರತದಲ್ಲಿ ರಾಜಕುಮಾರಿ ಶರ್ಮಿಷ್ಠೆಯು ದೇವಯಾನಿಯ ಪರಿಚಾರಿಕೆಯಾಗುತ್ತಾಳೆ. ಮೂಲನಿವಾಸಿ ರಾಜ ವೃಷಪರ್ವನ ಮಗಳನ್ನು ಬ್ರಾಹ್ಮಣ ಕನೈಯ ಪರಿಚಾರಿಕೆಯನ್ನಾಗಿ ಅಲ್ಲಿ ಚಿತ್ರಿಸಲಾಗಿದ್ದು ಕ್ಷತ್ರಿಯರಾದರೂ ಮೂಲನಿವಾಸಿಗಳು ಬ್ರಾಹ್ಮಣರ ದಾಸರು ಎಂಬ ವರ್ಣಾಶ್ರಮ ಭೇದವು ಬರುವುದರಿಂದ ಅದನ್ನು ತಿರಸ್ಕರಿಸಿ ದೇವಯಾನಿಯನ್ನು ಯಯಾತಿಯ ಮೊದಲನೇ ಪತ್ನಿ ಹಾಗೂ ಶರ್ಮಿಷ್ಠೆಯನ್ನು ಎರಡನೇ ಪತ್ನಿಯನ್ನಾಗಿಸಿ ಮೂಲನಿವಾಸಿ ಶರ್ಮಿಷ್ಠೆಗೆ ನ್ಯಾಯ ಒದಗಿಸಲು ಪ್ರಯತ್ನಿಸಲಾಗಿದೆ. ಬುಡಕಟ್ಟು ಜನಾಂಗದ ಹೆಣ್ಣಾದ ವನಜಳ ಜೊತೆಗಿನ ಸಂಬಂಧದಿಂದ ಯಯಾತಿಗೆ ಮಾಧವಿ ಎಂಬ ಮಗಳು ಜನಿಸಿರುತ್ತಾಳೆ. ತಾಯಿಯು ತೀರಿ ಹೋಗಿದ್ದರಿಂದ ಅವಳ ಆಸೆಯಂತೆ ಮಾಧವಿಯನ್ನು ರಾಜಕುಮಾರನೊಂದಿಗೆ ವಿವಾಹ ಮಾಡಿಸಲು ಯಯಾತಿಯು ಇಚ್ಛಿಸಿರುತ್ತಾನೆ.

ವಿಶ್ವಾಮಿತ್ರರ ಗುರುಋಣದಿಂದ ಮುಕ್ತನಾಗಲು ಗಾಲವನು ಯಯಾತಿಯ ಬಳಿ ಧನ-ಕನಕ ಬೇಡುತ್ತಾನೆ. ಆದರೆ, ಯಯಾತಿಯು ದಾನ ನೀಡಲು ಸುಲಭವಾಗಿ ಒಪ್ಪುವುದಿಲ್ಲವಾದ್ದರಿಂದ ಉಪಾಯವೊಂದನ್ನು ಸಾಲವನು ಹೂಡುತ್ತಾನೆ. ಬಭ್ರುವಿನ ವಂಶದವನಾದ ಬಭ್ರುವ ಗಾಲವನು ಉದ್ದಾಲಕನ ಮಗನಾದ ಶ್ವೇತಕೇತುವು ರಚಿಸಿದ್ದ ಕಾಮಶಾಸ್ತ್ರ' ಗ್ರಂಥವನ್ನು ಸಂಕ್ಷಿಪ್ತಗೊಳಿಸಿರುತ್ತಾನೆ. 'ಕಾಮಶಾಸ್ತ್ರ' ವನ್ನು ಯಯಾತಿಗೆ ಗಾಲವನು ಹೇಳಿಕೊಟ್ಟು ಅದಕ್ಕೆ ಪ್ರತಿಯಾಗಿ ಧನ-ಕನಕ ಕೇಳುತ್ತಾನೆ. ಧನ-ಕನಕದ ಬದಲಿಗೆ ಮಗಳು ಮಾಧವಿಯನ್ನು ಗಾಲವನ ವಶಕ್ಕೆ ಒಪ್ಪಿಸಿ ಕಾರ್ಯಸಾಧನೆಯನ್ನು ಮಾಡಿಕೊಳ್ಳುವಂತೆ ಯಯಾತಿಯು ಅವನಿಗೆ ತಿಳಿಸುತ್ತಾನೆ.

'ಚಿರ ಯೌವ್ವನ' ರಸದ ಪ್ರಭಾವದಿಂದ ಯಯಾತಿಯು ದಾರಿ ತಪ್ಪಿ ಶ್ವೇಚ್ಚಾಚಾರದಲ್ಲಿ ಮುಳುಗಿದಾಗ ತಂದೆಗೆ ದೂರನ್ನು ನೀಡಲು ದೇವಯಾನಿಗೆ ಅಧಿಕಾರವಿರುತ್ತದೆ. ಯಯಾತಿಗೆ ಮಾಧವಿ ಎಂಬ ಮಗಳಿರುವುದು ಹಾಗೂ 'ಕಾಮಶಾಸ್ತ್ರ' ದ ಅಧ್ಯಯನದ ನೆಪದಲ್ಲಿ ನೂರಾರು ಕನ್ನಿಕೆಯನ್ನು ಅನುಭೋಗಿಸುತ್ತಿರುವುದನ್ನು ಕಂಡು ಕೆರಳಿದ ದೇವಯಾನಿಯು ತಂದೆಯನ್ನು ಪ್ರಚೋದಿಸಿ 'ಚಿರ ಯೌವ್ವನ' ರಸವನ್ನು ಅವನು ಸೇವಿಸದಂತೆ ನಿರ್ಬಂಧ ವಿಧಿಸಲು ಸಫಲಳಾಗುತ್ತಾಳೆ. ಲೌಕಿಕ ಆಸೆ-ಆಕಾಂಕ್ಷೆಗಳು ಇನ್ನೂ ತೀರಿಲ್ಲವಾದ್ದರಿಂದ ಶುಕ್ರಾಚಾರ್ಯರನ್ನು ಪರಿಪರಿಯಾಗಿ ಯಯಾತಿಯು ಬೇಡಿಕೊಳ್ಳುತ್ತಾನೆ. ಆಗ, ಶಾಂತರಾದ ಶುಕ್ರಾಚಾರ್ಯರು ಅವನ ಮಕ್ಕಳಲ್ಲಿ ಯಾರಾದರೂ ತಮ್ಮ ಪಾಲಿನ ರಸವನ್ನು ಯಯಾತಿಗೆ ನೀಡಬಹುದು ಎಂಬ ಬದಲಿ ವ್ಯವಸ್ಥೆ ತಿಳಿಸುತ್ತಾರೆ. ಪುರುವಿನ ಪಾಲನ್ನು ಯಯಾತಿಯು ಪಡೆಯುತ್ತಾನೆ.

ಮಾಧವಿಯನ್ನು ಕರೆದುಕೊಂಡ ಹೋದ ಗಾಲವನು ಅವಳನ್ನು ಮೂವರು ರಾಜರ ಜೊತೆ ಕೂಡುವಂತೆ ಮಾಡುತ್ತಾನೆ. ಬಾಡಿಗೆ ತಾಯಿಯಾದ ಮಾಧವಿಯು ಮೂರು ಗಂಡು ಮಕ್ಕಳನ್ನು ಹೆರುತ್ತಾಳೆ. ಕೊನೆಗೆ, ವಿಶ್ವಾಮಿತ್ರರ ವಶಕ್ಕೆ ಅವಳನ್ನು ಒಪ್ಪಿಸಲಾಗುತ್ತದೆ. ವಿಶ್ವಾಮಿತ್ರರಿಂದ ಮಾಧವಿಗೆ ಒಬ್ಬ ಪುತ್ರನು ಜನಿಸಿದಾಗ ಅವಳು ಬಂಧ ಮುಕ್ತಳಾಗುತ್ತಾಳೆ.

ಮಾಧವಿಯ ಬದುಕಿನ ಗತಿಯನ್ನು ತಿಳಿದ ಯಯಾತಿಯು ತೀವ್ರ ಪಶ್ಚಾತ್ತಾಪ ಪಡುತ್ತಾನೆ. ಮಗಳಿಗೆ ವಿವಾಹ ಮಾಡಿಸಲು ಸ್ವಯಂವರ ಏರ್ಪಡಿಸುವ ಪ್ರಸ್ತಾಪವನ್ನು ಮುಂದಿಡುತ್ತಾನೆ. ಯಯಾತಿಯನ್ನು ಜರಿದ ಮಾಧವಿಯು ಅವನ ಪ್ರಸ್ತಾಪವನ್ನು ತಿರಸ್ಕರಿಸಿ ವನವಾಸಿಯಾಗುತ್ತಾಳೆ.

ಮಾಧವಿಯ ತಿರಸ್ಕಾರ ಹಾಗೂ ಯತಿಯ ಉಪದೇಶದಿಂದ ಯಯಾತಿಯ ಮನವು ಪರಿವರ್ತನೆಯಾಗಿ ಪುರುವಿಗೆ ಅವನ ಪಾಲಿನ 'ಚಿರ ಯೌವ್ವನ' ರಸವನ್ನು ಹಿಂದಿರುಗಿಸಿ, ಅವನ ವಿವಾಹವನ್ನೂ ನೆರವೇರಿಸಿ ರಾಜನನ್ನಾಗಿ ಮಾಡಿ ವನಕ್ಕೆ ತೆರಳುತ್ತಾನೆ.

ಮಹಾಭಾರತದಲ್ಲಿ ನಹುಷ ಮಹಾರಾಜನು ಶಾಪದಿಂದಾಗಿ ಸರ್ಪವಾಗಿರುತ್ತಾನೆ. ಈ ಕಾದಂಬರಿಯಲ್ಲಿ ನಹುಷನಿಗೆ ಸರ್ಪಸುತ್ತು ಕಾಯಿಲೆಯು ಬಂದು ನರಳುತ್ತಿರುತ್ತಾನೆ. ತಂದೆಯ ಮುಪ್ಪು-ಕಾಯಿಲೆ-ಸಾವು ಯಯಾತಿಯನ್ನು ತೀವ್ರವಾಗಿ ಬಾಧಿಸುತ್ತಿರುತ್ತವೆ. ವೃದ್ದಾಪ್ಯದ ಸಮಸ್ಯೆಗಳನ್ನು ಎದುರಿಸಲು ಸಿದ್ಧತೆಯನ್ನು ಮಾಡಿಕೊಳ್ಳುವುದಿಲ್ಲ. ಬದಲಿಗೆ, ವೃದ್ಧಾಪ್ಯವನ್ನು ಸಾಧ್ಯವಾದಷ್ಟೂ ಮುಂದೂಡಲು ಯೋಚಿಸಿರುತ್ತಾನೆ. ಜೊತೆಗೆ, ತೀರದ ಕಾಮದ ದಾಹದಿಂದ ಬಳಲುತ್ತಿರುತ್ತಾನೆ.

ಈ ಕಾದಂಬರಿಯನ್ನು ಮಾನವ ಅಸ್ತಿತ್ವ ಸಿದ್ಧಾಂತದ (Existential Theory) ತಳಹದಿಯ ಮೇಲೆ ರಚಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಜೀವನದ ವಿವಿಧ ಘಟ್ಟಗಳಲ್ಲಿ ಮುಟ್ಟಬೇಕಾದ ಸಾಮಾಜಿಕ ಮೈಲಿಗಲ್ಲುಗಳು ಹಾಗೂ ನಿಭಾಯಿಸಬೇಕಾದ ಸಾಮಾಜಿಕ ಜವಾಬ್ದಾರಿಗಳ ಆಧಾರವನ್ನು ಪಡೆಯಲಾಗಿದೆ.

ಮಾನವನ ವರ್ತನೆಯನ್ನು ಅರಿಯಲು ಅವನ ವ್ಯಕ್ತಿತ್ವವನ್ನು ತಿಳಿಯಬೇಕಿರುತ್ತದೆ. ಅವನ ಪ್ರವೃತ್ತಿ ಪ್ರಚೋದನೆಗಳು, ಪ್ರೇರಣೆ-ಧೋರಣೆಗಳು, ಆಸಕ್ತಿ-ಆಲೋಚನೆಗಳು, ಅನುಬಂಧ-ಅಭಿವೃತ್ತಿಗಳು, ಬಾಂಧವ್ಯ- ಭಾವನೆಗಳು, ನಡೆ-ನುಡಿಗಳನ್ನು ಒಟ್ಟಾರೆಯಾಗಿ ವ್ಯಕ್ತಿತ್ವ ಎನ್ನಬಹುದಾಗಿರುತ್ತದೆ. ಮಾನವನ ವ್ಯಕ್ತಿತ್ವವು ಅತ್ಯಂತ ಸಂಕೀರ್ಣತೆಯಿಂದ ಕೂಡಿದ್ದು ಕ್ಲಿಷ್ಟ ಪರಿಸ್ಥಿತಿಯನ್ನು ನಿಭಾಯಿಸುವ ಕರ್ತೃತ್ವ ಶಕ್ತಿಯನ್ನು ನೀಡುತ್ತದೆ. ಮಾನವನ ಚೇತನ ಹಾಗೂ ಸುಪ್ತಚೇತನಗಳಲ್ಲಿ ಸಂಗ್ರಹವಾಗಿರುವ ಅನುಭವಗಳಿಂದ ವ್ಯಕ್ತಿತ್ವವು ಪ್ರಭಾವಿತವಾಗಿರುತ್ತದೆ. ಘಟನೆಗಳಿಗೆ ಪ್ರತಿಕ್ರಿಯಿಸುವಾಗ ದೇಹದಲ್ಲಿ ಆಗುವ ಎಲ್ಲರಿಗೂ ಕಾಣುವ ಬದಲಾವಣೆಗಳೇ ವರ್ತನೆಗಳಾಗಿವೆ. ಸಂತೋಷ, ದುಃಖ, ಭಯ ಮತ್ತು ಕೋಪಗಳು ಮೂಲತಃ ನಾಲ್ಕು ಭಾವನೆಗಳಾಗಿವೆ. ಮನಸ್ಸಿನಲ್ಲಿ ಮೂಡುವ ಯೋಚನೆಗಳು ಮಾತಿನ ರೂಪದಲ್ಲಿ ಪ್ರಕಟವಾದರೆ ಭಾವನೆಗಳು ಮುಖಭಾವದಲ್ಲಿ ವ್ಯಕ್ತವಾಗುವವು. ಮಿದುಳಿನಲ್ಲಿ ನಡೆಯುವ ಭಾವನಾತ್ಮಕ ಕ್ರಿಯೆಗಳನ್ನು 'ಮನಸ್ಸು' ಎಂದು ಕರೆದರೆ ಯೋಚನೆಗಳನ್ನು 'ಬುದ್ಧಿ' ಎಂದು ಕರೆಯಬಹುದಾಗಿರುತ್ತದೆ. ಪರಿಸರದಲ್ಲಿನ ನಿರಂತರ ಬದಲಾವಣೆಗೆ ಮಾನವನು ತನ್ನ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕಿರುತ್ತದೆ. ಪ್ರಚೋದನೆಗೆ ಒಳಗಾದ ಮನಸ್ಸು ಪ್ರತಿಕ್ರಿಯಿಸಲು ಆಯ್ಕೆ ಮಾಡಿದ ಭಾವನೆ- ಯೋಚನೆಗಳು ಪರಿಸರಕ್ಕೆ ಸಂಗತವಾಗಿದ್ದರೆ ವರ್ತನೆಯೂ ಸಂಗತವಾಗಿರುತ್ತದೆ. ಅಸಂಗತವಾಗಿದ್ದಲ್ಲಿ ಸಮಸ್ಯೆಯು ಆರಂಭವಾಗುತ್ತದೆ ಪ್ಲೇಟೋ-ಅರಿಸ್ಟಾಟಲ್ ಮುಂತಾದ ಪ್ರಸಿದ್ಧ ತತ್ವಶಾಸ್ತ್ರಜ್ಞರು, ಸಿಗ್ನಂಡ್ ಫ್ರಾಯ್ಡ್-ಕಾರ್ಲ್ ಗುಸ್ತಾಫ್ ಯೂಂಗ್-ಆಫ್ರಿಡ್ ಆಡ್ಲರ್, ಮುಂತಾದ ಪ್ರಸಿದ್ಧ ಮನಃಶಾಸ್ತ್ರಜ್ಞರು ಪ್ರತಿಪಾದಿಸಿರುವ ಮಾನವನ ವ್ಯಕ್ತಿತ್ವಗಳು ಹಾಗೂ ವರ್ತನೆಗಳು, ನರವಿಜ್ಞಾನಿ-ಜೀವವಿಜ್ಞಾನಿಗಳು ಪ್ರತಿಪಾದಿಸಿರುವ ಮಾನವನ ಮೂಲಭೂತ ಸ್ವಭಾವಗಳು ಮುಂತಾದ ಮನೋವೈಜ್ಞಾನಿಕ ಕಾರಣಗಳ ಹಿನ್ನಲೆಯಲ್ಲಿ ಕಾದಂಬರಿಯಲ್ಲಿ ಬರುವ ಪಾತ್ರಗಳ ವ್ಯಕ್ತಿತ್ವವನ್ನು ಪರಿಚಯಿಸಲಾಗಿದೆ.

ಸಿಗಂಡ್‌ ಫ್ರಾಯ್ಡ್ನ ವ್ಯಕ್ತಿತ್ವ ಸಿದ್ಧಾಂತದಲ್ಲಿ ಮಾನವನ ಬಾಹ್ಯ ಕ್ರಿಯೆಗಳು ಮನಸ್ಸಿನಲ್ಲಿನ 'ಇದ್' (Id), ಇಗೋ (Ego) ಮತ್ತು ಸೂಪರ್ ಇಗೋ (Super Ego) ಎಂಬ ಮೂರು ಘಟಕಗಳಿಂದ ಪ್ರೇರಿತವಾಗಿದ್ದು ಅವುಗಳು ಚೇತನ (Conscious), ಪ್ರಾಕ್ಷೇತನ (Pre-conscious) ಮತ್ತು ಸುಪ್ತಚೇತನ (Unconscious) ಎಂಬ ಮೂರು ಘಟಕಗಳ ಪರಿಷ್ಕೃತ ರೂಪವಾಗಿರುತ್ತವೆ ಪ್ಲೇಟೋ-ಅರಿಸ್ಟಾಟಲ್ ಮುಂತಾದ ಪ್ರಸಿದ್ಧ ತತ್ವಶಾಸ್ತ್ರಜ್ಞರು, ಸಿಗ್ನಂಡ್ ಫ್ರಾಯ್ಡ್-ಕಾರ್ಲ್ ಗುಸ್ತಾಫ್ ಯೂಂಗ್-ಆಫ್ರಿಡ್ ಆಡ್ಲರ್, ಮುಂತಾದ ಪ್ರಸಿದ್ಧ ಮನಃಶಾಸ್ತ್ರಜ್ಞರು ಪ್ರತಿಪಾದಿಸಿರುವ ಮಾನವನ ವ್ಯಕ್ತಿತ್ವಗಳು ಹಾಗೂ ವರ್ತನೆಗಳು, ನರವಿಜ್ಞಾನಿ-ಜೀವವಿಜ್ಞಾನಿಗಳು ಪ್ರತಿಪಾದಿಸಿರುವ ಮಾನವನ ಮೂಲಭೂತ ಸ್ವಭಾವಗಳು ಮುಂತಾದ ಮನೋವೈಜ್ಞಾನಿಕ ಕಾರಣಗಳ ಹಿನ್ನಲೆಯಲ್ಲಿ ಕಾದಂಬರಿಯಲ್ಲಿ ಬರುವ ಪಾತ್ರಗಳ ವ್ಯಕ್ತಿತ್ವವನ್ನು ಪರಿಚಯಿಸಲಾಗಿದೆ.

ಸಿಗಂಡ್‌ ಫ್ರಾಯ್ಡ್ನ ವ್ಯಕ್ತಿತ್ವ ಸಿದ್ಧಾಂತದಲ್ಲಿ ಮಾನವನ ಬಾಹ್ಯ ಕ್ರಿಯೆಗಳು ಮನಸ್ಸಿನಲ್ಲಿನ 'ಇದ್' (Id), ಇಗೋ (Ego) ಮತ್ತು ಸೂಪರ್ ಇಗೋ (Super Ego) ಎಂಬ ಮೂರು ಘಟಕಗಳಿಂದ ಪ್ರೇರಿತವಾಗಿದ್ದು ಅವುಗಳು ಚೇತನ (Conscious), ಪ್ರಾಕ್ಷೇತನ (Pre-conscious) ಮತ್ತು ಸುಪ್ತಚೇತನ (Unconscious) ಎಂಬ ಮೂರು ಘಟಕಗಳ ಪರಿಷ್ಕೃತ ರೂಪವಾಗಿರುತ್ತವೆ ಮುಂತಾದ ಮಾನವನ ವರ್ತನೆಗಳ ಮೇಲು ಸಿಗ್ಮಂಡ್ ಫ್ರಾಯ್ಡ್ ಬೆಳಕು ಚೆಲ್ಲಿದ್ದಾನೆ.

ಎರಡು ಅಭಿವೃತ್ತಿಗಳಾದ (Attitudes) ಅಂತರ್ಮುಖತೆ (Introversion) ಮತ್ತು ಬಹಿರ್ಮುಖತೆ (Extroversion) ಯನ್ನು ಚೇತನದಲ್ಲಿನ ಅಹಂ ಒಳಗೊಂಡಿರುತ್ತದೆ ಎಂದು ಅಭಿಪ್ರಾಯ ಪಟ್ಟಿರುವ ಕಾರ್ಲ್ ಗುಸ್ತಾಫ್ ಯೂಂಗ್ (Carl Gustav Jung) ನು ಪ್ರತಿಯೊಬ್ಬ ವ್ಯಕ್ತಿಯಲ್ಲೂ ವೈಯಕ್ತಿಕ ಸುಪ್ತಚೇತನ (Personal Unconscious) ಇರುವುದರ ಜೊತೆಗೆ ಪ್ರಾಚೀನವೂ ಪ್ರಬಲವೂ ಆದ ಸಾಮೂಹಿಕ ಸುಪ್ತಚೇತನ (Collective Unconscious) ಸಹ ಇರುತ್ತದೆ ಎಂಬುದನ್ನು ಕಂಡುಕೊಂಡಿರುತ್ತಾನೆ. ವೈಯಕ್ತಿಕ ಸುಪ್ತಚೇತನದಲ್ಲಿ ಶೇಖರಗೊಂಡಿರುವ Complex (Inferiority. Superiority, Etc) ಹಾಗು ಸಾಮೂಹಿಕ ಸುಪ್ತಚೇತನದಲ್ಲಿನ Archetypes (Persona, Shadow, Anima-Animus, Sol) ಗಳು ವ್ಯಕ್ತಿತ್ವದ ರೂಪರೇಷೆಗಳನ್ನು ನಿರ್ದೇಶಿಸುತ್ತವೆ ಎಂದಿದ್ದಾನೆ.

ಯೋಚನಾ ಸಾಮರ್ಥ್ಯ (Thinking Ability), ಭಾವನೆಗಳು (Emotions) ಹಾಗೂ ವರ್ತನೆಗಳು (Behaviours) ಮಾನವನ ಸ್ವಾಭಾವಿಕ ಗುಣಧರ್ಮಗಳಾಗಿರುತ್ತವೆ. ಚಿಂತನೆ (Thinking), ಭಾವನೆ (Feeling) ಅನುಭಾವ (Intuition) ಮತ್ತು ಸಂವೇದನೆ (Sensation) ಎಂಬ ನಾಲ್ಕು ಮೂಲಭೂತವಾದ ಕ್ರಿಯೆಗಳಲ್ಲಿ ಮಾನವನ ಮನಸ್ಸು ತೊಡಗುತ್ತದೆ. ಒಬ್ಬ ವ್ಯಕ್ತಿಯಲ್ಲಿ ಈ ನಾಲ್ಕೂ ಕ್ರಿಯೆಗಳು ನಡೆದರೂ ಯಾವುದಾದರೂ ಒಂದು ಕ್ರಿಯೆಯು ಅವನಲ್ಲಿ ಪ್ರಬಲವಾಗಿರುತ್ತದೆ. ಪ್ರಬಲವಾದ ಕ್ರಿಯೆಯ ಆಧಾರದ ಮೇಲೆ ಯಾವುದಾದರೂ ಒಂದು ಗುಂಪಿಗೆ ಆ ವ್ಯಕ್ತಿಯು ಸೇರುತ್ತಾನೆ.

ಮಾನವನ ವರ್ತನೆಯನ್ನು ನಿರ್ಧರಿಸುವ ಅಪ್ರಜ್ಞಾತ್ಮಕ ಜೈವಿಕ ಪ್ರವೃತ್ತಿಗಳು, ಶೈಶವದ ಅನುಭವಗಳನ್ನು ಅಲ್ಲಗಳೆದ ಅಬ್ರೆಡ್ ಆಕ್ಟರ್ ತೀರ ಕಲ್ಪನಾತ್ಮಕವಾಗಿದ್ದರೂ ಸಹ ಜೀವನದಲ್ಲಿ ಪ್ರಮಖವಾದದ್ದು ಪ್ರಜ್ಞಾತ್ಮಕ ಗುರಿ ಮತ್ತು ನಂಬಿಕೆ ಎಂದು ಪ್ರತಿಪಾದಿಸಿದ್ದಾನೆ. ಸಾಮಾಜಿಕ ಸಂಬಂಧಗಳಲ್ಲಿ, ಜೀವನ ನಿರ್ವಹಣೆಗಾಗಿ ಮಾಡುತ್ತಿರುವ ಕೆಲಸದಲ್ಲಿ, ಸಂಸಾರ ನಿರ್ವಹಣೆಯಲ್ಲಿ ಮಾನವನು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ, ವ್ಯಕ್ತಿಯು ಈ ರಂಗಗಳಲ್ಲಿ ಅನೇಕ ಕೊರತೆಗಳನ್ನು ಎದುರಿಸುತ್ತಿರುತ್ತಾನೆ. ಕೊರತೆಯ ಕೀಳರಿಮೆಯಿಂದ ಪಾರಾಗಲು ಅವನು ಅನುಸರಿಸುವ ಪರಿಹಾರ ಸೂತ್ರಗಳು (Compensation), 5 ៨ (Fictional Finalism). ಮೇಲರಿಮೆಗಾಗಿನ ಸತತ ಪ್ರಯತ್ನ (Striving for Speriority), ಉತ್ತಮ ಜೀವನ ಶೈಲಿ (Better Life Style), ដ ម (Social Interest), ជូន (Creative Self) ಆಲ್ಫ್ರೆಂಡ್ ಆಡ್ವರ್‌ನ ಸಿದ್ಧಾಂತದ ಮೂಲ ವಸ್ತುಗಳಾಗಿವೆ. ಆಂತರಿಕ ನಂಬಿಕೆಗಳು, ಕಾಲ್ಪನಿಕ ಗುರಿಗಳು ಮಾನವನ ವರ್ತನೆಗೆ ಪ್ರೇರಣೆಗಳಾಗಿವೆ. ಆಡ್ವರ್‌ನ ಅನುಸಾರ ಮಾನವನ ಕೊನೆಯ ಗುರಿಯು ಶ್ರೇಷ್ಟತೆಯನ್ನು ಸಾಧಿಸುವುದು, ಉತ್ಕೃಷ್ಟತೆಗಾಗಿ ಪ್ರಯತ್ನಿಸುವುದು, ಮೇಲರಿಮೆಯನ್ನು ಪಡೆಯುವುದು.

ಇತರರೊಡನೆ ಸಹಕಾರ, ಸಂಬಂಧ, ತದನುಭೂತಿ, ಮುಂತಾದ ಸಾಮಾಜಿಕ ಆಸಕ್ತಿಗಳು ಪರಿಪೂರ್ಣ ಮಾನವೀಯ ಸಮಾಜದ ನಿರ್ಮಾಣಕ್ಕೆ ಆನುಕೂಲವಾಗುತ್ತವೆ. ಎಲ್ಲರೂ ಸುಖವಾಗಿರುವ ಸಮಾಜದಲ್ಲಿ ಮಾತ್ರ ತಾನೂ ಸಹ ಸುಖಿಯಾಗಿರಲು ಸಾಧ್ಯ ಎಂಬ ಭಾವನೆ ಬೆಳೆಯಬೇಕು. ಪ್ರತಿಯೊಬ್ಬನಲ್ಲೂ ತನ್ನ ಗುರಿ ಏನೆಂಬುದನ್ನು, ಅದರ ಸಾಧನೆಯ ಮಾರ್ಗವನ್ನು ಅರಿತು ನಡೆಯುವ ಸೃಜನಾತ್ಮಕ ಶಕ್ತಿಯಿರುತ್ತದೆ. ಅದು ಪರಿಸರದ ಪ್ರಚೋದನೆ ಮತ್ತು ಜೀವಿಯ ಪ್ರತಿಕ್ರಿಯೆಗಳ ನಡುವೆ ಸಮನ್ವಯವನ್ನು ಸೃಷ್ಟಿಸಿ ವರ್ತನೆಗಳಿಗೆ ಅರ್ಥ ತಂದುಕೊಡುತ್ತದೆ. ಹೀಗೆ, ವ್ಯಕ್ತಿಯ ವ್ಯಕ್ತಿತ್ವವು ರೂಪುಗೊಳ್ಳುತ್ತಾ ಸಾಗುತ್ತದೆ.

ಶೈಶಾವಾವಸ್ಥೆ-ಬಾಲ್ಯಾವಸ್ಥೆಯಲ್ಲಿನ ಇತ್ಯಾತ್ಮಕ-ನೇತ್ಯಾತ್ಮಕ ಅನುಭವಗಳಿಂದ ವ್ಯಕ್ತಿಯ ಸ್ವ-ನಿಯಂತ್ರಣ ಸಾಮರ್ಥ್ಯದ ರೂಪುರೇಖೆಗಳು ಮೂಡಿರುತ್ತವೆ. ಸ್ವ-ನಿಯಂತ್ರಣ ಸಾಮರ್ಥ್ಯವು ವ್ಯಕ್ತಿಯ ಜೀವನದುದ್ದಕ್ಕೂ ಬೆಳೆಯುತ್ತಲೇ ಇರುತ್ತದೆ. ವಸ್ತು-ವ್ಯಕ್ತಿ ಸಂಬಂಧವಾದ ಆಕರ್ಷಣೆ-ವಿಕರ್ಷಣೆಗಳು ವ್ಯಕ್ತಿಯು ಅದುವರೆವಿಗೂ ಗಳಿಸಿಕೊಂಡ ಸ್ವ-ನಿಯಂತ್ರಣ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.

ಸ್ವಾರ್ಥವು ಪ್ರಾಣಿಗಳ ಮೂಲ ಪ್ರವೃತ್ತಿಯಾಗಿದ್ದು ನಮ್ಮಲ್ಲಿ ಅಂತರ್ಗತವಾಗಿರುವ ತುಡಿತಕ್ಕೆ ತಕ್ಕಂತೆ ಹೆಣೆದುಕೊಂಡಿರುತ್ತದೆ. ಹಾಗಾಗಿ, ಹಿಂದಿನ ಅನುಭವಗಳು ಮತ್ತು ಮುಂದಿನ ಕನಸುಗಳ ತೆಕ್ಕೆಯಲ್ಲೇ ನಾವು ಚಿಂತಿಸುತ್ತೇವೆ. ಚಿಕ್ಕ ವಯಸ್ಸಿನಲ್ಲಿ ಮಗುವು ಪಾಲಕ-ಪೋಷಕರ ಮೇಲೆ ಅವಲಂಬಿತವಾಗಿದ್ದು ಅನುಬಂಧ (Attachment with Parents) ಎನ್ನಬಹುದಾದ ಒಂದು ರೀತಿಯ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡಿರುತ್ತದೆ. ಸುರಕ್ಷಿತ (Secured), ತಪ್ಪಿಸಿಕೊಳ್ಳುವ (Avoldant), ಆತಂಕಭರಿತ (Anxious) ಹಾಗೂ ಅವ್ಯವಸ್ಥಿತ (Disorganised) ಎಂಬ ನಾಲ್ಕು ಪ್ರಮುಖ ಅನುಬಂಧಗಳನ್ನು ಗುರುತಿಸಲಾಗಿದೆ. ಅನುಬಂಧವು ಧನಾತ್ಮಕ ಅಥವಾ ಋಣಾತ್ಮಕವಾಗಿರಬಹುದಾಗಿದ್ದು ವ್ಯವಸ್ಥಿತ ಹಾಗೂ ಅವ್ಯವಸ್ಥಿತ ಮತ್ತು ಸುರಕ್ಷಿತ ಹಾಗೂ ಅಸುರಕ್ಷಿತ ರೂಪದಲ್ಲಿ ಇರುತ್ತದೆ. ಶೈಶವಾವಸ್ಥೆ-ಬಾಲ್ಯಾವಸ್ಥೆಯಲ್ಲಿನ ಅನುಬಂಧಗಳಿಂದ ಉಂಟಾದ ವ್ಯಕ್ತಿತ್ವ ವೈಪರೀತ್ಯಗಳು ವ್ಯಕ್ತಿಯ ಸುಸಂಬದ್ಧ ನಡವಳಿಕೆಗೆ ಅದರಲ್ಲೂ ಬಹು ಮುಖ್ಯವಾಗಿ ಪ್ರಣಯ ಸಂಬಂಧಗಳಿಗೆ ಕಂಟಕವಾಗಿ ಪರಿಣಮಿಸಿದರೆ ದಾಂಪತ್ಯವು ಸಮಸ್ಯಾತ್ಮಕವಾಗಿ ರೂಪುಗೊಳ್ಳುತ್ತದೆ. ಆದರೆ, ಸಮಸ್ಯಾತ್ಮಕ ವ್ಯಕ್ತಿತ್ವವನ್ನು ಜೀವನದ ಯಾವುದೇ ಹಂತದಲ್ಲಾದರೂ ಬಗೆಹರಿಸಿಕೊಳ್ಳಬಹುದು ಎಂಬುದನ್ನು ಮಾತ್ರ ಮರೆಯಬಾರದು.

ತಂದೆ-ತಾಯಿ ಹಾಗೂ ಪೋಷಕರ ಅಸಮಂಜಸತೆಗಳು ಮಕ್ಕಳಲ್ಲಿ ಆತಂಕವನ್ನು ಹುಟ್ಟಿಸಿ ಬದುಕಿಗೆ ಸಂಚಕಾರ ತರುವ ಅಪಾಯಗಳಾಗಿ ಮಾರ್ಪಾಟಾಗುತ್ತವೆ. ಯಯಾತಿ ಕಥನದಲ್ಲಿನ ಪಾತ್ರಗಳು ಹೊಂದಿರುವ ಅನುಬಂಧದ ಆಧಾರದಲ್ಲಿ ಸಂಭಾಷಣೆ-ಘಟನೆಗಳನ್ನು ಇಲ್ಲಿ ಹೆಣೆಯಲಾಗಿದೆ. ವಂಶಪಾರಂಪರ್ಯವಾಗಿ ಹುಟ್ಟಿನಿಂದಲೇ ಸ್ವಾಭಾವಿಕವಾಗಿ ಬರುವ ಶಕ್ತಿ-ಸಾಮರ್ಥ್ಯಗಳನ್ನು ತಮ್ಮ ಮಕ್ಕಳಲ್ಲಿ ಮತ್ತಷ್ಟು ಹೆಚ್ಚಿಸಲು ಪೋಷಕರು ಪ್ರಯತ್ನಿಸುತ್ತಾರೆ. ಪ್ರತಿಯೊಂದು ಮಗುವು ಸಮಾಜದ ಭಾಗವಾಗಿದ್ದು ಮಕ್ಕಳ ಮೇಲೆ ಪೋಷಕರು ತೋರಿಸುವ ಪ್ರೀತಿ-ಪ್ರೇಮ-ನಿಯಂತ್ರಣ, ಮುಂತಾದವುಗಳು ವ್ಯಕ್ತಿಯು ಸಮಾಜದೊಂದಿಗೆ ಸಂವಹಿಸುವ ಕಲೆಯನ್ನು ಕಲಿಸುತ್ತವೆ, Authoritarian-Autocratic (ಕಚನ ತಂದೆ ಬೃಹಸ್ಪತಿ), Indulgent-Permissive ( ). Authoritative- Reciprocal (ಶರ್ಮಿಷ್ಠೆಯ ತಂದೆ-ತಾಯಿ) ಹಾಗೂ Indifferent-Uninvolved (ಯಯಾತಿಯ ತಂದೆ- ತಾಯಿ) ಗಳು ಪ್ರಮುಖವಾದ ನಾಲ್ಕು ಪೋಷಕರ ಪಾಲನಾ ಶೈಲಿಗಳಾಗಿವೆ. Parenting Styles (ಪಾಲನಾ ಶೈಲಿ), Punishment (ಶಿಕ್ಷೆ) ಮತ್ತು Reward (ಪುರಸ್ಕಾರ) ಗಳು ಮಕ್ಕಳ ಮನಸ್ಸಿನ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತವೆ.

ಮಾನವನ ವರ್ತನೆಯನ್ನು ಅವನ ಸುತ್ತಮುತ್ತಲಿನ ಸಾಮಾಜಿಕ-ಸಾಂಸ್ಕೃತಿಕ ಪರಿಸರವೂ ಕೂಡ ನಿಯಂತ್ರಿಸುತ್ತದೆ. ಪ್ರತಿಯೊಂದು ಸಂಸ್ಕೃತಿಯೂ ಸಹ ತನ್ನದೇ ಆದ ಪರಂಪರೆ, ಸಂಪ್ರದಾಯ, ಆಚರಣೆ, ಮೌಲ್ಯ, ರೂಢಿ, ಮಾನದಂಡ, ಮುಂತಾದವುಗಳನ್ನು ಹೊಂದಿರುತ್ತದೆ. ಮಾನವನ ಮೇಲೆ ಸಂಸ್ಕೃತಿಯು ಪ್ರಭಾವ ಬೀರಿ ನಿಯಂತ್ರಿಸಿದರೂ ಬೆಳವಣಿಗೆಗೆ ಪೂರಕವಾದ ನೂತನ ಕೌಶಲ್ಯಗಳನ್ನು ಹಾಗೂ ವರ್ತನಾ ಮಾದರಿಯನ್ನು ಹೊಂದಲೂ ಸಹ ಅದು ಪ್ರೇರೇಪಿಸುತ್ತದೆ.

ಭಾರತೀಯ ಸಮಾಜದ ತತ್ವ-ಸಿದ್ಧಾಂತ-ಆಧ್ಯಾತ್ಮದ ಬೆಳಕಿನಲ್ಲಿ ಮಾನವನ ಮೂಲ ಸ್ವಭಾವವನ್ನು ತಿಳಿದುಕೊಂಡಾಗ ನಮ್ಮ ಸಂಸ್ಕೃತಿಯಲ್ಲಿನ ದ್ವಂದ್ವವು ಎದ್ದು ಕಾಣುತ್ತದೆ. ತೀರದ ಬಯಕೆಗಳು ಮತ್ತು ತ್ಯಾಗಗಳಲ್ಲಿ ಭಾರತೀಯತೆಯು ನೆಲೆಸಿದ್ದು ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳಲ್ಲಿ, ಆನೇಕ ಪುರಾಣಗಳಲ್ಲಿ ಇದನ್ನು ಕಾಣಬಹುದಾಗಿದೆ. ಲಂಪಟತನ ಮತ್ತು ತ್ಯಾಗಮಯ ಎಂಬ ಎರಡು ತದ್ವಿರುದ್ಧ ಗುಣಗಳ ವ್ಯಕ್ತಿತ್ವಗಳನ್ನು ಅನಾದಿಕಾಲದಿಂದ ಇಂದಿನವರೆಗೂ ಭಾರತೀಯ ಸಮಾಜದಲ್ಲಿ ಪ್ರಮುಖವಾಗಿ ಗುರುತಿಸಬಹುದಾಗಿದೆ. ವೈರುಧ್ಯಗಳಲ್ಲಿ ಮುಳುಗಿದ ಬದಲಾಗದ ಭಾರತೀಯ ಸಮಾಜದ ದ್ವಿಮುಖ ಸ್ವಭಾವವು ಇದಾಗಿದೆ. ಮಾನವನು ವಿಕಾಸ ಹೊಂದಿ ನಾಗರಿಕತೆಯತ್ತ ನಡೆದಂತೆ ಸ್ವಚ್ಛಂದ ಕಾಮಕೇಳಿಯಿಂದ (ಒಂದು ಗುಂಪಿನಲ್ಲಿ ಯಾರು ಯಾರನ್ನಾದರೂ ಸಂಭೋಗಿಸುವ ಅತ್ಯಂತ ನಿಕೃಷ್ಟ ಹಾಗೂ ಅಪ್ರಾಜ್ಞ ವ್ಯವಸ್ಥೆ), ಸಮೂಹ ವಿವಾಹ ಪದ್ಧತಿ (ಒಬ್ಬ ಮಹಿಳೆಗೆ ಅನೇಕ ಪುರುಷರು ಅಥವಾ ಒಬ್ಬ ಪುರುಷನಿಗೆ ಅನೇಕ ಮಹಿಳೆಯರು) ಅಥವಾ ವಾರಾಂಗನೆ- ಉಪಪತ್ನಿಯರು, ತದನಂತರ ಬಹು ಪತ್ನಿತ್ವ ಹಾಗೂ ಪ್ರಸ್ತುತ ಏಕ ಪತ್ನಿತ್ವದೆಡೆಗೆ ಬಂದು ಅವನು ನಿಂತಿದ್ದಾನೆ. ಸಾಮಾಜಿಕ ವಿಕಾಸವಾದಂತೆಲ್ಲಾ ಪುರುಷನು ಶಕ್ತಿಯುತವಾಗಿ ಸಾಮಾಜಿಕ-ಆರ್ಥಿಕ-ರಾಜಕೀಯವಾಗಿ ಸದೃಢನಾದರೆ ಮಹಿಳೆಯು ಅವನ ಆಧೀನಳಾಗಿ ಜಡತ್ವವನ್ನು ಹೊಂದಿ ಸಂಪ್ರದಾಯಸ್ಥಳಾಗುತ್ತಾ ಬಂದಿದ್ದಾಳೆ. ತಮ್ಮ ಕಾಮತೃಷೆಯನ್ನು ತೀರಿಸಿಕೊಳ್ಳಲು ಅಭಿಸಾರಿಕೆಯರು, ಪ್ರಣಯಿನಿಯರು. ಕಾಮಿನಿಯರನ್ನು ಪುರುಷರು ಸೃಷ್ಟಿಸಿದ್ದಾರೆ. ಮಾನವನ ವಿಕಾಸದಲ್ಲಿ ಪುರುಷ-ಮಹಿಳೆಯರ ನಡುವಿನ ಕಾಮದ ಅಸಮತೋಲನದಿಂದಾಗಿ ಪುರುಷನು ವ್ಯಕ್ತಿಗತವಾಗಿ ಶಕ್ತಿವಂತನಾದರೆ ಮಹಿಳೆಯು ಹೆಚ್ಚೆಚ್ಚು ಮಾನವೀಯಳಾಗಿದ್ದಾಳೆ. ಪುರುಷನ ಲೈಂಗಿಕತೆಯು ಅಧೋಮುಖವಾಗಿ ಪಾತಾಳದತ್ತ ಸಾಗುತ್ತಿದ್ದರೆ ಮಹಿಳೆಯದ್ದು ಊರ್ಧ್ವಸ್ತವಾಗಿ ಉತ್ತುಂಗ ಶಿಖರದತ್ತ ಬರುತ್ತಿದೆ. ತಮ್ಮ ನಡುವಿನ ಲೈಂಗಿಕತೆಯ ವ್ಯತ್ಯಾಸವನ್ನು ದಂಪತಿಗಳು ಗುರುತಿಸಿಕೊಳ್ಳದಿದ್ದಲ್ಲಿ ವೈಮನಸ್ಸು ಉಂಟಾಗುತ್ತದೆ. ಅತ್ಯುನ್ನತ ನಾಗರಿಕ ವ್ಯಕ್ತಿಯಾಗಬೇಕಾದರೆ ಪುರುಷನು ಬಯಕೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಕಾಮದ ಬಯಕೆಗಳಿದ್ದರೂ ಸ್ವಪ್ರಜ್ಞೆ ಇರುವುದರಿಂದ ಹಿಂದೆ-ಮುಂದೆ ಯೋಚಿಸಿ ಕಾಮವನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕಾದ ಅನಿವಾರ್ಯತೆಯು ಈಗ ಸೃಷ್ಟಿಯಾಗಿದೆ. ಕಾಮದ ಬಯಕೆಯು ದೇಹ-ಮನಸ್ಸುಗಳನ್ನು ದೂರವಾಗಿಸಿ ಸಾಮಾಜಿಕ ಸಂಬಂಧಗಳು ಹಾಗೂ ಸಾಂಸ್ಕೃತಿಕ ಬೆಸುಗೆಗಳನ್ನು ಮುರಿಯುತ್ತದೆ. ಹಾಗಾಗಿ, ಕಾಮದಿಂದ ತಾತ್ಕಾಲಿಕ ತೃಪ್ತಿ ದೊರೆತರೂ ದೀರ್ಘಕಾಲೀನ ನೋವಿರುತ್ತದೆ.

ನಿದ್ರೆ, ಹಸಿವು, ನೀರಡಿಕೆಗಳಂತೆ ಕಾಮದ ಪ್ರವೃತ್ತಿಯೂ ಸಹ ಮಾನವನ ಜೈವಿಕ ಅಗತ್ಯತೆಯಾಗಿದೆ. ಸಂಪೂರ್ಣವಾದ ಸಹಜ ಲೈಂಗಿಕ ಜೀವನದಲ್ಲಿ ಮನೋವಿಕೃತಿಗಳು ಕಾಣಸಿಗುವುದು ವಿರಳವಾದರೆ ಭಾವನೆಗಳ ಒತ್ತಾಯಪೂರ್ವಕ ದಮನ ಕ್ರಿಯೆಯಿಂದ ಲೈಂಗಿಕ ಜೀವನದಲ್ಲಿ ವಿಪಥನಗಳು ಕಾಣಿಸಿಕೊಳ್ಳುವವು.

ಕುದಿಯುತ್ತಿರುವ ಕಾಮದ ಬಯಕೆಗಳನ್ನು ವ್ಯರ್ಥವಾಗಿ ಆವಿಯಾಗಲು ಬಿಡದೆ ಇತರೆ ಶಕ್ತಿ ಮೂಲಗಳಾಗಿ ಪರಿವರ್ತಿಸದಿದ್ದಲ್ಲಿ ವಿಕೃತಿ-ವಿಲೋಮಗಳು ಹಾಗೆಯೇ ಉಳಿದುಬಿಡುತ್ತವೆ. ಯಯಾತಿಯ ಕಥನದಲ್ಲಿ ಸ್ತ್ರೀಯರಾದ ದೇವಯಾನಿ-ಶರ್ಮಿಷ್ಠೆ-ಮಾಧವಿಯರು ಕಾಮದ ಹಿಂದೆ ಬೀಳುವುದಿಲ್ಲ. ಆದರೆ, ಪುರುಷರಾದ ನಹುಷ ಯಯಾತಿಯರು ಬೆಳೆಸಿಕೊಳ್ಳುವುದನ್ನು ವಿಶೇಷವಾಗಿ ಗಮನಿಸಬಹುದಾಗಿದೆ. ವಿಪರೀತ ಭೋಗಲಾಲಸೆಯನ್ನು

ಸಮರ್ಪಣಾ ಮನೋಭಾವ-ಅವಕಾಶವಾದಿ-ಕುಟಿಲನೀತಿಯ ಕಚ (Dedicated, Opportunist, Machiavellianism), ಸ್ವಾರ್ಥಿ-ಸ್ವಪ್ರತಿಷ್ಠೆ-ಅಸೂಯೆ-ಅಹಂಕಾರಿಯಾದ ದೇವಯಾನಿ (Narcissist Envious, Rational, Egoistic), ನಿಸ್ವಾರ್ಥಿ-ಆಶಾವಾದಿ-ಭಾವನಾತ್ಮಕ ಜೀವಿಯಾದ ಶರ್ಮಿಷ್ಠೆ (Altruist or Empath, Optimist, Emotional), --3 (Recusant or Non-Confirmist, Opportunist, Lustfull, Hypocrite, Psychopath) ಸನ್ಯಾಸಿ-ಯೋಗಿಯಾದ ಯತಿ (Ascetic, Yogi) ಅನೈತಿಕ ವ್ಯಕ್ತಿಗಳಾದ ಗಾಲವ-ಸುಪರ್ಣ (Amoral) ಸ್ವಯಂಸ್ವೀಕಾರ-ಸ್ಥಿತಿ ಸ್ಥಾಪಕತ್ವ ಗುಣ-ಯೋಗಿಣಿಯಾದ ಮಾಧವಿ (Self-Acceptance, Resilient, Yogini), 2-2-(Conformist, Trusting) ಪಾತ್ರಗಳ ವ್ಯಕ್ತಿತ್ವವನ್ನು ಅನಾವರಣಗೊಳಿಸಲಾಗಿದೆ. ಪುರು

ಬ್ರಹ್ಮಚಾರಿ-ಯುದ್ಧ ಗಾಯಾಳುಗಳ ಶುಶೂಷಕ ಕಚ ಮತ್ತು ಬ್ರಹ್ಮಚಾರಿ-ಅಹಿಂಸಾವಾದಿ ಯತಿಯರ ವ್ಯಕ್ತಿತ್ವವನ್ನು ಹೋಲಿಕೆ ಮಾಡಲಾಗಿದೆ. ಬ್ರಹ್ಮಚಾರಿ ಕಚ-ಯತಿಯರನ್ನು ಅತಿಕಾಮಿಗಳಾದ ನಹುಷ ಯಯಾತಿಯರೊಡನೆ ತುಲನೆ ಮಾಡಲಾಗಿದೆ. ಹಿಂಸೆ-ಅಹಿಂಸೆ ಮತ್ತು ಕಾಮ-ತ್ಯಾಗಗಳ ವಿರುದ್ಧ ಗುಣಗಳನ್ನು ಚರ್ಚಿಸಲಾಗಿದೆ.

ಯುದ್ಧದಲ್ಲಿನ ಹಿಂಸೆ, ಶಾಂತಿಯಲ್ಲಿನ ಅಹಿಂಸೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಲಾಗಿದೆ. ಯುದ್ಧದ ಭೀಕರತೆಯನ್ನು ಹೇಳಿ ಶಾಂತಿಯ ಮಹತ್ವವನ್ನು ಸಾರಲಾಗಿದೆ. ಯಯಾತಿಯ ತೀರದ ಕಾಮದ ದಾಹದ ಕಾರಣ-ಪರಿಣಾಮಗಳನ್ನು ಮನ ಮುಟ್ಟುವಂತೆ ಚಿತ್ರಿಸಲು ಯತ್ನಿಸಲಾಗಿದೆ. ಯಯಾತಿಯ ಲೌಕಿಕ ಸುಖೋಪಭೋಗಗಳನ್ನು ಯತಿಯ ಪಾರಮಾರ್ಥಿಕ ಜ್ಞಾನದೊಡನೆ ಹೋಲಿಸಿ ಜೀವನದ ಸತ್ಯದರ್ಶನ ಮಾಡಿಸಲು ಪ್ರಯತ್ನಿಸಲಾಗಿದೆ. ಸ್ವಾರ್ಥಿ ದೇವಯಾನಿ, ಸಹಾನುಭೂತಿಯುಳ್ಳ ಶರ್ಮಿಷ್ಠೆಯರ ಅಂತರಂಗವನ್ನು ತೆರೆದಿಡಲಾಗಿದೆ. ಮಾಧವಿಯ ನೋವು-ಛಲ-ಹೋರಾಟ ಮನೋಭಾವ-ಪುಟಿದೇಳುವಿಕೆಯನ್ನು ಮನಮುಟ್ಟುವಂತೆ ತಿಳಿಸಿ ಹೆಣ್ಣಿನ ಮೇಲಿನ ದೌರ್ಜನ್ಯ-ದಬ್ಬಾಳಿಕೆ-ಶೋಷಣೆಯನ್ನು ಖಂಡಿಸಲಾಗಿದೆ. ಪುತ್ರಲಾಭದ ಜೊತೆಗೆ ಹೆಣ್ಣಿನ ದೇಹದ ಮೇಲಿನ ಆಸೆಯಿಂದ ಮೂವರು ರಾಜರು ಮಾಧವಿಯನ್ನು ಅಪೇಕ್ಷಿಸಿದರೆ ಪುತ್ರಾಕಾಂಕ್ಷಿಯಲ್ಲದ ವಿಶ್ವಾಮಿತ್ರರು ಕೇವಲ ಹೆಣ್ಣಿನ ಮೇಲಿನ ಮೋಹದಿಂದ ಮಾಧವಿಯನ್ನು ಹೇಗೆ ಬಳಸಿಕೊಂಡು ವ್ರತಭಂಗ ಮಾಡಿಕೊಂಡರು ಎಂಬ ವಿವರಣೆಯನ್ನು ನೀಡಲಾಗಿದೆ.

ಯಯಾತಿಯ ಅನಿರ್ಬಂಧಿತ ಕಾಮವಾಸನೆಯು ಮಾಧವಿಯನ್ನು ಅಮಾನುಷ ಅನುಭವಕ್ಕೆ ದೂಡಿ ಅವನ ಚಾರಿತ್ರ್ಯದ ಅಧಃಪತನಕ್ಕೂ ಕಾರಣವಾಯಿತು. ಸುಖಭೋಗಗಳಲ್ಲಿ ತೇಲಾಡಿದರೂ ಅವನ ಮನಸ್ಸಿನಲ್ಲಿ ಅತೃಪ್ತಿಯು ಶೇಷವಾಗಿದ್ದು ಆತ್ಮಾನಂದವು ಇಲ್ಲವಾಯಿತು. ಆಧುನಿಕ ಜಗತ್ತಿನಲ್ಲಿ ವೇಗವಾಗಿ ನೂತನ ವಿಜ್ಞಾನ-ತಂತ್ರಜ್ಞಾನದ ಬೆಳವಣಿಗೆಗಳಾಗುತ್ತಿದ್ದು ಕ್ಷಿಪ್ರಗತಿಯ ಸ್ಥಿತ್ಯಂತರಗಳು ನಡೆದು ಪ್ರತಿಯೊಂದರಲ್ಲೂ ಬದಲಾವಣೆಗಳಾಗಿ ಜಗತ್ತು ಅತ್ಯಂತ ಕಿರಿದಾಗುತ್ತಿದೆ. ಆದರೆ, ಮನುಷ್ಯನ ಮೂಲಭೂತ ಸ್ವಭಾವ-ವರ್ತನೆಗಳಲ್ಲಿ ಕಳೆದ ಸಾವಿರಾರು ವರ್ಷಗಳಲ್ಲಿಯೂ ಮಹತ್ತರವಾದ ಬದಲಾವಣೆಗಳು ಕಂಡುಬಂದಿಲ್ಲದಿರುವುದನ್ನು ಗಮನಿಸಬಹುದಾಗಿದೆ. ನಾಗರಿಕತೆಯಿಂದಾಗಿ ಜಾಗೃತ ಮನಸ್ಸು ನಾಜೂಕಾಗಿ ವರ್ತಿಸಿದರೂ ಸುಪ್ತ ಮನಸ್ಸಿನ ವಿಕೃತಿಗಳು ಬಿಕ್ಕಟ್ಟಿನ ಸಮಯದಲ್ಲಿ ಹೊರ ಬರುವುದನ್ನು ಕಾಣುತ್ತಿದ್ದೇವೆ. ಇಂದಿನ ಮಾನವನ ಯಾಂತ್ರಿಕ ಜೀವನಶೈಲಿ ಹಾಗೂ ಬದುಕಿನ ಅನಿಶ್ಚತೆಯು ಅವನ ಮನೋವಿಕಾರಗಳಿಗೆ ಕಾರಣವಾಗಿದ್ದು ಆನಂದದ ಮಾರ್ಗವನ್ನು ದೈಹಿಕ ಸುಖ, ಮೃಷ್ಟಾನ್ನ ಭೋಜನ, ನೂತನ ವೇಷಭೂಷಣ, ಮುಂತಾದವುಗಳಲ್ಲಿ ಕಂಡುಕೊಳ್ಳಲು ಪ್ರಯತ್ನಿಸಿ ಸೋಲುತ್ತಿದ್ದಾನೆ. ಮಾನವನ ಮನಸ್ಸು ಯಾವತ್ತೂ ಭೋಗದ ಕಡೆಗೆ ಹರಿಯುತ್ತಿದ್ದು ಕ್ಷಣಿಕ ಸುಖಗಳೆಂಬ ಮರೀಚಿಕೆಯ ಬೆನ್ನ ಹಿಂದೆ ಬಿದ್ದಿದ್ದಾನೆ. ಒಳ ಮನಸ್ಸಿನ ತವಕ-ತಲ್ಲಣ-ತುಮುಲ-ತಾಕಲಾಟಗಳು ಬಾಹ್ಯದ ವರ್ತನೆಯಲ್ಲಿ ಪ್ರತಿಫಲನವಾಗುತ್ತಿದ್ದು ದೈಹಿಕ ಸುಖ ಮತ್ತು ಮನಸ್ಸಿನ ಆನಂದದ ನಡುವಿನ ವ್ಯತ್ಯಾಸವನ್ನು ಗುರುತಿಸದವನಾಗಿದ್ದಾನೆ. ಮನುಷ್ಯನ ಮಾನಸಿಕ ಪ್ರವೃತ್ತಿಗಳನ್ನು ಪ್ರಸ್ತುತ ಸಂದರ್ಭದಲ್ಲಿಟ್ಟು ವಿವೇಚಿಸುವ ಜೊತೆಗೆ ಸಾರ್ವಕಾಲಿಕತೆಯ ಲಕ್ಷಣಗಳನ್ನು ಚಾರಿತ್ರಿಕವಾಗಿ ಗುರುತಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

MORE FEATURES

ಭಾಷಾಸಮೃದ್ಧಿ ಆಶಾ ಅವರ ಕಥನಕಲೆಯ ವೈಶಿಷ್ಟ್ಯಗಳು

16-03-2025 ಬೆಂಗಳೂರು

"ಸಶಕ್ತ ಬರವಣಿಗೆ, ಭಾಷಾಸಮೃದ್ಧಿ ಆಶಾ ಅವರ ಕಥನಕಲೆಯ ವೈಶಿಷ್ಟ್ಯಗಳು. 'ಕೆಂಪು ದಾಸವಾಳ' ಕಥಾಸಂಕಲನದ ಕಥೆಗ...

ಕೌಟುಂಬಿಕ ಕಥಾ ವಸ್ತುಗಳ ಮೇಲೆ ರಚಿತವಾದಂಥ ಕಥೆಗಳಿವು

16-03-2025 ಬೆಂಗಳೂರು

"ಸದಾ ಅಕ್ಷೇಪದ ದನಿಯೆತ್ತುತ್ತ ಗೊಣಗಾಡುವ, ಲಕ್ವಾ ಹೊಡೆದು ಹಾಸಿಗೆ ಹಿಡಿದ ಚಿಕ್ಕಮಾವನ ಚಾಕರಿ ಮಾಡಿ ಬೇಸತ್ತ ಭಾಗಮ್...

ಲೇಖಕಿ ದೀಪ ಜೋಶಿ ಅವರಿಗೆ ಕಥೆ ಹೇಳುವ ಕೌಶಲ್ಯ ಒಲಿದಿದೆ

15-03-2025 ಬೆಂಗಳೂರು

"ಕಥೆಯಲ್ಲಿ ಬರುವ ಬದರಿ ಯಾತ್ರೆಯ ಸನ್ನಿವೇಶಗಳು, ಕೇದಾರಲ್ಲಿ ನಡೆದ ಘಟನೆ, ಹರಿಹರದ ಕಾರ್ಖಾನೆ ಲಾಕ್ ಔಟ್, ಮಳಖೇಡದಲ...