Date: 09-06-2023
Location: ಬೆಂಗಳೂರು
ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಹುತಾತ್ಮ ಮೈಲಾರ ಮಹದೇವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನಿಂದ ಗುರುವಾರ ನಡೆದ ಮೈಲಾರ ಮಹಾದೇವ ಅವರ 112ನೇ ಜನ್ಮ ದಿನ ಹಾಗೂ ‘ಅಹಿಂಸೆ ಪ್ರತಿಪಾದಕ ಹುತಾತ್ಮ ಮೈಲಾರ ಮಹಾದೇವ’ ಕೃತಿ ಬಿಡುಗಡೆ ನಗರದ ಗಾಂಧಿಭವನದಲ್ಲಿ ನಡೆಯಿತು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ‘ದೇಶದ ಸ್ವಾತಂತ್ರ್ಯ ಮತ್ತು ಕಲ್ಯಾಣಕ್ಕಾಗಿ ತಮ್ಮನ್ನು ತ್ಯಾಗ ಮಾಡಿದ ಮಹಾನ್ ಮಾನವತಾವಾದಿ ಸ್ವಾತಂತ್ರ್ಯ ಸೇನಾನಿ ಹುತಾತ್ಮ ಮೈಲಾರ ಮಹದೇವಪ್ಪ ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಒಟ್ಟಾಗಿ ಪಾಲಿಸುವುದರ ಜೊತೆಗೆ ಈ ದೇಶದ ಸ್ವಾತಂತ್ರ್ಯ ಮತ್ತು ಸಮೃದ್ಧಿಗಾಗಿ ಅತ್ಯುನ್ನತ ತ್ಯಾಗ ಮಾಡಿದ ಇಂತಹ ಮಹಾನ್ ಪುರುಷರ ಮಾದರಿಯನ್ನು ಅನುಸರಿಸಲು ನಾವೆಲ್ಲರೂ ಸಂಕಲ್ಪ ಮಾಡೋಣ ಎಂದು ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದರು.
“ರೈತರಿಂದ ಬ್ರಿಟಿಷರು ಕರ ವಸೂಲಿ ಮಾಡಿದ್ದನ್ನು ರೈತರಿಗೆ ವಾಪಸ್ ಕೊಡಿಸುವ ಸಂದರ್ಭದಲ್ಲಿ ಪೊಲೀಸರು ಮೈಲಾರ ಮಹಾದೇವರ ಎದೆಗೆ ಗುಂಡು ಹಾರಿಸಿದ್ದರು. ಆಗ ಸ್ವಾತಂತ್ರ್ಯ ಹೋರಾಟಗಾರರು ಪೊಲೀಸರ ಬಂದೂಕು ಕಿತ್ತುಕೊಂಡು ಅವರಿಗೆ ಹಲ್ಲೆ ಮಾಡಲು ಮುಂದಾಗಿದ್ದರು. ಸಾಯುವ ಕಾಲದಲ್ಲಿಯೂ ಮೈಲಾರ ಅದನ್ನು ವಿರೋಧಿಸಿದರು. ಪೊಲೀಸರಿಗೆ ಹಿಂಸೆ ಮಾಡಬೇಡಿ. ನಮ್ಮ ಹೋರಾಟ ಅಹಿಂಸಾತ್ಮಕವಾಗಿಯೇ ನಡೆಯಬೇಕು ಎಂದು ತಾನು ನಂಬಿದ್ದ, ಅಳವಡಿಸಿಕೊಂಡಿದ್ದ ತತ್ವವನ್ನೇ ಪ್ರತಿಪಾದಿಸಿದ್ದ ಮಹಾನ್ ದೇಶಭಕ್ತ, ಅವರ ನೆನಪಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳಬೇಕು' ಎಂದು ಸಲಹೆ ನೀಡಿದರು.
ಕೃತಿಯ ಬಗ್ಗೆ ಮಾತಾನಾಡಿದ ಮನು ಬಳಿಗಾರ ಅವರು “14ನೇ ವರ್ಷಕ್ಕೆ ಶಾಲೆ ತೊರೆದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಮಹಾದೇವ ಅವರು 17ನೇ ವರ್ಷಕ್ಕೆ ಸಬರಮತಿ ಆಶ್ರಮಕ್ಕೆ ಹೋಗಿ ಗಾಂಧೀಜಿ ಅನುಯಾಯಿ ಆಗಿ ಕೆಲಸ ಮಾಡಿದರು. ಅವರ ಪತ್ನಿ ಸಿದ್ದಮ್ಮ ಕೂಡಾ ಮಹಾದೇವ ಜೊತೆಗೆ ಹೋರಾಟದ ಸಂಗಾತಿಯಾಗಿದ್ದರು. ಅಲ್ಲಿಂದ 1943ರಲ್ಲಿ ಹುತಾತ್ಮರಾಗುವವರೆಗೆ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು. ಭಗತ್‌ಸಿಂಗ್, ರಾಜಗುರು, ಸುಖದೇವ್‌ರಂತೆ ಸಣ್ಣ ಪ್ರಾಯದಲ್ಲಿಯೇ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದರು' ಎಂದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ, ಕಾಂಗ್ರೆಸ್ ಮುಖಂಡ ಜಗದೀಶ್ ಶೆಟ್ಟರ್, 'ಅಹಿಂಸೆ ಪ್ರತಿಪಾದಕ ಹುತಾತ್ಮ ಮೈಲಾರ ಮಹಾದೇವ' ಕೃತಿಕಾರ ಎ.ಮುರಿಗೆಪ್ಪ, ಶಾಸಕ ಯು.ಬಿ.ಬಣಕಾರ್, ಕೆಪಿಎಸ್‌ಸಿ ಸದಸ್ಯ ಎಚ್.ಎಸ್. ನರೇಂದ್ರ , ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ ಉಪಸ್ಥಿತರಿದ್ದರು.
ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...
2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...
ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...
©2025 Book Brahma Private Limited.