೨೦೨೫ ನೇ ಸಾಲಿನ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಬಹುಮಾನವು ಮಣಿಕಂಠ ಗೊದಮನಿ ಯವರ 'ನೇಣು' ಎಂಬ ಕಥೆಯ ಹಸ್ತಪ್ರತಿಗೆ ದೊರೆತಿದೆ. 'ಈ ಕಥೆಯು ಸಮಾಜದಾಳದಲ್ಲಿ ಇನ್ನೂ ಲಾವಾರಸದಂತೆ ಕುದಿಯುತ್ತಲೇ ಇರುವ ಜಾತೀಯತೆಯ ಭ್ರಷ್ಟ ವ್ಯವಸ್ಥೆಯು ತೀವ್ರ ಭಾವಪೂರ್ಣ ಕಥನವಾಗಿ ಸಹೃದಯರನ್ನು ಪರಿಣಾಮಕಾರಿಯಾಗಿ ತಟ್ಟುವುದರ ಮೂಲಕ ಯಶಸ್ವಿಯಾಗಿದೆ' ಎಂದು ಸ್ಪರ್ಧೆಯ ತೀರ್ಪುಗಾರರಾದ ಮಹಾಂತಪ್ಪ ನಂದೂರ ಹಾಗೂ তেত. ರಂಗನಾಥ ಕಂಟನಕುಂಟೆ ಅಭಿಪ್ರಾಯಪಟ್ಟಿದ್ದಾರೆ.
ಈ ಪುರಸ್ಕಾರವು ಐದು ಸಾವಿರ ನಗದು ಹಾಗೂ ಪ್ರಶಸ್ತಿ ಪಲಕವನ್ನು ಒಳಗೊಂಡಿದೆ. ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ಹಾಗೂ ಶ್ರೀಮತಿ ವಿಜಯಾ ಅಗಸನಕಟ್ಟೆ ಸಹಯೋಗದಲ್ಲಿ ನಡೆವ ಸತತ ಎಂಟನೇ ವರ್ಷದ ಸ್ಪರ್ಧೆಯಿದಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬರುವ ಜುಲೈ ತಿಂಗಳಲ್ಲಿ ನೆರವೇರಿಸಲಾಗುವುದು ಎಂದು ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕಥೆಗಾರನ ಪರಿಚಯ:
ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಬಹುಮಾನ-೨೦೨೫ ಪಡೆದ ಮಣಿಕಂಠ ಗೊದಮನಿ ಪ್ರಸ್ತುತ ಹಾವೇರಿಯ ಗುದ್ದೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ໖.໑ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ೨೦೨೧ ರಲ್ಲಿ ಹೊರಬಂದ ಇವರ 'ಉರಿದೊಡಲ ಬೇಗೆ' ಕವನ ಸಂಕಲನಕ್ಕೆ ವಿದ್ಯಾಸಾಗರ ಬಾಲ ಪುರಸ್ಕಾರ ದೊರೆತಿದೆ. ಸುರಗಿ ಪ್ರತಿಷ್ಠಾನ ಕವನ ಸ್ಪರ್ಧೆಯಲ್ಲೂ ಬಹುಮಾನಿತರಾಗಿದ್ದಾರೆ.
"ಬ್ಲಾಗುಗಳು ಫೇಸ್ಬುಕ್ ಥರದ ವೇದಿಕೆಯಲ್ಲದ ಕಾರಣ ಸಂವಹನ ಸೀಮಿತವಾಗಿತ್ತು. ಆದರೆ ಇಂದಿನ ಹಾಗೆ ಎಲ್ಲವನ್ನೂ ಪ...
"ಬಾಲ್ಯ, ಹದಿಹರೆಯದ, ದುರ್ಬಲ,ದಾಂಪತ್ಯ ಜೀವನದ ಹೆಣ್ಣುಮಕ್ಕಳ ತೊಳಲಾಟವನ್ನು ಅನಾವರಣ ಮಾಡುತ್ತದೆ . ಮುದ್ದಣನ ಮನೋರಮ...
"ಲೇಖಕರ ಹಸ್ತಾಕ್ಷರದ ಪ್ರತಿಯೊಂದಿಗೆ ಓದಲು ಕುಳಿತ ಪ್ರಥಮ ಪುಸ್ತಕವಿದು.....ಗಮನಿಸಿ ನೋಡಿ, ಜಗತ್ತನ್ನು ನೆಗೆಟಿವ್ ...
©2025 Book Brahma Private Limited.