Date: 14-05-2025
Location: ಬೆಂಗಳೂರು
ಮಂಗಳೂರು: ಕವಿ ಮುದ್ದಣನ ನಂದಳಿಕೆಯರೆಂದೇ ಪರಿಚಯಿಸಿಕೊಂಡಿದ್ದ ಬಾಲಚಂದ್ರರಾವ್ ಇಂದು(ಮೇ 14) ಮಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರು ನಂದಳಿಕೆ ಮುದ್ದಣ ಸ್ಮಾರಕ ಮಿತ್ರಮಂಡಳಿಯ ಸ್ಥಾಪಕರಲ್ಲಿ ಓರ್ವರಾಗಿದ್ದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಅವರ ಅಂತಿಮ ದರ್ಶನ ನಾಳೆ (ಮೇ 15) ಗುರುವಾರ ಬೆಳಿಗ್ಗೆ 6ರಿಂದ ಬೆಳಿಗ್ಗೆ ಹತ್ತು ಗಂಟೆಯವರೆಗೆ ಮಂಗಳೂರಿನ ಬಿಜೈನ ಚೌಟಾಸ್ ಕಂಪೌಡಿನಲ್ಲಿರುವ ಅವರ ಸ್ವಗೃಹದಲ್ಲಿರುತ್ತದೆ. ನಂತರ ಕಾರ್ಕಳ ತಾಲೂಕಿನ ನಂದಳಿಕೆಯ ಐಸಿರಿ ಮನೆಯಲ್ಲಿ ಅಂತಿಮ ದರ್ಶನ ವ್ಯವಸ್ಥೆಯಾಗಿದೆ. ಬಳಿಕ ಅಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ.
ಬಾಲಚಂದ್ರರಾವ್ ಹಿನ್ನೆಲೆ: ನಂದಳಿಕೆ ಬಾಲಚಂದ್ರರಾವ್ ಅವರು ಉಡುಪಿ ಜಿಲ್ಲೆಯ ನಂದಳಿಕೆಯವರು. ಕರ್ನಾಟಕ ಬ್ಯಾಂಕಿನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ನಿವೃತ್ತಿಯಾಗಿದ್ದರು. ಮುದ್ದಣ ಸ್ಮಾರಕ ಮಿತ್ರ ಮಂಡಳಿ ಸ್ಥಾಪಕ ಗೌರವಾಧ್ಯಕ್ಷರು. ಮುದ್ದಣ ಸ್ಮಾರಕ ಭವನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದವರು. ಮುದ್ದಣ ಪುರಸ್ಕಾರ ವಿದ್ವತ್ ಸಂಮಾನ ಪರಂಪರೆಯ ಸಂಜೋಜಕರು. ಕವಿ ಮುದ್ದಣ ಸ್ಮಾರಕ ರಚನೆಗಾಗಿ ಡಾ. ಶಿವರಾಮ ಕಾರಂತ ಅವರಿಂದ ಸಂಮಾನ, ಉದಯವಾಣಿ ವಿಂಶತಿ ಪ್ರಶಸ್ತಿ, ಸಂದೇಶ ರಾಜ್ಯ ಪ್ರಶಸ್ತಿ, ದಾವಣಗೆರೆಯ ಪಂಪ ಪ್ರತಿಷ್ಠಾನದಿಂದ ಸಾಂಸ್ಕೃತಿಕ ಶ್ರೀ ಪ್ರಶಸ್ತಿ, ಮುದ್ದಣ-125 ಸಂಸ್ಮರಣೆ ಯಲ್ಲಿ ಕುಶಿ ಅವರಿಂದ ಸಂಮಾನ ಹೀಗೆ ಹಲವು ಗೌರವಗಳಿಗೆ ಪಾತ್ರರಾಗಿದ್ದರು.
ಅವರು ಕವಿ ಮುದ್ದಣನ ಹುಟ್ಟೂರಾದ ನಂದಳಿಕೆಯಲ್ಲಿ ಮುದ್ದಣ ಸ್ಮಾರಕ ಮಿತ್ರಮಂಡಲಿ ಸ್ಥಾಪನೆ ಮಾಡಿ ಅದರ ಮೂಲಕ ಕವಿಯನ್ನು ನೆನಪಿಸುವ ನೂರಾರು ಕಾರ್ಯಕ್ರಮಗಳನ್ನು, ಕೆಲಸಗಳನ್ನು ನಂದಳಿಕೆ ಗ್ರಾಮದಲ್ಲಿ ಮಾಡಿದರು. ಕವಿ ಮುದ್ದಣನ ಸಮಗ್ರ ಕಾವ್ಯ ಸಂಪುಟ ಬಿಡುಗಡೆ, ಮುದ್ದಣ ಮನೋರಮೆಯರ ಸಂಭಾಷಣೆಯ ಡಿವಿಡಿ, ಹುಟ್ಟೂರಿನಲ್ಲಿ ಮುದ್ದಣನ ನೆನಪಿನ ಗ್ರಂಥಾಲಯ, ಮುದ್ದಣ ಸ್ಮಾರಕ, ಮುದ್ದಣನ ಯಕ್ಷಗಾನ ಸಂಪುಟಗಳು, ಪ್ರತೀ ವರ್ಷ ಕವಿ ಮುದ್ದಣ ದಿನಾಚರಣೆ, ಸ್ಟಾಂಪ್ ಬಿಡುಗಡೆ, ಮುದ್ದಣನ ಹೆಸರಲ್ಲಿ ನೂರಾರು ಸಾಹಿತ್ಯಿಕ ಕಾರ್ಯಕ್ರಮಗಳು, ಮುದ್ದಣ ಸ್ಮಾರಕ ಪ್ರಶಸ್ತಿ ಪೀಠ ಸ್ಥಾಪನೆ, ಮಂಗಳೂರು ವಿವಿಯಲ್ಲಿ ಕವಿಯ ನೆನಪಿನ ಅಧ್ಯಯನ ಪೀಠವನ್ನು ಮಾಡಿ ಕವಿಯ ಹೆಸರನ್ನು ಚಿರಸ್ಥಾಯಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...
2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...
ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...
©2025 Book Brahma Private Limited.