Date: 07-08-2025
Location: ಬೆಂಗಳೂರು
ಬೆಂಗಳೂರು: ಬುಕ್ ಬ್ರಹ್ಮ ಸಂಸ್ಥೆಯು ಕೋರಮಂಗಲದ ಸೇಂಟ್ ಜಾನ್ಸ್ ಸಭಾಂಗಣದಲ್ಲಿ ಆಗಸ್ಟ್.8ರಿಂದ 10ರವರೆಗೆ ಹಮ್ಮಿಕೊಂಡಿರುವ ಮೂರು ದಿನಗಳ ದಕ್ಷಿಣ ಭಾರತದ ಭಾಷೆಗಳ ಈ ಮಹಾಸಂಗಮಕ್ಕೆ ಸಕಲ ಸಿದ್ಧತೆಗಳು ನಡೆದಿದೆ. ಆ.8 ಶುಕ್ರವಾರದಂದು ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ 2025’ಕ್ಕೆ ಚಾಲನೆ ಸಿಗಲಿದೆ.
ಸಾಹಿತ್ಯ ಉತ್ಸವದಲ್ಲಿ ಮೂರೂ ದಿನಗಳ ಕಾಲ ಎಂಟು ವೇದಿಕೆಗಳಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
180ಕ್ಕೂ ಹೆಚ್ಚು ಗೋಷ್ಠಿಗಳು, 8 ಸಾಂಸ್ಕೃತಿಕ ಕಾರ್ಯಕ್ರಮಗಳು, 6 ಭಾಷೆಗಳ ಕೃತಿಗಳನ್ನು ಒಳಗೊಂಡ ಪುಸ್ತಕ ಮಳಿಗೆ, ಮಕ್ಕಳ ಸಾಹಿತ್ಯ ಉತ್ಸವ, ಜನಪದ ಮಾರುಕಟ್ಟೆ, ಆಹಾರ ಮಳಿಗೆಗಳು ಇರಲಿವೆ.
ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್, ದೀಪಾ ಭಾಸ್ತಿ, ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ, ದಾಮೋದರ ಮೌಜೋ, ಮ್ಯಾಗ್ಸಸ್ಸೆ ಪ್ರಶಸ್ತಿ ಪುರಸ್ಕೃತ ಟಿ.ಎಂ.ಕೃಷ್ಣ, ಕುಂ ವೀರಭದ್ರಪ್ಪ, ಎಸ್.ದಿವಾಕರ, ಅಡೂರ್ ಗೋಪಾಲಕೃಷ್ಣನ್, ಅಮರೇಶ್ ನುಗಡೋಣಿ, ಬಿ.ಜಯಮೋಹನ್, ಗಿರೀಶ್ ಕಾಸರವಳ್ಳಿ, ಎಚ್.ಎಸ್.ಶಿವಪ್ರಕಾಶ್, ಹರೀಶ್ ಭಟ್, ಇಮಯಂ, ಜಯಂತ ಕಾಯ್ಕಿಣಿ, ಕೆ.ಪಿ.ರಾವ್, ಕೆ.ಸಚ್ಚಿದಾನಂದನ್, ಮಕರಂದ ಸಾಥೆ, ವಿಶ್ವಾಸ್ ಪಾಟೀಲ್ ಮನು ಪಿಳ್ಳೈ, ಎನ್.ಎಸ್.ಮಾಧವನ್, ಪಾಲ್ ಝಕಾರಿಯಾ, ಪೆರಿಮಾಳ್ ಮುರುಗನ್, ಪ್ರಶಾಂತ್ ಪ್ರಕಾಶ್, ರವಿ ಮಂತ್ರಿ, ಶಿಲ್ಪಾ ಮುಡಬಿ, ಸುಧೀಶ್ ವೆಂಕಟೇಶ್, ವಸುಧೇಂದ್ರ, ಜೋಗಿ, ವಿವೇಕ್ ಶಾನಭಾಗ, ವೋಲ್ಗಾ ಅವರನ್ನು ಒಳಗೊಂಡು 350ಕ್ಕೂ ಹೆಚ್ಚು ಸಾಹಿತಿಗಳು ವಿವಿಧ ಗೋಷ್ಠಿಗಳಲ್ಲಿರುತ್ತಾರೆ.
ಲಕ್ಷ್ಮೀ ಚಂದ್ರಶೇಖರ, ಬಿ.ಜಯಶ್ರೀ ತಂಡ, ಪ್ರವೀಣ್ ಗೋಡ್ಕಿಂಡಿ, ಮಾನಸಿ ಪ್ರಸಾದ್, ಟಿ.ಎಂ.ಕೃಷ್ಣ, ಗಣಪತಿ ಭಟ್ ಹಸಣಗಿ ಬಿ ಸ್ಟುಡಿಯೋ ಮತ್ತು ಬೆಂಗಳೂರು ಕ್ಲಬ್ ಆಫ್ ಕಥಕ್ಕಳಿ ಅವರಿಂದು ಒಟ್ಟು 8 ಸಾಂಸ್ಕೃತಿಕ ಕಾರ್ಯಕ್ರಮಗಳು ಮೂರು ದಿನಗಳ ಅವಧಿಯಲ್ಲಿ ನಡೆಯಲಿವೆ.
ದಕ್ಷಿಣ ಭಾರತದ ನಾಲ್ಕು ಭಾಷೆಗಳು ಮತ್ತು ಇಂಗ್ಲಿಷ್ ಒಳಗೊಂಡು ಒಟ್ಟು ಐದು ಭಾಷೆಗಳಲ್ಲಿ ವಿವಿಧ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿ ಮರಾಠಿ ಆಹ್ವಾನಿತ ಭಾಷೆಯಾಗಿದ್ದು, ಆ ಭಾಷೆಯಲ್ಲಿಯೂ ವಿಚಾರ ಗೋಷ್ಠಿಗಳು ನಡೆಯಲಿವೆ. ಕಲಾ ಪ್ರದರ್ಶನ, ಪುಸ್ತಕ ಬಿಡುಗಡೆ ಹಾಗೂ ಲೇಖಕರ ಜತೆಗೆ ಸಂವಾದಗಳು ನಡೆಯಲಿವೆ. ಮುಖ್ಯ ವೇದಿಕೆಯಲ್ಲಿ ಸಾಹಿತ್ಯ ಉತ್ಸವದ ಎಲ್ಲ ಪ್ರಮುಖ ಗೋಷ್ಠಿಗಳು ಮತ್ತು ಎಂಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು: ಮನುಷ್ಯ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗಿ ವಿಭಿನ್ನ ಭಾಷೆಯ ಬರವಣಿಗೆ ಸಮಾಜದ ಪ್ರತಿಬಿಂಬವಾಗಿವೆ. ಓರ್ವ ಉತ್...
ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಡಿ.6 ಮತ್ತು 7ರಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗ...
ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಜನ ಭಾರತ', ಉಷಾ ನರಸ...
©2025 Book Brahma Private Limited.