‘ನಾಗಲದೇವಿ’ ಕನ್ನಡ ಸಾಹಿತ್ಯದಲ್ಲಿ ಮೊದಲ ಚಂಪು ಕಾವ್ಯ ಬರೆದ ಕವಯಿತ್ರಿ: ಕಮಲಾ ಹಂಪನಾ

Date: 26-03-2023

Location: ಬೆಂಗಳೂರು


ಕಮಲಾ ಹಂಪನಾ ಸಾಹಿತ್ಯ ವೇದಿಕೆ ಮತ್ತು ಕರ್ನಾಟಕ ಜೈನ ಅಸೋಸಿಯೇಷನ್‌ ಬೆಂಗಳೂರು ಅವರ ಆಶ್ರಯದಲ್ಲಿ ʻಅಕ್ಕರಗೊಟ್ಟಿಯ ಅಲಂಪಿನ ಇಂಪು ಚಂಪೂ ಕಬ್ಬಗಳ ಹಬ್ಬʼ ಎರಡನೇ ದಿನದ ಕಾರ್ಯಕ್ರಮವು ಬೆಂಗಳೂರಿನ ಕರ್ನಾಟಕ ಜೈನ ಭವನದಲ್ಲಿ ನಡೆಯಿತು.

ಕಮಲಾ ಹಂಪನಾ ‘ ನಾಗಲದೇವಿ - ಷೋಡಶ ಭಾವನಾ’ ವಿಷಯದ ಕುರಿತು ಮಾತಾನಾಡಿ ‘ನಾಗಲದೇವಿ’ ಕನ್ನಡ ಸಾಹಿತ್ಯದಲ್ಲಿ ಮೊದಲ ಚಂಪು ಕಾವ್ಯವನ್ನು ಬರೆದ ಕವಯಿತ್ರಿ. ಆದರೆ ಅವರ ಪರಿಚಯ ಕನ್ನಡ ಸಾಹಿತ್ಯದಲ್ಲಿ ಇಲ್ಲ ಎನ್ನುವಂತಹದ್ದು ಬಹಳ ಬೇಸರ ಸಂಗತಿ. ನಾಗಲದೇವಿ ಷೋಡಶ ಭಾವನ ಕಾವ್ಯದಲ್ಲಿ ಮಹಿಳಾಪರ ಚಿಂತನೆಗಳು ಅಡಗಿವೆ. ಮತಾಂಧ, ಕುರುಪಿ ಹೆಣ್ಣುಮಗಳ ಕಥೆಯನ್ನು ಬಹಲ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ’ ಎಂದರು.

ಪದ್ಮಪ್ರಸಾದ್‌ ಎಸ್.ಪಿಕರ್ಣಾಭರಣ ಸೂರಿ - ನೇಮಿನಾಥ ಪುರಾಣ’ ಕುರಿತು ಮಾತಾನಾಡಿ ‘ ನೇಮಿಚಂದ್ರದಲ್ಲಿ ಕರ್ಣಪಾರ್ಯ ಹೆಸರು ಹೇಗೆ ಪ್ರಸಿದ್ಧಿಯಾಗಿತ್ತು , ಅದೇ ಕವಿಯ ಇನ್ನೊಂದು ನಾಮ ಕರ್ಣಾಭರಣ ಸೂರಿ. ಈ ಕಾವ್ಯದಲ್ಲಿ ಸಮಾಜದ ಆಗುಹೋಗುಗಳ ಬಗ್ಗೆ ಬಹಳ ವಿಮರ್ಶತ್ಮಕವಾಗಿ ಬರೆದಿದ್ದಾನೆ ಎಂದು ಕರ್ಣಾಭರಣ ಸೂರಿ ಕವಿಯ ಬಗ್ಗೆ ತಿಳಿಸಿಕೊಟ್ಟರು.

ಲಕ್ಷ್ಮೀನಾರಾಯಣ ಆರ್ ‘ರುದ್ರಭಟ್ಟ - ಜಗನ್ನಾಥ ವಿಜಯ’ ಕುರಿತು ಮಾತಾನಾಡಿ ‘ರುದ್ರಭಟ್ಟನ ಬಗ್ಗೆ ಯಾವುದರಲ್ಲಿಯೂ ಅಷ್ಟು ನಿಖರವಾದ ಮಾಹಿತಿ ಇಲ್ಲ. ಇತನು ಪ್ರಸಿದ್ಧಿ ಪಡೆದಂತಹ ಕವಿ ಅಲ್ಲ . ವೈದಿಕ ಪುರಾಣವನ್ನು ಕಾವ್ಯವಾಗಿಸಿದಂತಹ ಮೊಟ್ಟ ಮೊದಲ ಬ್ರಾಹ್ಮಣ ಕವಿ. ರುದ್ರಭಟ್ಟ ಕೇವಲ ಶುಷ್ಕ ಪಂಡಿತನಲ್ಲ ಆತನು ಉತ್ತಮ ಕಥೆಗಾರ ಎಂದು ‘ರುದ್ರಭಟ್ಟ - ಜಗನ್ನಾಥ ವಿಜಯ ಬಗ್ಗೆ ತಿಳಿಸಿದರು.

ಹಿರಿಯ ಸಾಹಿತಿ ಹಂಪನಾ ‘ಬಂಧುವರ್ಮ - ಜೀವಸಂಬೋಧನೆ’ ವಿಷಯದ ಕುರಿತು ಮಾತಾನಾಡಿ ಒಂದು ಉತ್ತಮ ಕಾವ್ಯವಾಗಬೇಕೆಂದರೆ ಯಾವೆಲ್ಲ ಅಂಶಗಳನ್ನು ಒಳಗೊಂಡಿರಬೇಕೆಂದು ಪಂಪನು ತನ್ನ ಕಾವ್ಯದಲ್ಲಿ ಬಹಳ ಸುಂದರವಾಗಿ ತಿಳಿಸಿಕೊಟ್ಟಿದ್ದಾನೆ. ಅವನ ಹೊರತಾಗಿ ಬಂಧುವರ್ಮ ಉತ್ತಮ ಕಾವ್ಯದ ಬಗ್ಗೆ ಪ್ರಸ್ತಾಪಿಸದವನಲ್ಲಿ ಒಬ್ಬ. ಆತನ ಜೀವಸಂಬೋಧನೆ ಕೃತಿಯು ಈ ವಿಚಾರಗಳ ಬಗೆಗೆ ಬಹಳ ವಿಸ್ತಾವಾಗಿ ತಿಳಿಸುತ್ತದೆ’ ಎಂದರು.

ವಿಮರ್ಶಕ ಎಚ್.ಎಸ್. ರಾಘವೇಂದ್ರರಾವ್‌ ‘ ಹರಿಹರ - ಗಿರಿಜಾ ಕಲ್ಯಾಣ’ ಬಗ್ಗೆ ಮಾತಾನಾಡಿ ‘ ಹರಿಹರ ಕನ್ನಡ ಕಾವ್ಯದ ಮಹತ್ವದ ಕವಿ. ಕನ್ನಡ ಕಾವ್ಯ ಪರಂಪರೆಗೆ ಕೆಲವು ಅಪರೂಪದ ಬದಲಾವಣೆಗಳನ್ನು ತಂದು ಕೊಟ್ಟವರು. ಕನ್ನಡದಲ್ಲಿ ಮೊದಲ ಬಾರಿಗೆ ದ್ರಾವಿಡ ಜನಾಂಗದ ಸಂಸ್ಕೃತಿಗಳನ್ನು ಪರಿಚಯಿಸಿದವರಲ್ಲಿ ಮೊದಲಿಗ ಹರಿಹರ. ಇತನ ಕೃತಿಗಳು ಏಕೆ ಭಿನ್ನವೆಂದರೆ ಗದ್ಯಗಳನ್ನು ಬಹಳ ಸರಳವಾಗಿ ಬರೆಯಬಲ್ಲಂತಹ ಕವಿಯಾಗಿದ್ದನು ಎಂದು ಹರಿಹರ - ಗಿರಿಜಾ ಕಲ್ಯಾಣದ ಬಗ್ಗೆ ತಿಳಿಸಿದರು.

ಶ್ರೀಧರಹೆಗಡ ಭದ್ರನ್‌ ‘ಆಂಡಯ್ಯ - ಕಬ್ಬಿಗರಕಾವ್ಯ’ ಕುರಿತು ಮಾತಾನಾಡಿ ‘ ಮಧ್ಯಕಾಲೀನ ಸಂದರ್ಭದ ಬಹಳ ಮಹತ್ವದ ಕವಿ. ಆಂಡಯ್ಯನ ಕಾವ್ಯದ ವಸ್ತು ಹರಿಹರ - ಗಿರಿಜಾ ಕಲ್ಯಾಣಕ್ಕೆ ವ್ಯತಿರಿಕ್ತವಾದುದು. ಇನ್ನು ಈತನ ಹೆಸರಿನ ಬಗೆಗೆ ಅನೇಕ ಊಹಾಪೋಹಗಳಿವೆ . ಕಬ್ಬಿಗರ ಕಾವ್ಯಕ್ಕೆ ಮದನ ಕಾವ್ಯ ಎಂಬ ಹೆಸರು ಕೂಡ ಬಂದಿದೆ ಎಂದು ಆಂಡಯ್ಯ - ಕಬ್ಬಿಗರಕಾವ್ಯ ಬಗ್ಗೆ ವಿಷಯ ಮಂಡಿಸಿದರು.

ಬರಹಗಾರ್ತಿ ಲಲಿತಾಂಬ ಎನ್.ಆರ್‌ ‘ಷಡಕ್ಷರದೇವ - ರಾಜಶೇಖರ ವಿಳಾಸ’ ಬಗ್ಗೆ ಮಾತಾನಾಡಿ ಷಡಕ್ಷರದೇವನು ತನ್ನ ಕಾವ್ಯಗಳಲ್ಲಿ ಯಾವುದೇ ನರರನ್ನು ಸುರರನ್ನು ಕೊಂಡಾಡದೇ ತನ್ನ ಕಾವ್ಯಗಳನ್ನು ರಚಿಸುತ್ತೇನೆಂದು ತಿಳಿಸಿದವನು. ಕಾವ್ಯದಲ್ಲಿ ಭಕ್ತರು , ಶಿವರು ಶರಣರನ್ನು ಬಳಸಿಕೊಂಡೆ ಕಾವ್ಯಗಳನ್ನು ರಚಿಸಿದನು. ಇತನು ಜಾನಪದ ಸೊಗಡುಗಳನ್ನು ತನ್ನ ಕೃತಿಗಳಲ್ಲಿ ಬಹಳ ಚೆನ್ನಾಗಿ ವಿವರಿಸಿದ್ದಾನೆ’ ಎಂದರು.

ಕಾರ್ಯಕ್ರಮವನ್ನು ಫೇಸ್ ಬುಕ್ ಮೂಲಕ ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ...
ಕಾರ್ಯಕ್ರಮವನ್ನು ಯುಟ್ಯೂಬ್ ಮೂಲಕ ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ...

ಕಾರ್ಯಕ್ರಮದ ಪೋಟೋ :

 






MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...