ನನ್ನ ದೃಷ್ಟಿಯಲ್ಲಿ ಮಹಾಭಾರತ ಕಂಡ ಬಗೆಯನ್ನು ‘ಪರ್ವ’ದಲ್ಲಿ ವಿವರಿಸಿದ್ದೇನೆ: ಎಸ್.ಎಲ್.ಭೈರಪ್ಪ

Date: 01-10-2023

Location: ಬೆಂಗಳೂರು


ಬೆಂಗಳೂರು: ಖ್ಯಾತ ಕಾದಂಬರಿಗಾರ್ತಿ ಸಹನಾ ವಿಜಯಕುಮಾರ್‌ ಅವರ ನಿರೂಪಣೆಯಲ್ಲಿ ‘ಭೈರಪ್ಪನವರ ಕಾದಂಬರಿ ಶ್ರೇಣಿಯಲ್ಲಿ ಪರ್ವದ ಸಂದರ್ಭದ ಕುರಿತು ಅವಲೋಕನ’ ಒಂದಿಷ್ಟು ಮಾತು-ಕತೆ, ಅನುಭವಗಳ ಅನಾವರಣ ಕಾರ್ಯಕ್ರಮವು 2023 ಸೆಪ್ಟೆಂಬರ್ 01, ಭಾನುವಾರದಂದು ನಗರದ ಚೌಡಯ್ಯ ಮೆಮೋರಿಯಲ್‌ ಹಾಲ್‌ ನಲ್ಲಿ ನೆರವೇರಿತು.

ಹಿರಿಯ ಕಾದಂಬರಿಕಾರ, ಸಾಹಿತಿ ಎಸ್.ಎಲ್. ಭೈರಪ್ಪ 'ಪರ್ವ' ಕಾದಂಬರಿಯ ಕುರಿತು, ''ವ್ಯಾಸ ಭಾರತದಲ್ಲಿ ಮಹಾಭಾರತವನ್ನು ಭಿನ್ನವಾಗಿ ಕಟ್ಟಿಕೊಟ್ಟಿದ್ದು, ಇದೊಂದು ವಿಚಾರ ವಿಸ್ತರಣೆಯನ್ನು ನಂಬಿಸಿಕೊಡುವ ಕ್ರಿಯೆಯಾಗಿದೆ. ನನ್ನ ದೃಷ್ಟಿಯಲ್ಲಿ ಮಹಾಭಾರತ ಕಂಡ ಬಗೆಯನ್ನು ‘ಪರ್ವ’ದಲ್ಲಿ ವಿವರಿಸಿದ್ದೇನೆ. ಈ ಸಂದರ್ಭದಲ್ಲಿ ನನಗೆ ಬಹಳ ಸವಾಲೆನ್ನಿಸಿದ್ದು ಪಾತ್ರಗಳ ವಯಸ್ಸು ಹಾಗೂ ಅವರ ವೇಷಭೂಷಣ. ವಯಸ್ಸಿನ ಮಿತಿಯನ್ನು ತಿಳಿಯಲು ನಾನು ಮಹಾಭಾರತದ ಹಿರಿಯ ಹಾಗೂ ಅತೀ ಕಿರಿಯನ ವಯಸ್ಸನ್ನು ಮೊದಲು ಅಂದಾಜಿಸಿದೆ. ನಂತರದಲ್ಲಿ ಪ್ರತಿಯೊಂದು ಪಾತ್ರಗಳ ವಯಸ್ಸನ್ನು ದಾಖಲಿಸಿದೆ. ಹಲವಾರು ಊರುಗಳನ್ನು ಸುತ್ತಿ ಬರೆದಿರುವ ಕಥನ ‘ಪರ್ವ’. ಇದರಿಂದ ನನ್ನ ಪ್ರೀತಿ ಭಾರತದ ಕುರಿತು ಹೇರಳವಾಗಿದೆ. ಭಾರತದ ಅಂಗವಾಗಿ ನಾನೊಬ್ಬ ಕನ್ನಡಿಗ. ಇನ್ನು ಲೇಖಕನಾದವನಿಗೆ ಅನುಭವ ಜಗತ್ತಿನ ಪರಿಚಯವಿರಬೇಕು. ಆಗ ಮಾತ್ರ ಆತ ನಿಜವಾದ ಬರಹಗಾರನಾಗುತ್ತಾನೆ. ಅನುಭವದಿಂದ ಹೊರಬಂದ ಹೂರಣ ಎಂದಿಗೂ ಶ್ರೇಷ್ಟವಾಗಿರುತ್ತದೆ,” ಎಂದರು.

‘ಪರ್ವ’ ಕಾದಂಬರಿಗೆ ರಂಗರೂಪ ನೀಡುತ್ತಿರುವ ಪ್ರಕಾಶ್ ಬೆಳವಾಡಿ ಅವರ ಯೋಚನೆ ಬಹಳ ಭಿನ್ನವಾಗಿದೆ. ಇಂಗ್ಲೀಷ್ ಭಾಷೆಯಲ್ಲಿ ಭಾವನೆಯನ್ನು ವ್ಯಕ್ತಪಡಿಸಲು ಸಮಯ ಹಾಗೂ ಪದಗಳ ಬಳಕೆ ಹೆಚ್ಚಿರಬೇಕು. ಆದರೆ ಇದೆಲ್ಲವನ್ನೂ ಮೀರಿ ಅವರು ಈ ನಾಟಕವನ್ನು ಮಾಡಲು ಕಾರ್ಯಪ್ರವೃತ್ತರಾಗಿದ್ದಾರೆ. ನಾಟಕ ಹೇಗೆ ಬೆಳಿಯಬೇಕು, ಯಾವ ರೀತಿ ಮಾಡಬೇಕು ಎಂಬುವುದರ ಕುರಿತು ನನ್ನೊಂದಿಗೆ ಚರ್ಚೆ ಮಾಡಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣ ‘ಪರ್ವ’ ಕಾದಂಬರಿಯ ನಾಟಕದ ಗುಣ. ಕಾದಂಬರಿಯೆಂದರೇ ಎಲ್ಲಾ ಸತ್ವಗಳನ್ನು ಕಟ್ಟಿಕೊಡುವ ಸಾಹಿತ್ಯ. ಇದರಲ್ಲಿ ನಾಟಕವು ಒಂದು. ನಾಟಕವಿರದಿದ್ದರೆ ಅದು ಸಂಪೂರ್ಣವಾಗುವುದಿಲ್ಲ. ನಾನು ನಾಟಕದ ಕಲೆಯನ್ನು ಕಲಿತ್ತಿದ್ದರಿಂದ ಅದರ ಬಿಗಿ ಹಾಗೂ ಶೈಲಿ ನನಗೆ ಗೊತ್ತಿತ್ತು. ಪರ್ವ ಕಾದಂಬರಿಯಲ್ಲಿ ನಾಟಕದ ಗುಣ ಸಹಜವಾಗಿ ಬಂತು. ಕಾದಂಬರಿಯಲ್ಲಿರುವ ಶಬ್ಧ ಹಾಗೂ ಗುಣಗಳನ್ನು ಪರ್ವ ನಾಟಕದಲ್ಲಿ ರಸವತ್ತಾಗಿ ಬಳಸಿದ್ದಾರೆ,” ಎಂದು ತಿಳಿಸಿದರು.

ಖ್ಯಾತ ನಿರ್ದೇಶಕ ಪ್ರಕಾಶ್‌ ಬೆಳವಾಡಿ, “ಆಂಗ್ಲ ಅವತರಣಿಕೆಯಲ್ಲಿ ಪರ್ವವನ್ನು ರಂಗಕ್ಕೆ ತಂದ ಬಗೆ ಕುರಿತು ಮಾತನಾಡಿ, ಮಹಾಭಾರತವನ್ನು ರಂಗರೂಪದಲ್ಲಿ ಕಟ್ಟಿಕೊಡುವುದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ನಿರೂಪಣೆ, ತಂತ್ರ ಹಾಗೂ ರಂಗ ವಿನ್ಯಾಸದ ಪರಿಯನ್ನು ಕಟ್ಟಿಕೊಡುವುದು ಸಾಹಸವಾಗಿತ್ತು. ಇದನ್ನು ಕೃತಿಯ ರೂಪದಲ್ಲಿ ನೀಡಿರುವ ಭೈರಪ್ಪ ಅವರು ನಿಜಕ್ಕೂ ಭಾರತದ ಶ್ರೇಷ್ಠ ಬರಹಗಾರರು. ಕಾದಂಬರಿಯನ್ನು ಬಿಟ್ಟು ಬಿಟ್ಟು ಹೋದಬಹುದು, ಆದರೆ ನಾಟಕವನ್ನು ನೋಡಲಾಗುವುದಿಲ್ಲ,” ಎಂದರು.

ಖ್ಯಾತ ಕಾದಂಬರಿಗಾರ್ತಿ ಸಹನಾ ವಿಜಯಕುಮಾರ್ ಅವರು, ‘ಪರ್ವ’ ಕಾದಂಬರಿ ಹುಟ್ಟಿಕೊಂಡ ಬಗೆ, ಸ್ತ್ರೀ ಪಾತ್ರಗಳ ಸಂವೇದನೆ, ಇಂಗ್ಲೀಷ್ ಹಾಗೂ ಕನ್ನಡ ‘ಪರ್ವ’ ರಂಗ ಪ್ರವೇಶದ ಅನುಭವ ಮತ್ತು ಕಟ್ಟುವಿಕೆಯ ಸವಾಲುಗಳು, ರಂಗದಲ್ಲಿ ಪಾತ್ರಧಾರಿಗಳ ಕಟ್ಟುವಿಕೆ ಹೀಗೆ ಹಲವು ವಿಚಾರಗಳ ಕುರಿತು ಸಂವಾದ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಫೇಸ್ ಬುಕ್ ಆನ್ ಲೈನ್ ಮೂಲಕ ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ..
ಕಾರ್ಯಕ್ರಮವನ್ನು ಯುಟ್ಯೂಬ್ ಮೂಲಕ ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ

MORE NEWS

ಸಾಹಿತ್ಯ ಕೃತಿಗಳು ಸಮಾಜದ ಹಲವು ಮುಖಗಳನ್ನು ತೋರಿಸುವ ಶಕ್ತಿ ಪಡೆದಿವೆ; ದೀಪಾ ಭಾಸ್ತಿ

13-12-2025 ಬೆಂಗಳೂರು

ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...

2026ನೇ ಸಾಲಿನ ಟೊಟೊ ಪುರಸ್ಕಾರದ ಮೊದಲನೇ ಪಟ್ಟಿ ಬಿಡುಗಡೆ

12-12-2025 ಬೆಂಗಳೂರು

2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...

ಮಕ್ಕಳಲ್ಲಿ ಕಲ್ಪನಾ ಲೋಕ ಬೆಳೆಸಿ: ಬಸು ಬೇವಿನಗಿಡದ

10-12-2025 ಧಾರವಾಡ

ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...