ನೆತ್ತರಿನಿಂದ ಕಲೆ ಅರಳಿಸುವ ಕಲಾಕಾರ ಮದನ್ ದೇವಾಡಿಗ


ಕಲೆಗೆ ಬಡವ ಶ್ರೀಮಂತ ಎಂಬ ಭೇದ, ಭಾವವಿಲ್ಲ ಅದು ಅರ್ಹರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಇಂತಹದ್ದೇ ಕಲಾಕಾರರ ಸಾಲಿಗೆ ಸೇರುತ್ತಾರೆ ಈ ಮದನ್ ದೇವಾಡಿಗ ಎನ್ನುತ್ತಾರೆ ದಿವ್ಯ ದೇವಾಡಿಗ. ಅವರು ಈ ಚಿತ್ರ ಕಲಾವಿದರ ಕುರಿತು ಬರೆದ ಲೇಖನ ನಿಮ್ಮ ಓದಿಗಾಗಿ.

ಕಲೆಗೆ ಬಡವ ಶ್ರೀಮಂತ ಎಂಬ ಭೇದ, ಭಾವವಿಲ್ಲ ಅದು ಅರ್ಹರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಇಂತಹದ್ದೇ ಕಲಾಕಾರರ ಸಾಲಿಗೆ ಸೇರುವ ಈತನ ಹೆಸರು ಮದನ್. ಕೈಯಲ್ಲಿ ಪೆನ್ಸಿಲ್ ಹಿಡಿದು ಬಿಳಿ ಹಾಳೆ ಮೇಲೆ ಬಣ್ಣಗಳ ಚಿತ್ರೀಸುವವ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ತೊಡೆಮಕ್ಕಿಯಲ್ಲಿ ಜನಿಸಿ, ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಲ್ಲೇ ಮುಗಿಸಿ ಈಗ ಬೆಂಗಳೂರಿನಲ್ಲಿ ಎನಿಮೇಷನ್‌ ಪದವಿ ಓದುತ್ತಿದ್ದಾರೆ. ಪ್ರತಿಯೊಂದು ವಿಷಯಕ್ಕೂ ತಂದೆ ತಾಯಿಯ ಮೇಲೆ ಅವಲಂಬಿತರಾಗುವ ಮಕ್ಕಳಿರುವಾಗ ಈತ ಮಾತ್ರ ಕಲೆಯ ಮೂಲಕ ಸಂಪಾದನೆ ಮಾಡಿ ತನ್ನ ಸ್ವಂತ ಖರ್ಚು ನೋಡಿಕೊಳ್ಳುವುದರ ಜೊತೆಗೆ ತಂದೆ ತಾಯಿಗೂ ಆರ್ಥಿಕ ನೇರವು ನೀಡುತ್ತಿರುವುದು ವಿಶೇಷ.

ನಾಲ್ಕನೆ ತರಗತಿಯಲ್ಲಿ ಪ್ರಾರಂಭವಾದ ಚಿತ್ರಕಲೆಗೆ ಹೆಚ್ಚಿನ ಪ್ರೋತ್ಸಾಹ ದೊರೆತದ್ದು ಲಾಕ್‌ಡೌನ್ ಸಮಯದಲ್ಲಿ , ಕೇವಲ ಸಮಯ ಕಳೆಯಲು ಆರಂಭವಾದ ಕಲೆ ಈಗ ಹವ್ಯಾಸವಾಗಿ ಮಾರ್ಪಟ್ಟಿದೆ ಹಾಗೂ ಆದಾಯದ ಮೂಲವಾಗಿದೆ.ಮುಖ್ಯವಾಗಿ ಸ್ನೇಹಿತರ ಬೆಂಬಲದಿಂದ ರಚಿಸಿದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಆ ಪರಿಣಾಮವಾಗಿ ಚಿತ್ರಕಲೆಯಿಂದಲೇ ತಿಂಗಳಿಗೆ ಸುಮಾರು ಹದಿನೈದು ಸಾವಿರ ದುಡಿಯುತ್ತಿದ್ದಾರೆ. ಚಿತ್ರಕಲೆಯಲ್ಲಿ ಭಾವಚಿತ್ರ, ಪೆನ್ಸಿಲ್ ಆರ್ಟ್, ವಾಲ್ ಆರ್ಟ್, ಕ್ಲೇ ಆರ್ಟ್ಗಳ ಸೇರಿದಂತೆ ವಿಭಿನ್ನ ಚಿತ್ರಕಲೆಯ ಮೂಲಕ ಜನಮನ್ನಣೆಗಳಿಸಿದ್ದಾರೆ . ಪೆನ್ಸಿಲ್ ಆರ್ಟ್ ಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಈತನಿಗೆ ಅದರಲ್ಲೇ ಮುಂದುವರೆಯಬೇಕೆಂಬ ಆಶಯ. ದಿಶಾ ಅಮ್ರಿತ್, ವಿರಾಟ್ ಕೊಹ್ಲಿ, ಗುರುರಾಜ್ ಗಂತಿಹೊಳೆ, ಸೇರಿದಂತೆ ಇವರು ಬಿಡಿಸಿರುವ ರಾಜಕೀಯ, ಸಿನಿರಂಗ ಹಾಗೂ ಬೇರೆ ಬೇರೆ ಕ್ಷೇತ್ರಗಳ ಗಣ್ಯರ ಚಿತ್ರಗಳು ಮನಸುರೆಗೊಳ್ಳುವಂತಿವೆ.

ರಕ್ತದಲ್ಲೇ ಬಿಡಿಸಿದ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ ಚಿತ್ರ

ಕಲಾಕಾರರು ಸಾಮಾನ್ಯವಾಗಿ ಪೆನ್ಸಿಲ್, ಪೆನ್ನು, ಬಣ್ಣಗಳನ್ನು ಬಳಸಿ ಚಿತ್ರಗಳನ್ನು ಬಿಡಿಸುವುದು ಗೊತ್ತಿರುವ ವಿಷಯ ಆದರೆ ಈ ಹುಡುಗ ತನ್ನ ರಕ್ತವನ್ನು ಬಳಸಿ ಬಿಡಿಸಿದ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ ಚಿತ್ರ ಎರಡು ತಿಂಗಳ ಹಿಂದೆ ಬಾರಿ ಸುದ್ದಿ ಮಾಡಿತ್ತು. ಇವನ ಈ ಬ್ಲಡ್ ಆರ್ಟ್ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗಳಿಸಿತ್ತು. ಸೋಶಿಯಲ್ ಮೀಡಿಯಾಗಳಲ್ಲಿ ಇವರ ಈ ಕಲೆ ಪ್ರಚಾರವಾಗುತ್ತಿದಂತೆ ಕರ್ನಾಟಕ ಸೇರಿ ಕೇರಳ, ಮಹಾರಾಷ್ಟ್ರ , ಇನ್ನಿತರ ಹೊರ ರಾಜ್ಯಗಳಿಂದಲೂ ಬೇಡಿಕೆಯ ಮಳೆ ಸುರಿದು ಬರುತಿದೆ.

ಈ ಹುಡುಗನ ಪರಿಶ್ರಮ ಇಷ್ಟಕ್ಕೆ ನಿಂತಿಲ್ಲ ಬೇಸಿಗೆಯ ರಜಾ ದಿನಗಳಲ್ಲಿ ಚಿತ್ರ ಕಲೆಯಲ್ಲಿ ಆಸಕ್ತಿಯಿರುವ ಶಾಲಾ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರವನ್ನು ಆಯೋಜಿಸಿ ತನ್ನ ಕಲೆಯನ್ನು ಆಸಕ್ತ ವಿದ್ಯಾರ್ಥಿಗಳಿಗೆ ದಾರೆಯೆರೆಯುತ್ತಿದ್ದಾರೆ. ಜೀವನದಲ್ಲಿ ಯಾವುದು ನಮ್ಮ ಕೈ ಬಿಟ್ಟರು ಕಲಿತ ವಿದ್ಯೆಗಳು ಎಂದಿಗೂ ಕೈ ಬಿಡಲಾರವು ಎಂಬ ಮಾತಿನಂತೆ ಈ ಹುಡುಗನ ಸಾಧನೆ ಆಕಾಶದೆತ್ತರಕ್ಕೆ ವಿಸ್ತರಿಸಲಿ, ಕಲಾಸರಸ್ವತಿ ಸದಾ ಆಶೀರ್ವದಿಸಲಿ, ತಂದೆ ತಾಯಿಗಳಿಗೆ ಹೆಮ್ಮೆ ತಂದುಕೊಡಲಿ ಎಂಬುವುದೇ ನನ್ನ ಆಶ್ರಯ.


-ದಿವ್ಯ ದೇವಾಡಿಗ

MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...