"ಕಾವ್ಯದ ಬಗ್ಗೆ ಭವ್ಯಳದ್ದು ಯಾವಗಲೂ ಕುತೂಹಲದ ಕಣ್ಣು. ಕಾವ್ಯ ಏನೇನಾಗಬಲ್ಲದು? ಗೆಳತಿ/ಗೆಳೆಯ, ಪ್ರೇಮಿ, ತಾಯಿ, ಗುರು ಏನೆಲ್ಲವೂ ಆಗಬಲ್ಲ ಕಾವ್ಯದ ಕುರಿತು ಭವ್ಯ ಕವಿತೆ ಕಟ್ಟುತ್ತಾಳೆ, ಆಳಕ್ಕಿಳಿಯುತ್ತಾಳೆ, ಓದುಗರನ್ನು ಯೋಚನೆಗೆ ಹಚ್ಚುತ್ತಾಳೆ, ತನ್ನ ಕಾವ್ಯ ಕೌತುಕದ ಕುರಿತು ಬೆರಗು ಹುಟ್ಟಿಸುತ್ತಾಳೆ," ಎನ್ನುತ್ತಾರೆ ಶ್ರುತಿ ಬಿ.ಆರ್. ಅವರು ಭವ್ಯ ಕಬ್ಬಳಿ ಅವರ ʻದೇವರ ತೇರಿಗೂ ಗಾಲಿಗಳು ಬೇಕುʼ ಕೃತಿ ಕುರಿತು ಬರೆದ ವಿಮರ್ಶೆ.
ನಮ್ಮ ಹಾಸನದ ಹುಡುಗಿ ಭವ್ಯ ಕಬ್ಬಳಿಯ ಕವಿತೆಗಳನ್ನು ಬಹಳ ಹಿಂದೆ ಅವಧಿಯಲ್ಲಿ ಓದಿ ಮೆಚ್ಚಿದ್ದೆ, ಭವ್ಯಳ ‘ನನ್ನೂರಿನ ಗೌರಕ್ಕ’ ಕವಿತೆ ನನಗೆ ಅಚ್ಚುಮೆಚ್ಚು. I am not a poet ಎನ್ನುವ ಈ ಕವಿಯ ಪದ್ಯಗಳೆಲ್ಲ ಒಂದೆಡೆ ಸೇರಿ ‘ದೇವರ ತೇರಿಗೂ ಗಾಲಿಗಳು ಬೇಕು’ ಸಂಕಲನವಾಗಿದೆ. ಪುಸ್ತಕದ ಮುಖಪುಟದಷ್ಟೇ ಚಂದದ ಪದ್ಯಗಳಿವೆ. ಭವ್ಯ ತನ್ನ ಕವಿತೆಗಳನ್ನು ಹಲವು ಭಾಗಗಳಾಗಿ ಗುರುತಿಸಿ, ಪ್ರತಿ ಭಾಗಕ್ಕೂ ಹೆಸರು ನೀಡಿದ್ಧಾಳೆ, ಕವಿ & ಕವಿತೆ, ದೇವರು, ಬದುಕು, ಅವನು-ಅವಳು ಹೀಗೆ...
ಕಾವ್ಯದ ಬಗ್ಗೆ ಭವ್ಯಳದ್ದು ಯಾವಗಲೂ ಕುತೂಹಲದ ಕಣ್ಣು. ಕಾವ್ಯ ಏನೇನಾಗಬಲ್ಲದು? ಗೆಳತಿ/ಗೆಳೆಯ, ಪ್ರೇಮಿ, ತಾಯಿ, ಗುರು ಏನೆಲ್ಲವೂ ಆಗಬಲ್ಲ ಕಾವ್ಯದ ಕುರಿತು ಭವ್ಯ ಕವಿತೆ ಕಟ್ಟುತ್ತಾಳೆ, ಆಳಕ್ಕಿಳಿಯುತ್ತಾಳೆ, ಓದುಗರನ್ನು ಯೋಚನೆಗೆ ಹಚ್ಚುತ್ತಾಳೆ, ತನ್ನ ಕಾವ್ಯ ಕೌತುಕದ ಕುರಿತು ಬೆರಗು ಹುಟ್ಟಿಸುತ್ತಾಳೆ. ಈ ಕವಿ ಕವಿತೆಗೆ ರೆಕ್ಕೆ ಕಟ್ಟುತ್ತಾಳೆ, ತುತ್ತಿಡುತ್ತಾಳೆ, ಜೋಗುಳ ಹಾಡುತ್ತಾಳೆ, ಹುಡುಕಿ ತಂದು ಶಿಕ್ಷೆ ನೀಡುತ್ತಾಳೆ. ಇವಳ ಕಾವ್ಯ ಸಖ್ಯ ಎಷ್ಟೊಂದು ಘಾಡ…
“ ಕವಿ ಎಲ್ಲಾ ಕವಿತೆಗಳಿಗೊಂದು ಕವಿತೆ ಕಟ್ಟಿ
ಜೋಗುಳ ಹಾಡಿ ಮತ್ತೆ ಮಲಗಿಸಿಬಿಟ್ಟ.
ಅರೆ ನಿದ್ರೆಯಲ್ಲಿ ಎಚ್ಚರಗೊಂಡ ಕವಿತೆಯೊಂದು
ಕವಿಗೆ ಮಡಿಲಾಗುತ್ತದೆ ”
(ಕವಿತೆಗೊಂದು ಜೋಗುಳ)
“ ಹೊರಟು ನಿಂತವನಿಗೆ
ಕೊಡಲೇನು ಉಳಿದಿಲ್ಲ
ಹುಡುಕಿದರೆ ಸಿಗಬಹುದು ನಾಲ್ಕು ಕವಿತೆ”
(ಕೂಗಿದರೆ ಬರಬಹುದೆ)
ಈ ಕವಿಗೆ ಉಡುಗೊರೆ ಕೊಡಲೂ ಹೊಳೆಯಬಹುದಾದ್ದು ಕಾವ್ಯವಲ್ಲದೇ ಮತ್ತೇನು. ಈ ಕಾವ್ಯ ಪ್ರಿಯೆ ಮನುಷ್ಯತ್ವಕ್ಕೆ, ಆಶಾವಾದಕ್ಕೆ ತನ್ನದೇ ಹೊಸ ರೂಪಕಗಳ ಸಾಲು ಸಾಲು ಸೋಪಾನ ಕಟ್ಟುತ್ತಾಳೆ
“ ಬೆಳಕ ಕಾಣಲು
ಯತ್ನಗಳಿರಬೇಕು
ಸಾಗಲು
ದೇವರ ತೇರಿಗೂ
ಗಾಲಿಗಳು ಬೇಕು”
(ದೇವರ ತೇರಿಗೂ ಗಾಲಿಗಳು ಬೇಕು)
“ಹಸಿವಿಗೂ ಒಂದು
ಪ್ರತ್ಯೇಕ ಭಾಷೆಯಿದೆ
ಆದರದು ಯಾವಾಗಲೂ
ಮೌನವಾಗಿ ಇದ್ದುಬಿಡುತ್ತದೆ”
ಭವ್ಯಳ “ದೇವರ ತೇರಿಗೂ ಗಾಲಿಗಳು ಬೇಕು” ಸಂಕಲನದಲ್ಲಿ ಮುದಗೊಳಿಸುವ, ಕಾಡಿಸುವ, ಕರಗಿಸುವ ಹತ್ತಾರು ಪದ್ಯಗಳಿವೆ, ನೆನಪಿನಲ್ಲಿ ಉಳಿಯುವ ಹಲವಾರು ಸಾಲುಗಳಿವೆ. ಧನ್ಯವಾದಗಳು ಭವ್ಯ ಒಂದು ಚಂದದ ಸಂಕಲನಕ್ಕಾಗಿ.
"ಕದಡಿದ ಕೊಳವು ತಿಳಿಯಾಗಿರಲು (ಬಿಡಿ ಬರಹ, ಪ್ರಬಂಧ) ಓದಿದೆ. ಇಲ್ಲಿನ ಹೆಚ್ಚಿನ ಲೇಖನಗಳನ್ನು ನಾನು ಈ ಮೊದಲೇ ಓದಿದ್...
"ಪುಸ್ತಕ, ಓದು ಮತ್ತು ಬರವಣಿಗೆ ಒಂದು ವರ್ಗದ ಪ್ಯಾಶನ್. ತನ್ಮಯತೆಯಿಂದ ಓದುತ್ತಾ ಕೂತ ವ್ಯಕ್ತಿ ನಮಗೆ ಯಾವತ್ತೂ ಒಂದ...
"ಈ ನಡುವೆ ದಶಕಗಳ ಹಿಂದೆಯೇ ಆಗೀಗ ಬರೆದಿಟ್ಟಿದ್ದ ಚೀಟಿಗಳು ಕಣ್ಣಿಗೆ ಬಿದ್ದಾಗೆಲ್ಲಾ 'ನಮ್ಮನ್ನು ಹೀಗೇ ಬಿಟ್ಟರ...
©2025 Book Brahma Private Limited.