ಲೋಕಾರ್ಪಣೆಗೊಂಡಿತು ಕೃಷ್ಣ ನಾಯಕ ಅವರ ಈ ವರೆಗಿನ ಕಥೆಗಳ ಸಮಗ್ರ; ಕ್ರೌಂಚ ಪ್ರಲಾಪ

Date: 11-06-2025

Location: ಬೆಂಗಳೂರು


ನಾಡಿನ ಪ್ರಮುಖ ಕಥೆಗಾರರಾದ ಪ್ರೊ. ಕೃಷ್ಣ ನಾಯಕ ಈತನಕ ಒಟ್ಟು ಐದು ಕಥಾ ಸಂಕಲನಗಳನ್ನು ಸೇರಿಸಿ ಕ್ರೌಂಚ ಪ್ರಲಾಪ ಎಂಬ ಸಮಗ್ರ ಕೃತಿ ಇತ್ತೀಚೆಗೆ ಜನಾರ್ಪಣೆಗೊಂಡಿತು. ಕಾರ್ಯಕ್ರಮದಲ್ಲಿ ಡಾ.ಬಾಳಾಸಾಹೇಬ ಲೋಕಾಪುರ, ಡಾ.ನಾರಾಯಣ ಪವಾರ, ಡಾ.ನಾಗಾಬಾಯಿ ಬುಳ್ಳಾ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ ಅವರು ಉಪಸ್ಥಿತಿರಿದ್ದರು.  ಕೃತಿ ಲೇಖಕರಾದ ಪ್ರೊ.ಕೃಷ್ಣ ನಾಯಕ ತಮ್ಮ ಕಥನ ಲೋಕವನ್ನು ಸಭೆಗೆ ಪರಿಚಯಿಸಿದರು. 

ಪ್ರೊ. ಕೃಷ್ಣ ನಾಯಕ ಅವರು ಸಮಕಾಲೀನ ಸಂದರ್ಭದ ಮಹತ್ವದ ಕಥೆಗಾರರಲ್ಲಿ ಒಬ್ಬರು. ಲದೇಣಿಯಾ, ಕತ್ತಲು ಕರಗುವ ಪರಿ, ಲಚುಮಿ ಅತ್ತೆ, ಕಾಂತಾಮಣಿಯ ಕನಸುಗಳು, ಮತ್ತು ಪುರಾಣ ಕೂಪ"  ದಂಥ ಕಥಾ ಸಂಕಲನಗಳು ಅವರ ಘನವಾದ ಸೃಷ್ಟಿಶೀಲತೆಗೆ ಹಿಡಿದ ಕೈಗನ್ನಡಿಗಳಾಗಿವೆ. ಅವರ ಜೀವಚೈತನ್ಯದ ಪ್ರತಿಭೆ ಧ್ಯಾನ ಸ್ಥಿತಿಯಲ್ಲಿರುವ ಅಗ್ನಿಮುಖಿಯಂಥದ್ದು. ಅದು ಯಾವಾಗ ಆಸ್ಪೋಟಿಸುವುದೋ ಹೇಳಲಿಕ್ಕೇ ಬರುವುದಿಲ್ಲ. ಅತ್ಯಂತ ಸಂಯಮದ ಕಥೆಗಾರರಾದ ನಾಯಕ ಅವರು ತಮ್ಮ ಸೀಮೆಯ ಜವಾರಿ ಭಾಷೆ  ಬಳಕೆಯಿಂದ ಮತ್ತು ಸಾಮಾಜಿಕ ತಳಮಳ ಮತ್ತು ತಲ್ಲಣಗಳಿಗೆ ಕಲಾತ್ಮಕವಾಗಿ ಸ್ಪಂದಿಸಬಲ್ಲ ಶಕ್ತಿಯುಳ್ಳವರು.  

ನಾಡಿನ ಪ್ರಮುಖ ಕಥೆಗಾರರಾದ ಪ್ರೊ. ಕೃಷ್ಣ ನಾಯಕ ಈತನಕ ಒಟ್ಟು ಐದು ಕಥಾ ಸಂಕಲನಗಳನ್ನು ಓದುಗರಿಗೆ ಕೊಟ್ಟು ಕಥೆಗಾರರಾಗಿ ಗಮನ ಸೆಳೆದಿದ್ದಾರೆ. ಅವರ ಕಥೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಆಗಾಗ ಪ್ರಕಟಗೊಂಡು ಕಥಾಪ್ರಿಯರ ಮೆಚ್ಚುಗೆಯನ್ನು, ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ  ಚಿನ್ನದ ಪದಕ, ನಗದು ಬಹುಮಾನ, ತೀರ್ಪುಗಾರರ ಮನ್ನಣೆಯನ್ನೂ  ಪಡೆದಿರುವುದು, ವಿವಿಧ ವಿಶ್ವವಿದ್ಯಾಲಯಗಳಿಗೆ ಪಠ್ಯಕ್ಕೆ ಅಳವಡಿಸಿರುವುದು ವಿಶೇಷ ಸಂಗತಿ. ಈಗ ಒಟ್ಟು ಕಥೆಗಳನ್ನು ಸೇರಿಸಿ " ಕ್ರೌಂಚ ಪ್ರಲಾಪ"( ಸಮಗ್ರ ಕಥೆಗಳು) ಕೃತಿಯನ್ನು ಹೊರತಂದಿದ್ದಾರೆ. 

ಈ ಕೃತಿ ನಿನ್ನೆ ಕಲಬುರಗಿಯಲ್ಲಿ ಲೋಕಾರ್ಪಣೆಗೊಂಡಿತು. ಕಲಬುರಗಿಯ ವಿಶ್ವ ಪ್ರಕಾಶನದ ಮಾಲಿಕರಾದ ಉಷಾ ಆನಂದ ನಾಯಕ ಅವರು ಪ್ರಕಟಿಸಿ ಹೊರತಂದಿರುವ ಈ ಪುಸ್ತಕದಲ್ಲಿ ಒಟ್ಟು 416 ಪುಟಗಳಿದ್ದು, ಕೃತಿಯ ಮುಖಬೆಲೆ 500/- ರೂಪಾಯಿ ಇದೆ. ನಾಯಕ ಅವರ ಸೃಷ್ಟಿಶೀಲ ದೃಷ್ಟಿಕೋನವನ್ನು ಪ್ರಸ್ತುತ ಕೃತಿ ಓದುಗರ ಮುಂದಿಟ್ಟಿದೆ. ಸರಿಸುಮಾರು 39 ಕಥೆಗಳು ಈ ಸಂಕಲನದಲ್ಲಿ ಅಡಕವಾಗಿವೆ. 

ಇಲ್ಲಿನ ಬಹುಪಾಲು ಕಥೆಗಳು ಪ್ರಕೃತಿ; ಬಂಜಾರ ಸಮುದಾಯದ , ಜನತೆಯ ಸಂಸ್ಕೃತಿ,ಸಾಮರಸ್ಯ ಮತ್ತು ಅಲ್ಲಿನ ವೈರುಧ್ಯ, ಆಚರಣೆ , ನಂಬಿಕೆಗಳನ್ನು ವಸ್ತು ಮಾಡಿಕೊಂಡಿವೆ. ಮಾನವೀಯ ಸಹಜತೆಯನ್ನು ಉಸಿರಾಡುವುದಕ್ಕೆ ಹೆಣಗಾಡುವ ಇಲ್ಲಿನ ಅನೇಕ ಪಾತ್ರಗಳು ಪ್ರಕೃತಿಯ ಹಾರ್ದಿಕ ಗುಣದಿಂದ, ಗಂಧದಿಂದ, ಚೆಲುವಿನಿಂದ ಕಥಾ ಓದುಗ ಪ್ರಿಯರ ಮನಸ್ಸನ್ನು ತುಂಬುತ್ತವೆ.

MORE NEWS

ಸಾಹಿತ್ಯ ಕೃತಿಗಳು ಸಮಾಜದ ಹಲವು ಮುಖಗಳನ್ನು ತೋರಿಸುವ ಶಕ್ತಿ ಪಡೆದಿವೆ; ದೀಪಾ ಭಾಸ್ತಿ

13-12-2025 ಬೆಂಗಳೂರು

ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...

2026ನೇ ಸಾಲಿನ ಟೊಟೊ ಪುರಸ್ಕಾರದ ಮೊದಲನೇ ಪಟ್ಟಿ ಬಿಡುಗಡೆ

12-12-2025 ಬೆಂಗಳೂರು

2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...

ಮಕ್ಕಳಲ್ಲಿ ಕಲ್ಪನಾ ಲೋಕ ಬೆಳೆಸಿ: ಬಸು ಬೇವಿನಗಿಡದ

10-12-2025 ಧಾರವಾಡ

ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...