ರಾಧಾಕೃಷ್ಣ ರಾವ್ ಪಾಂಗಾಳ ಅವರ ಬದುಕು ಮತ್ತು ಬರಹ ಕುರಿತ ಕೃತಿ ‘ಪಾಂಗಾಳ ಡಾಕ್ಟ್ರು’ ಲೋಕಾರ್ಪಣೆ ಸಮಾರಂಭ

Date: 14-04-2025

Location: ಬೆಂಗಳೂರು


ಬೆಂಗಳೂರು: ಸಾಹಿತಿ ಹಾಗೂ ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ರಾಧಾಕೃಷ್ಣ ರಾವ್ ಪಾಂಗಾಳ ಅವರ ಬದುಕು ಮತ್ತು ಬರಹ ಕುರಿತ ಷಾ. ಚಂದ್ರಶೇಖರ ಚಡಗ ಅವರ ‘ಪಾಂಗಾಳ ಡಾಕ್ಟ್ರು’ ಕೃತಿಯ ಲೋಕಾರ್ಪಣಾ ಸಮಾರಂಭವು 2025 ಎಪ್ರಿಲ್ 13 ಭಾನುವಾರದಂದು ಆರ್.ಟಿ. ನಗರದ ತರಳಬಾಳು ಮಿನಿ ಸಭಾಂಗಣದಲ್ಲಿ ನಡೆಯಿತು.

ಕೃತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಲೋಕಾರ್ಪಣೆಗೊಳಿಸಿದರು.

ಕೃತಿಯ ಕುರಿತು ವಿಮರ್ಶಕ ಎಸ್.ಆರ್. ವಿಜಯಶಂಕರ ಅವರು ಮಾತನಾಡಿದರು.

ಈ ಕೃತಿಯಲ್ಲಿ ವಿಜಯಶಂಕರ, ಬಿ.ವಿ. ಕೆದಿಲಾಯ, ಡಾ. ಆನಂದರಾಮ ಉಪಾಧ್ಯ, ಪ್ರೊ. ಎಂ.ಆರ್. ನಾಗರಾಜ್, ಸಿ.ಆರ್. ಸತ್ಯ ಸೇರಿದಂತೆ ವಿವಿಧ ಲೇಖಕರ ಲೇಖನಗಳು ಇಲ್ಲಿವೆ ಎಂದು ಶಿವರಾಮ ಕಾರಂತ ವೇದಿಕೆ ಅಧ್ಯಕ್ಷೆ ದೀಪಾ ಫಡ್ಕೆ ತಿಳಿಸಿದರು.

 

MORE NEWS

ಗೊಟ್ಟಿಗೆರೆಯಲ್ಲಿ `ಪೂರ್ಣಚಂದ್ರ ಕನ್ನಡ ಸಾಂಸ್ಕೃತಿಕ ಅಧ್ಯಯನ ಕೇಂದ್ರ' ಸ್ಥಾಪನೆ

17-04-2025 ಬೆಂಗಳೂರು

ಬೆಂಗಳೂರು: ಕನ್ನಡದ ಸಂವೇದನಾಶೀಲ ಬರಹಗಾರರು, ಚಿಂತಕರಾದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ನೆನಪಿನಲ್ಲಿ 'ಪೂರ್ಣಚಂ...

ಉಮಾ ಅನಂತ್ ಅವರ ‘ಸಂಗೀತ ಸಾಂಗತ್ಯ’ ಕೃತಿಯ ಲೋಕಾರ್ಪಣಾ ಸಮಾರಂಭ

14-04-2025 ಬೆಂಗಳೂರು

ಬೆಂಗಳೂರು: ಪ್ರಗತಿ ಪ್ರಕಾಶನದಿಂದ ಪ್ರಕಟವಾದ ಲೇಖಕಿ ಉಮಾ ಅನಂತ್ ಅವರ ‘ಸಂಗೀತ ಸಾಂಗತ್ಯ’ ಕೃತಿಯ ಲೋಕಾರ್ಪಣ...

ಅನುವಾದದಿಂದ ಕನ್ನಡದ ಜ್ಞಾನ ಪರಂಪರೆಗೆ ಜಾಗತಿಕ ಮಹತ್ವ: ಪ್ರೊ. ವಿಕ್ರಮ ವಿಸಾಜಿ 

13-04-2025 ಬೆಂಗಳೂರು

ಬಸವಕಲ್ಯಾಣ: "ಯೂರೋಪ್ ನಮಗೆ ಅರ್ಥವಾದಷ್ಟು ಯೂರೋಪಿಗೆ ನಾವು ಅರ್ಥವಾಗಿಲ್ಲ. ಕನ್ನಡ ಸಾಹಿತ್ಯ ಅನುವಾದಿಸುವ ಮೂಲಕ ಕನ...