ಸಾಹಿತ್ಯ ಮತ್ತು ಪತ್ರಿಕೆ ಒಂದೇ ನಾಣ್ಯದ ಎರಡು ಮುಖಗಳು


"ಸಾಹಿತ್ಯ ಮತ್ತು ಪತ್ರಿಕೆ ಒಂದೆ ನಾಣ್ಯದ ಎರಡು ಮುಖಗಳು. ಸಾಹಿತ್ಯ ಕ್ಷೇತ್ರದಲ್ಲಿ ದಾಪುಗಾಲು ಇಟ್ಟ ಗಿರಿಜಾ ಶಂಕರನಿಗಿಂತ (ಶಿವ) ಒಂದು ಹೆಜ್ಜೆ ಮುಂದೆ. ವಿವಿಧ ಪತ್ರಿಕೆಗಳಿಗೆ ಅಂಕಣಗಾತಿ೯ಯಾಗಿ ಸಾಕಷ್ಟು ಮಿಂಚುತ್ತಿರುವ ಇವರ ಲೇಖನಗಳು ರಾಜ್ಯದ ಉದ್ದಗಲಕ್ಕೂ ಇರುವ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ," ಎನ್ನುತ್ತಾರೆ ಗೋಪಾಲ ನಾಯಕ. ಅವರು ಗಿರಿಜಾ ಶಂಕರ ‘ಶಕ್ತಿ ಪೀಠಗಳ ಪ್ರದಕ್ಷಿಣೆ’ ಕೃತಿಗೆ ಗೋಪಾಲ ನಾಯಕ ಅವರು ಬರೆದ ಮುನ್ನುಡಿ.

ಗಿರಿಜಾ ಶಂಕರ ದೇಶಪಾಂಡೆ ಅವರು ಹುಟ್ಟಿದ್ದು ಉತ್ತರ ಕನಾ೯ಟಕವಾದರೂ ಈಗ ಅವರು ವಾಸಿಸುತ್ತಿರುವದು ಕನಾ೯ಟಕ ರಾಜಧಾನಿ ಬೆಂಗಳೂರಲ್ಲಿ. ಹಾವೇರಿ ಜಿಲ್ಲೆಯ ಶಿಗ್ಗಾವಿಯ ಈ ಮಹಿಳೆ ಪದವಿ ಪಡೆದ ಮೇಲೆ ಶಿಕ್ಷಕಿಯಾಗಿ ಸೇವೆ ಪ್ರಾರಂಭಿಸಿದರು. ಕಲಿತದ್ದು ಭೂಗೋಲ ಮತ್ತು ಹಿಂದಿ ವಿಷಯಗಳಾದರೂ ಅಪ್ಪಿಕೊಂಡಿದ್ದು ಕನ್ನಡ ಸಾಹಿತ್ಯ ಮತ್ತು ಪತ್ರಿಕೆಗಳಿಗೆ ಲೇಖನ.

ಸಾಹಿತ್ಯ ಮತ್ತು ಪತ್ರಿಕೆ ಒಂದೇ ನಾಣ್ಯದ ಎರಡು ಮುಖಗಳು. ಸಾಹಿತ್ಯ ಕ್ಷೇತ್ರದಲ್ಲಿ ದಾಪುಗಾಲು ಇಟ್ಟ ಗಿರಿಜಾ ಶಂಕರನಿಗಿಂತ (ಶಿವ) ಒಂದು ಹೆಜ್ಜೆ ಮುಂದೆ. ವಿವಿಧ ಪತ್ರಿಕೆಗಳಿಗೆ ಅಂಕಣಗಾತಿ೯ಯಾಗಿ ಸಾಕಷ್ಟು ಮಿಂಚುತ್ತಿರುವ ಇವರ ಲೇಖನಗಳು ರಾಜ್ಯದ ಉದ್ದಗಲಕ್ಕೂ ಇರುವ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ. ತಮ್ಮ ಸಂಸಾರ ಭಾರದಲ್ಲಿಯೂ ವಿವಿಧ ವಿಷಯಗಳನ್ನು ಕ್ರೋಢಿಕರಿಸಿ ಬರೆಯುವ ಲೇಖನಗಳು ಓದುಗರಿಗೆ ಅಚ್ಚು ಮೆಚ್ಚು. ಹೀಗಾಗಿ ಗಿರಿಜಾ ಅವರ ಲೇಖನಗಳಿಗೆ ಪತ್ರಿಕೆಗಳಿಂದ ಬೇಡಿಕೆ.

ಇವರ ಅತ್ಯಂತ ವಿಶೇಷತೆ ಎಂದರೆ ತಿಂಡಿ-ತಿನಿಸು, ಆರೋಗ್ಯ ಭಾಗ್ಯ, ಸಾಧಕರ ಪರಿಚಯ ಇಂತಹ ಅನೇಕ ಲೇಖನಗಳು ಓದುಗರಿಗೆ ಹಿಡಿಸುತ್ತಿವೆ. ಗಿರಿಜಾ ಅವರು ಹಲವು ವೈವಿಧ್ಯತೆಯ ವಿಷಯಗಳ ಲೇಖನಗಳ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಅವರಿಗೆ ಸದಾ ಆಮಂತ್ರಣ ಇದ್ದದ್ದೆ. ಅಲ್ಲಿ ಅತಿಥಿ ಜೊತೆಗೆ ಗೌರವ ಸನ್ಮಾನ. ಸಾಕಷ್ಟು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದ್ದದ್ದು ಅವರ ಜನಪ್ರಿಯತೆಯನ್ನು ತೋರಿಸುತ್ತದೆ. ಸ್ತೋತ್ರಗಳು, ಭಜನೆಯ ಹಾಡುಗಳು, ಕಥಾ ಮಾಲಿಕೆ, ಕವನ ಸಂಗ್ರಹ ಮತ್ತು ತರಕಾರಿ ಮಹತ್ವ ಕುರಿತು ಹಲವಾರು ಲೇಖನಗಳ ಸಂಗ್ರಹವೆ ಇವರಲ್ಲಿದೆ. ಗಿ

ಗಿರಿಜಾ ಅವರು ಉತ್ತರ ಕನಾ೯ಟಕದ ಅತ್ಯಂತ ಹಳೆಯ ಪತ್ರಿಕೆಯಾದ ಸಂದಶ೯ನ ಪತ್ರಿಕೆಗೂ ಬರೆಯುತ್ತಾರೆ, ೬೫ ವಷ೯ಗಳಿಂದ ಪ್ರಕಟಗೊಳ್ಳುತ್ತಿರುವ ಈ ಪತ್ರಿಕೆಯಲ್ಲಿ ಗಿರಿಜಾ ಅವರು ೫೦ ಲೇಖನ ಬರೆಯುವ ಮೂಲಕ ಸುವಣ೯ ಸಾಧಕರೆನಿಸಿದ್ದಾರೆ. ಇದು ಹೆಮ್ಮೆಯ ವಿಷಯವೂ ಹೌದು. ಓವ೯ ಲೇಖಕಿ ತನ್ನ ಸಂಸಾರದ ಜವಾಬ್ದಾರಿಯೊಂದಿಗೆ ಸಾಹಿತ್ಯ ಮತ್ತು ಪತ್ರಿಕಾ ಕ್ಷೇತ್ರಗಳಲ್ಲಿ ಖ್ಯಾತಿ ಪಡೆಯುದೆಂದರೆ ಸಾಹಸದ ಸಂಗತಿಯೆ. ಪರಮಾತ್ಮ ಗಿರಿಜಾ ಅವರಿಗೆ ಆಯು: ಆರೋಗ್ಯ, ಸುಖ ಸಮೃದ್ಧಿ ಕೊಡಲಿ ಇನ್ನಷ್ಟು ಸಾಧನೆಯ ಮೂಲಕ ಜನ ಸೇವೆ ಮಾಡಲಿ ಎಂದು ಹಾರೈಸುವೆ.

 

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...