ಸಾಹಿತ್ಯದ ವಿದ್ಯಾರ್ಥಿಯಲ್ಲದ ನನಗೆ ಅನುವಾದ ಸ್ವಲ್ಪ ತೊಡಕಿನ ಕೆಲಸವೆ: ಸುಧಾ ಆಡುಕಳ


“ಸಾಹಿತ್ಯದ ವಿದ್ಯಾರ್ಥಿಯಲ್ಲದ ನನಗೆ ಅನುವಾದ ಸ್ವಲ್ಪ ತೊಡಕಿನ ಕೆಲಸವೆ. ಮೊದಲಿಗೆ ಅತ್ಯುತ್ಸಾಹದಿಂದ ಕೈಗೆತ್ತಿಕೊಂಡರೂ, ಮತ್ತೆ ಬಸವಳಿಯುವಂತೆ ಮಾಡುತ್ತದೆ. ಆದರೆ ಈ ಪುಸ್ತಕ ಮಾತ್ರ ಹೂವೆತ್ತಿದಂತೆ ಅನುವಾದವನ್ನು ಮಾಡಿಸಿಕೊಂಡಿದೆ. ಅಷ್ಟೇ ಖುಶಿಯನ್ನು ಮತ್ತು ಅದರಾಚೆಗಿನ ಜಿಜ್ಞಾಸೆಯನ್ನು ಓದುಗರಲ್ಲಿ ಮೂಡಿಸುವುದೆಂಬ ಭರವಸೆಯಿದೆ,” ಎನ್ನುತ್ತಾರೆ ಅನುವಾದಕಿ ಸುಧಾ ಆಡುಕಳ. ಅವರು ತಮ್ಮ ಅನುವಾದಿತ ‘ಎಂದೂ ಹುಟ್ಟದ ಮಗುವಿಗೆ ಪತ್ರ’ ಕೃತಿಗೆ ಬರೆದ ಲೇಖನ.

ಎಂದೂ ಹುಟ್ಟದ ಮಗುವಿಗೆ ಪತ್ರ ಈಗಷ್ಟೇ ಕೈಸೇರಿತು. ಆತ್ಮಕ್ಕೆ ಅಂಟಿದ ಕೆಲವೊಂದು ನೆನಪುಗಳಿರುತ್ತವೆ. ತಾಯ್ತನವೆಂಬುದು ನನ್ನ ಪಾಲಿಗೆ ಹಾಗೆಯೇ ಒದಗಿದ್ದು. ದೂರದೂರಿನ ಜನಜಂಗುಳಿಯಲ್ಲೆಲ್ಲೋ ತೀರ ಹತ್ತಿರದವರು ಸಿಕ್ಕಿಬಿಟ್ಟರೆ ಆಗುವ ಪುಳಕವಿದೆಯಲ್ಲಾ, ಅಂಥದ್ದೇ ಭಾವ ಈ ಪುಸ್ತಕವನ್ನು ಕೈಯ್ಯಲ್ಲಿ ಹಿಡಿದಾಗ ನನಗಾಗಿದೆ.

ಸಾಹಿತ್ಯದ ವಿದ್ಯಾರ್ಥಿಯಲ್ಲದ ನನಗೆ ಅನುವಾದ ಸ್ವಲ್ಪ ತೊಡಕಿನ ಕೆಲಸವೆ. ಮೊದಲಿಗೆ ಅತ್ಯುತ್ಸಾಹದಿಂದ ಕೈಗೆತ್ತಿಕೊಂಡರೂ, ಮತ್ತೆ ಬಸವಳಿಯುವಂತೆ ಮಾಡುತ್ತದೆ. ಆದರೆ ಈ ಪುಸ್ತಕ ಮಾತ್ರ ಹೂವೆತ್ತಿದಂತೆ ಅನುವಾದವನ್ನು ಮಾಡಿಸಿಕೊಂಡಿದೆ. ಅಷ್ಟೇ ಖುಶಿಯನ್ನು ಮತ್ತು ಅದರಾಚೆಗಿನ ಜಿಜ್ಞಾಸೆಯನ್ನು ಓದುಗರಲ್ಲಿ ಮೂಡಿಸುವುದೆಂಬ ಭರವಸೆಯಿದೆ.

ಹೆಚ್ಚು ಮಾತು ಬಾರದು, ಮೊದಲ ಬಾರಿಗೆ ಮಗುವನ್ನೆತ್ತಿಕೊಂಡ ರೋಮಾಂಚನ ನನ್ನದು. ತಾಯ್ತನವೆಂಬುದು ಸಹಜತೆ, ಭಾವನಾತ್ಮಕತೆಯ ಗಡಿಯನ್ನು ದಾಟಿ ಜವಾಬ್ದಾರಿಯ ಪರಿಧಿಗೆ ದಾಟುತ್ತಿರುವ ವರ್ತಮಾನದಲ್ಲಿ ಇದೊಂದು ಅವಶ್ಯಕವಾದ ಓದು ಅನಿಸುತ್ತದೆ. ಓದುವ ಖುಶಿ ನಿಮ್ಮದಾಗಲಿ. ಅತಿಕಡಿಮೆ ಬೆಲೆಯಲ್ಲಿ ಪುಸ್ತಕವನ್ನು ಪ್ರಕಟಿಸುತ್ತಿರುವ ಪ್ರಕಾಶಕರ ಕೈಸೋಲದಿರಲಿ.

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...