ಸಾಹಿತ್ಯ ಸಂಗಮ ಸಂಸ್ಥೆಯಿಂದ 'ಹರಿಹರ ಶ್ರೀ' ಪ್ರಶಸ್ತಿ ಘೋಷಣೆ

Date: 22-11-2022

Location: ಬೆಂಗಳೂರು


ಹರಿಹರದ ಸಾಹಿತ್ಯ ಸಂಗಮ ಸಂಸ್ಥೆಯಿಂದ ಕವನ ಸಂಕಲನಕ್ಕೆ ನೀಡುವ ರಾಜ್ಯ ಮಟ್ಟದ 'ಹರಿಹರ ಶ್ರೀ' ಪ್ರಶಸ್ತಿಗೆ ವಿಜಯಪುರದ ಸುಮಿತ್ ಮೇತ್ರಿ ಮತ್ತು ಸದಾಶಿವ ಸೊರಟೂರು ಇವರ ಕವನ ಸಂಕಲನಗಳು ಆಯ್ಕೆಯಾಗಿವೆ.

2019ನೇ ಸಾಲಿನ ಪ್ರಶಸ್ತಿಗೆ ವಿಜಯಪುರದ ಸುಮಿತ್ ಮೇತ್ರಿ ಅವರ 'ಥಟ್ ಅಂತ ಬರೆದುಕೊಡುವ ರಸೀದಿಯಲ್ಲ' ಕವನ - ಸಂಕಲನ ಹಾಗೂ 2020ನೇ ಸಾಲಿನ ಪ್ರಶಸ್ತಿಗೆ ಹೊನ್ನಾಳಿ ತಾಲ್ಲೂಕು ಸೊರಟೂರು ಮೂಲದ ಸದಾಶಿವ ಸೊರಟೂರು ಅವರ 'ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ' ಕವನ ಸಂಕಲನಕ್ಕೆ 'ಹರಿಹರ ಶ್ರೀ' ಪ್ರಶಸ್ತಿ ಸಂದಿದೆ . ಈ ಪ್ರಶಸ್ತಿಯು ಫಲಕ ಹಾಗೂ 5000 ನಗದು ಬಹುಮಾನವನ್ನು ಒಳಗೊಂಡಿದೆ ಎಂದು ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ.ಕೊಟ್ರೇಶಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

MORE NEWS

ಸಾಹಿತ್ಯ ಕೃತಿಗಳು ಸಮಾಜದ ಹಲವು ಮುಖಗಳನ್ನು ತೋರಿಸುವ ಶಕ್ತಿ ಪಡೆದಿವೆ; ದೀಪಾ ಭಾಸ್ತಿ

13-12-2025 ಬೆಂಗಳೂರು

ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...

2026ನೇ ಸಾಲಿನ ಟೊಟೊ ಪುರಸ್ಕಾರದ ಮೊದಲನೇ ಪಟ್ಟಿ ಬಿಡುಗಡೆ

12-12-2025 ಬೆಂಗಳೂರು

2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...

ಮಕ್ಕಳಲ್ಲಿ ಕಲ್ಪನಾ ಲೋಕ ಬೆಳೆಸಿ: ಬಸು ಬೇವಿನಗಿಡದ

10-12-2025 ಧಾರವಾಡ

ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...