"ಜಗತ್ತಿನ ಯಾವುದೇ ಧರ್ಮದಲ್ಲಿ ಇಲ್ಲದ ಒಂದು ಧಾರ್ಮಿಕ ಸ್ವಾತಂತ್ರ್ಯ ಮತ್ತು ಮೋಕ್ಷ ಸಾಧನೆಯ ಅವಕಾಶ 2500 ವರ್ಷಗಳ ಹಿಂದೆ ಬೌದ್ಧಧರ್ಮದಲ್ಲಿ ಇತ್ತು ಮತ್ತು ಅದರ ಬಗ್ಗೆ ಸ್ತ್ರೀವಾದಿ ಅಧ್ಯಯನದಲ್ಲಿ ಇದುವರೆಗೆ ಎಲ್ಲೂ ಉಲ್ಲೇಖವಾಗಿರಲಿಲ್ಲ ಅನ್ನುವುದನ್ನು ಕೇಳಿ ಆಶ್ಚರ್ಯ ಸಂತೋಷಗಳೆರಡೂ ಏಕಕಾಲದಲ್ಲಿ ಉಂಟಾದವು," ಎನ್ನುತ್ತಾರೆ ಪಾರ್ವತಿ ಜಿ. ಐತಾಳ್. ಅವರು ಶೈಲಜಾ ವೇಣುಗೋಪಾಲ್ ಅವರ ‘ಥೇರಿಗಾಥಾ ಕಾಣಿಸಿದ ಹೆಣ್ಣು’ ಕೃತಿ ಕುರಿತು ಬರೆದ ಅನಿಸಿಕೆ.
ಸ್ತ್ರೀವಾದಿ ಅಧ್ಯಯನ ಕ್ಕೆ ಇದು ಒಂದು ಮಹತ್ವದ ಕೊಡುಗೆ. 'ಥೇರಿಗಾಥಾ' ಎಂಬ ಬೌದ್ಧ ಧಾರ್ಮಿಕ ಗ್ರಂಥದಲ್ಲಿ ಧಾರಾಳವಾಗಿ ಉಲ್ಲೇಖಿತವಾಗಿರುವ ಬೌದ್ದ ಸಂಘಗಳನ್ನು ಸೇರಿದ ಮಹಿಳಾ ಭಿಕ್ಕುಣಿಯರ ಕಥೆಯನ್ನು ಹೇಳುವುದಲ್ಲದೆ ಆ ಕಾಲದ ಸಮಾಜದಲ್ಲಿ ಮಹಿಳೆಯರ ಸ್ಥಿತಿ ಗತಿಗಳನ್ನೂ ಚಿತ್ರಿಸುವ ಇದು ಒಂದು ಅದ್ಭುತ ಕೃತಿ.
ಜಗತ್ತಿನ ಯಾವುದೇ ಧರ್ಮದಲ್ಲಿ ಇಲ್ಲದ ಒಂದು ಧಾರ್ಮಿಕ ಸ್ವಾತಂತ್ರ್ಯ ಮತ್ತು ಮೋಕ್ಷ ಸಾಧನೆಯ ಅವಕಾಶ 2500 ವರ್ಷಗಳ ಹಿಂದೆ ಬೌದ್ಧಧರ್ಮದಲ್ಲಿ ಇತ್ತು ಮತ್ತು ಅದರ ಬಗ್ಗೆ ಸ್ತ್ರೀವಾದಿ ಅಧ್ಯಯನದಲ್ಲಿ ಇದುವರೆಗೆ ಎಲ್ಲೂ ಉಲ್ಲೇಖವಾಗಿರಲಿಲ್ಲ ಅನ್ನುವುದನ್ನು ಕೇಳಿ ಆಶ್ಚರ್ಯ ಸಂತೋಷಗಳೆರಡೂ ಏಕಕಾಲದಲ್ಲಿ ಉಂಟಾದವು. ಜೊತೆಗೆ ಆ ಕುರಿತು ಒಂದು ಮಹತ್ಕೃತಿ ನಿನ್ನ ಮೂಲಕ ಬಂದಿದೆ ಎಂಬುದನ್ನೆಣಿಸಿ ಹೆಮ್ಮೆಯೆನ್ನಿಸಿತು. ಈ ಕೃತಿಯ ಹಿಂದೆ ಎಷ್ಟೊಂದು ಅಧ್ಯಯನವಿದೆ, ಅದಕ್ಕಾಗಿ ಈಗಾಗಲೇ ಇರುವ ಬೆರೆ ಬೇರೆ ಇಂಗ್ಲಿಷ್ ಕೃತಿಗಳನ್ನು ಪರಾಮರ್ಶಿಸಿ ಎಷ್ಟೊಂದು ಪರಿಶ್ರಮ ಪಟ್ಟಿದ್ದೀ ಅನ್ನುವುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.
ನಿನ್ನ ಕಥನ ಶೈಲಿ ತುಂಬಾ ಹೃದ್ಯವಾಗಿದೆ. ಭಾಷಾ ಪ್ರಯೋಗ ಪ್ರಬುದ್ಧವಾಗಿದೆ. ವಿಷಯಗಳ ಮಂಡನೆ ಹೆಜ್ಜೆ ಹೆಜ್ಜೆಗೂ ಕುತೂಹಲ ಮೂಡಿಸಿಕೊಂಡು ಹೋಗುತ್ತದೆ. ನಿನ್ನ 'ಥೇರಿಗಾಥಾ ....'ದ ಓದು ನನ್ನ ಆಳಕ್ಕಿಳಿದು ಕುಳಿತಿದೆ.
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.