‘ಸ್ವರ್ಣಿಮ ಭಾರತಿ ಸಾಹಿತ್ಯ ಸಮ್ಮಾನ್ ವನರಾಗ ಶರ್ಮಾ’ ಪುಸ್ತಕ ಪ್ರಶಸ್ತಿ ಫಲಿತಾಂಶ ಪ್ರಕಟ

Date: 01-06-2023

Location: ಬೆಂಗಳೂರು


ಸ್ವರ್ಣಿಮ ಭಾರತಿ ಸಾಹಿತ್ಯ ಸಮ್ಮಾನ್ ವತಿಯಿಂದ ಆಯೋಜಿಸಿದ್ದ ‘ವನರಾಗ ಶರ್ಮಾ ಪುಸ್ತಕ ಪ್ರಶಸ್ತಿ’ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.

ವನರಾಗ ಶರ್ಮಾರವರ ಹೆಸರಿನಲ್ಲಿ 2021 ಮತ್ತು 2022ನೇ ಸಾಲಿನಲ್ಲಿ ಪ್ರಕಟವಾದ ಕಥಾ ಸಂಕಲನ ಮತ್ತು ಕಾವ್ಯ ಸಂಕಲನಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸಿದ್ದು, 2021ನೇ ಸಾಲಿನಲ್ಲಿ ಕತೆಗಾರ ಟಿ.ಎಂ. ರಮೇಶ್ ಅವರ 'ದಶಕದ ಕಥೆಗಳು' ಕೃತಿಗೆ ಪ್ರಥಮ ಬಹುಮಾನ ಲಭಿಸಿದೆ. ಎರಡನೇ ಬಹುಮಾನಕ್ಕೆ ಕವಯತ್ರಿ ಶೋಭಾ ನಾಯಕ ಅವರ 'ಶಯ್ಯಾಗೃಹದ ಸುದ್ದಿಗಳು' ಕಾವ್ಯ ಸಂಕಲನ ಆಯ್ಕೆಯಾಗಿದೆ. 2022 ನೇ ಸಾಲಿನ ಕೃತಿಗಳಲ್ಲಿ ಕತೆಗಾರ ಗಂಗಾಧರ ಕೊಳಗಿ ಅವರ "ಮಿಸ್ಡ್ ಕಾಲ್" ಕತೆ ಸಂಕನಲನ ಆಯ್ಕೆಯಾಗಿದ್ದರೆ, 2022ನೇ ಸಾಲಿನ ಕಾವ್ಯ ಪ್ರಶಸ್ತಿಗೆ ಡಾಲಿ ವಿಜಯಕುಮಾರ್ ಅವರ "ನೆಲ್ಲು ಎಸೆಯ ಬೇಡ ಮತ್ತೆ" ಕವನ ಸಂಕಲನ ಆಯ್ಕೆಯಾಗಿದೆ. ನಾಲ್ವರು ವಿಜೇತರಿಗೆ ತಲಾ 3000 ರೂ. ನಗದು ಬಹುಮಾನವನ್ನು ಘೋಷಿಸಲಾಗಿದೆ.

ನಗದು ರಹಿತ ಪ್ರಶಸ್ತಿಗೆ ವಿಜೇತರಾದವರು:
ಕತೆಗಾರ ಆನಂದಗೋಪಾಲ್ ಅವರ ‘ಆಟಗಾಯಿ’ ಕಥಾಸಂಕಲನಕ್ಕೆ ದ್ವಿತೀಯ, ‘ಭಿನ್ನ ಭಾವಗಳು’ ಕವನಸಂಕಲನಕ್ಕೆ ತೃತೀಯ ಬಹುಮಾನ, ಎ.ಎನ್. ರಮೇಶ್ ಗುಬ್ಬಿ ಅವರ ‘ಮಾತು ಮೌನಗಳ ನಡುವೆ’ ಕವನಸಂಕಲನಕ್ಕೆ ದ್ವಿತೀಯ, ಅಜಿತ್ ಹರೀಶಿ ಅವರ ‘ಕನಸಿನ ದನಿ’ ಕವನಸಂಕಲನಕ್ಕೆ ತೃತೀಯ, ‘ಸೆರಗಿನೊಳಗಿನ ಕೆಂಡ’, `ಗೌರಿ ಚಂದ್ರಕೇಸರಿ' ಕಥಾಸಂಕಲನಕ್ಕೆ ತೃತೀಯ, ರೇಣುಕಾ ರಮಾನಂದ ಅವರ ‘ಸಂಭಾರ ಬಟ್ಟಲ ಕೊಡಿಸು’ ಕವನಸಂಕಲನಕ್ಕೆ ದ್ವಿತೀಯ, ಮಂಡಲಗಿರಿ ಪ್ರಸನ್ನ ಅವರ ‘ನಿದಿರೆ ಇರದ ಮೌನ’ ತೃತೀಯ ಬಹುಮಾನವನ್ನು ಪಡೆದುಕೊಂಡಿರುತ್ತದೆ.

ಸಾಹಿತಿ ಭಾಗೀರಥಿ ಹೆಗಡೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಸ್ಕೇರಿ ಎಂ.ಕೆ.ನಾಯಕ ಅವರು ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

MORE NEWS

ಸಾಹಿತ್ಯ ಕೃತಿಗಳು ಸಮಾಜದ ಹಲವು ಮುಖಗಳನ್ನು ತೋರಿಸುವ ಶಕ್ತಿ ಪಡೆದಿವೆ; ದೀಪಾ ಭಾಸ್ತಿ

13-12-2025 ಬೆಂಗಳೂರು

ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...

2026ನೇ ಸಾಲಿನ ಟೊಟೊ ಪುರಸ್ಕಾರದ ಮೊದಲನೇ ಪಟ್ಟಿ ಬಿಡುಗಡೆ

12-12-2025 ಬೆಂಗಳೂರು

2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...

ಮಕ್ಕಳಲ್ಲಿ ಕಲ್ಪನಾ ಲೋಕ ಬೆಳೆಸಿ: ಬಸು ಬೇವಿನಗಿಡದ

10-12-2025 ಧಾರವಾಡ

ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...