ಉತ್ತಿತ ಹಸ್ತ ಪದಾಂಗುಷ್ಠಾಸನ ಮತ್ತು ಏಕಪಾದ ಶೀರ್ಷಾಸನ

Date: 12-08-2024

Location: ಬೆಂಗಳೂರು


"‘ಉತ್ತಿತ ಹಸ್ತ ಪದಾಂಗುಷ್ಠಾಸನ’ವು ಬೆನ್ನುಮೂಳೆಯನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ, ಮತ್ತು ನಿಮ್ಮ ಎರೆಕ್ಟರ್ ಸ್ಪೈನ್ ಅನ್ನು ಬಲಪಡಿಸುತ್ತದೆ. ‘ಏಕಪಾದ ಶೀರ್ಷಾಸನ’ ರಕ್ತಹೀನತೆ ಮತ್ತು ನರಗಳ ನಡುಕ ಇರುವವರಿಗೆ ಪ್ರಯೋಜನಕಾರಿಯಾಗಿದೆ," ಎನ್ನುತ್ತಾರೆ ಚೈತ್ರಾ ಹಂಪಿನಕಟ್ಟಿ. ಅವರು 'ಬುಕ್ ಬ್ರಹ್ಮ' ಪ್ರಕಟಿಸುವ ತಮ್ಮ 'ಯೋಗ ಯೋಗಾ' ಅಂಕಣದಲ್ಲಿ ಈ ಕುರಿತು ವಿವರಿಸಿದ್ದಾರೆ.

ಉತ್ತಿತ ಹಸ್ತ ಪದಾಂಗುಷ್ಠಾಸನ

ಉತ್ತಿತ ಹಸ್ತ ಪದಾಂಗುಷ್ಠಾಸನವು ಐದು ಸಂಸ್ಕೃತ ಪದಗಳನ್ನು ಒಳಗೊಂಡಿದೆ.

'ಉತ್ತಿತ' ಅಂದರೆ 'ವಿಸ್ತರಿಸಿದ' ಅಥವಾ 'ವಿಸ್ತರಿಸಿದ'
'ಹಸ್ತ' ಎಂಬುದು 'ಕೈ'ಯನ್ನು ಸೂಚಿಸುತ್ತದೆ
'ಪಾದ' ಎಂದರೆ 'ಪಾದ'
'ಅಂಗುಷ್ಠ' ಎಂಬುದು 'ಹೆಬ್ಬೆರಳು'
ಆಸನ ಎಂದರೆ 'ಭಂಗಿ.'

ಉತ್ತಿತ ಹಸ್ತ ಪಾದಂಗುಷ್ಠಾಸನವನ್ನು ಮಾಡುವ ವಿಧಾನ :
ಮೊದಲು ತಾಡಾಸನದಲ್ಲಿ ನಿಂತುಕೊಳ್ಳಿ ಚಿತ್ರದಲ್ಲಿರುವಂತೆ ನಂತರ ಪರ್ವತ ಭಂಗಿಯಲ್ಲಿ ನಿಂತುಕೊಳ್ಳಿ.
ನಿಮ್ಮ ಕೈಗಳನ್ನು ಸೊಂಟದ ರೇಖೆಗೆ ತನ್ನಿ, ದೇಹದ ತೂಕವನ್ನು ಎಡ ಕಾಲಿಗೆ ತನ್ನಿ, ಉಸಿರೆಳೆದುಕೊಳ್ಳಿ ಮತ್ತು ನಿಮ್ಮ ಬಲ ಮೊಣಕಾಲನ್ನು ಮಡಿಚಿ ಬಲಗೈ ಸಹಾಯದಿಂದ ಬಲಗಾಲಿನ ತುದಿಯನ್ನು ಹಿಡಿದುಕೊಳ್ಳಿ ನಂತರ ನಿಧಾನವಾಗಿ ಮೊಣಕಾಲುನ್ನು ನೇರಮಾಡಿ ಚಿತ್ರ ದಲ್ಲಿರುವಂತೆ , ಉಸಿರಾಟದ ಕ್ರಿಯೆ ಸಹಜವಾಗಿರಬೇಕು , ದೃಷ್ಟಿ ನೇರವಾಗಿರಬೇಕು, ೩೦ ಸೆಕೆಂಡ್ ಗಳ ಕಾಲ ಇದ್ದು ನಂತರ ಇನ್ನೊಂದು ಬದಿಗೆ ಪ್ರಯತ್ನಿಸಿ.

ಉತ್ತಿತ ಹಸ್ತ ಪದಾಂಗುಷ್ಠಾಸನ ಪ್ರಯೋಜನಗಳು:

1) ಈ ಆಸನವು ಸ್ನಾಯುವನ್ನು ಬಲಪಡಿಸುತ್ತದೆ.
2) ಈ ಆಸನವು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
3) ಈ ಆಸನವು ಬೆನ್ನುಮೂಳೆಯನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ, ಮತ್ತು ನಿಮ್ಮ ಎರೆಕ್ಟರ್ ಸ್ಪೈನ್ ಅನ್ನು ಬಲಪಡಿಸುತ್ತದೆ.
4) ಈ ಆಸನವು ಭುಜಗಳನ್ನು ಬಲಿಷ್ಠಗೊಳಿಸುತ್ತದೆ.
5) ಈ ಆಸನವು ದೇಹದ ಸಮತೋಲನ ವನ್ನು ನಿರ್ಮಿಸುತ್ತದೆ.

 

 

 

 

 

 

 

 

 

ಏಕಪಾದ ಶೀರ್ಷಾಸನ

ಏಕ ಎಂದರೆ ಒಂದು ಎಂದರ್ಥ ಒಂದು ಕಾಲನ್ನು ಮೇಲಕ್ಕೆ ಎತ್ತಿ ಮತ್ತೊಂದನ್ನು ನೆಲಕ್ಕೆ ತಾಗಿಸುವುದರಿಂದ ಇದಕ್ಕೆ ಏಕಪಾದ ಶೀರ್ಷಾಸನ ಎಂದು ಕರೆಯುತ್ತಾರೆ.

ಏಕಪಾದ ಶೀರ್ಷಾಸನ ಮಾಡುವ ವಿಧಾನ :
ಮೊದಲು ದಂಡಾಸನದ ಸ್ಥಿತಿಗೆ ಬರಬೇಕು ಚಿತ್ರದಲ್ಲಿರುವಂತೆ ನಂತರ ಬಲಗಾಲನ್ನು ಮಡಿಚಿ ನಿಧಾನವಾಗಿ ಎರಡು ಕೈಗಳ ಸಹಾಯದಿಂದ ಬೆನ್ನಿನ ಹಿಂದೆ ಇಟ್ಟುಕೊಳ್ಳಬೇಕು, ನಂತರ ಎಡಗಾಲು ಕೆಳಗೆ ನೇರವಾಗಿರಬೇಕು, ನಂತರ ಬೆನ್ನು ನೇರವಾಗಿರಬೇಕು ಉಸಿರಾಟದ ಕ್ರಿಯೆ ಸಹಜವಾಗಿರಬೇಕು, ದೃಷ್ಟಿ ನೇರವಾಗಿರಬೇಕು ನಂತರ ಇನ್ನೊಂದು ಬದಿಗೆ ಮಾಡಿ ಚಿತ್ರದಲ್ಲಿರವಂತೆ.

ಪ್ರಯೋಜನಗಳು:
1) ಈ ಆಸನವು ಸೊಂಟದ ಮೂಲ ಮತ್ತು ನಾಭಿಯ ಭಾಗ ಚೈತನ್ಯಗೊಳ್ಳುವವು.
2) ರಕ್ತಹೀನತೆ ಮತ್ತು ನರಗಳ ನಡುಕ ಇರುವವರಿಗೆ ಪ್ರಯೋಜನಕಾರಿ.
3) ಈ ಆಸನವು ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು.

4) ಆಸ್ತಮಾ, ಮೈಗ್ರೇನ್, ತಲೆ-ನೋವುಗಳ ತಕ್ಷಣದ ತಡೆಗಟ್ಟುವಿಕೆ ಮತ್ತು ಕೋಪವನ್ನು ಸಹ ಕಡಿಮೆ ಮಾಡುತ್ತದೆ.

 

 

 

 

 

 

 

 

 

- ಚೈತ್ರಾ ಹಂಪಿನಕಟ್ಟಿ.

 

 

MORE NEWS

ಮೊದಲ ನಾಟಕದ ಮೊದಲ ಟೀಮ್ ಸ್ಪಿರಿಟ್

08-12-2025 ಬೆಂಗಳೂರು

"ರಂಗಾಭ್ಯಾಸದಲ್ಲಿ ಮೊದ ಮೊದಲು ಅರ್ಥಾತ್ ಆರಂಭಕ್ಕೆ ಭಾಷಿಕವಾಗಿ ಸಣ್ಪುಟ್ಟ ತೊಡಕುಗಳು ಕಾಡಿದವು. ಪ್ರತಿಗಂಧರ್ವ ಹೆಸ...

ಪುರುಷವತಾರ- ದೇಹ ಮೀಮಾಂಸೆಯ ಕಥನ 

05-12-2025 ಬೆಂಗಳೂರು

"`ಪುರುಷಾವತಾರ’ ಕಾದಂಬರಿಯಲ್ಲಿ ಗೋಸಾಯಿ ಗುರು ಹನುಮಂತ ಒಂಟಿಮನಿ ಅವರಿಗೆ ಹೇಳುವ ಮಾತುಗಳಿವು. ಈ ಮಾತುಗಳು ಕ...

DAILY COLUMN: ಮಗುವಿನ ಪ್ರಾಗ್ನಿಕ ರಚನೆ, ಕಲಿಕೆ ಮತ್ತು ಬಾಶೆ

04-12-2025 ಬೆಂಗಳೂರು

"ತಾಯ್ಮಾತು ಮತ್ತು ಶಿಕ್ಶಣ ಮಾದ್ಯಮ ಇವುಗಳ ನಡುವಿನ ರಾಚನಿಕ ಬಿನ್ನತೆಗಳೂ ಕೂಡ ಪೆರಮಾತಿನ ಶಿಕ್ಶಣದ ಸೋಲಿಗೆ ಕಾರಣವಾ...