ವೀರಲೋಕದಿಂದ ಉತ್ತರ ಕರ್ನಾಟಕ ಮಂದಿಗೆ ‘ಉತ್ತರ ಪರ್ವ - ಉತ್ತರ ಕರ್ನಾಟಕ ಸಾಹಿತ್ಯ ಸುಗ್ಗಿ’

Date: 28-11-2023

Location: ಬೆಂಗಳೂರು


ಬೆಂಗಳೂರು: ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ ಅವರ ಪರಿಕಲ್ಪನೆಯ ಡಾ. ರಾಜಶೇಖಕರ ಮಠಪತಿ (ರಾಗಂ) ಅವರ ಸಹಭಾಗಿತ್ವದಲ್ಲಿ ಉತ್ತರ ಕರ್ನಾಟಕದ ಲೇಖಕ/ಲೇಖಕಿಯರಿಗೆ "ಉತ್ತರ ಪರ್ವ - ಉತ್ತರ ಕರ್ನಾಟಕ ಸಾಹಿತ್ಯ ಸುಗ್ಗಿ" ಸಾಂಸ್ಕೃತಿಕ ಅಖಂಡತೆಗಾಗಿ ಒಂದು ಮಹತ್ವದ ಹೆಜ್ಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಾಹಿತ್ಯ ಪರ್ವದ ಅಂಗವಾಗಿ ಲೇಖಕರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ.

ನಿಯಮಗಳು: ಈ ಸಾಹಿತ್ಯ ಪರ್ವವು ಉತ್ತರ ಕರ್ನಾಟಕದ ಜೆಲ್ಲೆಗಳ ಲೇಖಕರಿಗೆ ಮಾತ್ರವಾಗಿದೆ. ಸಾಹಿತ್ಯ ಪರ್ವಕ್ಕೆ ಸಲ್ಲಿಸುವ ಕಥೆ/ಕಾದಂಬರಿ ಅಥವಾ ಇನ್ನಿಥರ ಸೃಜನಶೀಲ ಕೃತಿಗಳು ಸ್ವಂತ ರಚನೆಯಾಗಿರಬೇಕು. ಕೃತಿಗಳು ಕನಿಷ್ಠ 120 ಪುಟಗಳು ಹಾಗೂ ಗರಿಷ್ಠ 200 ಪುಟಗಳನ್ನು ಹೊಂದಿರಲಿ. ಮೊದಲು ನೀವು ನಿಮ್ಮ ಕೃತಿಯ ಸಾರಾಂಶ ಅಥವಾ ಒಂದು ಭಾಗವನ್ನು (10 ಪುಟಗಳನ್ನು ಮೀರದಿರಲಿ) ನಮಗೆ ಮೇಲ್ ಮೂಲಕ ಕಳಿಸಿಕೊಡಬೇಕು. ಆಯ್ಕೆಯಾದ ಕೃತಿಗಳ ಪೂರ್ತಿ ಹಸ್ತಪ್ರತಿಯನ್ನು ನಾವೇ ಖುದ್ದಾಗಿ ಸಂಪರ್ಕಿಸಿ ತರಿಸಿಕೊಳ್ಳುತ್ತೇವೆ. ಕೃತಿಗಳ ಮುಖ್ಯ ಕಾಳಜಿ ಪ್ರಾದೇಶಿಕತೆ, ಭಾಷೆ, ಸಂಸ್ಕೃತಿಯನ್ನು ಪ್ರತಿನಿಧಿಸುವಂತೆ ಇರಲಿ. ಕೃತಿಗಳ ಆಯ್ಕೆಯಲ್ಲಿ ವೀರಲೋಕ ಸಂಪಾದಕ ಹಾಗೂ ಸದಸ್ಯ ಮಂಡಳಿಯ ತೀರ್ಮಾನವೇ ಅಂತಿಮವಾಗಿರುತ್ತದೆ.

ನಿಮ್ಮ ಬರವಣಿಗೆ ಹೇಗೇ ಇರಲಿ ಚಿಂತೆ ಬೇಡ! ವಸ್ತು, ವಿಷಯದಲ್ಲಿ ಸೃಜನಶೀಲತೆ ಇದ್ದರೆ ಸಾಕು. ನಿಮ್ಮ ಕೃತಿಯನ್ನು ಮೌಲ್ಯಯುತ ಕೃತಿಯನ್ನಾಗಿಸಲು ನಮ್ಮ ಸಂಪಾದಕ ಮಂಡಳಿಯು ನಿಮ್ಮ ಜೊತೆಗಿರುತ್ತದೆ. ಮೊದಲ ಸುತ್ತಿನಲ್ಲಿ ಆಯ್ಕೆಯಾದ ಕೃತಿಗಳಿಗೆ ಶೇ. 25 ರಷ್ಟು ರಾಯಧನವನ್ನು ಮುಂಗಡವಾಗಿ ಪಾವತಿ ಮಾಡಲಾಗುವುದು. ಆಯ್ಕೆಯಾದ 25 ಕೃತಿಗಳಿಗೆ ಸೂಕ್ತ ಸಂಭಾವನೆ ನೀಡಿ, ವೀರಲೋಕದಿಂದ ಪ್ರಕಟಿಸಲಾಗುವುದು. 2024ರ ಏಪ್ರಿಲ್ ತಿಂಗಳಲ್ಲಿ ವೀರಲೋಕದಿಂದ ಆಯೋಜಿಸಲಾಗುವ ಉತ್ತರ ಪರ್ವ ಸಾಹಿತ್ಯ ಸುಗ್ಗಿಯಲ್ಲಿ ನಿಮ್ಮ ಕೃತಿಗಳನ್ನು ನಾಡಿನ ಪ್ರಮುಖ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಗುವುದು.

ಹತ್ತು ಪುಟಗಳ ಸಾರಾಂಶ/ಕೃತಿಯ ಭಾಗವನ್ನು ಪ್ರತಿಯನ್ನು ಈ ಕೂಡಲೇ ನಮ್ಮ ವಿಳಾಸಕ್ಕೆ ಮೇಲ್ ಮಾಡಿ. uttaraparva@gmail.com (ಕೊನೆಯ ದಿನಾಂಕ : 31-ಡಿಸೆಂಬರ್-2023) ನೆನಪಿಡಿ, ಮೊದಲ ಸುತ್ತಿನಲ್ಲಿ ಆಯ್ಕೆಯಾಗುವ ನಿಮ್ಮ ಕೃತಿಯ ಬೆರಳಚ್ಚು ಪ್ರತಿ ನಮ್ಮನ್ನು ತಲುಪಲು ಕೊನೆಯ ದಿನಾಂಕ 2024 ಫೆಬ್ರವರಿ 28 ಆಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಮೊಬೈಲ್ ನಂಬರ್ 7022122121, 8861212172 ಅನ್ನು ಸಂಪರ್ಕಿಸಬಹುದು.

 

MORE NEWS

ಸಾಹಿತ್ಯ ಕೃತಿಗಳು ಸಮಾಜದ ಹಲವು ಮುಖಗಳನ್ನು ತೋರಿಸುವ ಶಕ್ತಿ ಪಡೆದಿವೆ; ದೀಪಾ ಭಾಸ್ತಿ

13-12-2025 ಬೆಂಗಳೂರು

ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...

2026ನೇ ಸಾಲಿನ ಟೊಟೊ ಪುರಸ್ಕಾರದ ಮೊದಲನೇ ಪಟ್ಟಿ ಬಿಡುಗಡೆ

12-12-2025 ಬೆಂಗಳೂರು

2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...

ಮಕ್ಕಳಲ್ಲಿ ಕಲ್ಪನಾ ಲೋಕ ಬೆಳೆಸಿ: ಬಸು ಬೇವಿನಗಿಡದ

10-12-2025 ಧಾರವಾಡ

ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...