''ಬೇಂದ್ರೆ ಸಾಹಿತ್ಯವನ್ನು 'ಸಹೃದಯ ವಿಮರ್ಶೆ'ಯ ಹೊಸ ಓದುವಿನಲ್ಲಿ ಸಂಶೋಧನೆಗೆ ತೊಡಗಿದ ನನಗೆ ಅನಿಸಿದ ಭಾವ ಶುಚಿಗಳನ್ನು ಇಲ್ಲಿ ಸಂಗ್ರಹಿಸಿರುವೆ. ರಾಷ್ಟ್ರೀಯ, ಅಂತರಾಷ್ಟ್ರೀಯ ವಿಚಾರ ಸಂಕಿರಣಗಳೆಂಬ ನೆಪದಲ್ಲಿ ಈ ಅಧ್ಯಯನಗಳ ಫಲಿತವು ಮೂಡಿದೆ. ಇದು ಓದುವಿನ ಹೊಸ ಹೆಜ್ಜೆ ಹದಗೊಳ್ಳುತ್ತಿರುವ ಅರ್ಥಸಾರ, ಈ ವಿಚಾರಗಳನ್ನೆಲ್ಲಾ ನೀವು ವಿಸ್ತರಿಸಬಹುದು,'' ಎನ್ನುತ್ತಾರೆ ಅಂಕುರ ಡಾ. ರವಿಶಂಕರ್ ಎ.ಕೆ. ಅವರು ತಮ್ಮ ‘ಸೌಂದರ್ಯ ಶುಚಿ’ ಕೃತಿಗೆ ಬರೆದ ಲೇಖಕರ ನುಡಿ ನಿಮ್ಮ ಓದಿಗಾಗಿ.
ನಮಗೆ ಬುದ್ಧಿಯ ವಿಕಾಸದ ಮೊದಲ ಹಂತದಲ್ಲಿಯೇ ವಿಮರ್ಶೆ ನಮ್ಮ ಜೊತೆಯಾಗುತ್ತದೆ. ಇದು ಸರಿ, ತಪ್ಪುಗಳ ಅವಲೋಕನೆಯೊಂದಿಗೆ ಜಗತ್ತಿನ ಎಲ್ಲಾ ತಿಳಿವಳಿಕೆಗಳ ಕುರಿತು ಶುಚಿಕಾರ್ಯ ಪ್ರಾರಂಭಿಸುತ್ತೇವೆ. ಈ ಶುಚಿ ಎಂದರೇನು? ಎಂಬ ಕುತೂಹಲವು ಕನ್ನಡ ಸಾಹಿತ್ಯದಲ್ಲಿ ಇನ್ನೂ ಆಳವಾದ ಬೇರಿನೊಂದಿಗೆ ಗ್ರಹಿಕೆಗೆ ಸಿಕ್ಕಿಲ್ಲ. ಮೇಲ್ಪದರದ ಕೆಸರು ನೀರಿನಲ್ಲಿ ಪುಷ್ಟಿಹೊಂದಿರುವ ಸಾಹಿತ್ಯ ಸಮೃದ್ಧಿಯು ಮತ್ತೆ ಪಂಪನೋ, ವಚನಗಳೋ, ಹರಿಹರನೋ, ಕುಮಾರವ್ಯಾಸನನ್ನೋ ಸೃಷ್ಟಿಸದ ಅಲ್ಪಾವಧಿಗೆ ತಲುಪಿದ್ದೇವೆ. ಇಪ್ಪತ್ತನೇ ಶತಮಾನದ ಸಾಹಿತ್ಯ ಕಾರ್ಯವು ಇಂತಹ
ಪರಿಶುದ್ಧತೆಗೆ ಮನಸ್ಸುಮಾಡಿರುವುದು ಸತ್ಯವಾದರೂ ಈ ಮನಸ್ಸಿನ ಅರಿವಿನಲ್ಲಿ ಇಂದಿಗೂ ಹಲವು ಬಾಗಿಲುಗಳು ಮುಚ್ಚಿಯೇ ಇವೆ. ಈ ಪರಿಶುದ್ಧತೆಯು ಯಾವಾಗಲು ಪರಿಶುದ್ಧವೇ ಆಗಿರುತ್ತದೆ. ಇದನ್ನು ಸೌಂದರ್ಯವೆನ್ನಬಹುದು. ಈ ಸೌಂದರ್ಯದ ಕಣಜದಲ್ಲಿ ಪಂಪನಾದಿಯಿಂದ ಇಪ್ಪತ್ತನೇ ಶತಮಾನದ ಹಲವು ಅರ್ಥಸಾರಗಳು ಸೇರಿಹೋಗಿವೆ. ಸುಲಭವಾಗಿ ಇವುಗಳನ್ನು ಗ್ರಹಿಸುವುದಾದರೆ ಯಾವ ಸಾಹಿತ್ಯದಲ್ಲಿ ಒಂದಕ್ಷರವು ವ್ಯತ್ಯಾಸವಿಲ್ಲದೇ ಓದುಗಳಲ್ಲಿ ಚೇತನವಾಗುವುದೋ ಅದೇ ಅನಂತ ಸಾಹಿತ್ಯ ಸಾರ. ಈ ಎಲ್ಲಾ ಸಾಹಿತ್ಯವನ್ನು ಪರಿಶುದ್ಧತೆಯ ತೆಕ್ಕೆಗೆ ತಂದು ಸೌಂದರ್ಯವೆಂದಿರುವೆನು. ಈ ಸಾಹಿತ್ಯದಲ್ಲಿ ಈಗಾಗಲೇ ಸವೆಯದ ಸವಿಯಂತೆ ಒಂದು ಸೌಂದರ್ಯವಡಗಿರುತ್ತದೆ. ಅದನ್ನು ಕಾಣಲು ನಮ್ಮ ಅಂತರಂಗದ ಕಣ್ಣುಗಳ ಶುಚಿತನ ಬೇಕಾಗಿದೆ. ಈ ಶುಚಿತ್ವವೇ ಸೌಂದರ್ಯದ ಶುಚಿ, ವಿಮರ್ಶೆ ಎಂದರೆ ಈ ಶುಚಿಯ ಕಾರ್ಯವೇ ಆಗಿದೆ. ಕನ್ನಡ ಸಾಹಿತ್ಯದ ವರ್ತಮಾನ ಓದುಗರಾದ ನಾವು ಪಶ್ಚಿಮ ಕಣ್ಣುಗಳಲ್ಲಿ ಜ್ಞಾನವನ್ನು ಕಂಡರೂ, ಸಿದ್ಧಾಂತಗಳ ಸ್ವೀಕರಣೆ, ನೋಟಗಳನ್ನು ಕಳಚಬೇಕಿದೆ. ನಮ್ಮ ಮಣ್ಣಿಗೂ ಹಲವು ಕಣ್ಣುಗಳಿವೆ. ಆ ಕಣ್ಣುಗಳ ತೆರೆಯುವ, ಧರಿಸುವ ಕಾರ್ಯ ನಮ್ಮದಾಗಬೇಕಿದೆ. ವಿಮರ್ಶೆಗೆ ಹೊಸ ಅರ್ಥವನ್ನು ಸೃಷ್ಟಿಸಿಕೊಳ್ಳುವುದು ನಮ್ಮ ಧರ್ಮವೇ ಹೊರೆತು, ಸ್ವೀಕಾರವಲ್ಲ.
ಬೇಂದ್ರೆ ಸಾಹಿತ್ಯವನ್ನು 'ಸಹೃದಯ ವಿಮರ್ಶೆ'ಯ ಹೊಸ ಓದುವಿನಲ್ಲಿ ಸಂಶೋಧನೆಗೆ ತೊಡಗಿದ ನನಗೆ ಅನಿಸಿದ ಭಾವ ಶುಚಿಗಳನ್ನು ಇಲ್ಲಿ ಸಂಗ್ರಹಿಸಿರುವೆ. ರಾಷ್ಟ್ರೀಯ, ಅಂತರಾಷ್ಟ್ರೀಯ ವಿಚಾರ ಸಂಕಿರಣಗಳೆಂಬ ನೆಪದಲ್ಲಿ ಈ ಅಧ್ಯಯನಗಳ ಫಲಿತವು ಮೂಡಿದೆ. ಇದು ಓದುವಿನ ಹೊಸ ಹೆಜ್ಜೆ ಹದಗೊಳ್ಳುತ್ತಿರುವ ಅರ್ಥಸಾರ, ಈ ವಿಚಾರಗಳನ್ನೆಲ್ಲಾ ನೀವು ವಿಸ್ತರಿಸಬಹುದು. ಜ್ಞಾನ ಬೆಳೆದಷ್ಟೂ ವಿಜ್ಞಾನವಾಗುತ್ತದೆ. ಮತ್ತೆ ಮತ್ತೆ ಹೊಸ ಪ್ರಯೋಗಗಳ ಆವಿಷ್ಕಾರಕ್ಕೆ ನಾಂದಿಯಾಗುತ್ತದೆ. ಸಾಹಿತ್ಯ ಇಂತಹ ಎಲ್ಲಾ ಸಹೃದಯರ ಆಸ್ತಿ.
ಈ ಕಾರ್ಯದ ಪೂರ್ಣ ಪ್ರೀತಿಯೆಂದರೆ ಡಾ. ಜಿ. ಕೃಷ್ಣಪ್ಪ ಅವರು. ಬೇಂದ್ರೆ ಅಧ್ಯಯನದ ಪ್ರೀತಿಯನ್ನು ನಾಡಿನ ಹಲವು ಸಹೃದಯರಲ್ಲಿ ಬಿತ್ತಿದಂತೆ ನನ್ನಲ್ಲೂ ಬಿತ್ತಿ ಬೆಳಸಿದ್ದೇ ಇವರು. ಇಂದಿಗೂ ಅಧ್ಯಯನ ಪ್ರೀತಿಯ ಹಿರಿಪಾಲು ಇವರದೇ ಆಗಿದೆ. ಇವರಿಗೆ ನನ್ನ ಬದುಕು ಚಿರಋಣಿ. ಹಾಗೂ ಈ ಮೊದಲ ಅಧ್ಯಯನ ಕೃತಿಯ ಅರ್ಪಣೆ. ಬೇಂದ್ರೆ ಸಾಹಿತ್ಯವನ್ನು ಕುರಿತು ಸಂಶೋಧನೆ ಮಾಡಲು ಮಾರ್ಗದರ್ಶನದ ಜವಾಬ್ದಾರಿಯಲ್ಲಿಯೇ ನಮ್ಮ ಓದುವಿನ ಹೊಸ ಚಿಂತನೆಗಳನ್ನು ತೆರೆದ ಡಾ. ಕೆ.ಸಿ ಶಿವಾರೆಡ್ಡಿ ಅವರಿಗೆ ವಂದನೆಗಳು, ನನ್ನೊಳಗೆ ಅಕ್ಷರಗಳ ನುಡಿ ಧೈರ್ಯ ತುಂಬಿದವರು ನನ್ನ ತಂದೆ ಕುಮಾರಯ್ಯ ಎ.ಜಿ, ತಾಯಿ ಲಲಿತಮ್ಮ, ನನ್ನ ಜೊತೆಗೆ ಸಹ ಪಯಣ ಪ್ರಾರಂಭಿಸಿದ ಆತ್ಮೀಯ ಸಖಿ ಕಾವ್ಯ, ಹಾಗೂ ಗುರು ಸ್ವರೂಪಿ ಕಾಣೆಯಾದ ಗೋವಿಂದರಾಯರು. ಇವರ ಪ್ರೀತಿಯ ಫಲವೇ ನನ್ನ ಈ ಎಲ್ಲಾ ಕಾರ್ಯಗಳ ನಿತ್ಯ ಪ್ರೇರಣೆ. ಇವರಿಗೆ ಸದಾ ನನ್ನ ಸಾಹಿತ್ಯ ಸೇವೆಯೇ ಜೀವಂತ ಕಾಣೆಯಾಗಿದೆ.
ನನ್ನ ಬರಹಗಳ ಮೊದಲ ಓದುಗರು ಅಕ್ಕರೆಯ ಅನಿತ ಕೆ.ವಿ ಹಾಗೂ ಈ ಎಲ್ಲಾ ಅಕ್ಷರಗಳು ಮೂಡಲು ಕಾರಣರಾದ ಹಲವು ಸಹೃದಯರಿಗೂ ಧನ್ಯವಾದಗಳು. ಈ ಎಲ್ಲರದು ಸದಾ ಲಾಭವಿಲ್ಲದ ಪ್ರೀತಿ.
–ಅಂಕುರ
ಡಾ. ರವಿಶಂಕರ್ ಎ.ಕೆ
"ಕದಡಿದ ಕೊಳವು ತಿಳಿಯಾಗಿರಲು (ಬಿಡಿ ಬರಹ, ಪ್ರಬಂಧ) ಓದಿದೆ. ಇಲ್ಲಿನ ಹೆಚ್ಚಿನ ಲೇಖನಗಳನ್ನು ನಾನು ಈ ಮೊದಲೇ ಓದಿದ್...
"ಪುಸ್ತಕ, ಓದು ಮತ್ತು ಬರವಣಿಗೆ ಒಂದು ವರ್ಗದ ಪ್ಯಾಶನ್. ತನ್ಮಯತೆಯಿಂದ ಓದುತ್ತಾ ಕೂತ ವ್ಯಕ್ತಿ ನಮಗೆ ಯಾವತ್ತೂ ಒಂದ...
"ಈ ನಡುವೆ ದಶಕಗಳ ಹಿಂದೆಯೇ ಆಗೀಗ ಬರೆದಿಟ್ಟಿದ್ದ ಚೀಟಿಗಳು ಕಣ್ಣಿಗೆ ಬಿದ್ದಾಗೆಲ್ಲಾ 'ನಮ್ಮನ್ನು ಹೀಗೇ ಬಿಟ್ಟರ...
©2025 Book Brahma Private Limited.