ಎಷ್ಟು ದೂರ ನಡೆಯುತ್ತಿ ಮುಖ್ಯವಲ್ಲ, ದಾರಿ ಸರಿಯಿದೆಯಾ ನೋಡಿಕೋ‍


“ಸಂಬಂಧಗಳ ನಡುವಿನ ಅಂತರಕ್ಕೆ ಪ್ರಾಯವಷ್ಟೇ ಕಾರಣವಲ್ಲ ಪ್ರಾಯಕ್ಕೆ ತಕ್ಕಂತೆ ಬದಲಾಗುವ ಆಲೋಚನಾ ಲಹರಿ, ಯೋಚಿಸುವ ರೀತಿ , ಯೋಜಿಸುವ ರೀತಿ , ಎಲ್ಲಕ್ಕೂ ಮಿಗಿಲಾಗಿ ಅಗತ್ಯತೆ. ಆಗಷ್ಟೇ ದಾಂಪತ್ಯಕ್ಕೆ ಕಾಲಿರಿಸಿದ ತರುಣನ ದುಡಿಮೆಯ ಹಸಿವೆಯನ್ನು ಅತಿ ಆಸೆ ಎಂದೂ ಹೇಳಲಾಗುವುದಿಲ್ಲ," ಎನ್ನುತ್ತಾರೆ ಶರತ್ ಶೆಟ್ಟಿ. ಅವರು ಜೋಗಿ ಅವರ ‘ನಿರ್ಗಮನ’ ಕೃತಿ ಕುರಿತು ಬರೆದ ಅನಿಸಿಕೆ.

ಅದೇನೋ ಹೇಳಿಕೊಳ್ಳೊಕೆ ಆಗದ ಚಡಪಡಿಕೆ, ಯಾವುದೋ ರೀತಿಯ ಭಯ ಹೆಚ್ಚು ಜಾಗ್ರತವಾದಂತ ಭಾವವಿದೆಯೀಗ. ಅದು ಸರಿಯೋ ..ತಪ್ಪೋ ? ಬರೆಹಗಳನ್ನ ನಮ್ಮ ಅರಿವಿನ ಮಟ್ಟಕ್ಕೆ ಸೀಮಿತಗೊಳಿಸಿ ಒಂದೆರಡು ಮಾತು ಕೃತಿಯ ಕುರಿತು ಹೊರಟ್ರೆ ಅದು ತಪ್ಪಾ.? ಈ ಪ್ರಶ್ನೆ ಹಿಂದೆ ಕಾಡದೆಯೇನಿರಲಿಲ್ಲ ಇಂದು ತುಸು ಹೆಚ್ಚಾಗಿಯೇ ಕಾಡ್ತಿದೆ. ತಪ್ಪಾದ್ರೆ..?ಆಗ್ಲಿ‍ ! ಕಲಿತಹಾಗಾಯ್ತು...., ಇಷ್ಟಕ್ಕೂ ಇದು ನಂಗನ್ಸಿದ್ದಷ್ಟೇ , ಎಲ್ಲರಿಗೂ ಅನ್ನಿಸಬೇಕಾದ್ದೇನಲ್ಲ .

ಸಂಬಂಧಗಳ ನಡುವಿನ ಅಂತರಕ್ಕೆ ಪ್ರಾಯವಷ್ಟೇ ಕಾರಣವಲ್ಲ ಪ್ರಾಯಕ್ಕೆ ತಕ್ಕಂತೆ ಬದಲಾಗುವ ಆಲೋಚನಾ ಲಹರಿ, ಯೋಚಿಸುವ ರೀತಿ , ಯೋಜಿಸುವ ರೀತಿ , ಎಲ್ಲಕ್ಕೂ ಮಿಗಿಲಾಗಿ ಅಗತ್ಯತೆ. ಆಗಷ್ಟೇ ದಾಂಪತ್ಯಕ್ಕೆ ಕಾಲಿರಿಸಿದ ತರುಣನ ದುಡಿಮೆಯ ಹಸಿವೆಯನ್ನು ಅತಿ ಆಸೆ ಎಂದೂ ಹೇಳಲಾಗುವುದಿಲ್ಲ. ದುಡಿದು ದಣಿದು ಜೀವನದ ಅರ್ಥವನ್ನ ಬೇರೆಯೇ ರೀತಿಯಲ್ಲಿ ಗ್ರಹಿಸಿ ಬದುಕ ಹೊರಟ ಅರವತ್ತರ ಹರೆಯದ ವ್ಯಕ್ತಿಯ ಜೀವನೋತ್ಸಾಹವನ್ನು ಸಪ್ಪೆ ಎನ್ನಲೂ ಆಗುವುದಿಲ್ಲ‌‌. ಈ ವೈಚಿತ್ರ್ಯವನ್ನು , ವೈರುಧ್ಯವನ್ನು ಸೊಗಸಾಗಿ ಕ್ರತಿಯಲ್ಲಿ ಹೆಣೆಯಲಾಗಿದೆ.

ಓದಿ ಪೂರ್ಣಗೊಳಿಸುವಾಗ “ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅಂತರಾಳವ ” ಎನ್ನುವ ಹಾಡಿನ ಸಾಲು ನೆನಪಾಯ್ತು.ಒಮ್ಮೊಮ್ಮೆಯಲ್ಲ , ಹೆಚ್ಚಿನಾಂಶ ಯಾವಾಗಲೂ ನಾವು ಭ್ರಮೆಯಲ್ಲಿಯೇ ತೇಲುತ್ತಿರುತ್ತೇವೆ ನಮ್ಮವರ ಕುರಿತು ನಮಗೆ ಸರಿಯಾಗಿ ತಿಳಿದಿದೆಯೆಂದು‌.ಆದರೆ ಅದೆಷ್ಟು ನಿಜ..? ವಯಸ್ಸಾದ ಅಪ್ಪನದೋ ಅಮ್ಮನದೋ ಕುರಿತು ನಮಗಿರುವ ಧೋರಣೆಗಳು ಎಷ್ಟರ ಮಟ್ಟಿಗೆ ಸರಿ. ಅವರಿಗೆ ಬೇಕಾದಂತೆ ಅವರಿದ್ದಾರೆ ಅವರ ಎಲ್ಲ ಅಗತ್ಯಗಳನ್ನು ನಾವು ಪೂರೈಸುತ್ತಿದ್ದೇವೆ ಎನ್ನುವುದು ಭ್ರಮೆಯಲ್ಲದೆ ಇನ್ನೇನು..? ನಾವೇ ಕಲ್ಪನಾಲೋಕವೊಂದನ್ನು ನಿರ್ಮಿಸಿ ಅದರಲ್ಲಿ ನಮ್ಮದೇ ಹಿರಿಯರನ್ನಿಟ್ಟು ಅವರಿಗೆ ವೃದ್ಧರ ಪಟ್ಟ ಕೊಟ್ಟು ನಾವೇ ಗಡಿಯೆಳೆದು ನಾವು ಅವರನ್ನು ತಿಳಿದೆವೆಂಬ ಲೋಕದಲ್ಲೇ ಇದ್ದುಬಿಡುತ್ತೇವೆ. ಈ ಕಲ್ಪನಾ ಲೋಕದ ಗಡಿ ವಿಸ್ತಾರವಾಗಲು, ಗಡಿಯಿಲ್ಲದೆ ವಾಸ್ತವಕ್ಕೆ ಜೀಕುವ ಆಲೋಚನೆ ತುಂಬಲು ಈ ಕೃತಿಯ ಓದು ಪೂರಕವೆಂಬ ಗಟ್ಟಿ ನಂಬಿಕೆಯಿದೆ.

ಹೆಚ್ಚು ಹೇಳಿ ಹದಗೆಡಿಸದೆ ಇಲ್ಲಿಗೆ ನಿಲ್ಲುತ್ತಿದ್ದೇನೆ ಆಸಕ್ತರು ಓದಿ ಅಭಿಪ್ರಾಯ ಹಂಚಿಕೊಳ್ಳಿ.ಅರಿವಿನ ಪರಿಧಿ ಹಿತವಾಗಿ ಹಿರಿದಾಗಿಸುವ ಹೊತ್ತಗೆಯನ್ನಿತ್ತ ಹಸ್ತಗಳಿಗೆ ಹ್ರತ್ಪೂರ್ವಕ ಅಭಿನಂದನೆಗಳು.

“ಎಷ್ಟು ದೂರ ನಡೆಯುತ್ತಿ ಮುಖ್ಯವಲ್ಲ, ದಾರಿ ಸರಿಯಿದೆಯಾ ನೋಡಿಕೋ‍” ತುಂಬಾ ಇಷ್ಟವಾದ ಸಾಲು.

 

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...