ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿರುವ ಅಭಿನವ, ತನ್ನ ವಿಶಿಷ್ಟ ಪ್ರಕಟಣೆಗಳ ಮೂಲಕ ದಾಖಲಾಗಿದೆ. ಕಾವ್ಯದಂಥ ಸೃಜನಶೀಲ ಕೃತಿಗಳನ್ನಲ್ಲದೆ, ಭಾಷಾಶಾಸ್ತ್ರ, ತತ್ವಶಾಸ್ತ್ರ, ಪರಿಸರ, ಮಾನವಶಾಸ್ತ್ರ, ಚರಿತ್ರೆ ಮುಂತಾದ ವಿಷಯಗಳಲ್ಲಿ ತಲಸ್ಪರ್ಶಿ ಶೀರ್ಷಿಕೆಗಳು, ಸತ್ವಪೂರ್ಣ ಕೃತಿಗಳ ಅನುವಾದ ಅಭಿನವದ ಹೆಗ್ಗಳಿಕೆ.
ಯು. ಆರ್. ಅನಂತಮೂರ್ತಿ, ವಿ.ಕೃ. ಗೋಕಾಕ್, ದೇವನೂರ ಮಹಾದೇವ, ಚಂದ್ರಶೇಖರ ಕಂಬಾರ, ಪಂ.ತಾರಾನಾಥ, ಲಕ್ಷ್ಮೀಶ ತೋಳ್ಪಾಡಿ, ಶಂಕರ ಮೊಕಾಶಿ ಪುಣೇಕರ್, ಪಿ. ಸಾಯಿನಾಥ್, ಯಶವಂತ ಚಿತ್ತಾಲ ಮೊದಲಾದವರ ಕೃತಿಗಳನ್ನು ಅಭಿನವ ಪ್ರಕಟಿಸಿದೆ. ಅಭಿನವದ ಪುಸ್ತಕಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕರ್ನಾಟಕ ನಾಟಕ ಅಕಾಡೆಮಿ, ಮಾಸ್ತಿ ಟ್ರಸ್ಟ್, ಕನ್ನಡ ಸಾಹಿತ್ಯ ಪರಿಷತ್‌ನಂಥ ಸಂಸ್ಥೆಗಳ ಪ್ರಸಸ್ತಿಗಳು ಲಭಿಸಿವೆ.
ಕನ್ನಡ ಪುಸ್ತಕ ಪ್ರಾಧಿಕಾರದ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ (2018), ಕನ್ನಡ ಬರಹಗಾರರು ಮತ್ತು ಪ್ರಕಾಶಕರ ಸಂಘದ ವರ್ಷದ ಪ್ರಕಾಶಕ (2017), ಮಾಸ್ತಿ ಪ್ರಶಸ್ತಿ (2019), ನವದೆಹಲಿಯ ಪ್ರಕಾಶಕರ ಒಕ್ಕೂಟ ಅತ್ಯುತ್ತಮ ಪುಸ್ತಕ ಪ್ರಕಟಣೆಗೆ ನೀಡುವ ರಾಷ್ಟ್ರಮಟ್ಟದ ಬಹುಮಾನ ಅಭಿನವಕ್ಕೆ ಸಂದಿವೆ.
©2024 Book Brahma Private Limited.