ಅವಳು ಸ್ತ್ರೀ ಸಂವೇದೀ ಮಾತು- ಕತೆಗಳು

Author : ಮೀರಾ ಪಿ.ಆರ್‌.

Pages 472

₹ 500.00
Year of Publication: 2024
Published by: ಅಭಿನವ
Address: ಅಭಿನವ 17\18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ ವಿಜಯನಗರ ಬೆಂಗಳೂರು- 560040
Phone: 9448804905

Synopsys

‘ಅವಳು ಸ್ತ್ರೀ ಸಂವೇದೀ ಮಾತು- ಕತೆಗಳು’ ಮೀರಾ ಪಿ. ಆರ್ ಹಾಗೂ ಪೂರ್ಣಿಮಾ ಕಶ್ಯಪ್ ಅವರು ಸಂಪಾದಿಸಿರುವ ಕತೆ ಮತ್ತು ಲೇಖನ ಸಂಕಲನವಾಗಿದೆ. ಇದಕ್ಕೆ ಎಚ್. ಎಸ್. ಶ್ರೀಮತಿ ಅವರ ಬೆನ್ನುಡಿ ಬರಹವಿದೆ; ಹೆಣ್ಣು ಬದುಕನ್ನು ಅರ್ಥ ಮಾಡಿಕೊಳ್ಳುವ, ಅವಳ ಬದುಕು ಎದುರಿಸುತ್ತಿರುವ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಆರಂಭವಾದ ಸ್ತ್ರೀವಾದೀ ಚಿಂತನೆ ಹಾಗೂ ಹೋರಾಟಗಳು ಮೊದಮೊದಲಲ್ಲಿ ಹೆಣ್ಣುಬದುಕಿನ ಎಲ್ಲ ಕಷ್ಟಗಳಿಗೂ ಪುರುಷರೇ ಕಾರಣ ಎಂದು ತಿಳಿದದ್ದು ಹೌದು. ಸ್ತ್ರೀವಾದವು ಮಾಗುತ್ತಾ ಬಂದಂತೆ ಇಂದು ಮಹಿಳೆಯರಂತೆಯೇ ಪುರುಷರು ಕೂಡಾ ಈ ಪಿತೃಪ್ರದಾನ ವ್ಯವಸ್ಥೆಯ ಆಟದಲ್ಲಿ ಉರುಳುವ ದಾಳಕ್ಕೆ ತಕ್ಕಂತ ನಡೆಯುವ ಕಾಯಿಗಳಷ್ಟೇ ಎಂಬುದನ್ನು ಮನಗಂಡಿದೆ. ಈ ಅರಿವನ್ನು ದೃಢೀಕರಿಸುವ ಒಂದು ಹಾದಿಯಾಗಿ, ಈ ಚಿಂತನೆಯು ಪಿತೃಪ್ರಧಾನ ವ್ಯವಸ್ಥೆಯು ತನ್ನ ಸಾಂಸ್ಥಿಕ ರಚನೆಗಳಲ್ಲಿ. ಹಾಗೂ ಜ್ಞಾನವಲಯಗಳಲ್ಲಿ ಹುದುಗಿಸಿಟ್ಟಿರುವ ನಿಯಮಾವಳಿಗಳು, ಹಾಗೂ ಮಿಥ್ ಗಳನ್ನು ಮರುಶೋಧನೆಗೆ ಒಳಪಡಿಸುತ್ತದೆ ಎಂಬುದನ್ನು ಈ ಪುಸ್ತಕದಲ್ಲಿ ನೋಡಬಹುದು ಎಂದಿದ್ದಾರೆ. 

About the Author

ಮೀರಾ ಪಿ.ಆರ್‌.

ಮೀರಾ ಪಿ.ಆರ್- ಹುಟ್ಟಿದ್ದು ತಮ್ಮ ತಾಯಿಯ ತವರೂರಾದ ಗುಂಡ್ಲುಪೇಟೆಯಲ್ಲಿ. ಬೆಳೆದದ್ದು, ವಿದ್ಯಾಭ್ಯಾಸ ಮಾಡಿದ್ದು ತುಮಕೂರು ಮತ್ತು ಮೈಸೂರಿನಲ್ಲಿ. ಬೆಂಗಳೂರಿನಲ್ಲೂ ಒಂದು ವರ್ಷ ವಾಸವಿದ್ದು ನಂತರ ಅಮೆರಿಕಾದ ಬಾಸ್ಟನ್ ನಲ್ಲಿ 8 ವರ್ಷಗಳನ್ನು ಕಳೆದು, 2008 ರಿಂದ ನ್ಯೂಜೆರ್ಸಿಯಲ್ಲಿ ನೆಲೆ ನಿಂತಿದ್ದಾರೆ. ಭಾಷಾವಿಜ್ಞಾನದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ಮೀರಾ ಶಿಕ್ಷಕಿಯಾಗಿ ಹಾಗೂ ಮೈಸೂರು, ಬೆಂಗಳೂರು ಆಕಾಶವಾಣಿಯಲ್ಲಿ ಹಲವು ವರ್ಷ ಅರೆಕಾಲಿಕ ಉದ್ಘೋಷಕಿಯಾಗಿ ಕೆಲಸ ಮಾಡಿದ್ದಾರೆ. ಕನ್ನಡದ ಹಲವು ನಿಯತಕಾಲಿಕೆಗಳಲ್ಲಿ, ವಿಶೇಷಾಂಕಗಳಲ್ಲಿ ಮತ್ತು ವೆಬ್ ಪೋರ್ಟಲ್ ಗಳಲ್ಲಿ, ಕನ್ನಡ ಸಾಹಿತ್ಯ ರಂಗ ಮತ್ತು ಅಮೆರಿಕದ ಕನ್ನಡ ಕೂಟಗಳ ಹಲವು ...

READ MORE

Related Books