ಸ್ವತಃ ಲೇಖಕರು ಮತ್ತು ಪ್ರಕಾಶಕರಾಗಿ ವಿದ್ಯಾರಣ್ಯ ಬಿ.ಎಸ್. ಅವರು `ಚಾರುಮತಿ ಪ್ರಕಾಶನ’ದಿಂದ ನೂರಾ ಐವತ್ತಕ್ಕೂ ಹೆಚ್ಚು ಮೌಲಿಕ ಕೃತಿಗಳ ಪ್ರಕಟಿಸಿದ್ದಾರೆ. ಮುದ್ರಣಪೂರ್ವ ಕೆಲಸಗಳಾದ ಕೃತಿಗಳ ಹಸ್ತಪ್ರತಿ ಪರಿಶೀಲನೆ ಮತ್ತು ತಿದ್ದುಪಡಿ, ಡಿಟಿಪಿ ಕೆಲಸಗಳು, ಪುಟ ವಿನ್ಯಾಸ, ರಕ್ಷಾಪುಟ ವಿನ್ಯಾಸ, ಹಾಗೂ ಮುದ್ರಣ ಕಾರ್ಯಗಳಾದ ಪ್ಲೇಟ್ ಮೇಕಿಂಗ್‌ಗೆ ಸಿದ್ಧಪಡಿಸುವುದು, ಸೂಕ್ತ ಆಕಾರ ಮತ್ತು ಗುಣಮಟ್ಟದ ಕಾಗದವನ್ನು ನಿರ್ಧರಿಸುವುದು, ಮುದ್ರಣ ಕಾರ್ಯ ಉಸ್ತುವಾರಿ, ಕೃತಿಯ ಆಕಾರ, ಗಾತ್ರಮತ್ತು ವಸ್ತುವಿಗೆ ಸಂಬಂಧಿಸಿದಂತೆ ಬೈಂಡಿಂಗ್ ಇತ್ಯಾದಿ ಕೆಲಸಗಳನ್ನು ನಿರ್ವಹಿಸುತ್ತದೆ.
ಪುಸ್ತಕದ ಮಾರಾಟ ವಿಷಯಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಓದುಗರನ್ನು ಗುರುತಿಸಿ, ಮಾರಾಟ ವ್ಯವಸ್ಥೆಯನ್ನು ನಿರ್ವಹಿಸುವುದು, ಕರ್ನಾಟಕದ ವಿವಿಧ ಜಿಲ್ಲೆಗಳು, ಶೈಕ್ಷಣಿಕ ಸಂಸ್ಥೆಗಳು, ಖಾಸಗಿ ಮತ್ತು ಸರಕಾರಿ ಗ್ರಂಥಾಲಯಗಳನ್ನು ಸಂಪರ್ಕಿಸಿ ಅಗತ್ಯಕ್ಕೆ ತಕ್ಕಂತೆ ಪುಸ್ತಕಗಳನ್ನು ಸರಬರಾಜು ಮಾಡುವ ವಿಧಾನದ ನಿರ್ವಹಣೆ ಕೂಡ ಮಾಡುತ್ತದೆ.
ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ, ನಾಟಕ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿಗಳ ಮುಂತಾದ ಪ್ರತಿಷ್ಠಿತ ಸಂಸ್ಥೆಗಳ ಹಲವಾರು ಕೃತಿಗಳ ಪ್ರಕಟಣೆಗಳ ನಿರ್ವಹಣೆ ಮಾಡುತ್ತದೆ. ದೇಶದ ವಿವಿಧ ಭಾಗಗಳಲ್ಲಿ ನಡೆಯುವ ಪುಸ್ತಕ ಪ್ರದರ್ಶನ ಮತ್ತು ಮುದ್ರಣ ತಂತ್ರಜ್ಞಾನ ಯಂತ್ರೋಪಕರಣಗಳ ಪ್ರದರ್ಶನದಲ್ಲಿ ಭಾಗವಹಿಸುತ್ತಿದೆ. ನವದೆಹಲಿಯಲ್ಲಿ ನಡೆದ ವಿಶ್ವಪುಸ್ತಕ ಪ್ರದರ್ಶನದಲ್ಲೂ ಭಾಗವಹಿಸಿ, ಅನೇಕ ವಿಚಾರ ಸಂಕಿರಣಗಳಿಂದ ಉದ್ಯಮದ ಬಗ್ಗೆ ಮಹತ್ವದ ಮಾಹಿತಿಗಳ ಸಂಗ್ರಹ ಮಾಡಿದೆ. ಮುದ್ರಿತ ಪುಸ್ತಕದೊಂದಿಗೆ ಇ-ಬುಕ್ ತಂತ್ರಜ್ಞಾನದ ತಿಳುವಳಿಕೆಯನ್ನು ನೀಡುತ್ತಿರುವ ಸ್ವಂತ ಸಂಸ್ಥೆ `ಚಾರುಮತಿ ಪ್ರಕಾಶನ’ದ ಪುಸ್ತಕಗಳು ಇ-ಬುಕ್ ಮಾದರಿಯಲ್ಲಿಯೂ ದೊರೆಯುತ್ತವೆ.
©2023 Book Brahma Private Limited.