ಛಂದ ಪುಸ್ತಕ

ಕನ್ನಡ ಸಾಹಿತ್ಯ ಲೋಕದಲ್ಲಿ ವಿಭಿನ್ನ ಪ್ರಯತ್ನಗಳ ಮೂಲಕ ತಮ್ಮದೇ ಹೆಜ್ಜೆ ಗುರುತುಗಳನ್ನು ಸೃಷ್ಟಿಸಿಕೊಂಡಿರುವ ಪ್ರಕಾಶನ ಸಂಸ್ಥೆ ಛಂದ ಪುಸ್ತಕ. ಹೊಸ ಬರಹಗಾರರಿಗೆ ಬೆಂಬಲವನ್ನು ನೀಡಿ, ಬೆಳೆಸುವ ಉದ್ದೇಶದೊಂದಿಗೆ ಕನ್ನಡದ ಪ್ರಸಿದ್ಧ ಲೇಖಕ ವಸುಧೇಂದ್ರ ಅವರು ಈ ಸಂಸ್ಥೆಯನ್ನು 2004ರಲ್ಲಿ ಕಟ್ಟಿ ಬೆಳೆಸಿಕೊಂಡು ಬಂದಿದ್ದಾರೆ.

ಹೊಸಧ್ವನಿಗಳ ಹುಡುಕಾಟ ನಿರಂತರವಾಗಿ ತೊಡಗಿಸಿಕೊಂಡು ಕಾರ್ಯನಿರ್ವಹಿಸುತ್ತಲೇ ಬಂದಿರುವ ಈ ಪ್ರಕಾಶನ ಸಂಸ್ಥೆ, ಸಾಹಿತ್ಯದ ಅನೇಕ ವಿಭಾಗಗಳಲ್ಲಿ ಈವರೆಗೆ ಪ್ರಕಟಿಸಿದ ನೂರರಷ್ಟು ಪುಸ್ತಕಗಳು ಜನಬೇಡಿಕೆಯನ್ನು ಪಡೆದಿವೆ. ಕಳೆದ ಹದಿನೆಂಟು ವರ್ಷಗಳಿಂದ ನಿಷ್ಠೆಯಿಂದ ಈ ಜವಬ್ದಾರಿಯನ್ನು ನಿರ್ವಹಿಸಿರುವುದರ ಕಾರಣದಿಂದ, ಹೊಸ ಬರಹಗಾರರು ಈ ಪ್ರಕಾಶನದ ಮೂಲಕ ತಮ್ಮ ಮೊದಲ ಕೃತಿಯನ್ನು ಹೊರ ತರುವ ಕನಸು ಕಾಣುತ್ತಾರೆ.

ಅನುವಾದ ಕಾರ್ಯವನ್ನೂ ನಿರಂತರವಾಗಿ ಈ ಸಂಸ್ಥೆ ಮಾಡುತ್ತಲೇ ಬಂದಿದೆ. ಜಗತ್ತಿನ ವಿಭಿನ್ನ ಸಂಸ್ಕೃತಿಗಳನ್ನು, ಜಗತ್ತು ಎದುರಿಸಿದ ಸವಾಲುಗಳನ್ನೂ ಅರ್ಥ ಮಾಡಿಕೊಳ್ಳಬಹುದಾದ ಆತ್ಮಚರಿತ್ರೆ, ಇತಿಹಾಸದ ಕೃತಿಗಳು, ಸೃಜನಶೀಲ ಬರವಣಿಗೆಗಳನ್ನು ಬಹುಗಂಭೀರವಾಗಿ ಪರಿಗಣಿಸಿದೆ. ಇಲ್ಲಿಯೂ ಈ ಸಂಸ್ಥೆ ಹೊಸ ಅನುವಾದಕರನ್ನು ಹುಡುಕಿ, ಅವರ ಉತ್ಸಾಹವನ್ನು ಪ್ರೋತ್ಸಾಹಿಸಿ ಬೆಳೆಸುತ್ತಾ, ಅವರಿಂದಲೇ ಈ ಕೆಲಸವನ್ನು ಉತ್ತಮ ಗುಣಮಟ್ಟದಲ್ಲಿ ಮಾಡಿಸುತ್ತಾ ಬಂದಿದೆ. ಆ ಕಾರಣದಿಂದ ಜಗತ್ತಿನ ಉತ್ತಮ ಕೃತಿಗಳು ಕನ್ನಡದ ಓದುಗರಿಗೆ ಲಭ್ಯವಾಗಿವೆ.

ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ “ಯುವ ಪುರಸ್ಕಾರ” ಪ್ರಶಸ್ತಿಯು ಛಂದ ಪುಸ್ತಕ ಸಂಸ್ಥೆಗೆ ನಾಲ್ಕು ಬಾರಿ ಬಂದಿದ್ದು, ಸಂಸ್ಥೆಯ ಸಾಹಿತ್ಯ ಸೇವೆಗೆ ಸಂದ ಗೌರವ.

BOOKS BY CHANDA PUSTAKA

ದೇಹವೇ ದೇಶ

ವಾಡಿವಾಸಲ್

ಪರ್ದಾ & ಪಾಲಿಗಮಿ

ದೀಪವಿರದ ದಾರಿಯಲ್ಲಿ

ನಾಲ್ಕನೇ ಎಕರೆ

ಮಾಕೋನ ಏಕಾಂತ

ಚುಕ್ಕಿ ಬೆಳಕಿನ ಜಾಡು

ಬಂಡಲ್‌ ಕತೆಗಳು

Publisher Address

ಛಂದ ಪುಸ್ತಕ
ಐ- 004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು – 560 076.

I-004, Mantri Paradise, Bannerugatta Road, Bengaluru-560 076.

Website

https://chandapustaka.com/

Publisher Contact

+91-9844422782

Email

vas123u@rocketmail.com