ದಾರಿ

Author : ಪಿ. ಕುಸುಮ ಆಯರಹಳ್ಳಿ (ಕುಸುಮಬಾಲೆ)

Pages 340

₹ 395.00
Published by: ಛಂದ ಪುಸ್ತಕ
Address: ಛಂದ ಪುಸ್ತಕ, 1-004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರೋಡ್, ಬೆಂಗಳೂರು- 560076
Phone: 9844422782

Synopsys

"ದಾರಿ" ಇದು ಕುಸುಮಾ ಆಯರಹಳ್ಳಿ ಬರೆದ ಕಾದಂಬರಿಯ ಶೀರ್ಷಿಕೆ. ಈ ಪುಸ್ತಕದಲ್ಲಿ, ಹಳ್ಳಿಯಿಂದ ನಗರಕ್ಕೆ ಹೋಗಿ ಬದುಕುತ್ತಿದ್ದ ವ್ಯಕ್ತಿಯೊಬ್ಬ, ತನ್ನ ಹಳ್ಳಿಗೆ ಮತ್ತೆ ಮರಳಿ, ಆ ಹಳ್ಳಿಗಾಗಿ ದುಡಿಯುವ, ಹಳ್ಳಿಗರಿಗಾಗಿ ತುಡಿಯುವ ಕಥೆ ಇದು. ಕಥಾ ನಾಯಕನ ಔದ್ಯೋಗಿಕ ಜೀವನದಲ್ಲಾದ ಸಣ್ಣ ಪಲ್ಲಟ ತನ್ನ ಹಳ್ಳಿಯನ್ನು ಆತನಿಗೆ ಮತ್ತೆ ನೆನಪಿಸುತ್ತದೆ. ತನ್ನದೇ ಆದ ಆದರ್ಶಗಳ ಜತೆ ಬದುಕುತ್ತಿರುವ ಕಥಾ ನಾಯಕನಿಗೆ ತಾನು ಹುಟ್ಟಿ ಬೆಳೆದ ಹಳ್ಳಿಯಲ್ಲಿ ‌ಎಲ್ಲವೂ ಸರಿಯಿಲ್ಲ ಎಂದೆನಿಸಲು ಆರಂಭವಾಗುತ್ತದೆ. ಸರಿಯಿಲ್ಲದ್ದನ್ನು ಸರಿಪಡಿಸುವ ನಿರ್ಧಾರ ಮಾಡುತ್ತಾನೆ. ಅಲ್ಲಿಂದಲೇ ಈ "ದಾರಿ"ಯ ಆರಂಭ.

About the Author

ಪಿ. ಕುಸುಮ ಆಯರಹಳ್ಳಿ (ಕುಸುಮಬಾಲೆ)

ಲೇಖಕಿ ಕುಸುಮಬಾಲೆ ಎಂಬ ಹೆಸರಿನಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಪಿ. ಕುಸುಮ ಆಯರಹಳ್ಳಿ ಅವರು ನಂಜನಗೂಡಿನವರು. ಚಾಮರಾಜನಗರದ ಅಜ್ಜಿಯ ಮನೆಯಲ್ಲಿ ಬೆಳೆದ ಅವರು, ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಎಂ.ಎ.ಪದವೀಧರರು. ಆಕಾಶವಾಣಿಯಲ್ಲಿ ಉದ್ಯೋಷಕಿಯಾಗಿ, ಅನೇಕ ಧಾರಾವಾಹಿಗಳಿಗೆ ಸಂಭಾಷಣೆಯನ್ನು ಒದಗಿಸಿದ್ದು, ನಾಡಿನ ಅನೇಕ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಸಣ್ಣಕಥಾ ಕ್ಷೇತ್ರದಲ್ಲೂ ಕೈಯಾಡಿಸಿ, ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ನಿಯತವಾಗಿ ಅಂಕಣವನ್ನು ಬರೆಯುತ್ತಾ 'ಕುಸುಮಬಾಲೆ' ಎಂಬ ಕಾವ್ಯನಾಮದಿಂದ ಪ್ರಸಿದ್ದರು. ಜೊತೆಗೆ ಅವರ ಅಂಕಣ ಬರಹಗಳ ಸಂಕಲನ 'ಯೋಳೀನ್‌ಕೇಳಿ' ಪ್ರಕಟವಾಗಿದ್ದು, 2018ನೇ ಸಾಲಿನ 'ಡಾ.ಹಾಮಾನಾ ಯುವ ಪ್ರಶಸ್ತಿ' ದೊರೆತಿದೆ. ಕೃಷಿ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದಾರೆ.  ...

READ MORE

Related Books