‘ಸೃಜನ’ ಹೆಸರಿನಲ್ಲಿ 2005ರಲ್ಲಿ ಮಂಡ್ಯದಲ್ಲಿ ಶುರುವಾದ ಸಮೂಹವು ‘ಅನೇಕ’ವಾಗಿ ಕಡೆಗೆ 2015ಲ್ಲಿ ಬೆಂಗಳೂರಿನಲ್ಲಿ ‘ಸಂಕಥನ’ ವಾಯಿತು. ಈಗ ಸಂಕಥನವು ಒಂದೆರಡು ಊರಿನ ಜನರ ಸಮೂಹವಾಗಿಲ್ಲ. ಅಂತರ್ಜಾಲ ತಾಣದಲ್ಲಿ ಹಲವು ಊರುಗಳ, ಹಲವು ಜನರ, ಹಲವು ಓದುಗಳ ಸಮೂಹವಾಗಿ ಬೆಳೆದುನಿಂತಿದೆ.
ಈ ಸಾಹಿತ್ಯ ಬಳಗವು ಇದುವರೆಗೂ ಹಲವು ಕೃತಿಗಳನ್ನು ಪ್ರಕಟಿಸಿದೆ. ‘ಕಾವ್ಯ’ವು ನಮ್ಮ ಆದ್ಯತೆಯ ಪ್ರಕಾರ. ವರ್ತಮಾನದ ಪುಸ್ತಕ ಪ್ರಕಾಶನ ಸಂಸ್ಥೆಗಳು ‘ಕಾವ್ಯ’ವನ್ನು ನಿರ್ಲಕ್ಷಿಸುವುದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಆದರೆ ಅನೇಕವು ಮೊದಲಿನಿಂದಲೂ ಕಾವ್ಯಕ್ಕೆ ತನ್ನ ವಿಶೇಷ ಆದ್ಯತೆ ನೀಡಿದೆ. ಅದೀಗ ‘ಸಂಕಥನ’ ಮತ್ತೊಂದು ಬಗೆಯ ಪ್ರಕಟಣಾ ವಿಭಾಗವಾಗಿ ವಿಲೀನಗೊಂಡಿದೆ. ಕಾವ್ಯದ ಜೊತೆಗೆ ವಿಜ್ಞಾನ, ಇತಿಹಾಸ, ಕೃಷಿ ಮುಂತಾದ ವಿಷಯಗಳ ಉಪಯುಕ್ತ ಪುಸ್ತಕಗಳನ್ನು ಪ್ರಕಟಿಸುತ್ತಿದೆ. ಯುವ ಪೀಳಿಗೆಯಲ್ಲಿ ಸಾಹಿತ್ಯದ ಅಭಿರುಚಿ ಹೆಚ್ಚಾಗಬೇಕು, ಈ ಮೂಲಕ ಓದುಗರ ಸಂಖ್ಯೆಯೂ ಅಭಿವೃದ್ಧಿ ಕಾಣಬೇಕೆಂಬ ಉತ್ತಮ ಉದ್ದೇಶವನ್ನು ಹೊತ್ತು ‘ಸಂಕಥನ’ ಕಾರ್ಯನಿರ್ವಹಿಸುತ್ತಿದೆ.
©2023 Book Brahma Private Limited.