ಗೀತ ಸಂಗೀತ

Author : ಚಂದ್ರಶೇಖರ್ ಆಲೂರು

Pages 135




Year of Publication: 2022
Published by: ಸಂಕಥನ ಪ್ರಕಾಶನ
Address: ಸಂಕಥನ #72 , ಭೂಮಿಗೀತ 6 ನೇ ತಿರುವು, ಉದಯಗಿರಿ ಮಂಡ್ಯ – 571401.
Phone: 9019529494

Synopsys

ಲೇಖಕ ಚಂದ್ರಶೇಖರ ಆಲೂರು ಅವರ ಕೃತಿ ಲೇಖನ ಕೃತಿ ʻಗೀತ ಸಂಗೀತʼ. ಪ್ರಸ್ತುತ ಕೃತಿ ಸಾಹಿತಿಯಾಗಿ, ಕವಿಯಾಗಿ ಚಿತ್ರರಂಗ ಪ್ರವೇಶಿಸಿದ ಕುಣಿಗಲ ಪ್ರಭಾಕರ ಶಾಸ್ತ್ರಿ, ಜಿ.ವಿ. ಅಯ್ಯರ್‌, ಕು.ರಾ.ಸೀ., ಚಿ. ಸದಾಶಿವಯ್ಯ, ಆರ್.ಎನ್.ಜೆ., ಕುರಾಸೀ ಮುಂತಾದ ಗೀತರಚನೆಕಾರರ ಪರಿಚಯ ಹಾಗೂ ಅವರು ಸಂಗೀತ ನೀಡಿದ ಚಿತ್ರಗಳ ಕುರಿತು ವಿವರಿಸುತ್ತದೆ. ಕನ್ನಡ ಚಿತ್ರರಂಗದಲ್ಲಿ ಇವರು ಬೆಳೆದುಬಂದ ಬಗೆ, ಅವರ ಸಾಹಿತ್ಯ ಹಾಗೂ ಸಿನಿಮಾ ಜೀವನ, ಕೊಡುಗೆಗಳನ್ನು ಪರಿಚಯಿಸುವ ಪ್ರಯತ್ನವನ್ನು ಲೇಖಕರು ಇಲ್ಲಿ ಮಾಡಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿಯ ಕಂಠದಿ, ನೀಲಿ ಗಗನದಿ ತೇಲಿ ಹುಡುಕಿದೆ, ಅಂಕದ ಪರದೆ ಜಾರಿದ ಮೇಲೆ, ವೈದೇಹಿ ಏನಾದಳೋ, ಒಲವೇ ಯಮುನಾ ನದಿಯಾಗಲಿ, ಕರೆಯೇ ಕೋಗಿಲೆ ಮಾಧವನಾ, ಈ ಜೀವನ ಬೇವು ಬೆಲ್ಲ, ಜನನ ಮರಣೊಂದು ಚದುರಂಗವಾಗಿ, ಬರೆಯದ ಕೈಗಳು ಬರೆಯುತಿವೆ, ನೀ ನಡೆವ ಹಾದಿಯಲ್ಲಿ ಮುಂತಾದ ಶೀರ್ಷಿಕೆಗಳಲ್ಲಿ ಲೇಖನಗಳಿವೆ. 

About the Author

ಚಂದ್ರಶೇಖರ್ ಆಲೂರು

ಹುಟ್ಟಿದ್ದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಆಲೂರು. ತಂದೆ ಶ್ರೀ ಎ.ಎಚ್.ಲಿಂಗಯ್ಯ, ತಾಯಿ ಶ್ರೀಮತಿ ಅಂಕಮ್ಮ. ಏಳು ಸಹೋದರಿಯರು. ತಂದೆ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್‌ ಆಗಿದ್ದರಿಂದ ರಾಜ್ಯದ ವಿವಿಧ ಕಡೆ ವಿದ್ಯಾಭ್ಯಾಸ. 1980 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ. 1981 ರಿಂದ 1990 ರವರೆಗೆ 'ಲಂಕೇಶ್ ಪತ್ರಿಕೆ'ಯಲ್ಲಿ; 1994 ರಿಂದ 1996ರ ವರೆಗೆ 'ಈ ವಾರ ಕರ್ನಾಟಕ'ದಲ್ಲಿ ವರದಿ, ಸಿನಿಮಾ ಅಂಕಣ, ಪ್ರಬಂಧ, ಕಥೆ, ವಿಮರ್ಶೆ ಇತ್ಯಾದಿ ಪ್ರಕಟ. 2000 ಜುಲೈನಿಂದ 'ಹಾಯ್ ಬೆಂಗಳೂರ್!' ಪತ್ರಿಕೆಯಲ್ಲಿ ಪ್ರತಿವಾರ “ಒಲಿದಂತೆ ಹಾಡುವೆ' ಅಂಕಣ. 2000ದಲ್ಲಿ ಅಮೆರಿಕಾ ...

READ MORE

Related Books