Story/Poem

ಬಿದಲೋಟಿ ರಂಗನಾಥ್

ಕವಿ ರಂಗನಾಥ ಬಿ.ಎಂ ಅವರು 1980 ಜುಲೈ 15 ರಂದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬಿದಲೋಟಿಯಲ್ಲಿ ಜನಿಸಿದರು. ವೃತ್ತಿಯಲ್ಲಿ ವಕೀಲರು. ‘ಮಣ್ಣಿಗೆ ಬಿದ್ದ ಹೂಗಳು’ ‘ಬದುಕು ಸೂಜಿ ಮತ್ತು ನೂಲು’, ಉರಿವ ಕರುಳದೀಪ ಹಾಗೂ 'ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ' ಎಂಬ ನಾಲ್ಕು ಕವನ ಸಂಕಲನಗಳು ಪ್ರಕಟವಾಗಿವೆ. ಅವರ ಕಾವ್ಯಕ್ಕೆ ‘ಸಂಕ್ರಮಣ’ ಬಹುಮಾನ ಹಾಗೂ ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ ಹಸ್ತಪ್ರತಿಗೆ 2020ನೇ ಸಾಲಿನ ರಾಜ್ಯ ಮಟ್ಟದ 'ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ' ಹಾಗೂ 'ಶಾಲೀನಿ ಪುರಸ್ಕಾರ' ಲಭಿಸಿವೆ.

More About Author

Story/Poem

ಎಚ್ಚರದ ಕಣ್ಣಲ್ಲಿ ರಾತ್ರಿಯ ನಡಿಗೆ...!

ಹುಣ್ಣಿಮೆಯ ರಾತ್ರಿ ನೇತಾಡುತ್ತಿದ್ದ ನೆರಳು  ಗೋಡೆ ಮೇಲೆ ಚಿತ್ರ ಬಿಡಿಸಿದಂತೆ ಕೈಯಲ್ಲಿ ಭಾರತದ ಭೂಪಟ ಮತ್ತೊಂದರಲ್ಲಿ ಬುದ್ಧನ ವಿಗ್ರಹ ಕಣ್ಣಲ್ಲಿ ನೆಲದ ಪ್ರೀತಿ ಬಾಯಲ್ಲಿ ಸಮತೆ ಹಾಡು ನನ್ನೊಳಗಿನ ಕುತೂಹಲದ ನಡಿಗೆ ನಿಂತು ನೋಡಿತು ಯಾವುದೀ ನೆರಳು..? ಅದು ನನ್ನದೇ ಗೋಡೆಯ ...

Read More...