Story/Poem

ರಂಜನಿ ಪ್ರಭು

ರಂಜನಿ ಪ್ರಭು ಅವರು ಮೂಲತಃ ಬೆಂಗಳೂರಿನವರು. ಎಂ.ಇ.ಎಸ್. ಕಾಲೇಜಿನಲ್ಲಿ ಪಿಯುಸಿ, ಮಹಾರಾಣಿ ಕಾಲೇಜಿನಲ್ಲಿ ಪದವಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಬೆಂಗಳೂರಿನ ಸೇಂಟ್‌ ಆ್ಯನ್ಸ್‌ ಕಾಲೇಜಿನಲ್ಲಿ 35 ವರ್ಷಗಳ ಕಾಲ ಬೋಧನೆ ನಡೆಸಿ ಕನ್ನಡ ವಿಭಾಗದ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. “ತುಷಾರ’ ಮಾಸ ಪತ್ರಿಕೆಗೆ 'ಬಾಲ್ಯಕಾಲದ ಸಖೀ’ ಎಂಬ ಲೇಖನ ಬರೆದರು. ಅದಾದ ಬಳಿಕ ಅವರ ಹಲವಾರು ಲೇಖನಗಳು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಈವರೆಗೆ ಅವರ 2 ಕವನ ಸಂಕಲನ, ನಾಲ್ಕು ಭಾವಗೀತೆಗಳ ಕ್ಯಾಸೆಟ್ ಗಳು(ಸೀಡಿ) ಹೊರಬಂದಿದೆ.

More About Author

Story/Poem

ಬಂದಳಿಕೆ

ಒಂದಿರುಳು ಕಳೆದು ಬೆಳಗಾಗುವನಿತರಲ್ಲಿ ಕಿಲಕಿಲ ನಗುವ ಅರಮನೆ ಯಾರು ತಾನೇ ಮಲಗಿದ್ದಾರೆ ಅಯೋಧ್ಯೆಯ ಅರಮನೆಯಲ್ಲಿ ಕಳೆದಿರುಳು? ಅದೇನು ಸಣ್ಣ ವಿಷಯವೇ? ರಘುರಾಮನಿಗೆ ಪಟ್ಟಾಭಿಷೇಕ! ಕೆಲವೇ ಜಾಮಗಳಲ್ಲಿ ನಡೆಯಬೇಕಿದೆ ಸಿದ್ಧತೆ... ಇಳಿಯಬೇಕಿದೆ ಗಂಧರ್ವಲೋಕವೇ ಧರೆಗೆ... ಗಡಿಬಿಡಿ......

Read More...