Story/Poem

ಸಬಿಹಾ ಭೂಮಿಗೌಡ

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿರುವ ಸಬಿಹಾ ಭೂಮಿಗೌಡ ಮೂಲತಃ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗಜೇಂದ್ರಗಡದವರು.  ತಂದೆ ಎಂ.ಆರ್. ಗಜೇಂದ್ರಗಡ, ತಾಯಿ ಸಾಹಿರಾ. ಎಂ.ಎ., ಪಿಎಚ್.ಡಿ. ಪಡೆದು ಪ್ರಾಧ್ಯಾಪಕಿಯಾಗಿ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು, ಕರಾವಳಿ ಲೇಖಕಿಯರು ಮತ್ತು ವಾಚಕಿಯರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಬಗೆ (ವಿಮರ್ಶೆ) 2001, ಚಿತ್ತಾರ (ಕಾವ್ಯ) 2004, ಕನ್ನಡ ಭಾಷಾ ಪ್ರವೇಶ (ಸಹಲೇಖಕರೊಂದಿಗೆ) 2005, ನಿಲುಮೆ (ವಿಮರ್ಶೆ) 2005, ನುಡಿಗವಳ (ಮಹಿಳಾ ಅಧ್ಯಯನ) 2006, ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಹಲೇಖಕರೊಂದಿಗೆ) 2006, ಲೀಲಾ ಬಾಯಿ ಕಾಮತ್ ಬದುಕು ಬರೆಹ (ವ್ಯಕ್ತಿಚಿತ್ರ) 2008, ಒಂದಾಣೆ ಮಾಲೆಯ ಸಾಹಸಿ: ಕುಟ್ಟಿ ವಾಸುದೇವ ಶೆಣೈ (ವ್ಯಕ್ತಿಚಿತ್ರ) 2008, ಲಿಂಗತ್ವ ಸಮನ್ಯಾಯದೆಡೆಗೆ 2008, ಅವಿವಾಹಿತ ಮಹಿಳೆ: ಸಮಾಜೋ ಸಾಂಸ್ಕೃತಿಕ ಅಧ್ಯಯನ 2008 (ಸಹಲೇಖಕರೊಂದಿಗೆ), ಕಡಲತಡಿಯ ಮನೆ (ಸಣ್ಣಕಥೆ) 2009, ನುಡಿಹೊನಲು (ಚಿಂತನ ಲೇಖನಗಳು) 2010 ಪ್ರಕಟಿತ ಕೃತಿಗಳು.

More About Author

Story/Poem

ಹೆಂಗಸರೆಂದರೇ

‘ಹೆಂಗಸರೆಂದರೇ ಹೀಗೆ ಒಟ್ಟು ಸೇರಿದರೆ ಸಾಕು ವಸ್ತು ಒಡವೆ ಉಡುಗೆ ತೊಡುಗೆ ಇವುಗಳದೇ ಸಮಾಚಾರ’ ಅವರಿವರ ತೀರ್ಮಾನ ನಿರಾಕರಿಸಲು ಮೈ ಕೈ ಕತ್ತೆಲ್ಲ ಬೋಳುಬೋಳು ಅವರಿವರು ಕೊಟ್ಟ ಇಲ್ಲಾ ತಾವೇ ಮರುಳಾಗಿ ಕೊಂಡ ಅದ್ದೂರಿ ಸೀರೆಗಳು ಬೀರುವಿನಲೇ ಭದ್ರ ಯಾರದೋ ಜರತಾರಿಯ ಸರಭ...

Read More...