About the Author

ಶೈಲಜಾ ಬಿ.ಎಸ್. ಜವಹರಲಾಲ್ ನೆಹರೂ ತಾರಾಲಯದ ಶೈಕ್ಷಣಿಕ ಕಾರ್ಯಕ್ರಮಗಳ ನಿರ್ವಾಹಕರು. ತಂದೆ : ಬ.ನ. ಸುಂದರರಾವ್, ತಾಯಿ- ರತ್ತಮ ಸುಂದರರಾವ್.

 ಶುಕ್ರಗ್ರಹದ ಸಂಕ್ರಮಣ, ನನ್ನ ಮಿತ್ರ ಸೋರಣ್ಣ (ಜೆ.ಬಿ.ಎಸ್. ಹಾಲ್ಲೆನರ ಮಿ. ಲೀಕಿಯ ಅನುವಾದ), ಬಾನಿಗೊಂದು ಕೈಪಿಡಿ ಕೃತಿಯ ಸಂಪಾದನೆ ನವಕರ್ನಾಟಕ ಜ್ಞಾನವಿಜ್ಞಾನ ಕೋಶದಲ್ಲಿ ಖಗೋಳ ವಿಜ್ಞಾನ ಭಾಗದ ರಚನೆ, ಸಫಾರಿ ಎಂಬ ಲಕ್ಷುರಿ (ಪ್ರವಾಸ ಕಥನ) (2007), ದೂರದರ್ಶಕ, ಗ್ರಹಣ, ಸೂರ್ಯ, ಸೌರವ್ಯೂಹ, ಅಗಸದ ಅಲೆಮಾರಿಗಳು (ವಿಜ್ಞಾನ ಸಾಹಿತ್ಯ) ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

ಶುಕ್ರಗ್ರಹದ ಸಂಕ್ರಮಣಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಎಚ್.ಎನ್. ದತ್ತಿನಿಧಿ ಬಹುಮಾನ, ಆರ್ಯಭಟ ಪ್ರಶಸ್ತಿ, ಇವರಿಗೆ ಲಭಿಸಿದೆ.

ತಾರಾಲಯ ಕಾರ್ಯಕ್ರಮಗಳು, ಆಕಾಶವಾಣಿ ಹಾಗೂ ದೂರದರ್ಶನಗಳಿಗೆ ಬರಹಗಳು, ಅಸ್ಟೆರಾಯಿಡ್, ಧೂಮಕೇತು ಹಾಗೂ ತಾರಾಪುಂಜಗಳ ಬಗ್ಗೆ ಸಂಶೋಧನೆ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಮಾವೇಶಗಳ ಸಂಯೋಜನೆ ಹಾಗೂ ಭಾಗವಹಿಸುವಿಕೆ, ಖಗೋಳ ವಿಜ್ಞಾನ ಸಂಬಂಧಿ ಕಾರ್ಯಕ್ರಮಗಳು, ಪ್ರತಿರೂಪಗಳ ರಚನೆ ಹಾಗೂ ಕಟ್ಟಡ ನಿರ್ಮಾಣಕ್ಕೆ ಸಲಹಾಕಾರರು, ಪಠ್ಯಪುಸ್ತಕ ರಚನಾ ಸಮಿತಿ, ಅಧ್ಯಯನ ಮಂಡಳಿ, ಒಲಂಪಿಯಾಡ್ ಸಂಯೋಜನಾ ಸಮಿತಿಗಳ ಸದಸ್ಯರು, ಬೃಹತ್ ತಾರೆಗಳು, ಅಸ್ಫೋಟಕ ತಾರೆಗಳು ಹಾಗೂ ವಿಚಿತ್ರ ತಾರೆಗಳ ಬಗ್ಗೆ ಸಂಶೋಧನೆ, ಖಗೋಳ ವಿಜ್ಞಾನದ ಇತಿಹಾಸ ಕುರಿತು ವಿಶೇಷ ಅಧ್ಯಯನ ನಡೆಸಿದ್ದಾರೆ.

ಬಿ.ಎಸ್. ಶೈಲಜಾ

Awards