ಹೆಚ್ ಎನ್ ರಾಮಕೃಷ್ಣಪ್ಪ ಸಾಹಿತ್ಯ ಮತ್ತು ವ್ಯಕ್ತಿತ್ವ

Author : ಬಿ.ಎಸ್. ಶೈಲಜಾ

Pages 238

₹ 351.00




Year of Publication: 2022
Published by: ನವಕರ್ನಾಟಕ ಪಬ್ಲೀಕೇಷನ್‌

Synopsys

ಹೆಚ್ ಎನ್ ರಾಮಕೃಷ್ಣಪ್ಪ ಸಾಹಿತ್ಯ ಮತ್ತು ವ್ಯಕ್ತಿತ್ವ ಬಿ.ಎಸ್‌ ಶೈಲಜಾ ಮತ್ತು ಹೆಚ್‌. ಆರ್‌ ಪ್ರಭಾಕರ ಅವರ ಕೃತಿ. ವಿಜ್ಞಾನದ ವಿದ್ಯಾರ್ಥಿಯಾಗಿದ್ದರೂ ತಮ್ಮ ಕಾಲೇಜು ದಿನಗಳಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಟಿ. ಎಸ್‌. ವೆಂಕಣ್ಣಯ್ಯನವರ ಶಿಷ್ಯರಾಗಿ ಕನ್ನಡ ಸಾಹಿತ್ಯವನ್ನು ೧೯೨೦ರ ದಶಕದಲ್ಲಿ ಅಭ್ಯಾಸಮಾಡಿದ್ದರು. ಅದು ಕನ್ನಡ ಸಾಹಿತ್ಯದ ನವೋದಯ ಯುಗ. ಮುಂದೆ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿ.ಟಿ. ಓದುತ್ತಿದ್ದಾಗ ತೀ. ನಂ. ಶ್ರೀಕಂಠಯ್ಯ, ಎಸ್. ಎ. ರಂಗಣ್ಣ ಮುಂತಾದವರ ಸಹವಾಸದಿಂದ ಸಾಹಿತ್ಯದಲ್ಲಿ ಅಭಿರುಚಿಯನ್ನು ಬೆಳೆಸಿಕೊಂಡು ಸಾಹಿತ್ಯ ರಚನೆಗೂ ಕೈ ಹಾಕಿದರು. ನಮಗೆ ಲಭ್ಯವಾದ ಅವರ ಪ್ರಕಟಿತ ಮತ್ತು ಕೈಬರಹದಲ್ಲೇ ಉಳಿದ ಕೃತಿಗಳನ್ನು ಒಂದೇ ಕಡೆ ಸಂಗ್ರಹಿಸಬೇಕೆಂಬ ಉದ್ದೇಶದಿಂದ ಈ ಸಂಪುಟವನ್ನು ಹೊರತರಲಾಗಿದೆ. ಪ್ರಕಟಿತ ಕೃತಿಗಳನ್ನು ಪುಸ್ತಕ ೧ರಲ್ಲೂ ಮತ್ತು ಅಪ್ರಕಟಿತ ಕೃತಿಗಳನ್ನು ಪುಸ್ತಕ - ೨ರಲ್ಲೂ ಮುದ್ರಿಸಲಾಗಿದೆ. ಇಲ್ಲಿ ಮುದ್ರಿಸಿರುವ ಕೃತಿಗಳಲ್ಲದೆ ರಾಮಕೃಷ್ಣಪನವರು ಸಮಗ್ರ ಸಾಮಾನ್ಯ ಗಣಿತ ಸಂಪುಟ ೧ ಮತ್ತು ೨, ಸರ್ ಎಂ. ವಿಶ್ವೇಶ್ವರಯ್ಯ (ಜೀವನ ಚರಿತ್ರೆ) ಮತ್ತು ಮೇರಿ ಕ್ಯೂರಿ (ಜೀವನ ಚರಿತ್ರೆ) ಎಂಬ ಕೃತಿಗಳನ್ನು ರಚಿಸಿದ್ದರು. ಆದರೆ ಈ ಮೂರೂ ಪ್ರತಿಗಳು ನಮಗೆ ದೊರಕಲಿಲ್ಲ. ಈ ಸಂಪುಟದ ಮುಖ್ಯ ಉದ್ದೇಶ ಮುಂದಿನ ಪೀಳಿಗೆಯವರಿಗೆ ಅವರ ಪೂರ್ವಿಕರು ಹೇಗೆ ಜೀವಿಸಿದರು, ಏನು ಕೆಲಸ ಮಾಡಿದರು ಎಂದು ತಿಳಿಸುವುದಷ್ಟೆ. ಎಂದು ಹೆಚ್‌. ಆರ್‌ ಪ್ರಭಾಕರ ಅವರು ಪುಸ್ತಕದ ನಾಲ್ಕು ಮಾತುಗಳಲ್ಲಿ ತಿಳಿಸಿದ್ದಾರೆ.

About the Author

ಬಿ.ಎಸ್. ಶೈಲಜಾ

ಶೈಲಜಾ ಬಿ.ಎಸ್. ಜವಹರಲಾಲ್ ನೆಹರೂ ತಾರಾಲಯದ ಶೈಕ್ಷಣಿಕ ಕಾರ್ಯಕ್ರಮಗಳ ನಿರ್ವಾಹಕರು. ತಂದೆ : ಬ.ನ. ಸುಂದರರಾವ್, ತಾಯಿ- ರತ್ತಮ ಸುಂದರರಾವ್.  ಶುಕ್ರಗ್ರಹದ ಸಂಕ್ರಮಣ, ನನ್ನ ಮಿತ್ರ ಸೋರಣ್ಣ (ಜೆ.ಬಿ.ಎಸ್. ಹಾಲ್ಲೆನರ ಮಿ. ಲೀಕಿಯ ಅನುವಾದ), ಬಾನಿಗೊಂದು ಕೈಪಿಡಿ ಕೃತಿಯ ಸಂಪಾದನೆ ನವಕರ್ನಾಟಕ ಜ್ಞಾನವಿಜ್ಞಾನ ಕೋಶದಲ್ಲಿ ಖಗೋಳ ವಿಜ್ಞಾನ ಭಾಗದ ರಚನೆ, ಸಫಾರಿ ಎಂಬ ಲಕ್ಷುರಿ (ಪ್ರವಾಸ ಕಥನ) (2007), ದೂರದರ್ಶಕ, ಗ್ರಹಣ, ಸೂರ್ಯ, ಸೌರವ್ಯೂಹ, ಅಗಸದ ಅಲೆಮಾರಿಗಳು (ವಿಜ್ಞಾನ ಸಾಹಿತ್ಯ) ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಶುಕ್ರಗ್ರಹದ ಸಂಕ್ರಮಣಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಎಚ್.ಎನ್. ದತ್ತಿನಿಧಿ ಬಹುಮಾನ, ...

READ MORE

Related Books