About the Author

ಲೇಖಕಿ ಭಾಗೀರಥಿ ಹೆಗಡೆ ಅವರು ಜನಿಸಿದ್ದು, 1948 ಜುಲೈ 23ರಂದು. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ತಟ್ಟಿಕೈ ಗ್ರಾಮದವರು. ತಾಯಿ ಗಣಪಿ ಭಟ್ಟ. ತಂದೆ ವೆಂಕಟ್ರಮಣ ಭಟ್ಟ. ಹುಟ್ಟೂರು ಹಾಗೂ ಸಿದ್ದಾಪುರದಲ್ಲಿ ಎಸ್.ಎಸ್.ಎಲ್.ಸಿ ಶಿಕ್ಷಣ ಪಡೆದಿದ್ದಾರೆ. ಶಾಲಾ ದಿನಗಳಿಂದಲೇ ಸಾಹಿತ್ಯದಲ್ಲಿ ಆಸಕ್ತಿಯಿದ್ದ ಭಾಗೀರಥಿ ಅವರು ಹಲವಾರು ಕಥೆ, ಕವನಗಳನ್ನು ಬರೆದಿದ್ದಾರೆ. ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳಲ್ಲಿ ಇವರು ಬರೆದ ಲೇಖನಗಳು ಪ್ರಕಟವಾಗಿವೆ.

ಭಾಗೀರಥಿ ಅವರ ಪ್ರಮುಖ ಕೃತಿಗಳೆಂದರೆ ಸ್ವೀಕಾರ, ಅರ್ಥ, ಪ್ರವಾಹ, ಗಿಳಿಪದ್ಮ, ಬೇಟೆ, ಪ್ರತಿಮೆ, ಆಳ, ಹಿಮನದಿ (ಕಥಾ ಸಂಕಲನ), ಚಂದ್ರಗಾವಿ, ಒಂದು ದಿನ (ಕವನ ಸಂಕಲನ), ಪ್ರಭಾವತಿ (ನಾಟಕ), ಗುಬ್ಬಿಯ ಸ್ವರ್ಗ, ಕನ್ನಡ ಶಾಲೆಯ ಹುಡುಗ (ಮಕ್ಕಳ ಪದ್ಯ ಸಂಕಲನ) ಮುಂತಾದವು. ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ದತ್ತಿ ಪ್ರಶಸ್ತಿ, ವಿಶ್ವೇಶ್ವರಯ್ಯ ಟ್ರಸ್ಟ್ ನ ರಾಷ್ಟ್ರೀಯ ಪ್ರಶಸ್ತಿ, ಮಹಾಕವಿ ಪರಮದೇವ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ದೊರೆತಿವೆ.  ಹಲವಾರು ನಿಯತಕಾಲಿಕೆಗಳ ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಬಂದಿದೆ.  

ಭಾಗೀರಥಿ ಹೆಗಡೆ

(23 Jul 1948)