ಸ್ವೀಕಾರ

Author : ಭಾಗೀರಥಿ ಹೆಗಡೆ

Pages 124

₹ 10.00
Year of Publication: 1986
Published by: ಶ್ರೀ ರಾಘವೇಂದ್ರ ಪ್ರಕಾಶನ
Address: ಶ್ರೀರಾಘವೇಂದ್ರ ಮುದ್ರಣ ಮತ್ತು ಪ್ರಕಾಶನ ಟ್ರಸ್ಟ್‌, ಅಂಬಾರಕೊಡ್ಲ, ಅಂಕೋಲಾ ಉತ್ತರಕನ್ನಡ- 581314
Phone: (08388-230370/9448145370)

Synopsys

“ಸ್ವೀಕಾರ” ಏಳು ಸಣ್ಣ ಕತೆಗಳುಳ್ಳ ಕಥಾ ಸಂಕಲನವಾಗಿದೆ. ’ಶ್ರೀಮತಿ  ಭಾಗೀರಥಿ’ಯವರ ಮೊದಲ  ಕಥಾ ಸಂಕಲನ ಇದಾಗಿದ್ದು ಎಲ್ಲಾ ಕಥೆಗಳು ತನ್ನ ಒಳಸೆಲೆಗೆ ತೆಗೆದುಕೊಂಡು ಶೋಷಣೆಯನ್ನು ಆಕ್ರೋಶಗಳಿಲ್ಲದೆ ಸಂಯಮದ ಪ್ರತಿಭಟನೆಯ ವಸ್ತುಗಳನ್ನಾದರಿಸಿದ  ಕಥೆಗಳಾಗಿವೆ. ಇಲ್ಲಿನ ಹಲವು ಕಥೆಗಳು ಕನ್ನಡ ನಿಯತಕಾಲಿಕೆಗಳಾದ ’ತುಷಾರ, ತರಂಗ’ದಲ್ಲಿ ಪ್ರಕಟವಾಗಿ ಓದುಗರ ಮೆಚ್ಚುಗೆಯನ್ನು ಪಡೆದಿವೆ. ಅತ್ಯಂತ ಸೂಕ್ಷ್ಮವಾಗಿ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳ ಭಾವಭಿತ್ತಿಗೆ ತಗುಲುವಷ್ಟು ನೇರವಾದ ಕಥೆಗಳಿವೆ. ಪುರುಷ ಪ್ರಧಾನ ವ್ಯವಸ್ಥೆಯನ್ನು ಮೌನದಲ್ಲೇ ಪ್ರಶ್ನಿಸುತ್ತಾ, ಒಳಗೊಳಗೆ ಕುದಿಯುವ, ಅಸಹಾಯಕತೆಯಿಂದ ನಿಲ್ಲುವ ಪಾತ್ರಗಳು ಓದುಗರನ್ನು ಮೌನವಾಗಿ ಅಂತಃಕರಣವನ್ನು ಮುಟ್ಟುತ್ತದೆ. ಸಮಕಾಲೀನ ಸಮಾಜದಲ್ಲಿ ನಡೆಯುತ್ತಿರುವ ತಾರತಮ್ಯವನ್ನು ಪ್ರಶ್ನಿಸುವ, ಬಂಧನವನ್ನು ಬಿಡಿಸಿಕೊಳ್ಳಬೇಕಾದ ಸಹಜ ಪ್ರಜ್ಞೆಯನ್ನು ಈ ಕಥೆಗಳ ಮೂಲಕ ಭಾಗೀರಥಿವರು ಓದುಗರಿಗೆ ಮುಟ್ಟಿಸಿದ್ದಾರೆ.

About the Author

ಭಾಗೀರಥಿ ಹೆಗಡೆ
(23 July 1948)

ಲೇಖಕಿ ಭಾಗೀರಥಿ ಹೆಗಡೆ ಅವರು ಜನಿಸಿದ್ದು, 1948 ಜುಲೈ 23ರಂದು. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ತಟ್ಟಿಕೈ ಗ್ರಾಮದವರು. ತಾಯಿ ಗಣಪಿ ಭಟ್ಟ. ತಂದೆ ವೆಂಕಟ್ರಮಣ ಭಟ್ಟ. ಹುಟ್ಟೂರು ಹಾಗೂ ಸಿದ್ದಾಪುರದಲ್ಲಿ ಎಸ್.ಎಸ್.ಎಲ್.ಸಿ ಶಿಕ್ಷಣ ಪಡೆದಿದ್ದಾರೆ. ಶಾಲಾ ದಿನಗಳಿಂದಲೇ ಸಾಹಿತ್ಯದಲ್ಲಿ ಆಸಕ್ತಿಯಿದ್ದ ಭಾಗೀರಥಿ ಅವರು ಹಲವಾರು ಕಥೆ, ಕವನಗಳನ್ನು ಬರೆದಿದ್ದಾರೆ. ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳಲ್ಲಿ ಇವರು ಬರೆದ ಲೇಖನಗಳು ಪ್ರಕಟವಾಗಿವೆ. ಭಾಗೀರಥಿ ಅವರ ಪ್ರಮುಖ ಕೃತಿಗಳೆಂದರೆ ಸ್ವೀಕಾರ, ಅರ್ಥ, ಪ್ರವಾಹ, ಗಿಳಿಪದ್ಮ, ಬೇಟೆ, ಪ್ರತಿಮೆ, ಆಳ, ಹಿಮನದಿ (ಕಥಾ ಸಂಕಲನ), ಚಂದ್ರಗಾವಿ, ಒಂದು ದಿನ (ಕವನ ...

READ MORE

Related Books