About the Author

ಲೇಖಕ ಬಿ. ಆರ್‌. ಮಂಜುನಾಥ್ ಅವರು ತುರ್ತುಪರಿಸ್ಥಿತಿಯ ನಂತರದ ದಿನಗಳಲ್ಲಿ ಎಡಪಂಥೀಯ ವಿದ್ಯಾರ್ಥಿ ಚಳುವಳಿಗೆ, ಸಾಂಸ್ಕೃತಿಕ ಆಂದೋಲನಕ್ಕೆ ಧುಮುಕಿದವರು. ಜಾನ್ ರೀಡ್ ಅವರ 'ಟೆನ್ ಡೇಸ್ ದಟ್ ಶುಕ್ ದ ವರ್ಲ್‌, ಸಮಾಜವಾದಿ ವೈದ್ಯಕೀಯದ ಕುರಿತಾದ 'ರೆಡ್ ಮೆಡಿಸಿನ್', ಇ.ಎಚ್.ಕಾರ್‌ ಅವರ 'ವಾಟ್ ಈಸ್ ಹಿಸ್ಟರಿ' ಅವರ ಅನುವಾದಿತ ಕೃತಿಗಳಲ್ಲಿ ಕೆಲವು. ವಿವಿಧ ಸಾಂಸ್ಕೃತಿಕ, ವಿದ್ಯಾರ್ಥಿ-ಯುವಜನ ಪತ್ರಿಕೆಗಳ ಸಂಪಾದಕರಾಗಿದ್ದ ಅವರು ಭಗತ್ ಸಿಂಗ್‌ರ ಕುರಿತು ಪುಸ್ತಕಗಳನ್ನು ಬರೆದಿರುವುದಲ್ಲದೆ ಅನೇಕ ನಾಟಕ, ಬೀದಿ ನಾಟಕಗಳನ್ನು ಸಹ ರಚಿಸಿ ಆಡಿಸಿದ್ದಾರೆ. ಪ್ರಸ್ತುತ ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾಗಿದ್ದು ವಿವಿಧ ಜನಪರ ಆಂದೋಲನಗಳಲ್ಲಿ ಸಕ್ರಿಯರು. ‍‘ಕಥನ ಕಣಜದ ಗಟ್ಟಿ ಕಾಳು’, ‘ಭಗತ್ ಸಿಂಗ್’, ‘ಎಂಟು ದಿಕ್ಕು ನೂರೆಂಟು ಕಥೆ’ ಅವರ ಪ್ರಮುಖ ಕೃತಿಗಳು.

ಬಿ.ಆರ್‌. ಮಂಜುನಾಥ್‌

(21 Dec 1940)