About the Author

ಚಕ್ರವರ್ತಿ ಸೂಲಿಬೆಲಿ ಎಂದೇ ಗುರುತಿಸಿಕೊಳ್ಳುವ ಮಿಥುನ್ ಚಕ್ರವರ್ತಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. 1980ರ ಏಪ್ರಿಲ್ 9 ರಂದು ಜನನ. ಓದಿದ್ದು, ಬೆಳೆದಿದ್ದು ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ. ತಂದೆ ದೇವದಾಸ್ ಸುಬ್ರಾಯ್ ಶೇಟ್, ಸೂಲಿಬೆಲಿಯ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿದ್ದಾರೆ.

ಬೆಂಗಳೂರು ಜೈನ್ ಕಾಲೇಜಿನಲ್ಲಿ ಪಿಯುಸಿ ನಂತರ ಭಟ್ಕಳದ ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ ಪದವಿ ಪಡೆದರು. 

ವಾಗ್ಮಿ, ಅಂಕಣಕಾರ. ಸಾಮಾಜಿಕ ಕಾರ್ಯಕರ್ತ ಹಾಗೂ ಯುವ ಬ್ರಿಗೇಡ್ ಸಂಘಟನೆ ಸಂಸ್ಥಾಪಕ ಸೂಲಿಬೆಲಿ ಅವರು ‘ಮೇರಾ ಭಾರತ್ ಮಹಾನ್’, ‘ಪೆಪ್ಸಿ ಕೋಕ್ ಅಂತರಾಳ’, ‘ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ಸಾವರ್ಕರ್’. ‘ನೆಹರೂ ಪರದೆ ಸರಿಯಿತು’. ‘ಸ್ವಾತಂತ್ರ್ಯ ಮಹಾ ಸಂಗ್ರಾಮ 1857- ಒಂದು ವಾಕ್ಚಿತ್ರ’. ‘ಭಾರತ ಭಕ್ತ ವಿದ್ಯಾನಂದ’. ‘ಸರದಾರ’. ‘ಜಾಗೋ ಭಾರತ್’ – ಅಂಕಣ ಬರಹ, ‘ಭಾರತ ಮಾತೆಯ ಕರೆ’ ‘ಸ್ವದೇಶಿ ಮತ್ತು ಗೋ ಚಿಕಿತ್ಸೆ’ ಅವರ ಪ್ರಕಟಿತ ಕೃತಿಗಳು.

ಚಕ್ರವರ್ತಿ ಸೂಲಿಬೆಲಿ (ಮಿಥುನ್ ಚಕ್ರವರ್ತಿ)

(09 Apr 1980)