ನೆಹರೂ..ಪರದೆ ಸರಿಯಿತು

Author : ಚಕ್ರವರ್ತಿ ಸೂಲಿಬೆಲಿ (ಮಿಥುನ್ ಚಕ್ರವರ್ತಿ)

Pages 152

₹ 100.00




Year of Publication: 2010
Published by: ಶ್ರೀಪತಿ ಆಚಾರ್ಯ
Address: ಅವನಿ ಪ್ರಕಾಶನ, ಕುಂಭಾಸಿ, ಕುಂದಾಪುರ -576 257
Phone: 9741504463

Synopsys

ಚಕ್ರವರ್ತಿ ಸೂಲಿಬೆಲೆ ಅವರ ನೆಹರೂ..ಪರದೆ ಸರಿಯಿತು ಕೃತಿಯು ಲೇಖನಗಳ ಸಂಕಲನವಾಗಿದೆ. 2006ರಲ್ಲಿ ಮೊದಲ ಮುದ್ರಣ ಕಮಡ ಈ ಕೃತಿಯು, 2010ರಲ್ಲಿ ಒಂಭತ್ತನೆಯ ಮುದ್ರಣ ಕಂಡಿದೆ. ಎಸ್. ಆರ್. ರಾಮಸ್ವಾಮಿಯವರು ಈ ಕೃತಿಗೆ ಪ್ರಸ್ಥಾವನೆ ಬರೆದಿದ್ದಾರೆ. ಕೃತಿಯ ಪರಿವಿಡಿಯಲ್ಲಿ ಮೂರು ಭಾಗಗಳಿದ್ದು, ಒಟ್ಟು 26 ಶೀರ್ಷಿಕೆಗಳಿವೆ. ಸರಿದ ಪರದೆ, ಮೋತಿ ಲಾಲ್ ರ ಕಂದ ಗಾಂಧೀಜಿ ಬಳಿಗೆ ಬಮದ, ಜಾಗತಿಕ ಖೀರ್ತಿಯ ಖಯಾಲಿ-ದೇಶ ಬೇಕಿದ್ದರೆ ಸಾಯಲಿ, ಮಾತು ಬಂಗಾರ-ಕೃತಿಗೆ ತತ್ವಾರ, ಅವರು ಕಂಡ ಶಾಂತಿಯ ಕನಸಿಗೆ ಬೆಚ್ಚಿದ್ದು ಭಾರತ, ಸೆಕ್ಯುಲರಿಸಮ್ಮು ಅವರದೇ! ಪಾಕಿಸ್ಥಾನವೂ ಅವರದೇ!!, ಚಿನ್ನದ ಹಕ್ಕಿ-ದರಿದ್ರವಾಯಿತು ನೋಡಿ! ಹೀಘೆ ವಿಭಿನ್ನ ಬಗೆಯ ಶೀರ್ಷಿಕೆಗಳು ಕೃತಿಯಲ್ಲಿದ್ದು, ಫೂರ್ಣವಾಗಿ ಜವಾಹರ್‍ ಲಾಲ್ ನೆಹರೂ ಅವರ ರಾಜಕೀಯ ಬದುಕಿನ ಚಿತ್ರಣವನ್ನು ಇಲ್ಲಿ ಕಾಣಬಹುದಾಗಿದೆ.

About the Author

ಚಕ್ರವರ್ತಿ ಸೂಲಿಬೆಲಿ (ಮಿಥುನ್ ಚಕ್ರವರ್ತಿ)
(09 April 1980)

ಚಕ್ರವರ್ತಿ ಸೂಲಿಬೆಲಿ ಎಂದೇ ಗುರುತಿಸಿಕೊಳ್ಳುವ ಮಿಥುನ್ ಚಕ್ರವರ್ತಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. 1980ರ ಏಪ್ರಿಲ್ 9 ರಂದು ಜನನ. ಓದಿದ್ದು, ಬೆಳೆದಿದ್ದು ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ. ತಂದೆ ದೇವದಾಸ್ ಸುಬ್ರಾಯ್ ಶೇಟ್, ಸೂಲಿಬೆಲಿಯ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿದ್ದಾರೆ. ಬೆಂಗಳೂರು ಜೈನ್ ಕಾಲೇಜಿನಲ್ಲಿ ಪಿಯುಸಿ ನಂತರ ಭಟ್ಕಳದ ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ ಪದವಿ ಪಡೆದರು.  ವಾಗ್ಮಿ, ಅಂಕಣಕಾರ. ಸಾಮಾಜಿಕ ಕಾರ್ಯಕರ್ತ ಹಾಗೂ ಯುವ ಬ್ರಿಗೇಡ್ ಸಂಘಟನೆ ಸಂಸ್ಥಾಪಕ ಸೂಲಿಬೆಲಿ ಅವರು ‘ಮೇರಾ ಭಾರತ್ ಮಹಾನ್’, ‘ಪೆಪ್ಸಿ ಕೋಕ್ ಅಂತರಾಳ’, ‘ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ...

READ MORE

Related Books